೧
ಬಾಲ್ಯದಲ್ಲಿ
ಅತಿ ಹಗೂರಾದ
ಹತ್ತಿಯ ಮೂಟೆಗಳಂತೆ ಕಾಣುತ್ತಿದ್ದ
ಮೋಡಗಳೀಗ
ಹಿಂದಿನಷ್ಟೇ
ಹಗುರವಾಗಿವೆ
ಎಂದೆನ್ನಿಸುತ್ತಿಲ್ಲ, ಏಕೆ?
ಅವೂ
ಜಗತ್ತಿನ ದುಃಖವನ್ನೆಲ್ಲ
ಹೀರೀ ಹೀರಿ….
ಭಾರವಾಗಿಬಿಟ್ಟಿವೆಯ?
ಅತ್ತು
ಹಗುರಾಗಲಾದರೂ ಹೇಳಬೇಕು
ಅವುಗಳ ಹೆಗಲ ಮೇಲೆ ಕೈಯಿಟ್ಟು
ಸುಡುಸುಡುತ್ತಿರುವ
ಜಗತ್ತು
ಒಂಚೂರಾದರೂ ತಂಪಾಗಬಹುದು
***
೨
ಎದೆಯ
ಗಾಯಗಳಿಗೆ
ಹೊಲಿಗೆ ಹಾಕಲು
ಬರುವುದಿಲ್ಲವೆಂದೇ
ಮುಖದ ಮೇಲಿನ
ಕಲೆಗಳಿಗೆ
ಇನ್ನಷ್ಟು
ಗಾಢವಾಗಿ
ಬಣ್ಣ ಹಚ್ಚುತ್ತಾಳವಳು...

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಾಡೊಳಗ ಕಳದಾವು ಮಕ್ಕಾಳು’ ಮಕ್ಕಳ ನಾಟಕ . ‘ಚಿತ್ತ ಭಿತ್ತಿ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

