Advertisement
ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

ಚಾಂದಿನಿ….

‘ಗೆ’
ಪ್ರಿಯ ಚಾಂದಿನಿ

ವಿಷಯ : ಈ ಕೆಳಗಿನಂತೆ

ನಿನ್ನ ಹೆಸರು ಗೀಚದ
ಗೋಡೆಗಳೆಲ್ಲ ಬಿದ್ದು ಬಿಡಲಿ
ಹಿಡಿದಿಡಲಾರದಷ್ಟು ಒಲವಿದೆ ಬೊಗಸೆ ಹೃದಯದಲಿ
ನಿನ್ನ ಮುಂಗುರುಳ ಸೋಕದ ಗಾಳಿ ಬೀಸದಿರಲಿ

ಬಟ್ಟಲ ಕಣ್ಣುಗಳಲ್ಲಿ ಬೆಳದಿಂಗಳ ಕನಸುಗಳ ತುಂಬಿರುವೆ
ನಾವಿಬ್ಬರೂ ಕದ್ದಾಡುವ ಪಿಸುಮಾತು ಕಾಯದ ಸಂಜೆ ಸಾಯಲಿ
ನನ್ನ ಸೋಲಿಸುವ ನಿನ್ನ ನಗೆಗೆ ಮೌನದ ಸುಂಕ ಕಟ್ಟುತಿರುವೆ
ನೀನಿರದ ಕನಸುಗಳು ರಾತ್ರಿಗೆ ಬಾರದಿರಲಿ

‘ಇಂದ’
ಅಭಿ

ಗರೀಬ
ಪ್ರೇಮವನಷ್ಟೇ ಕೊಡಬಲ್ಲ
ಕಾವ್ಯವನಷ್ಟೇ ಕಟ್ಟಬಲ್ಲ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ