ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
“ಹಾಗೆಯೇ ಹಿಸುಕತೊಡಗಿದೆ
ಅದನು ಬಲವಾಗಿ
ಪಕಳೆ ಪಕಳೆಗಳು ಮುದ್ದೆಯಾಗುವಂತೆ
ಕೈಗೆ ತಾಕಿದ ಮುಳ್ಳು
ಚಿಮ್ಮಿಸಿದ ರಕ್ತ
ಬರೆಯಿತೊಂದು ಹೊಸ ಷರಾ
ನಿನ್ನ ಕುತ್ತಿಗೆಯನ್ನೇ
ಹಿಸುಕುತ್ತಿದ್ದೀಯೇ ಜೋಕೆ!
ನಿಜಕ್ಕೂ ಬೆಚ್ಚಿಬಿದ್ದೆ!” -ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ