Advertisement

Category: ಪ್ರವಾಸ

ಕೋಟೆ ಕೊತ್ತಲಗಳ ನಡುವೆ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಎಂದೂ ನಿದ್ರಿಸದ ಕೋಟೆ ಏಳು ಮಹಾದ್ವಾರಗಳಿಂದ ಇಂದಿಗೂ ಅಬೇಧ್ಯವಾಗಿದೆ. ತನ್ನ ತಲೆ ಬಿದ್ದಲ್ಲಿ ದೇವಾಲಯವನ್ನು ನಿರ್ಮಿಸಿ ಹಾಗೂ ದೇಹವಿದ್ದಲ್ಲಿ ಕೋಟೆ ಗೋಡೆಯ ನಿರ್ಮಿಸಿ ಎಂದು ತನ್ನನ್ನೆ ತಾ ಬಲಿಕೊಟ್ಟ! ತನ್ನ ತಲೆ ಕತ್ತರಿಸಿದ ಮೇಲೂ ಆತ ನಿಧಾನಕ್ಕೆ ಕೋಟೆಯ ಗೋಡೆ ಎಡೆಗೆ ನಡೆದು ಧರೆಗುರುಳಿದ. ಅಲ್ಲೇ ಕೋಟೆಯನ್ನು ನಿರ್ಮಿಸಲಾಯಿತು. ಎಷ್ಟೇ ಬಾರಿ ನಿರ್ಮಿಸಿದರೂ ನಿಲ್ಲದ ಕೋಟೆ ಬೀಳದೆ ನೇರ ನಿಂತಿತು. ಅಂತೂ ರಾಣಾಕುಂಭನ ಆಸೆ ನೆರವೇರಿತು. ಕಿಲಿವಾಡದಲ್ಲಿ ಬೃಹತ್ ಕೋಟೆಯೊಂದು ಎದ್ದು ನಿಂತಿತು!
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ರಾಜಸ್ಥಾನದಲ್ಲಿ ಓಡಾಡಿದ ಅನುಭವಗಳ ಕುರಿತ ಬರಹ

Read More

ಹಂಪಿಯ ಹೊಳೆ ದಂಡೆ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಹೀಗೆ ಬಂಡೆಗಳ ತಡವಿ ಮೇಲೇರಿ ಅಲ್ಲೆಲ್ಲಾ ನುಸುಳು ಕೋರರಾಗಿ ಅಸಾಧ್ಯ ಬಂಡೆಗಳನ್ನು ಅಪ್ಪಿ ಇಳಿ ಸಂಜೆಯ ಕೊನೆಯ ಕಂತಿಗೆ ಮದನಕೊತ್ತಲ ಮಂಟಪದಲ್ಲಿದ್ದೆವು. ಒಮ್ಮೆಯಂತೂ ಅಸಾಧ್ಯವೆಂಬ ಬಂಡೆ ಏರಿ ಬಂದೆ! ಚಾಕಲೇಟ್‌ ಕೊಡುವೆ ಮೇಲೆ ಬಾ ಎನ್ನಲು ಗೆಳೆಯ ನಾಗರಾಜ್‌ ಮತ್ತು ಈರಣ್ಣ. ಓಬವ್ವ ಮತ್ತು ಹೈದರಾಲಿಯ ಸೈನಿಕರು ನೆನಪಾದರು. ಎರಡು ಬೃಹತ್‌ ಬಂಡೆಯ ನಡುವೆ ಇರುವ ಇಕ್ಕಟ್ಟು ದಾರಿ ಹಾಯಬೇಕು. ದಿನವೂ ನೀರು ಮತ್ತು ಬುತ್ತಿಗಂಟು ಹಿಡಿದು ಈ ಮಂಟಪದ ನೆತ್ತಿಗೆ ಹತ್ತುವ ಅಂದಿನ ಯುವಕರ ಸಾಹಸ ಪ್ರವೃತ್ತಿಗೆ ಮನಸೋತೆ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹಂಪಿಯಲ್ಲಿ ಓಡಾಡಿದ ಕುರಿತ ಬರಹ

Read More

ಬಲ ಉಳ್ಳವರ ಅಹೋಬಿಲಂ!: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜೀವನೋಪಾಯಕ್ಕೆ ಇಲ್ಲಿ ಹಲವು ವೇಷ ತೊಟ್ಟವರು ಇಲ್ಲಿ ಕಾಣಸಿಗುತ್ತಾರೆ. ದಾರಿಗುಂಟ ಚಾಟಿಯನು ಮೈಗೆ ನಗುತ ಬಾರಿಸಿಕೊಂಡು ಜೀವನ ನಿರ್ವಹಿಸುವ ನಿರ್ಮೋಹಿ ಅಮಾಯಕರು. ಕಿಲೋಮೀಟರ್‌ ಆಚೆಗೂ ಕೇಳಿಸುವ ಚಾಟಿ ಶಬ್ದ. ಇವರ ಕುರಿತೊಂದು ಮಹಾ ಮರುಕ ಹುಟ್ಟುವಂತೆ ಮಾಡುತ್ತದೆ. ಬಿಸಿಲ ಜಗುಲಿಗೆ ಕೂತು ಬೇಡುವವರು. ಭಕ್ತಾದಿಗಳಿಗೆ ಉಣ್ಣಲು ಬನ್ನಿ ಎನ್ನುವವರು. ಒಂದೇ ಎರಡೇ. ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ನಮ್ಮನ್ನು ಕಂಡರೆ ಅವರಿಗೂ ಹಾಗೇ ಅನಿಸಬಹುದೇ ಗೊತ್ತಿಲ್ಲ. ಅಹೋಬಿಲಂ ಎಂಬ ಮಾಯಾಲೋಕದಲ್ಲಿ ಕಳೆಯುವ ಇನ್ನೆಷ್ಟು ಜನರಿದ್ದಾರೋ ಗೊತ್ತಿಲ್ಲ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಆಂಧ್ರಪ್ರದೇಶದ ಅಹೋಬಲಂನ ಕುರಿತ ಬರಹ

Read More

ತುಂಬಾ ಕುಡಿದರೂ ತಲೆಗೇರದ `ತುಂಬಾ’: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

`ಮೇಘಾಲಯದ ವಾಕೆನ್ ಹಳ್ಳಿಯೊಂದರಲ್ಲಿ ನಡೆಯುವ ಬುಡಕಟ್ಟು ಉತ್ಸವದಲ್ಲಿ ಇದೇ ರೀತಿಯ ಪೇಯ ನೀಡುತ್ತಾರೆʼ ಎಂದು ಮೇಘಾಲಯದ ಗೆಳೆಯನೊಬ್ಬ ಅರುಹಿದ್ದ. ಇಲ್ಲಿನ ನಿರ್ಮಲ ಬುಡಕಟ್ಟು ಯಾವುದೇ ಪಂಗಡಕ್ಕೆ ಸೇರಿದವರಲ್ಲ. ದೇವರ ಹೆಸರು ಲಿಂಗ್‌ದಾ. ನೀವು ಕೇಳಿಲ್ಲ ಬಿಡಿ. ಭಕ್ತರು ತಮ್ಮ ಹೊಸ ಬೆಳೆಯನ್ನು ದೇವರಿಗೆ ಸಮರ್ಪಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಯರೇ ಇಲ್ಲಿನ ದೇವರಿಗೆ ನೈವೇದ್ಯ. ಅದನ್ನೇ ಬಂದವರಿಗೆಲ್ಲಾ ತೀರ್ಥವಾಗಿ ಹಂಚುತ್ತಾರೆ! ಹಾಗಾಗಿ ಸರ್ವಾಂತರಯಾಮಿ ಈ ಪೇಯ! ಜಗದಗಲ ಹಬ್ಬಿದ ಈ ಸಂಪ್ರದಾಯಗಳ ತಾಯಿ ಬೇರೊಂದೆ ಅತಿಥಿ ಸತ್ಕಾರ ಮತ್ತು ಆರೋಗ್ಯ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

Read More

ಈ ಜಗ ಸೋಜಿಗ….: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಊರ ಚಾವಡಿಯಲ್ಲೊಂದು ಕೊಳ. ಕೊಳದ ಸನಿಹ ಗಡಿ ಹಾಕಿದಂತೆ ಹರಿವ ಚಂದ್ರಾನದಿ ಮತ್ತು ಕೊಳಲ ರಾಗ ತೆಗೆಯುವ ಸೀಸು ಜಲಧಾರೆ. ಸದಾ ಪ್ರಶಾಂತ ಸನ್ನಿಧಿ. ಅದರ ಸೌಂದರ್ಯಕ್ಕೆ ಮರಳಾಗದೇ ಮರಳಿದವರಿಲ್ಲ. ಗಂಟೆಗೆ ಸಾವಿರ ಸಾವಿರ ಕ್ಯೂಸೆಕ್ಸ್‌ ನೀರನ್ನ ಧರೆಗಿಳಿಸುವ ಭಗೀರಥ, ಸೀಸು ಜಲಧಾರೆ. ೨೪ ಗಂಟೆಯೂ ಬೇಸರಿಸದೆ ಬಸವಳಿಯದೇ ಸುರಿವ ಜಲಧಾರೆ ಎಂದು ಬತ್ತುವುದೆಂದು ಹೋಟೆಲ್‌ ಮಾಲಿಕನಲ್ಲಿ ಕೇಳಿದೆ. ಇಲ್ಲಿಯವರೆಗೆ ಬತ್ತಿದ್ದೇ ಇಲ್ಲವೆಂದ! ಹಿಮ ಟೋಪಿಗಳನ್ನು ಕರಗಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ನೀರುಣಿಸುವ ಚಂದ್ರಾ ನದಿಯ ಹಿಮಗಡ್ಡೆಗಳು!
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ