ಬಾಂಬುದಾಳಿಗೀಡಾಗಿ ಬಾನುಲಿ ಬರಿದಾಗಿದೆ ಮೌನವಾಗಿದೆ…
ಭಾಷಣ ಸ್ಪರ್ಧೆಯ ದಿನ ಬಂದಿತು. ಹೈಸ್ಕೂಲು ಕಟ್ಟಡದ ಹಿಂದಿನ ಗೋಡೆಯ ಮೇಲೆ ಹೋಗಿ ಕುಳಿತೆ. ಗೋಡೆ ಜಿಗಿದು ಸಭಾಭವನಕ್ಕೆ ಹೋಗಬೇಕೆಂದರೆ ಧೈರ್ಯ ಸಾಲದು. ಹಾಫ್ ಪ್ಯಾಂಟ್ ಹರಿದಿತ್ತು. ಷರ್ಟ್ ಗಲೀಜಾಗಿತ್ತು. ಕ್ಷೌರಿಕರಿಗೆ ಕೊಡಲಿಕ್ಕೆ ಹಣವಿಲ್ಲದ್ದಕ್ಕಾಗಿ ಕೂದಲು ಬೆಳೆದಿತ್ತು. ಕೊಬ್ಬರಿ ಎಣ್ಣೆ ಇಲ್ಲದ್ದಕ್ಕಾಗಿ ಕೂದಲು ಒಣಗಿದ್ದರಿಂದ ಕಾಡು ಮನುಷ್ಯನ ಹಾಗೆ ಕಾಣುತ್ತಿದ್ದೆ. ಭಾಷಣ ಮಾಡುವ ಸ್ಫೂರ್ತಿಗೆ ಪೂರಕವಾಗಿರುವಂಥ ಯಾವುದೂ ಇರಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 63ನೇ ಕಂತು ನಿಮ್ಮ ಓದಿಗೆ