Advertisement

Category: ದಿನದ ಕವಿತೆ

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಯಾರೋ ಬಡಿದಂತೆ ನಾಟಕವಾಡುವಾಗ
ನನ್ನನ್ನು ಪ್ರೀತಿಯಿಂದ ರಕ್ಷಿಸುವ
“ಅರೇ ಕೈ ಸಿಕ್ಕಾಕ್ಕೊಂತು” ಅಂದರೆ
ಕೈಯನ್ನು ನಾಜುಕಿನಿಂದ ಮೇಲೆತ್ತುವ
ಕಾಲು ನಡೆದು ನೋಯುತ್ತಿದೆ ಅಂದರೆ
“ಒತ್ತುವೆ” ಎಂದು ಓಡಿ ಬಂದಾಗ….
ನನ್ನ ಕಣ್ಣು ನಗುತ್ತದೆ ನೀರು ತುಂಬಿಕೊಂಡು”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಸೌಮ್ಯ ದಯಾನಂದ ಬರೆದ ಈ ದಿನದ ಕವಿತೆ

“ದುಡಿದು ಉಳಿಸಿದ ಹಣವಿಂದು
ಕೆಂಪು ಟೇಪುಗಳಾಗಿ
ಅತ್ತಿತ್ತ ಅರಳಿ
ನಗುತ್ತ ತೊನೆಯುವಾಗ
ಇಂದು ಅವಳ ಹೂನಗೆಯನ್ನು
ಕಂಡಿದ್ದವು
ಗುಲಾಬಿಯಂತೆ ಹೆಣೆದು ಕಟ್ಟಿ
ಮೃದುವಾಗಿದ್ದಳು ತಾನೇ”- ಸೌಮ್ಯ ದಯಾನಂದ ಬರೆದ ಈ ದಿನದ ಕವಿತೆ

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಮನುಷ್ಯತ್ವದ ಚರ್ಮವ ಸುಲಿದು
ಹೃದಯ ಕಂಪಿಸುವಾಗಲೂ
ಜಾತಿಯ ಅಮಲಿನಲ್ಲಿ
ಧರ್ಮದ ಅಫೀಮಿನಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ನೆನಪುಗಳ ಒಲೆಯಲ್ಲಿ
ಶಿರವನಿಟ್ಟು
ಉರಿಸುತಿದ್ದೆ
ಉರುವಲಿನಂತೆ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ಸರಿ, ತಪ್ಪುಗಳ ನೆಪಮಾಡಿ
ಹಾರಿಬಿಡುವೆ ಕೈಗೆ ಸಿಗದ ಹಾಗೆ
ಎಂದೇನೋ ಹೇಳಿದವಳಿಗೆ
ಅಂತರ ಸಹಿಸಲಾಗದು
ಪೂರ್ಣ ತೆರೆದುಕೊಂಡರೆ ಕ್ರಮಿಸಲು
ದಾರಿ ಉಳಿಯಲಾರದು
ಎಂಬ ಹೊಸದೊಂದು ಕನಲಿಕೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಸಂಗೀತ ರವಿರಾಜ್, ಚೆಂಬು ಬರೆದ ಎರಡು ಕವಿತೆಗಳು

“ಮಿರ ಮಿರ ಮಿಂಚುವ
ನುಣ್ಣಗಿನ ಗುಂಡಗಿನ
ಅಂದದ ಈ ಕಲ್ಲಿಗೆ
ಲೋಕ ಕಂಡ ಮಾತೆಯರ
ಮನಸ್ಸೆಲ್ಲ ತಿಳಿದೂ
ಗುಟ್ಟನಡಗಿಸಿ ಬುದ್ಧನಂತಿದೆ!
ಅಹಲ್ಯೆಯು ಒಂದೊಮ್ಮೆ ಶಿಲೆಯಾಗಿರಲಿಲ್ಲವೆ?”- ಸಂಗೀತ ರವಿರಾಜ್, ಚೆಂಬು ಬರೆದ ಎರಡು ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ