ಹೊಳೆಸಾಲಿನ ಮೊದಲ ಗ್ಯಾದರಿಂಗ್: ಸುಧಾ ಆಡುಕಳ ಅಂಕಣ
ಮರುದಿನ ಬೆಳಗಾಗುವ ಹೊತ್ತಿಗೆ ಮೈಕ್ ಮತ್ತದೇ ಮೂಷಿಕವಾಹನ ಹಾಡನ್ನು ಇನ್ನೂ ಮಧುರವಾಗಿ ಹಾಡತೊಡಗಿತು. ಯುವಕರ ದಂಡು ಒಂದಾಗಿ ಫಂಡಿನ ಬಂಟರನ್ನೆಲ್ಲ ಹೆಡೆಮುರಿ ಕಟ್ಟಿ ಒಂದು ದಿನದ ಮಟ್ಟಿಗೆ ಸದಾನಂದ ಹೆಗಡೆಯವರ ಉಪ್ಪರಿಗೆಯಲ್ಲಿ ಕೂಡಿಹಾಕಿತು. ಮಾಸ್ರ‍್ರ ಅಣತಿಯಂತೆ ಹೊಳೆಸಾಲಿನ ಲೈನ್‌ಮನ್ ರಾಮಪ್ಪ ಯಾರೂ ಕರೆಂಟಿನ ಡಬ್ಬಕ್ಕೆ ಕೈ ಹಾಕದಂತೆ ಟ್ರಾನ್ಸಫರ್ ಪೆಟ್ಟಿಗೆಯ ಹತ್ತಿರವೇ ಕಾವಲು ನಿಂತ. ಸಂಜೆಯಿಳಿಯುತ್ತಿದ್ದಂತೆ ಹೊಳೆಸಾಲಿನ ಶಾಲೆಯಲ್ಲಿ ಗ್ಯಾದರಿಂಗಿನ ರಂಗು ಹರಡತೊಡಗಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೇಳನೆಯ ಕಂತು ನಿಮ್ಮ ಓದಿಗೆ