Advertisement

Category: ಪ್ರವಾಸ

ಬೆಣ್ಣೆಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಲಪಾತದ ಎಡಮಗ್ಗಲಿನ ತಗ್ಗಿನಲಿ ನಿಂತು ನೋಡಿದರೆ ನೀರಿನ ನಡುವೆ ಅಲ್ಲಲ್ಲಿ ಗುಲಾಲಿ ಬಣ್ಣದ ರೇಖೆಗಳು ಕಾಣಿಸಿ ನಿಮ್ಮನ್ನು ತಬ್ಬಿಬ್ಬು ಗೊಳಿಸುತ್ತದೆ. ಯಾವುದು ದಿಟ ಯಾವುದು ಮಿಥ್ಯ ಎಂದರಿಯುವ ಹೊತ್ತಿಗೆ ಜಲಪಾತ ನಿಮ್ಮ ಮನಸ್ಸನ್ನು ಮತ್ತು ಒಡಲನ್ನು ಒದ್ದೆ ಮಾಡಿಸಿರುತ್ತದೆ. ಮೌನದಲ್ಲೇ ನೀವು ಮೇಲೆ ಬಂದು ಜಲಪಾತದ ಎಡ ಭುಜಕ್ಕಾನಿಸಿ ಕುಳಿತು ಧ್ಯಾನಸ್ಥರಾಗುವಿರಿ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ

Read More

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಉಮಾರಾವ್ ಪ್ರವಾಸ ಕಥನ

ಮೂರು ನಾಲ್ಕು ಗಂಟೆಗಳು ಕೈರೋ ಪ್ಲೇನಿಗಾಗಿ ಕಾಯಬೇಕಾಗಿದ್ದರಿಂದ ನಮಗೆ ಸರಿ ಹೊಂದಬಹುದಾದದ್ದು ಏನಾದರೂ ತಿನ್ನಲು ಸಿಗುವುದೇ ಎಂದು ನಾವು ಸಸ್ಯಾಹಾರಿಗಳು ಹುಡುಕುತ್ತಾ ಹೊರಟೆವು. ಕೊನೆಗೂ ಸೇಫ್ ಎನ್ನಿಸಿದ್ದು ಅಲ್ಲಿದ್ದ ಮಕ್ದೊನಾಲ್ಡ್ಸ್ ನಲ್ಲಿ ಪೊಟ್ಯಾಟೋ ಫ್ರೈಸ್ ತಿನ್ನುವುದು. ಅದನ್ನೇ ಕೊಂಡು, ಆ ಚಿಕ್ಕ ಜಾಗದಲ್ಲಿ ಉಳಿದಿದ್ದ ಖಾಲಿ ಕುರ್ಚಿಗಳನ್ನು ಆರಿಸಿ ಒಟ್ಟಿಗೆ ಹಾಕಿ ಕುಳಿತೆವು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಈಜಿಪ್ಟ್‌ ಪ್ರವಾಸದ ಕುರಿತು ಉಮಾರಾವ್‌ ಬರಹ

Read More

ಮೋಹಕ ಕುದುರೆಮುಖ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಶಿಖರದ ತಲುಪಿದೆವೆನ್ನುವಾಗ ಸಣ್ಣದೊಂದು ಝರಿ ಅಡ್ಡ ಹಾಯುವುದು. ಅದನ್ನು ದಾಟಿ ಕಟ್ಟಿ ತಂದ ತಿಂಡಿ ತಿಂದು ಶಿಖರಾಗ್ರ ತಲುಪಿದೆವು. ಅಲ್ಲಿನ ಮಂಜಿನಲ್ಲಿ ಕುಣಿದು ಕುಪ್ಪಳಿಸಿದೆವು. ಶಿಖರಾಗ್ರದಿಂದ ಕಾಣುವ ಮೋಹನ ಮೋಹಕ ನೋಟಕೆ ಕಾದು ಕುಳಿತೆವು. ಒಂದೆರಡು ಬಾರಿ ಕಣಿವೆಯ ರುದ್ರ ಸೌಂದರ್ಯವನ್ನು ವೀಕ್ಷಿಸಿದೆವು. ಕುದುರೆ ಮುಖದಿಂದ ಮುಳ್ಳಯ್ಯನಗಿರಿಯ ವಿಹಂಗಮ ನೋಟ ನೋಡಬಹುದು. ಯಾವುದಕ್ಕೂ ಮಂಜು ನಮಗೆ ಅವಕಾಶವೀಯಲೇ ಇಲ್ಲ. ಮುಳ್ಳಯ್ಯನ ಗಿರಿ ಏರಿ ಕುದುರೆ ಮುಖ ಪರ್ವತ ನೋಡಿ ಪರವಶನಾದುದು ನೆನಪಿದೆ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕುದುರೆಮುಖ ಕುರಿತ ಬರಹ

Read More

ಅಟ್ಲಾಂಟಾದಲ್ಲಿ ಅಲೆಅಲೆಯುತ್ತಾ….: ದೇವಿಕಾ ನಾಗೇಶ್‌ ಬರಹ

ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಆಧುನಿಕತೆಗೆ ಸಮಾನತೆಗೆ ತಕ್ಷಣ ತೆರೆದುಕೊಳ್ಳುವ ಅಮೆರಿಕವನ್ನು ಕಟ್ಟಿ ಬೆಳೆಸಿದವರು ಅನಾದಿಯಿಂದಲೂ ವಲಸಿಗರು ಎನ್ನುವುದನ್ನು ಮರೆಯುವಂತಿಲ್ಲ. ಈಗ ಇವರಲ್ಲಿ ನಾನು ಮುಂದು ತಾನು ಮುಂದು ಎನ್ನುವ ಪೈಪೋಟಿ ಶುರುವಾಗಿದೆ. ಆ ಕಾರಣಕ್ಕಾಗಿ ಒಬ್ಬರನ್ನು ಒಬ್ಬರು ಹಣೆಯುವ ಸ್ಪರ್ಧೆ. ಈ ಸ್ಪರ್ಧೆಯ ಕಾರಣದಿಂದಾಗಿಯೇ ಅಮೇರಿಕಾದ ಇತಿಹಾಸ ರಕ್ತದ ಕಲೆಯನ್ನು ಹೊತ್ತು ವಿಜೃಂಬಿಸುತ್ತಿದೆ. ಹೊಟ್ಟೆ ಪಾಡಿಗಾಗಿ ವಲಸೆ ಬಂದ ಪ್ರತಿಯೊಬ್ಬರದ್ದು ಇವತ್ತು ಈ ಊರು ನಾಳೆ ಇನ್ನೊಂದು ಊರು ಎನ್ನುವಂತಹ ಅತಂತ್ರ ಪರಿಸ್ಥಿತಿ.
ಅಮೇರಿಕದ ಅಟ್ಲಾಂಟಾದಲ್ಲಿ ಓಡಾಡಿದ ನೆನಪುಗಳ ಕುರಿತ ದೇವಿಕಾ ನಾಗೇಶ್‌ ಬರಹ ನಿಮ್ಮ ಓದಿಗೆ

Read More

ಅಲೆಮಾರಿಯ ಆಗುಂಬೆ ಹಾಗೂ ಟ್ರೋಜನ್‌: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಕುಮಾರ ವ್ಯಾಸನ ರೂಪಕ ಅಲಂಕಾರದಂತೆ ಆಗುಂಬೆ ಸುಂದರ, ಮನೋಹರ. ಅಂತಹ ಒಂದು ಅನನ್ಯ ಅನುಭವ ಪಡೆದುದು ನಾವು ಅಲ್ಲಿನ ಜಲಪಾತಗಳ ದರ್ಶನ ಪಡೆಯಲು ಹೊರಟಾಗ. ಹೆಬ್ರಿಯಿಂದ ಕೆಲವೇ ಕಿಲೋ ಮೀಟರ್ ದೂರವಿದೆ. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ಪೋಲಿಸ್ ಠಾಣೆಯ ಅನುಮತಿ ಪಡೆಯುವುದು ಕಡ್ಡಾಯ! ಇವೆಲ್ಲವೂ ಕಾಡಿನೊಳಗಿನವು. ಕೆಲವು ರಕ್ಷಿತಾರಣ್ಯದಲ್ಲಿವೆ. ಚುಮು ಚುಮು ಮುಂಜಾವಲಿ ಇಲ್ಲಿಗೆ ಬಂದಿಳಿದೆ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಆಗುಂಬೆಯ ಕುರಿತ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ