Advertisement
ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

ಅಗಸ್ತ್ಯ: ಉಮಾರಾವ್ ಬರೆದ ಕತೆ

“ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು…”

Read More

ಇತಾಲೋ ಕಾಲ್ವಿನೋ ಬರೆದ ಅದೃಶ್ಯ ನಗರಿಗಳ ಕಥಾನಕ

“ಡೆಸ್ಪಿನಾ ತಲುಪಲು ಎರಡು ದಾರಿಗಳಿವೆ: ಹಡಗಿನಿಂದ ಅಥವಾ ಒಂಟೆಗಳ ಮೇಲೆ. ಒಂಟೆಯ ಮೇಲೆ ಬರುವ ಯಾತ್ರಿಗೆ ಈ ಊರು ಒಂದು ಮುಖ ತೋರಿಸಿದರೆ, ಸಮುದ್ರದ ಮೇಲಿಂದ ಬರುವವನಿಗೆ ಬೇರೆಯದನ್ನೇ ತೋರಿಸುತ್ತದೆ. “

Read More

ಮಾರ್ಕ್ವೆಜ್ ಮಹಾಶಯನ ಪೇರಳೆಯ ಪರಿಮಳಗಳು

ಅಮೆರಿಕನ್ನರಂತು ಇದನ್ನು ಎಷ್ಟು ನಂಬುತ್ತಾರೆಂದರೆ, ಅಲ್ಲಿನ ಹೋಟೆಲ್ಲುಗಳಲ್ಲಿ ಮಹಡಿಯ ನಂಬರ್ ಗಳು ೧೨ರಿಂದ ೧೪ಕ್ಕೆ ಹೋಗುತ್ತದೆ. ಅದರೆ, ಅದು ನಿಜವಾಗಿ ಅದೃಷ್ಟ ಸಂಖ್ಯೆ ಎಂದು ನನ್ನ ಅನಿಸಿಕೆ. ಹಾಗೆಯೇ, ಕಪ್ಪು ಬೆಕ್ಕುಗಳು ಕೆಟ್ಟದ್ದನ್ನು ತರುತ್ತವೆ  ಮತ್ತು ಏಣಿಗಳ ಕೆಳಗೆ ನಡೆಯಬಾರದು ಎನ್ನುವುದನ್ನೂ ನಾನು ನಂಬುವುದಿಲ್ಲ.

Read More

ಪಿಸುಗುಟ್ಟುವ ದಂತಕಥೆಗಳ ಭೂತಾನ್:ಉಮಾ ಪ್ರವಾಸ ಕಥನ

ಇಲ್ಲಿ ಬಡತನವಿದೆ, ಭಿಕ್ಷುಕರಿಲ್ಲ. ಕೊಲೆ, ಕಳ್ಳತನಗಳಿಲ್ಲ. ಯಾತ್ರಿಗಳ ಬಗ್ಗೆ ಅಚ್ಚರಿಯಿದೆ, ಕುತೂಹಲವಿದೆ. ಇದು ಉಮಾರಾವ್ ಬರೆದ ಪ್ರವಾಸ ಕಥನ.

Read More

ಮಿಲ್ ವಾಕಿಯಿಂದ ಉಮಾ ಬರೆದ ಮೊದಲ ಓಲೆ

ನಿಧಾನವಾಗಿ ಮತ್ತೆ ಇಶಾನ್ ಮೆಲುದನಿಯಲ್ಲಿ “ಅಜ್ಜಿ, ಈಸ್ ಇಟ್ ಡೆಡ್?” ಎಂದಾಗ ನನಗೆ ಅಚ್ಚರಿಯಾಯಿತು. ತಕ್ಷಣ ಹಿಂದೆಯೇ ಕೂತಿದ್ದ ಅವನಿಗಿಂತ ಒಂದೂವರೆ ವರ್ಷ ದೊಡ್ಡವನಾದ ಅವನ ಅಣ್ಣ ಧ್ರುವ ಜೋರಾಗಿ “ಡೆಡ್ ಈಸ್ ಅ ಬ್ಯಾಡ್ ವರ್ಡ್. ಡೋಂಟ್ ಸೇ ದಟ್.” ಎಂದು ತನ್ನ ಕೇಜಿಯಲ್ಲಿ ಕಲಿತ ತಿಳುವಳಿಕೆಯಿಂದ ತಮ್ಮನಿಗೆ ಬುದ್ಧಿವಾದ ಹೇಳಿದ.

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜರ್ಮನಿಯಿಂದ ಕನ್ನಡಕ್ಕೆ ಬಂದ ‘ಈಡಾ’

ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ…

Read More

ಬರಹ ಭಂಡಾರ