ರಮ್ಯಾ ಶ್ರೀಹರಿ ಬರೆದ ಈ ದಿನದ ಕವಿತೆ
“ಮಾತು ಮಾತಿನ ನಡುವಿನ ಮೌನ
ಕ್ರಿಯೆಯ ನರನಾಡಿಗಳಲ್ಲಿ
ಹರಿಯುವ ನಿಷ್ಕ್ರಿಯೆ
ರಾತ್ರಿಗಳಲ್ಲೇ ಆಳವಾಗಿ ಬೇರು ಬಿಡುವ
ಕಣ್ಣ ನೋಟದ ಬೀಜ
ಅಪ್ಪಳಿಸುವ ಮುಂಚೆ
ಹಿಂದೆ ಸರಿಯುವ ತೆರೆ
ಎಲ್ಲವೂ ನೀರವತೆಯ ಮಿಂಚುಹುಳುಗಳಾಗಿ
ಗಾಜಿನ ಡಬ್ಬಿಯಲ್ಲಿ ಕೂತು
‘ಈ ಸಂಜೆಯೂ ಅಷ್ಟೇ
ಎಲ್ಲ ಸಂಜೆಗಳಂತೆ
ಕಳೆದುಹೋಗುತ್ತದೆ’-ರಮ್ಯಾ ಶ್ರೀಹರಿ ಬರೆದ ಈ ದಿನದ ಕವಿತೆ
