“ಈ ಮಕ್ಕಳನ್ನು ಯಾರಿಗಾದರೂ ಕೊಟ್ಟುಬಿಡಿರೆಂದು’ ಒಂದೇ ಸವನೆ ಜನರು ಅನ್ನುತ್ತಿದ್ದರು. ‘ಇವು ತಂದೆ ತಾಯಿಗಳನ್ನು ತಿಂದ ಮಕ್ಕಳು’ ಎಂದೂ ಕೂಡ ಅನ್ನುತ್ತಿದ್ದರು. ನಮ್ಮ ಅಜ್ಜಿಗೆ ನಮ್ಮ ಸಂರಕ್ಷಣೆಯ ಬಗ್ಗೆ  ಬಹಳ ಕಾಳಜಿ ಇದ್ದರೂ ಅನ್ನ ನೀರಿಲ್ಲದೆ ಮೊಮ್ಮಕ್ಕಳು ಸಾಯುವುದಕ್ಕಿಂತ ಜೋಪಾನ ಮಾಡಲು ಯಾರಿಗಾದರೂ ಕೊಟ್ಟರೆ ಅವುಗಳನ್ನು ನೋಡಲು ಮುಂದೆ ಸಾಧ್ಯವಾದೀತೆಂಬ ವಿಚಾರ ನಮ್ಮಜ್ಜಿಯ ಮನದಲ್ಲಿ  ಸುಳಿದುಹೋಯಿತು”
ಕೆ.ಎಸ್. ಕುಲಕರ್ಣಿಯವರು ಕನ್ನಡಕ್ಕೆ ಅನುವಾದಿಸಿದ ಮರಾಠಿ ಸಿನೆಮಾದ ಖ್ಯಾತ ಅಭಿನೇತ್ರಿ ಶಾಂತಾ ಹುಬಳೀಕರ ಅವರ ಆತ್ಮಚರಿತ್ರೆಯ ಕೆಲವು ಹಾಳೆಗಳು.

 

ಮೊನ್ನೆ ಮೊನ್ನೆ ನಡೆದ ಘಟನೆಯಿದು. ಪ್ರಭಾತ ಕಂಪನಿಯ ದಾದಾ ದಾಮಲೇಯವರು ಪ್ರಭಾತ ಫಿಲ್ಮಿ ಕಂಪನಿಯ ಅತ್ಯಂತ ಪ್ರಸಿದ್ಧ ಸಿನೆಮಾಗಳ ವಿಡಿಯೋ ಕ್ಯಾಸೆಟ್ಟು ತಯಾರ ಮಾಡಿದ್ದರು. ಅವುಗಳಲ್ಲಿಯ ‘ಮಾಣೂಸ’ಚಿತ್ರದ ಕ್ಯಾಸೆಟ್ಟನ್ನು ನಾನು ನನ್ನ  ತರುಣ ಗೆಳತಿಯರೊಡನೆ ನೋಡಹತ್ತಿದ್ದೆನು. ‘ಮಾಣೂಸ’ ನೋಡುತ್ತಿರುವಂತೆ ನಾನು ನನ್ನನ್ನೇ ಮರೆಯುತ್ತೇನೆ. 40 ವರ್ಷಗಳ ಪೂರ್ವದ ‘ಪ್ರಭಾತ’ ಸ್ಟುಡಿಯೋದಲ್ಲಿ ನನ್ನ ಮನಸ್ಸು ಸುಳಿದಾಡುತ್ತದೆ. ಆಗ ನನ್ನ ಮನದಲ್ಲಿ  ಈಗಿನವಳು ನಾನಾಗಿ  ಉಳಿದಿರುವುದಿಲ್ಲ. ರಾಮ ಮರಾಠೆ, ಶಾಹೂ ಮೋಡಕ, ವಿ. ಶಾಂತಾರಾಮ, ‘ಮಾಣೂಸ’ ಚಿತ್ರದ ಈ ನನ್ನ  ಸಹಕಲಾವಿದರು. ಇತ್ತೀಚೆಗೆ ನನ್ನನ್ನು  ಭೆಟ್ಟಿಯಾಗಿದ್ದರು. ಅಣ್ಣಾ (ವಿ ಶಾಂತಾರಾಮ) ರ ದಿಗ್ದರ್ಶನ, ಶಾಹೂ ಮೋಡಕರ ಪ್ರೇಮ ಪ್ರಸಂಗದಲ್ಲಿಯ ಲಜ್ಜೆ-ಭೀತಿ, ರಾಮ ಮರಾಠೇಯ ತುಂಟತನಗಳಲ್ಲೆವೂ ಈಗಲೇ ನಡೆಯಹತ್ತಿವೆಯೋ ಏನೋ ಎನ್ನುವಂತೆ ಸ್ಮರಣೆಯಾಗಹತ್ತಿತು.

ಸನಿಹದಲ್ಲಿ ಕುಳಿತಿದ್ದ ಓರ್ವಳು, `ಶಾಂತಾಬಾಯಿ ನಿಮ್ಮ ಕೂದಲುಗಳು ನಿಜವಾಗಿಯೂ ಇಷ್ಟು ಉದ್ದವಾಗಿದ್ದವೇ?’ ಎಂದು ಪ್ರಶ್ನೆಯನ್ನು ಕೇಳಲಾಗಿ ನಾನು ನನ್ನ  ಕನಸಿನ ಸಾಮ್ರಾಜ್ಯದಿಂದ ಎಚ್ಚೆತ್ತೆ. ‘ನಿಜವಾಗಿಯೂ ಇಷ್ಟೇ ಉದ್ದವಿದ್ದವು.  ಗಂಗಾವನವಲ್ಲ.’ ಆಗ ನನಗೆ ಹಿಂದಿನ ನೆನಪು ಆಯಿತು. ಈಗ ಈ ಸಿನೇಮಾ ನೋಡುವ  ಪ್ರೇಕ್ಷಕಳು ನಿಧಾನ ನನ್ನನ್ನು ‘ಮಾಣೂಸ’ ಚಿತ್ರದ ನಾಯಿಕೆ ಶಾಂತಾ ಹುಬಳೀಕರ  ಅಂತಾದರೂ ಗುರುತಿಸಹತ್ತಿದ್ದಾಳೆಂದು ಮನಸ್ಸಿಗೆ ನೆಮ್ಮದಿ ಆಯಿತು. ಆದರೆ ಕೆಲವು ವರ್ಷಗಳ  ಹಿಂದೆ ವಸಯಿ ಊರಲ್ಲಿಯ ಶ್ರದ್ಧಾನಂದ ಆಶ್ರಮದಲ್ಲಿ  ವಾಸಿಸುವಾಗ ಈಗಿನಂತೆ ಕೆಲವು ಹೆಣ್ಣು ಮಕ್ಕಳೊಡನೆ ಇದೇ ‘ಮಾಣೂಸ’ ಚಿತ್ರವನ್ನು ನೋಡುತ್ತಿದ್ದಾಗ ನಾನ್ಯಾರು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಅವರಲ್ಲಿಯ ಓರ್ವಳು  “ಇಷ್ಟು ಸುಂದರ ಪಾತ್ರ ಮಾಡಿದ ನಾಯಿಕೆ ಶಾಂತಾ ಹುಬಳೀಕರರು ಮುಂದೆ ಯಾಕೆ  ಸಿನೆಮಾದಲ್ಲಿ ಕೆಲಸ ಮಾಡಲಿಲ್ಲ?” ಎಂದಳು. “ನಿನಗ ಗೊತ್ತಿಲ್ಲೇನು? ಶಾಂತಾ ಹುಬಳಿಕರ ಯಾವಾಗೋ ತೀರಿಕೊಂಡಿದ್ದಾಳೆ.” ಇದನ್ನು ಕೇಳುತ್ತಲೇ ಇದ್ದೆ. ಅಜ್ಞಾತವಾಸದಲ್ಲಿದ್ದ ಶಾಂತಾ ಹುಬಳೀಕರ್ ಶಾಂತಾ ಗಿತೆ ಎಂಬ ಹೆಸರಿನಲ್ಲಿ ತನ್ನ ಮರಣದ ಸುದ್ದಿ ಕೇಳುತ್ತಿದ್ದಳು. ಜಗತ್ತಿನ ದೃಷ್ಟಿಯಲ್ಲಿ ನಾನು ಮೃತಳಾಗಿದ್ದೆ  ಎಂಬುದರ ಅರಿವು  ನನಗಾಯ್ತು. ಇತರರಿಗೆ ನನ್ನ ನಿಜಸ್ವರೂಪ ತಿಳಿಯದಿದ್ದರೂ ನಾನಾರೆಂಬುದರ ಅರಿವು ಮಾತ್ರ ನನಗಿತ್ತು.  ಹಿಂದಿನ ಸ್ಮೃತಿಗಳು ಸುರುಳಿ ಸುರುಳಿಯಾಗಿ ನನ್ನ ಮಿದುಳಿನ ಚಕ್ರದ ಸುತ್ತಲೂ  ತಿರುಗುತ್ತಿದ್ದಂತೆ ಸುಖ ದುಃಖದ ಅನೇಕ ಪ್ರಸಂಗಗಳ ಅರಿವಾಗಿ ನಾನು ಏನೇನು ಜೀವನದಲ್ಲಿ ಅನುಭವಿಸಿದೆ, ಅವು  ಜಗತ್ತಿಗೆ  ತಿಳಿಯಲಾರದು. ಶಾಂತಾ ಹುಬಳಿಕರಳ  ಪ್ರಕರಣವು ಎಂದೋ ಮುಗಿದು ಹೋಗಿದೆಯೆಂಬ ಕಲ್ಪನೆಯಿಂದ ನನ್ನ ಕುತ್ತಿಗೆ ನರಗಳು ಉಬ್ಬಿ ಚಿಂತಾಕ್ರಾಂತಳಾಗುತ್ತಿದ್ದೆ. ಹಿಂದೆ ಸುಖವನ್ನುಂಡಂತೆ ಅಜ್ಞಾತವಾಸದಲ್ಲಿ ದುಃಖದ ಮಡುವಿನಲ್ಲಿದ್ದೆ.

ಇಷ್ಟರಲ್ಲಿ ನನ್ನ ಜಾತಕದಲ್ಲಿ ಗ್ರಹಗಳ ಭಾಗ್ಯೋದಯವಾಯಿತು. ‘ಲೋಕಸತ್ತಾ’ ಮರಾಠಿ ದೈನಿಕದಲ್ಲಿ ಸಂಪಾದಕ ಶ್ರೀಮಾಧವ ಗಡಕರಿ ನನ್ನ ಬಗ್ಗೆ ಲೇಖನಗಳನ್ನು ಬರೆಯುತ್ತಿರುವಂತೆ ಶಾಂತಾ ಹುಬಳೀಕರಳ ಪುನರ್ಜನ್ಮವಾಯಿತು. ಜನರು ನನ್ನನ್ನು ಆದರದಿಂದ ಸ್ವಾಗತಿಸಿದರು. ಆಗ ಮನಕ್ಕೆ ನೆಮ್ಮದಿ ಆಯಿತು. ನಾನು ಜೀವಿಸುತ್ತಿದ್ದೇನೆಂಬ ಮಹಾಜನರ ಅರಿವಿನಿಂದ ನನಗೆ ಪರಮಾನಂದವಾಯಿತು. ನನ್ನ ಪುನರ್ಜನ್ಮವಾದುದರಿಂದ ಈಗ ನಾನು ಜನರಿಗೆ ನನ್ನ ಕಥೆಯನ್ನು ಹೇಳಲೇಬೇಕಾಗಿದೆ. ಒಂದು ಸಣ್ಣ ಹಳ್ಳಿಯ ಶೇತಕರಿ ಕುಟುಂಬದ ಹುಡುಗಿ, ಹೇಗೆ  ಜೀವಿಸಿದಳು, ಸಿನೆ ತಾರೆಯೆಂದು  ಹೇಗೆ ವೈಭವದ ಶಿಖರ ಮುಟ್ಟಿ ಅಲ್ಲಿಂದ ಕೆಳಗೆ ಬಿದ್ದಳು, ಇದೆಲ್ಲ ಹೇಗೆ ನಡೆಯಿತು –ಅದೇ ಈ ಕಥೆ.

ಹುಬ್ಬಳ್ಳಿಯ ಹತ್ತಿರದ ಅದರಗುಂಚಿ ಗ್ರಾಮದಲ್ಲಿ 14 ಏಪ್ರಿಲ್ 1914ರಂದು ನನ್ನ ಜನ್ಮವಾಯಿತು. ನಾನು ನನ್ನ ಮೂವರು ಭಗಿನಿಯರು, ತಂದೆ ತಾಯಿ ಇಷ್ಟೆ ನಮ್ಮ ಕುಟುಂಬ. ಹಿರಿಯವಳು ನೀಲಾ. ಅವಳಿಗೆ ಎಲ್ಲರೂ ನೀಲಮ್ಮಾ ಎಂದೇ ಕರೆಯುತ್ತಿದ್ದರು. ಅವಳ ಬೆನ್ನ ಮೇಲಿನ ಗಂಡುಮಗು ಹೆಚ್ಚು ದಿವಸ ಜೀವಿಸದೆ ತೀರಿಕೊಂಡಿತು. ಅನಂತರ ನಾನೇ. ನೀಲಮ್ಮ ನನಗಿಂತಲೂ ಹನ್ನೊಂದು ವರ್ಷ ದೊಡ್ಡವಳು. ನನ್ನ ಹೆಸರು ರಾಜಮ್ಮ.  ಆದರೆ ಎಲ್ಲರೂ ನನಗೆ ‘ರಾಜೂ’ಎಂದೇ ಕರೆಯುತ್ತಿದ್ದರು. ನನಗಿಂತಲೂ ಎರಡು ವರ್ಷ ಚಿಕ್ಕವಳು ಶಾರದಾ.

ಅದಗುಂಚಿಯ ನೆನಪು ಇನ್ನೂ ನನ್ನ ಮನದಲ್ಲಿ ಚಿರಸ್ಮರಣೀಯವಾಗಿದೆ. ಇತರ ಹಳ್ಳಿಗಳಂತೆಯೇ ಇದ್ದ ಗ್ರಾಮದಲ್ಲಿ ಒಕ್ಕಲಿಗರ ಕುಟುಂಬಗಳೇ ಹೆಚ್ಚು. ಬಡಿಗ, ಕಂಬಾರ, ಕುಂಬಾರ, ಚಮ್ಮಾರರು ಮನೆಮಾಡಿಕೊಂಡಿದ್ದರು. ಅಲ್ಲದೆ ನಮ್ಮೂರಲ್ಲಿ ಕೆಲ ಮುಸಲ್ಮಾನ ಕುಟುಂಬಗಳ ವಾಸವಿದ್ದಿತು. ನಾವು ಜಾತಿಯಿಂದ  ಲಿಂಗಾಯತ ಬಣಜಿಗರು. ಚಿಕ್ಕ ವ್ಯಾಪಾರವೇ  ನಮ್ಮ ಮನೆತನದ ಮುಖ್ಯ ಉದ್ಯೋಗ. ನಮ್ಮ ಅಜ್ಜಿ ವಾರದ ಸಂತೆಯಲ್ಲಿ ಹಾಲು, ಮೊಸರು, ಬೆಣ್ಣೆ ತುಪ್ಪಗಳನ್ನು ಮಾರಿಬರುತ್ತಿದ್ದಳು. ನಮ್ಮ ತಾಯಿಯ ತವರಿನಲ್ಲಿ ‘ಗಂಗಾ’, ‘ಗೌರಿ’ ಎಂಬ ಎಂಬ ಆಕಳುಗಳಿದ್ದವು. ಗಂಗಾ ಗೋವು ದೊಡ್ಡದಿದ್ದಿತು.  ಕರುವಾದ ಚಿಕ್ಕ ‘ಗಂಗೆ’ಯನ್ನು ಯಾರೋ ತಂದು ನಮ್ಮ ಹಟ್ಟಿಯಲ್ಲಿ ಕಟ್ಟಿಹೋಗಿದ್ದರೆಂದು ನಮ್ಮ ಅಜ್ಜಿಯು ಹೇಳುತ್ತಿದ್ದಳು. ಆಕಳಿಗೆ ಎತ್ತು ಹುಟ್ಟಿದ್ದಲ್ಲಿ ಅದನ್ನು ಬೆಳೆಸಿ ಬೇಸಾಯಕ್ಕೆ ಉಪಯೋಗಿಸುವುದು. ಕರು ಹುಟ್ಟಿದ್ದಲ್ಲಿ ತಿಂದುಂಡು ಸುಖದಿಂದಿರುವವರ ಹಟ್ಟಿಯಲ್ಲಿ ಕಟ್ಟಿ ಬಂದು ಪುಣ್ಯಗಳಿಸುವುದು ಆಗಿನ ರೂಢಿಯಾಗಿತ್ತೆಂದು  ನಮ್ಮಜ್ಜಿ ನನಗೆ ಹೇಳುತ್ತಿದ್ದಳು. ಈ ರೀತಿ ‘ಗಂಗೆ’ ನಮ್ಮ ಮನೆಗೆ ಬಂದಿತ್ತು. ಅವಳು ಶುಭ್ರ ಬಣ್ಣದ ಡೌಲಾದ ಕೋಡುಗಳುಳ್ಳ ದಷ್ಟಪುಷ್ಟ ಪ್ರಾಣಿಯಾಗಿತ್ತು. ಅಜ್ಜಿಯೇ ಅವಳ ಹಾಲು ಕರೆಯಬೇಕು.  ಇತರರನ್ನು  ಸನಿಹಕ್ಕೆ ಬರಗೊಡುತ್ತಿರಲಿಲ್ಲ. ಅವಳ  ಗಟ್ಟಿಯಾದ ಹಾಲು, ಮೊಸರು ಬೆಣ್ಣೆ ಮನೆಯಲ್ಲಿ ಉಣ್ಣುವುದು; ಎಮ್ಮೆ ಹಾಲು  ಮಾರುವುದರಿಂದ ಸಂಸಾರದ ವೆಚ್ಚಕ್ಕೆ ದೊರಕಿಸುವುದು. ಇದರಿಂದಾಗಿ ‘ಗಂಗೆ’ಯ  ಮೇಲೆ ಅಜ್ಜಿಯ ಪ್ರೇಮ ಬಹಳ. ಗಂಗೆ ಮುದುಕಿಯಾದರೂ ಹಾಲುಕರೆಯುವುದು ಕಡಿಮೆಯಾದರೂ ಅವಳಿಗೆ ತಿನಿಸು ಕಡಿಮೆ ಮಾಡುತ್ತಿರಲಿಲ್ಲ ನಮ್ಮಜ್ಜಿ. ‘ಗಂಗೆ’ಮುದುಕಿಯಾಗಿ ಸಾಯಲು ನಮ್ಮಜ್ಜಿಗೆ ನಮ್ಮ ಕುಟುಂಬದಲ್ಲಿಯ ಒಬ್ಬ ಸದಸ್ಯ ತೀರಿಕೊಂಡಷ್ಟು ದುಃಖವಾಯಿತು.

ಇಷ್ಟರಲ್ಲಿ ನನ್ನ ಜಾತಕದಲ್ಲಿ ಗ್ರಹಗಳ ಭಾಗ್ಯೋದಯವಾಯಿತು. ‘ಲೋಕಸತ್ತಾ’ ಮರಾಠಿ ದೈನಿಕದಲ್ಲಿ ಸಂಪಾದಕ ಶ್ರೀಮಾಧವ ಗಡಕರಿ ನನ್ನ ಬಗ್ಗೆ ಲೇಖನಗಳನ್ನು ಬರೆಯುತ್ತಿರುವಂತೆ ಶಾಂತಾ ಹುಬಳೀಕರಳ ಪುನರ್ಜನ್ಮವಾಯಿತು. ಜನರು ನನ್ನನ್ನು ಆದರದಿಂದ ಸ್ವಾಗತಿಸಿದರು. ಆಗ ಮನಕ್ಕೆ ನೆಮ್ಮದಿ ಆಯಿತು. ನಾನು ಜೀವಿಸುತ್ತಿದ್ದೇನೆಂಬ ಮಹಾಜನರ ಅರಿವಿನಿಂದ ನನಗೆ ಪರಮಾನಂದವಾಯಿತು. ನನ್ನ ಪುನರ್ಜನ್ಮವಾದುದರಿಂದ ಈಗ ನಾನು ಜನರಿಗೆ ನನ್ನ ಕಥೆಯನ್ನು ಹೇಳಲೇಬೇಕಾಗಿದೆ. ಒಂದು ಸಣ್ಣ ಹಳ್ಳಿಯ ಶೇತಕರಿ ಕುಟುಂಬದ ಹುಡುಗಿ, ಹೇಗೆ  ಜೀವಿಸಿದಳು, ಸಿನೆ ತಾರೆಯೆಂದು  ಹೇಗೆ ವೈಭವದ ಶಿಖರ ಮುಟ್ಟಿ ಅಲ್ಲಿಂದ ಕೆಳಗೆ ಬಿದ್ದಳು, ಇದೆಲ್ಲ ಹೇಗೆ ನಡೆಯಿತು –ಅದೇ ಈ ಕಥೆ.

 

ಹಾಲು ಬೆಣ್ಣೆ ವ್ಯಾಪಾರದೊಡನೆಯೇ ಬದನೆಕಾಯಿ, ಹೀರೆಕಾಯಿ, ಸವತೇಕಾಯಿ, ಗಜ್ಜರಿ, ಮೂಲಂಗಿ  ತೊಂಡೆಕಾಯಿ, ಹಸಿಮೆಣಸಿನಕಾಯಿ ಕೊತ್ತಂಬರಿ ಇತ್ಯಾದಿ ಕಾಯಿಪಲ್ಲೆಗಳನ್ನು ನಮ್ಮಜ್ಜಿ ನೀಲಮ್ಮಳೊಡನೆ ಪೇಟೆಯಲ್ಲಿ ಮಾರುತ್ತಿದ್ದುದ್ದು ನನಗೆ ನೆನಪಿದೆ. ನಮ್ಮ ತಾಯಿ ಸಂತೆ ಪೇಟೆಗೆ ಹೋದದ್ದು ನೆನಪು ಇಲ್ಲ. ಯಾಕೆಂದರೆ ನನ್ನ ತಾಯಿಯ ನೆನಪು ಇಲ್ಲ ನನಗೆ.  ನಮ್ಮ ತಂದೆಯ ನೆನಪು ಮಾತ್ರ ಮಸುಕು ಮಸುಕಾಗಿದೆ. ನನಗೆ ನೆನಪಿರುವಂತೆ  ಆತನ ಹೆಸರು ದೊಡ್ಡಪ್ಪಾ. ಇಡೀ ಗ್ರಾಮವೇ ಆತನನ್ನು ದೊಡ್ಡಪ್ಪನೆಂದೇ ಗುರುತಿಸುತ್ತಿತ್ತು. ಆತನ ನಿಜವಾದ ಹೆಸರೇನಿತ್ತೋ ನನಗೆ ಗೊತ್ತಿಲ್ಲ. ದೊಡ್ಡಪ್ಪಾ ದೊಡ್ಡ ಹೊಟ್ಟೆಯ ದಪ್ಪಗಿನ ಶರೀರದ ನಮ್ಮ ಊರಿನ ದೇವರು. ನಮ್ಮ ತಂದೆಯೂ ಧಿಪ್ಪಾಂಡ ಶರೀರದವನಿದ್ದುದರಿಂದ ಆತನಿಗೆ ಎಲ್ಲರೂ ದೊಡ್ಡಪ್ಪನೆಂದೇ ಕರೆಯುತ್ತಿದ್ದರು.  ನಾನು ಅವನಿಗೆ ‘ಅಪ್ಪಾ’ಎಂದೇ ಕರೆಯುತ್ತಿದ್ದೆ.

ಅಪ್ಪನು ನನ್ನನ್ನು ಹೆಗಲಮೇಲೆ ಕೂಡ್ರಿಸಿಕೊಂಡು ಊರಲ್ಲೆಲ್ಲ ತಿರುಗಾಡಿಸಿಕೊಂಡು ಬರುತ್ತಿದ್ದನು.  ಊರಲ್ಲಿ ರಸ್ತೆಗಳು ಮಣ್ಣಿನವು. ಮನೆಗಳೆಲ್ಲವೂ ಮಣ್ಣಿನವೇ. ಬಿಳಿಮಣ್ಣಿನ ಹೆಂಟೆಯ ಇಟ್ಟಿಗೆಯ ಗೋಡೆಗಳು. ಅವುಗಳ ಚಪ್ಪರಗಳಿಗೆ ಇಳಿಜಾರು ಕರಿಯ ಹಂಚಿನ ಹರಿನಾಳಿಗೆಗಳಾಗಿದ್ದವು. ಇಂತಹ ಕರಿಹಂಚಿನ ಹರಿನಾಳಿಗೆಯ ಮನೆಗಳು; ಮಣ್ಣು ಧೂಳಿನಿಂದ ತುಂಬಿದ ರಸ್ತೆ, ದೊಡ್ಡಪ್ಪ- ದೇವರ ಚಿಕ್ಕಕಲ್ಲಿನ ಗುಡಿ, ಗ್ರಾಮದ ದೆರಗಿನಲ್ಲಿ ಹರಿಯುವ ಹಳ್ಳ, ಹಸಿರು ಮುರಿಯುವ ಹೊಲಗಳನ್ನು ನಾನು ನಮ್ಮ ಅಪ್ಪನ ಹೆಗಲ ಮೇಲೆ ಕುಳಿತುಕೊಂಡೇ ನೋಡುತ್ತಿದ್ದೆ. ಆಗ ನಾನು ಕೇವಲ ಮೂರು ವರ್ಷದ ವರ್ಷದ ಚಿಕ್ಕ ಬಾಲಿಕೆ.

ನಮ್ಮ ತಂದೆಯ ಮರಣದ ಬಗ್ಗೆ ನನಗೆ ಅಷ್ಟೊಂದು ನೆನಪು ಇಲ್ಲ. ಅವರ ಸ್ವಾಸ್ಥ್ಯ  ಚೆನ್ನಾಗಿತ್ತು. ಒಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ ರಕ್ತ ಕಾರಿದವರೇ ಕೆಳಕ್ಕೆ  ಬಿದ್ದರು. ಪುನಃ ಏಳಲೇ ಇಲ್ಲ. ಜನರು ಅವರ ಶವವನ್ನು ಹೊತ್ತು ಮನೆಗೆ ತಂದರು. ನಮ್ಮ ತಂದೆ ಅತ್ಯಂತ ಶಾಂತ ಸ್ವಭಾವದವರಿದ್ದು. ತಮ್ಮಕೆಲಸದಲ್ಲಿ ಆನೆಯ ಬಲವುಳ್ಳವರಿದ್ದರೆಂದು ನಮ್ಮಜ್ಜಿ ಹೇಳುತ್ತಿದ್ದರು. ಅತ್ಯಂತ ಪರಿಶ್ರಮದಿಂದ ದುಡಿದು, ದಣಿದು ಮನೆಗೆ ಬಂದಮೇಲೆ ಮನೆಯಲ್ಲಿದ್ದುದನ್ನು ತಿನ್ನುತ್ತಿದ್ದರು. ನನಗೆ ಇದೇ ಬೇಕು ಎಂದು ಅನ್ನುತ್ತಿರಲಿಲ್ಲ. ಇಂತಹ ಸದೃಢ ಪ್ರಕೃತಿಯ ತಂದೆಗೆ ಏನಾಯಿತೋ ತಿಳಿಯಲೇ ಇಲ್ಲ.

ನಮ್ಮ ತಂದೆ ತೀರಿಕೊಂಡಾಗ ನಮ್ಮ ತಾಯಿಯು ನನ್ನ ತಂಗಿಯನ್ನು ಪ್ರಸವಿಸಿ ಹನ್ನೊಂದು ದಿನದ ಬಾಣಂತಿಯಾಗಿದ್ದಳು. ನಮ್ಮ ತಾಯಿಯು ನಮ್ಮ ಮನೆ ಹತ್ತಿರವಿದ್ದ ತನ್ನ ತವರು ಮನೆಯಲ್ಲಿದ್ದಳು. ನಮ್ಮ ತಂದೆಯ  ಶವವನ್ನು  ಮನೆಗೆ ತಂದಾಗ  ಹಸಿ  ಬಾಣಂತಿಯಾದ ನಮ್ಮ ತಾಯಿಗೆ ಈ ದುಃಖ ಸಹಿಸಲಾರದೆ ಕೈ ಕಾಲು ಕೊಡವಿ ಸ್ಮೃತಿತಪ್ಪಿ  ಬಿದ್ದಳು. ಎಲ್ಲರೂ ನಮ್ಮ ತಂದೆಯ ಅಂತ್ಯಸಂಸ್ಕಾರದಲ್ಲಿ ತೊಡಗಿದ್ದುದರಿಂದ ನಮ್ಮ  ತಾಯಿಯೆಡೆ ಯಾರದೂ ಲಕ್ಷ್ಯವಿರಲಿಲ್ಲ. ಇದೇ ಸಮಯದಲ್ಲಿ  ಒಂದು ಎಮ್ಮೆಯು ಅವಳ ಕೈಯ ಮೇಲೆ ನಡೆದು ಹೋಗಿ ಗಾಯ ಮಾಡಿತು.  ಆದರೆ ಅವಳಿಗೆ ಸ್ಮೃತಿ ಇಲ್ಲದಿದ್ದುದರಿಂದ ಗಾಯದ  ನೋವು ಅವಳಿಗೆ ತಿಳಿಯಲೇ ಇಲ್ಲ. ದುಡಿದು ಸಂಸಾರ  ನಡೆಸುವ ತನ್ನ ಪತಿ  ತೀರಿಕೊಂಡ ನಂತರ ತನ್ನ ಹೆಣ್ಣುಮಕ್ಕಳ ಗತಿಯೇನೆಂಬ ಚಿಂತೆಯಿಂದ ಅವಳು ಸ್ಮೃತಿ ತಪ್ಪಿ ಬಿದ್ದಳು.  ಅವಳು ಆಶಕ್ತಳು, ಶಾಂತ ಸ್ವಭಾವದವಳು. ಕೆಂಪು ವರ್ಣದ ನಾಜೂಕು ಶರೀರವುಳ್ಳ ನಮ್ಮ ತಾಯಿ ಚೆನ್ನಾಗಿ ಊಟ ಮಾಡುತ್ತಿರಲಿಲ್ಲ. ಕಡಿಮೆ ಮಾತನಾಡುವ, ಮನಸ್ಸು ಬಿಚ್ಚಿ ಮಾತನಾಡದ ತಾಯಿಯು ನಮ್ಮ ತಂದೆಯ ಮರಣದಿಂದ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತ ನಮ್ಮನ್ನಗಲಿ ಹೋದಳು.

ನಮ್ಮ ತಂದೆಯ ಮರಣದ ಬಗ್ಗೆ ನನಗೆ ಅಷ್ಟೊಂದು ನೆನಪು ಇಲ್ಲ. ಅವರ ಸ್ವಾಸ್ಥ್ಯ  ಚೆನ್ನಾಗಿತ್ತು. ಒಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ ರಕ್ತ ಕಾರಿದವರೇ ಕೆಳಕ್ಕೆ  ಬಿದ್ದರು. ಪುನಃ ಏಳಲೇ ಇಲ್ಲ. ಜನರು ಅವರ ಶವವನ್ನು ಹೊತ್ತು ಮನೆಗೆ ತಂದರು. ನಮ್ಮ ತಂದೆ ಅತ್ಯಂತ ಶಾಂತ ಸ್ವಭಾವದವರಿದ್ದು. ತಮ್ಮಕೆಲಸದಲ್ಲಿ ಆನೆಯ ಬಲವುಳ್ಳವರಿದ್ದರೆಂದು ನಮ್ಮಜ್ಜಿ ಹೇಳುತ್ತಿದ್ದರು. ಅತ್ಯಂತ ಪರಿಶ್ರಮದಿಂದ ದುಡಿದು, ದಣಿದು ಮನೆಗೆ ಬಂದಮೇಲೆ ಮನೆಯಲ್ಲಿದ್ದುದನ್ನು ತಿನ್ನುತ್ತಿದ್ದರು. ನನಗೆ ಇದೇ ಬೇಕು ಎಂದು ಅನ್ನುತ್ತಿರಲಿಲ್ಲ. ಇಂತಹ ಸದೃಢ ಪ್ರಕೃತಿಯ ತಂದೆಗೆ ಏನಾಯಿತೋ ತಿಳಿಯಲೇ ಇಲ್ಲ.

ಅಪ್ಪ, ಅಮ್ಮನನ್ನು ಕಳೆದುಕೊಂಡು ನಾವು ಅಕ್ಕ ತಂಗಿಯರು ನಿಜವಾಗಿ  ತಬ್ಬಲಿಗಳಾದೆವು. ನಮ್ಮನ್ನು ತಬ್ಬಿಕೊಂಡು  ನಮ್ಮಜ್ಜಿಯು ಅಳುತ್ತಿದ್ದಳು. ಅವಳೇಕೆ ಅಳುತ್ತಾಳೆಂಬುದು ನಮಗೆ ತಿಳಿಯುತ್ತಿರಲಿಲ್ಲ.  ಆದರೆ ನಮ್ಮ ತಂದೆ ತಾಯಿ ಇನ್ನಿಲ್ಲವೆಂಬುದಷ್ಟೆ ತಿಳಿಯುತ್ತಿತ್ತು. ಮೂರು ವರ್ಷದ ನಾನು ಹಾಗೂ ಹನ್ನೊಂದು ದಿವಸದ ಶಾರದಾ ನಮ್ಮಜ್ಜಿಯೆಡೆ ಕಾಯಂ ಆಗಿ ಬಂದೆವು. ಶಾರದಾ ನಾಮಕರಣವನ್ನು ನಮ್ಮ ಅಜ್ಜಿಯೇ ಮಾಡಿದಳು. ಅಕ್ಕ ನೀಲಮ್ಮಳ ಮದುವೆ ನಮ್ಮ ಅಪ್ಪನು ಮಾಡಿದನು.  ತಂದೆ ತೊರೆದಾಗ ನೀಲಮ್ಮನು 13-14 ವರುಷದವಳಿದ್ದಳು. ಆಪ್ತರಲ್ಲಿ ಅವಳ ಮದುವೆಯಾಗಿತ್ತು.  ಆಗಿನ ಕಾಲದಲ್ಲಿ ಎಂಟು ಒಂಭತ್ತನೇ ವಯಸ್ಸಿಗೆನೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಡುತ್ತಿದ್ದರು. ಅದರಂತೆಯೇ ನೀಲಮ್ಮನು ಸಂಸಾರ ಮಾಡುತ್ತಿದ್ದಳು.  ಕಾಯಿಪಲ್ಲೆಯನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದಳು. ಉಳಿದ ಕಾಯಿಪಲ್ಲೆಯನ್ನು ಅಜ್ಜಿಗೆ ತಂದುಕೊಡುತ್ತಿದ್ದಳು.

ನಮ್ಮ ತಂದೆಗೆ ಸಮೀಪದ ಸಾಕಷ್ಟು ಆಪ್ತರಿದ್ದರು. ಅವನಿಗೆ ಒಬ್ಬ ವಿಧವಾ ತಂಗಿಯಿದ್ದಳು. ಈರ್ವರು ತಮ್ಮಂದಿರು. ಅವರ ಮಕ್ಕಳು ಇದ್ದರು. ಅವರು ತಮ್ಮ ತಮ್ಮ ಮನೆಯಲ್ಲಿದ್ದು ವ್ಯಾಪಾರ, ಒಕ್ಕಲತನ ಉದ್ಯೋಗ ಮಾಡುತ್ತಾ ಉಪಜೀವಿಸುತ್ತಿದ್ದರು. ಇತರ ಮನೆತನದವರಂತೆ ನಮ್ಮ ಇಬ್ಬರೂ ಕಕ್ಕಿಯವರು ಹಾಲು, ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದರೆ ಅವರ ಪತಿಗಳು ಅಂದರೆ ನನ್ನ ಇಬ್ಬರು ಕಕ್ಕಂದಿರು ಭೂಮಿ ಸಾಗುವಳಿ ಮಾಡಿ ಧಾನ್ಯ ಮತ್ತು ಹತ್ತಿಯನ್ನು ಮನೆಗೆ ಹಚ್ಚಿ ಉಳಿದುದನ್ನು ಮಾರಾಟ ಮಾಡುತ್ತಿದ್ದರು.  ತಿಂದುಂಡು ಸುಖಿಯಾಗಿದ್ದರು. ಅರಿವೆ ಅಂಚಡಿಗಳಿಗೆ ಹಣ ವ್ಯಯ ಮಾಡುವ ದಿವಸಗಳಿರಲಿಲ್ಲವಾಗಿ, ಬೆಳ್ಳಿ ಬಂಗಾರ ಕೊಳ್ಳುತ್ತಿದ್ದರು. ನಮ್ಮ ತಂದೆಯೂ ಸಹ ಜೀವಿಸಿದ್ದರೆ ನಮ್ಮಲ್ಲೂ ಸಹ ಬೆಳ್ಳಿ ಬಂಗಾರವಿರುತ್ತಿತ್ತು. ಒಂದೇ ವೇಳೆಗೆ ನಮ್ಮ ತಂದೆಯೂ ತೀರಿಕೊಂಡಿದ್ದರಿಂದ ಆಗ ಎಲ್ಲ ರೀತಿಯಿಂದಲೂ ನಮ್ಮ ಪರಿಸ್ಥಿತಿ ಬಿಗಡಾಯಿಸಿತು.

ತಂದೆ ತಾಯಿಯ ಮರಣದ ನಂತರ ಬರಗಾಲದ ಪೀಡೆ ಸುರುವಾಯಿತು. ನಮ್ಮ ಗ್ರಾಮಕ್ಕೆ ಬರಗಾಲ ಭೀಕರತೆಯಿಂದ ತಮ್ಮ ಹೊಟ್ಟೆಯ ಮಕ್ಕಳನ್ನು ಜೋಪಾನ ಮಾಡುವುದೂ ತಂದೆ ತಾಯಿಗಳಿಗೆ ದುಸ್ತರವಾಗಿತ್ತು.  ಆದ್ದರಿಂದ ನಮ್ಮ ಕಕ್ಕಂದಿರು ನಮ್ಮನ್ನು ಏಕೆ ಸಲಹುತ್ತಾರೆ? ಕಾರಣ, ಅಜ್ಜಿಯ ಮೇಲೆಯೇ ನಮ್ಮೀರ್ವರ ಭಾರವಿತ್ತು. ಸಮಯ ಸರಿದಂತೆ ಬರಗಾಲವು ಊರಿನ ಕಳೆಯನ್ನು ಬದಲಿಸಿತ್ತು. ಬಾವಿಗಳು ಬತ್ತಿದವು. ಹಳ್ಳದ ನೀರು ಯಾವಾಗೋ ಅಟ್ಟಸಿಹೋಗಿತ್ತು. ಹಳ್ಳದಲ್ಲಿ ವರ್ತಿ ತೆಗೆದು ತಾಸುಗಟ್ಟಲೇ ಪ್ರಯತ್ನಪಟ್ಟರೂ ಒಂದು ಬಿಂದಿಗೆ ಕೂಡ ನೀರು ಸಿಗುತ್ತಿರಲಿಲ್ಲ. ಭೂಮಿಯ ಹಸಿರು ಮಾಯವಾಗಿತ್ತು.  ನೋಡಿದಲ್ಲೆಲ್ಲ ಕೊರಕಲು ಭೂಮಿ. ಅನ್ನ ನೀರಿಲ್ಲದೆ ಜನ ಹಾಗೂ ಪ್ರಾಣಿಗಳು ಸಾಯಲಿಕ್ಕೆ ಹತ್ತಿದರು. ಬೇರೆ ಕಡೆಯಿಂದ ಆಹಾರ, ನೀರನ್ನು ತಂದು ಪೂರೈಸುವ ಸರಕಾರ ಆಗ ಇರಲಿಲ್ಲ.

ಮನೆ ಮನೆಗಳಲ್ಲಿ ಜನರು ಉಪವಾಸ ವನವಾಸ ಬೀಳುತ್ತಿದ್ದರು. ಗ್ರಾಮದಲ್ಲಿ ಯಾವ ಕೆಲಸವೂ ಇರಲಿಲ್ಲ. ಪುರುಷರು ಶಹರಕ್ಕೆ ಕೋಗಿ ಕೈಗೆ ಸಿಕ್ಕ ಕೆಲಸ ಮಾಡಿ ಧಾನ್ಯ ತೆಗೆದುಕೊಂಡು ಬರುತ್ತಿದ್ದರು. ಆಗ ಸಂಜೆಗೆ ಒಲೆ ಹೊತ್ತುತ್ತಿದ್ದವು. ಶಹರದಲ್ಲಿ ಅರ್ಲಗಷ್ಟದ ಕೆಲಸ, ಹಮಾಲಿ, ಬಂಗಲೆಗಳಲ್ಲಿಯ ಕಷ್ಟದ ಕೆಲಸ ಇತ್ಯಾದಿ ಸಿಗುತ್ತಿದ್ದವು. ಸಿಕ್ಕಲ್ಲೆ ಕೆಲಸ ಹಿಡಿಯುವ ಪ್ರವೃತ್ತಿ ಉಂಟಾಗಿತ್ತು. ಕೆಲಸ ಕಡಿಮೆ, ದುಡಿಯುವವರು ಹೆಚ್ಚು ಹೀಗೆ ನಡೆದಿತ್ತು.

ಅಪ್ಪ, ಅಮ್ಮನನ್ನು ಕಳೆದುಕೊಂಡು ನಾವು ಅಕ್ಕ ತಂಗಿಯರು ನಿಜವಾಗಿ  ತಬ್ಬಲಿಗಳಾದೆವು. ನಮ್ಮನ್ನು ತಬ್ಬಿಕೊಂಡು  ನಮ್ಮಜ್ಜಿಯು ಅಳುತ್ತಿದ್ದಳು. ಅವಳೇಕೆ ಅಳುತ್ತಾಳೆಂಬುದು ನಮಗೆ ತಿಳಿಯುತ್ತಿರಲಿಲ್ಲ.  ಆದರೆ ನಮ್ಮ ತಂದೆ ತಾಯಿ ಇನ್ನಿಲ್ಲವೆಂಬುದಷ್ಟೆ ತಿಳಿಯುತ್ತಿತ್ತು. ಮೂರು ವರ್ಷದ ನಾನು ಹಾಗೂ ಹನ್ನೊಂದು ದಿವಸದ ಶಾರದಾ ನಮ್ಮಜ್ಜಿಯೆಡೆ ಕಾಯಂ ಆಗಿ ಬಂದೆವು. ಶಾರದಾ ನಾಮಕರಣವನ್ನು ನಮ್ಮ ಅಜ್ಜಿಯೇ ಮಾಡಿದಳು. ಅಕ್ಕ ನೀಲಮ್ಮಳ ಮದುವೆ ನಮ್ಮ ಅಪ್ಪನು ಮಾಡಿದನು.  ತಂದೆ ತೊರೆದಾಗ ನೀಲಮ್ಮನು 13-14 ವರುಷದವಳಿದ್ದಳು. ಆಪ್ತರಲ್ಲಿ ಅವಳ ಮದುವೆಯಾಗಿತ್ತು.  ಆಗಿನ ಕಾಲದಲ್ಲಿ ಎಂಟು ಒಂಭತ್ತನೇ ವಯಸ್ಸಿಗೆನೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಡುತ್ತಿದ್ದರು. ಅದರಂತೆಯೇ ನೀಲಮ್ಮನು ಸಂಸಾರ ಮಾಡುತ್ತಿದ್ದಳು.

ಅಜ್ಜಿಯ  ಮನೆಯಲ್ಲು ಅವಳ ಇಬ್ಬರೂ ಗಂಡುಮಕ್ಕಳು ಅಂದರೆ ನಮ್ಮ ಸೊದರಮಾವಂದಿರು ಅವರ ಹೆಂಡಂದಿರು ಅವರ ಎರಡೆರಡು ಮಕ್ಕಳು – ಹೀಗೆ ಎಲ್ಲರೂ ದುಡಿಯುವುದು, ಕೆಲಸ ಸಿಗದಂತಾಗಲು ಅನ್ನ ನೀರಿಲ್ಲದೆ ಗತಿಗೆಡುವುದು ಸುರುವಾಯಿತು. ಹೀಗಾಗಿ ಅಜ್ಜಿಯ ಕುಟುಂಬದಲ್ಲಿ ನಮ್ಮ ಮೂರು ಅಕ್ಕ ತಂಗಿಯರ ಭಾರ ಹೆಚ್ಚೆನಿಸುತ್ತಿತ್ತು. ಅದರಲ್ಲೂ ನನ್ನ ಸ್ವಾಸ್ಥ್ಯವು ಮೇಲಿಂದ ಮೇಲೆ ಕೆಡುತ್ತಿತ್ತು. ತಾಯಿ  ತೀರಿದ ನಂತರ ಅಜ್ಜಿಯು ಸಾಧ್ಯವಿದ್ದಷ್ಟು ಮಾಡಿ ಜೋಪಾನ ಮಾಡುತ್ತಿದ್ದಳು.  ಅವಳಾದರೂ ಏನು ಮಾಡಬೇಕು ನಮ್ಮ ದುರ್ದೈವಕ್ಕೆ? ನನ್ನ ಹೊಟ್ಟೆಯಲ್ಲಿ ಜಂತುಗಳಾಗಿದ್ದವು. ನಗಾರಿಯಂತಹ ಹೊಟ್ಟೆ ಸೊರಗಿದ ಕೈಕಾಲು ಮೋರೆಯ ಮೇಲೆ ನೊಣಗಳು ಕೂಡುತ್ತಿದ್ದವು. ಎಣ್ಣೆ ನೀರಿಲ್ಲದ ನಿಸ್ತೇಜವಾದ ಶರೀರದವಳಾದ ನಾನು ಇಲ್ಲದ ವಿಚಾರ ಮಾಡುತ್ತಾ ಕುಳಿತಿರುತ್ತಿದ್ದೆ. ಯಾರು ಯಾರೋ  ತುಂಡು ರೊಟ್ಟಿ, ಬೆಲ್ಲದ ಕರಣಿ ಕೊಡುತ್ತಿದ್ದರು. ಬೆಲ್ಲದ ಕರಣಿಯ ಮೇಲೆ ನೊಣಗಳ ಆಕ್ರಮಣ. ನಾನು ಒಂದೇ ಸವನೆ ಅಳುತ್ತಿದ್ದೆ. ಅಳುವುದನ್ನು ನಿಲ್ಲಿಸಲು ಯಾರಾದರೂ ರೊಟ್ಟಿ ತುಂಡು ಬೆಲ್ಲದ ಕರಣಿ ಕೊಡುತ್ತಿದ್ದರು.

ಶಾರದೆಗೆ  ತಾಯಿಯ ಎದೆಹಾಲು ಸಿಗಲಿಲ್ಲ.  ಅವಳು ಒಂದೇ ಸವನೆ ಅಳುತ್ತಿದ್ದಳು. ಅಜ್ಜಿಯು ರಾತ್ರಿ ಅವಳಿಗೆ ಅಪ್ಪು ಹಾಕುತ್ತಿದ್ದುದರಿಂದ ಸುಂದಾಗಿ ಮಲಗುತ್ತಿದ್ದಳು. ನಾನು ಹಗಲು ರಾತ್ರಿ ಅಳುತ್ತಿದ್ದೆ. ನೆರೆಹೊರೆಯವರು ಬೇಸರಪಟ್ಟುಕೊಳ್ಳುತ್ತಿದ್ದರು. ‘ಈ  ಹುಡುಗಿಯನ್ನು ಯಾರಿಗಾದರೂ ಕೊಟ್ಟುಬಿಡ್ರಿ. ತಾನೂ ಮಲಗುವುದಿಲ್ಲ. ನಮಗೂ  ಮಲಗಿಸಕೊಡುವುದಿಲ್ಲ. ನಮ್ಮನ್ನು ಕೊಲ್ಲಲು ನಿಂತಿದ್ದಾಳೆ. ಇಲ್ಲವೇ ಅವಳನ್ನೇ  ಕೊಂದುಬಿಡಿ’ ಇತ್ಯಾದಿ ಬೈಗುಳಗಳಿಂದ ಅಜ್ಜಿಯು ನೊಂದುಕೊಂಡಿದ್ದಳು. ನಮ್ಮ ಅಳುವ ಮುಖ ನೋಡಿ ಒಮ್ಮೊಮ್ಮೆ ಕನಿಕರದಿಂದ ಅಜ್ಜಿಗೂ ಅಳುವು ಬಂದಂತಾಗುತ್ತಿತ್ತು.

‘ಈ ಮಕ್ಕಳನ್ನು ಯಾರಿಗಾದರೂ ಕೊಟ್ಟುಬಿಡಿರೆಂದು’  ಒಂದೇ ಸವನೆ ಜನರು ಅನ್ನುತ್ತಿದ್ದರು. ‘ಇವು ತಂದೆ ತಾಯಿಗಳನ್ನು ತಿಂದ ಮಕ್ಕಳು’ ಎಂದೂ ಕೂಡ ಅನ್ನುತ್ತಿದ್ದರು. ನಮ್ಮ ಅಜ್ಜಿಗೆ ನಮ್ಮ ಸಂರಕ್ಷಣೆಯ ಬಗ್ಗೆ  ಬಹಳ ಕಾಳಜಿ ಇದ್ದರೂ ಅನ್ನ ನೀರಿಲ್ಲದೆ ಮೊಮ್ಮಕ್ಕಳು ಸಾಯುವುದಕ್ಕಿಂತ ಜೋಪಾನ ಮಾಡಲು ಯಾರಿಗಾದರೂ ಕೊಟ್ಟರೆ ಅವುಗಳನ್ನು ನೋಡಲು ಮುಂದೆ ಸಾಧ್ಯವಾದೀತೆಂಬ ವಿಚಾರ ನಮ್ಮಜ್ಜಿಯ ಮನದಲ್ಲಿ  ಸುಳಿದುಹೋಯಿತು. ಅಜ್ಜಿಯು ನಮ್ಮನ್ನು ಜೋಪಾನ ಮಾಡುವವರ ಶೋಧದಲ್ಲಿದ್ದಳು. ಮಕ್ಕಳೆಂದರೆ ನಿರ್ಜೀವ ವಸ್ತುಗಳಾದ ಭಾಂಡೆ, ಅರಿವೆಗಳೇ? ಬೇಡವೆಂದರೆ ಸಿಕ್ಕ ಸಿಕ್ಕವರಿಗೆ ತೂರಲು ಬರುತ್ತದೆಯೇ? ಎಲ್ಲಿ ಅನ್ನ ನೀರು ವಸ್ತ್ರಗಳಿಂದ  ಹಾಗೂ ಅಕ್ಕರತೆಯಿಂದ  ಜೋಪಾನವಾಗುವುವೋ ಅಲ್ಲಿಗೆ ಕಳಿಸಬೇಕೆಂದು ನಮ್ಮ ಅಜ್ಜಿಯು ಚಿಂತಿಸಹತ್ತಿದಳು.

ಕೊನೆಗೆ ಹುಬ್ಬಳ್ಳಿಯ ಸಾವಿತ್ರಕ್ಕಳ ನೆನಪಾಯಿತು. ನಮ್ಮ ಅಜ್ಜಿಯು ದಿನಾಲು ಅವಳ ಮನೆಗೆ ಹೋಗಿ ಕಾಯಿಪಲ್ಲೆ ಕೊಟ್ಟು ಬರುತ್ತಿದ್ದಳು. ಸಾವಿತ್ರಕ್ಕಳು ಹೊಲ, ಮನೆಗಳಿದ್ದ ಶ್ರೀಮಂತಳಿದ್ದಳು. ಅವಳ ಬಾಗಿಲಿಗೆ ನನ್ನನ್ನೂ ಶಾರದೆಯನ್ನೂ ಕರೆದುಕೊಂಡು ಹೋಗಿ, “ಈ ಮಕ್ಕಳ ಜೋಪಾನ ಮಾಡು. ನನ್ನಿಂದ ಇನ್ನು ಸಾಧ್ಯವಿಲ್ಲ.”  ವೆಂದು ಕಣ್ಣೀರು ತೆಗೆದು ಒತ್ತಾಯಿಸಹತ್ತಿದಳು.  ‘ಬೇಡಮ್ಮಾ ಈ ರೋಗಪೀಡಿತ ಹುಡುಗಿಯರನ್ನು ನಾನು ಹೇಗೆ ಸಂಭಾಳಿಸಲಿ?’ ಎಂದು ಸಾವಿತ್ರಕ್ಕ ಅನ್ನಹತ್ತಿದಳು. ಸಾವಿತ್ರಕ್ಕನು, “ಹುಡುಗಿಯರನ್ನು ಇಟ್ಟುಕೊಳ್ಳುತ್ತೇನೆ, ನನ್ನ ಮನಸ್ಸಿನಂತಾದರೆ ಒಬ್ಬಳನ್ನು ದತ್ತ  ತೆಗೆದುಕೊಳ್ಳುತ್ತೇನೆ’ ಎಂದಳು. ಮನಸ್ಸಿನಂತಾದರೆ ಎಂದರೆ ಅವಳ ಆಸ್ತಿಯ ಖಟ್ಲೆ ಅವಳಂತೆ ಆದರೆ ನನ್ನನ್ನು ಅವಳು ಕಾಯಂ ಆಗಿ ತನ್ನೆಡೆ ಇಟ್ಟುಕೊಳ್ಳುವವಳಿದ್ದಳು. ಆ ಬಗ್ಗೆ  ಅವಳು ದೇವರಾಣೆ ಮಾಡಿ ಅಜ್ಜಿಗೆ  ಹೇಳಿದಳು.

ಈ ಅಜ್ಜಿಯೆಡೆ ನಾವಿಬ್ಬರೂ ಅಕ್ಕ ತಂಗಿಯರು ಬಂದಾಗ ಅವಳು ವೃದ್ಧಳಾಗಿದ್ದಳು. ಅವಳು ವಿಧವೆಯಾಗಿದ್ದಳು. ಅವಳ ಪತಿ ಹಾಗೂ ಅವನ ನಾಲ್ಕು ಮಂದಿ ಅಣ್ಣ ತಮ್ಮಂದಿರ ಏಕತ್ರ ಕುಟುಂಬವಿತ್ತು. ಅವಳಿಗೆ ಹುಟ್ಟಿದ ಮಕ್ಕಳು ಜೀವಿಸಲಿಲ್ಲ. ಅವಳ ಪತಿಯ ನಿಧನದ ನಂತರ ಅವನ ನಾಲ್ವರು ಅಣ್ಣ ತಮ್ಮಂದಿರು ಆಸ್ತಿಯಲ್ಲಿಯ ಅವಳ ಹಿಶೆ ಕೊಡಲು ನಿರಾಕರಿಸಿದರು. ಇವಳಿಗೇನು ಮಕ್ಕಳು ಮರಿ ಇವೆಯೇ?  ಇವಳಿಗೇಕೆ ಆಸ್ತಿಯಲ್ಲಿ  ಪಾಲು ಬೇಕು? ಉಂಡು ತಿಂದು ಏಕತ್ರ ಕುಟುಂಬದಲ್ಲಿ ಬಿದ್ದಿರಲೆಂಬುದು ಅವರ ವಿಚಾರ ಸರಣಿ. ಅವಳು ಸ್ವಾಭಿಮಾನಿಯಾಗಿದ್ದಳು. ಆಗಿನ ಕಾಲದಲ್ಲಿ ಅವಳು ಮೆಟ್ರಿಕ್ ಪರೀಕ್ಷೆ ಪಾಸಾದವಳಿದ್ದಳು.  ಅವಳ ಧ್ವನಿ ಚೆನ್ನಾಗಿದ್ದು ಒಳ್ಳೆ ಗಾಯನ ಭಜನೆ ಹಾಡುತ್ತಿದ್ದಳು. ಆಸ್ಥೆಯಿಂದ  ಕೆಲವು ಕನ್ನಡ  ನಾಟಕಗಳಲ್ಲಿ ಕೆಲಸ ಮಾಡಿದ್ದಳು. ತಾರುಣ್ಯದಲ್ಲಿ ಅವಳು ಸ್ಫುರದ್ರೂಪಿ ಇದ್ದಳು. ಈಗ ವೃದ್ಧಳಾಗಿದ್ದರೂ ಗಟ್ಟಿ ಮನಸ್ಸಿನವಳಾದ  ಅವಳು ತನ್ನ ಭಾವ ಮೈದುನರ ವಿರುದ್ಧ ಕೋರ್ಟಿನಲ್ಲಿ ಆಸ್ತಿಯಲ್ಲಿ ತನ್ನ ಪಾಲಿಗಾಗಿ ದಾವೆ ದಾಖಲು ಮಾಡಿದ್ದರು. ಸ್ವತಃ ವಕೀಲರಿಗೆ ಭೆಟ್ಟಿಯಾಗುವುದು, ಕೋರ್ಟಿಗೆ ಹೋಗುವುದನ್ನು ಮಾಡುತ್ತಿದ್ದಳು. ಮುಂದೆ ಅವಳ ಕೈ ಹಿಡಿದುಕೊಂಡು ನಾನು ಕೋರ್ಟಿಗೆ ಹೋಗುತ್ತಿದ್ದುದು ನನಗೆ ನೆನಪಿದೆ.

ಶಾರದೆಗೆ  ತಾಯಿಯ ಎದೆಹಾಲು ಸಿಗಲಿಲ್ಲ.  ಅವಳು ಒಂದೇ ಸವನೆ ಅಳುತ್ತಿದ್ದಳು. ಅಜ್ಜಿಯು ರಾತ್ರಿ ಅವಳಿಗೆ ಅಪ್ಪು ಹಾಕುತ್ತಿದ್ದುದರಿಂದ ಸುಂದಾಗಿ ಮಲಗುತ್ತಿದ್ದಳು. ನಾನು ಹಗಲು ರಾತ್ರಿ ಅಳುತ್ತಿದ್ದೆ. ನೆರೆಹೊರೆಯವರು ಬೇಸರಪಟ್ಟುಕೊಳ್ಳುತ್ತಿದ್ದರು. ‘ಈ  ಹುಡುಗಿಯನ್ನು ಯಾರಿಗಾದರೂ ಕೊಟ್ಟುಬಿಡ್ರಿ. ತಾನೂ ಮಲಗುವುದಿಲ್ಲ. ನಮಗೂ  ಮಲಗಿಸಕೊಡುವುದಿಲ್ಲ. ನಮ್ಮನ್ನು ಕೊಲ್ಲಲು ನಿಂತಿದ್ದಾಳೆ. ಇಲ್ಲವೇ ಅವಳನ್ನೇ  ಕೊಂದುಬಿಡಿ’ ಇತ್ಯಾದಿ ಬೈಗುಳಗಳಿಂದ ಅಜ್ಜಿಯು ನೊಂದುಕೊಂಡಿದ್ದಳು. ನಮ್ಮ ಅಳುವ ಮುಖ ನೋಡಿ ಒಮ್ಮೊಮ್ಮೆ ಕನಿಕರದಿಂದ ಅಜ್ಜಿಗೂ ಅಳುವು ಬಂದಂತಾಗುತ್ತಿತ್ತು.

ಕೋರ್ಟಿನಲ್ಲಿ ಕೆಲಸ ನಡೆದಾಗ ಅವಳು ದೇವರಿಗೆ –ತನಗೆ ಒಂದು ಮಗುವನ್ನು ಕೊಡಲು ಪ್ರಾರ್ಥಿಸುತ್ತಿದ್ದಳು. ಅದೇ  ಸಮಯದಲ್ಲಿ ಅಜ್ಜಿಯು ನಮ್ಮನ್ನು ಅವಳೆಡೆ ತೆಗೆದುಕೊಂಡು ಹೋಗಿದ್ದಳೆಂದು ನಮ್ಮನ್ನು ಅವಳು ಇಟ್ಟುಕೊಂಡಿದ್ದಳು. ಅಜ್ಜಿಯ ಆಸ್ತಿಯು ಸಾಕಷ್ಟಿತ್ತು. ಹೊಲ, ಮನೆ, ಮಾವಿನ ತೋಪು, ಬೆಳ್ಳಿ ಬಂಗಾರ ಅರಿವೆ ಅಂಚಡಿ, ಹಾಲುಗರೆಯುವ ಆಕಳು-ಎಮ್ಮೆ ಇವುಗಳೆಲ್ಲವನ್ನು ಅವಳಿಂದ ನುಂಗಲು ಹೊಂಚು ಹಾಕಿದ ಅವಳ ಮೈದುನರ ಆಟ ಕೋರ್ಟಿನಲ್ಲಿ ನಡೆಯಲಿಲ್ಲ. ಆದ್ದರಿಂದ ನಮ್ಮನ್ನು ತನ್ನಲ್ಲಿಟ್ಟುಕೊಳ್ಳಲು ಅವಳು ನಿಶ್ಚಯಿಸಿದಳು. ನಿಜ ಹೇಳಬೇಂದರೆ, ಸಾವಿತ್ರಕ್ಕನು ನನ್ನನ್ನು ಮಾತ್ರ ಜೋಪಾನ ಮಾಡಲು ಒಪ್ಪಿದ್ದಳು. ಶಾರದೆಯು ಕೇವಲ ಒಂದೂವರೆ ತಿಂಗಳ ಹಸುಕೂಸು.  ಅವಳನ್ನು ತೆಗೆದುಕೊಂಡು ಹೋಗಲು ಸಾವಿತ್ರಕ್ಕನು ದುಂಬಾಲು ಬಿದ್ದರೂ ನಮ್ಮಜ್ಜಿಯು ‘ಇದ್ದರೆ ನಿನ್ನಲ್ಲೇ, ಇವರು ಸತ್ತರೆ ನಿನ್ನಲ್ಲೇ ಸಾಯಲಿ’ ಎಂದು ಹೇಳಿದ್ದರಿಂದ ನಮ್ಮೀರ್ವರನ್ನೂ ಅವಳು ಇಟ್ಟುಕೊಂಡಿದ್ದಳು.

ಸಾವಿತ್ರಕ್ಕನಿಗೆ ಕೂಡ ನಾವು ಅಜ್ಜಿಯೆಂದೇ ಕರೆಯಹತ್ತಿದೆವು. ಅವಳು ನಮ್ಮಿರ್ವರನ್ನು ಮೃತ್ಯುವಿನ ದವಡೆಯಿಂದ ಹೊರ ತೆಗೆದದ್ದು ದೇವರ ಕೃಪೆಯೆನ್ನಬೇಕು. ಅವಳಿಗೆ ಕೆಲವು ಔಷಧಗಳ ಮಾಹಿತಿ ಇತ್ತು. ಅಫು ಸೇವನೆಯಿಂದ ಶಾರದೆಯು ಅಶಕ್ತಳಾಗಿದ್ದಳು. ಅವಳಿಗೆ ಹಸಿವೆ ಆಗುತ್ತಿರಲಿಲ್ಲ. ಅಜ್ಜಿಯು ಅಫು ಕೊಡುವುದನ್ನು ಕಡಿಮೆ ಮಾಡುತ್ತ ಕೊನೆಗೆ ನಿಲ್ಲಿಸಿ ಬಿಟ್ಟಳು. ಶಾರದೆ  ಹಾಲು ಕುಡಿಯಹತ್ತಿದ್ದಳು. ಅವಳ ಪ್ರಕೃತಿಯು ಸುಧಾರಿಸಹತ್ತಿತ್ತು. ನಾನು ಶಾಲೆಗೆ ಹೋಗುವಾಗ ಅವಳೂ ಕೂಡ ನನ್ನೊಡನೆ ಶಾಲೆಗೆ ಆಗಾಗ ಬರಲು ಸುರು ಮಾಡಿದ್ದು ನನಗೆ ನೆನಪಿನಲ್ಲಿದೆ.

ಅಜ್ಜಿಯು ನನಗೆ ಔಷಧ ಕೊಡಿಸಹತ್ತಿದಳು. ಡಾಕ್ಟರರಿಂದ ಜಂತಿನ ಔಷಧ ಔಡಲೆಣ್ಣೆಯ ಉಪಯೋಗ ಮೇಲಿಂದ ಮೇಲೆ ಸುರುವಾಯಿತು. ಬುಟ್ಟಿಗಟ್ಟಲೆ ಜಂತುಗಳು ಬಿದ್ದವೆಂದು ಅಜ್ಜಿಯು ಹೇಳುತ್ತಿದ್ದಳು. ನನಗೆ ಹಸಿವಾಗಹತ್ತಿತು. ಅನ್ನ ಪಚನವಾಗಹತ್ತಿ ನನ್ನ ಪ್ರಕೃತಿ ಸುಧಾರಿಸಹತ್ತಿತು. ಅಜ್ಜಿಯ ಪಾಲಿಗೆ ಕಲ್ಲಿನ ದೊಡ್ಡ ಮನೆ, ಹೊಲ, ಮನೆ ಅಲ್ಲದೆ ಬಂಗಾರ ಬೆಳ್ಳಿ ತಕ್ಕಡಿಯಲ್ಲಿ ತೂಗಿ ಹಂಚಿಕೊಡಲಾಯಿತೆಂದು ಅಜ್ಜಿ ನನಗೆ ಹೇಳುತ್ತಿದ್ದಳು. ತನ್ನ ಪಾಲಿಗೆ  ಬಂದ ಕಲ್ಲಿನ ದೊಡ್ಡಮನೆಯಲ್ಲಿ ಅವಳು  ಇರಲು ಸುರುವು ಮಾಡಿದಳು. ಆ ಮನೆಯಲ್ಲಿ  ಅಜ್ಜಿ, ನಾನು, ಶಾರದಾ, ಚಂದ್ರಕ್ಕ ಎಂಬ ಬಹಳ ವರ್ಷಗಳ ಹಿಂದೆ ದತ್ತಕ ತೆಗೆದುಕೊಂಡ ಮಗಳು, ಚನ್ನಪ್ಪಾ ಇಷ್ಟು ಜನ ಇರುತ್ತಿದ್ದೆವು.

ಚಂದ್ರಕ್ಕನನ್ನು ಅಜ್ಜಿಯು ಬಹಳ ವರ್ಷಗಳಿಂದ ಜೋಪಾನ ಮಾಡಿದಳು. ನಮ್ಮ ಅಜ್ಜಿಯ ಗೆಳತಿಯ ಮಗಳು ಚಂದ್ರಕ್ಕ. ಅಜ್ಜಿಯ ಗೆಳತಿಗೆ ಐದು ಹೆಣ್ಣುಮಕ್ಕಳೇ ಇದ್ದರು. ಐದು ಮಕ್ಕಳನ್ನು ಜೋಪಾನ ಮಾಡುವುದು ದುಸ್ತರವಾದ್ದರಿಂದ ಅವಳು ಚಂದ್ರಕ್ಕನನ್ನು ನಮ್ಮ ಅಜ್ಜಿ ಸಾವಿತ್ರಕ್ಕನಿಗೆ ಜೋಪಾನ ಮಾಡಲು ಕೊಟ್ಟುಬಿಟ್ಟಿದ್ದಳು. ನಾವು ಅಜ್ಜಿ ಕಡೆ ಬಂದಾಗ ಚಂದ್ರಕ್ಕ ಸುಮಾರು ನಲವತ್ತು ವರ್ಷದವಳಿದ್ದಳು. ತನ್ನ ಮಕ್ಕಳು ಜೀವಿಸದೇ ಇದ್ದರಿಂದ ಸಾವಿತ್ರಕ್ಕನು ಚಂದ್ರಕ್ಕನನ್ನು ದತ್ತಕ ತೆಗೆದುಕೊಂಡಿದ್ದಳು.  ನಮ್ಮಜ್ಜಿ ಚನ್ನಪ್ಪನೊಡನೆ ಚಂದ್ರಕ್ಕನ ಮದುವೆ ಆಗಿ ಅವನನ್ನು ಮನೆಯ ಅಳಿಯನನ್ನಾಗಿ ಇಟ್ಟುಕೊಂಡಿದ್ದಳು.  ಚಂದ್ರಕ್ಕನಿಗೂ ಮಕ್ಕಳಾಗದ್ದರಿಂದ ನಮ್ಮನ್ನು ಅಜ್ಜಿಯು ತನ್ನ  ಮನೆಯಲ್ಲಿ ಇಟ್ಟುಕೊಂಡಿದ್ದಳು. ಕೋರ್ಟಿನಲ್ಲಿ ಖಟ್ಲೆ ನಮ್ಮ ಕಾಲ್ಗುಣದಿಂದ ತನ್ನಂತೆ  ಆದುದರಿಂದ ಅವಳು ನನ್ನನ್ನು ದತ್ತಕ ತೆಗೆದುಕೊಂದಳು. ಚಂದ್ರಕ್ಕ ನಸುಗೆಂಪು ಬಣ್ಣದವಳಿದ್ದು ಮಧ್ಯದ ನಡುಕಟ್ಟಿನವಳಿದ್ದಳು. ಅವಳಿಗೆ ನಾವು ತಾಯಿಯೆಂದೇ ಕರೆಯಲು  ಅಜ್ಜಿ ಕಲಿಸಿದ್ದಳು. ಅದರಂತೆ ಚನ್ನಪ್ಪನನ್ನು ‘ಅಪ್ಪಾ’ಎಂದೇ ಕರೆಯತ್ತಿದೆವು.

ಅಜ್ಜಿಯ ಪಾಲಿಗೆ ಬಹಳಷ್ಟು ಆಸ್ತಿ ಬಂದುದರಿಂದ ನಮ್ಮ ತಾಯಿ ಚಂದ್ರಕ್ಕನಿಗೆ ಅಸೂಯೆ ಉತ್ಪನ್ನವಾಗಹತ್ತಿತ್ತು. ಏಕೆಂದರೆ, ನಮ್ಮಜ್ಜಿ ಸಾವಿತ್ರಕ್ಕನಿಗೆ ಚಂದ್ರಕ್ಕನೂ ನಾನೂ  ದತ್ತು ಪುತ್ರಿಯಾಗಿದ್ದರಿಂದ ನನಗೆ ಅರ್ಧ ಸಮಪಾಲು ಹೋಗಬಹುದೆಂಬ ಭೀತಿ ಉಂಟಾಯಿತು. ಅವಳು ಅಜ್ಜಿಯ ಕೂಡ ಬಡಿದಾಡಹತ್ತಿದ್ದಳು. ಅಜ್ಜಿಯು ದಾದು ಮಾಡಲಾದ್ದರಿಂದ ಅವಳು ಕೋರ್ಟಿಗೆ ಧಾವಿಸಿ ‘ಇವಳು ಮುದುಕಿ ಆಗಿದ್ದರಿಂದ ಈ ಚಿಕ್ಕಮಕ್ಕಳನ್ನು ಜೋಪಾನ ಮಾಡುವುದು ಅವಳಿಂದ ಆಗುವುದಿಲ್ಲ. ಮಕ್ಕಳು ಹಾಗೂ ಆಸ್ತಿ ನನಗೆ ಬೇಕು’  ಎಂದು ವಾದಿಸಿದಳು. ಕೋರ್ಟಿನವರು ಅವಳ ವಾದವನ್ನು ಮಾನ್ಯ ಮಾಡಿ ಮನೆಯಲ್ಲಿ ಒಂದು ಭಾಗ, ಸ್ವಲ್ಪ ಹೊಲ, ಬಂಗಾರ, ಹಣದ ಪಾಲು ಕೊಟ್ಟು ಅವಳ ಮೃತ್ಯುವಿನ ನಂತರ ಅವೆಲ್ಲವೂ ಚಂದ್ರಕ್ಕನಿಗೆ ಹೋಗಬೇಕೆಂದು ನಿರ್ಣಯ ಕೊಟ್ಟರು.

ಅಜ್ಜಿಯು ನನಗೆ ಔಷಧ ಕೊಡಿಸಹತ್ತಿದಳು. ಡಾಕ್ಟರರಿಂದ ಜಂತಿನ ಔಷಧ ಔಡಲೆಣ್ಣೆಯ ಉಪಯೋಗ ಮೇಲಿಂದ ಮೇಲೆ ಸುರುವಾಯಿತು. ಬುಟ್ಟಿಗಟ್ಟಲೆ ಜಂತುಗಳು ಬಿದ್ದವೆಂದು ಅಜ್ಜಿಯು ಹೇಳುತ್ತಿದ್ದಳು. ನನಗೆ ಹಸಿವಾಗಹತ್ತಿತು. ಅನ್ನ ಪಚನವಾಗಹತ್ತಿ ನನ್ನ ಪ್ರಕೃತಿ ಸುಧಾರಿಸಹತ್ತಿತು. ಅಜ್ಜಿಯ ಪಾಲಿಗೆ ಕಲ್ಲಿನ ದೊಡ್ಡ ಮನೆ, ಹೊಲ, ಮನೆ ಅಲ್ಲದೆ ಬಂಗಾರ ಬೆಳ್ಳಿ ತಕ್ಕಡಿಯಲ್ಲಿ ತೂಗಿ ಹಂಚಿಕೊಡಲಾಯಿತೆಂದು ಅಜ್ಜಿ ನನಗೆ ಹೇಳುತ್ತಿದ್ದಳು. ತನ್ನ ಪಾಲಿಗೆ  ಬಂದ ಕಲ್ಲಿನ ದೊಡ್ಡಮನೆಯಲ್ಲಿ ಅವಳು  ಇರಲು ಸುರುವು ಮಾಡಿದಳು. ಆ ಮನೆಯಲ್ಲಿ  ಅಜ್ಜಿ, ನಾನು, ಶಾರದಾ, ಚಂದ್ರಕ್ಕ ಎಂಬ ಬಹಳ ವರ್ಷಗಳ ಹಿಂದೆ ದತ್ತಕ ತೆಗೆದುಕೊಂಡ ಮಗಳು, ಚನ್ನಪ್ಪಾ ಇಷ್ಟು ಜನ ಇರುತ್ತಿದ್ದೆವು.

ನಮ್ಮ ತಾಯಿ (ಚಂದ್ರಕ್ಕ) ಬಹಳ ಜಿಪುಣಳಿದ್ದಳು. ಅಜ್ಜಿಯು ದೊಡ್ಡಮನಸ್ಸಿನವಳಿದ್ದಳು. ಖರ್ಚಿಗೆ  ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅವಳ ಕೈಯಲ್ಲಿ ಸತ್ತೆ ಇರುವವರಿಗೆ ನನಗೆ ಅವಳು ಬಹಳ ಪ್ರೇಮದಿಂದ ಸಾಕಷ್ಟು ಖರ್ಚುಮಾಡಿ ಜೋಪಾನ ಮಾಡಿದ್ದರೂ ನನ್ನ ಹೆಸರು ‘ರಾಜಮ್ಮಾ’ ಅನ್ನುವುದನ್ನು ಬದಲಿಸಿ ‘ಶಾಂತಾ’ ಎಂದು ಇಟ್ಟಿದ್ದಳು. ಅಜ್ಜಿಯು ನಮ್ಮ ಎಲ್ಲ ಬೇಡಿಕೆಯನ್ನು ಪೂರೈಸುತ್ತಿದ್ದಳು. ಒಡವೆ  ಅರಿವೆಗಳಿಗೇನೂ  ಕೊರತೆ ಇರಲಿಲ್ಲ. ರೇಶ್ಮಿಯ ಜರಿ ಅಂಚಿನ ಪರಕಾರ, ಪೋಲಕಗಳನ್ನು ಹೊಲಿಸಿದ್ದಳು. ಆಗಿನ ಕಾಲದಲ್ಲಿ ಪೋಲಕವೆಂದರೆ ಗಂಟುಹಾಕುವ ಚೋಲಿ ಆಗಿರುತ್ತಿತ್ತು.  ಮುಂದೆ ಸೀರೆ ಉಡುವಂತಾಗಲು ನನಗಾಗಿ ಟೋಪಸೆರಗಿನ ರೇಶ್ಮಿ ಸೀರೆ ತೆಗೆದುಕೊಳ್ಳಹತ್ತಿದಳು. ಕೈಯಲ್ಲಿ ಬಂಗಾರದ ಗೋಟು, ಪಾಟಲಿ ಬಳೆ, ಕರ್ಣಾಭರಣ, ಟೊಂಕದ ಪಟ್ಟಿ ಹಿರಿಯ ಹೆಣ್ಣುಮಗಳಂತೆ ನನಗೂ ದೊರೆಯಹತ್ತಿದವು. ಕಾಲಲ್ಲಿ ಬೆಳ್ಳಿಯ ತೊಡೆ. ಚಿಕ್ಕ ವಯಸ್ಸಿನಂತಲ್ಲೂ ನನಗೆ ಈ ಎಲ್ಲಾ ಆಭರಣಗಳೆಂದರೆ ಆಟಿಕೆ ವಸ್ತುಗಳೆನಿಸಹತ್ತಿದವು.

ಆಗಿನ ಕಾಲದಲ್ಲಿ ಬೆಳ್ಳಿ ಬಂಗಾರದ ಒಡವೆ ಹಾಗೂ ಭಾಂಡಿಗಳನ್ನು ಆಸ್ತಿ ಎಂದು ತಿಳಿದು  ಜೋಕೆಯಿಂದ ಇಡುತ್ತಿದ್ದರು. ಒಬ್ಬಳನ್ನು ನೋಡಿ ಮತ್ತೊಬ್ಬಳಿಗೆ ಒಡವೆ ಮಾಡಿಸುತ್ತಿದ್ದರು. ಕಾಲಲ್ಲಿ ನೋವಾದರೂ ಆ ಭಾಗದಲ್ಲಿ ಅರಿವೆ ಕಟ್ಟಿ ಅದರ ಮೇಲೆ ಬೆಳ್ಳಿ ತೋಡೆ ಹಾಕುತ್ತಿದ್ದರು. ಬರಿಗಾಲಿನಿಂದ ಇರಲು ಬಿಡುತ್ತಿರಲಿಲ್ಲ. ಅಜ್ಜಿಯ ಮನೆಯಲ್ಲಿ ಬೆಳ್ಳಿ ಭಾಂಡಿಗಳನ್ನು ಊಟಕ್ಕಾಗಿ ದಿನಾಲೂ ಉಪಯೋಗಿದಸುತ್ತಿದ್ದರು. ಬೆಳ್ಳಿಯ ತಾಟುಗಳು, ಬೆಳ್ಳಿಯ ದೊನ್ನಿಗಳು, ಹಾಲು ಬೆಣ್ಣೆ ವಿಪುಲವಾದುದರಿಂದ ತುಪ್ಪವನ್ನು ಬೆಳ್ಳಿಯ ದೊನ್ನೆಯಲ್ಲೇ ಬಡಿಸುತ್ತಿದ್ದರು. ಎಲ್ಲ ತಿನ್ನುವ ಪದಾರ್ಥಗಳನ್ನು ಮನೆಯ ತುಪ್ಪದಿಂದಲೇ ತಯಾರಿಸುತ್ತಿದ್ದರು. ಈಗಿನಂತೆ ಒಡವೆ ಭಾಂಡಿ ಕಿಮ್ಮತ್ತಿನ ವಸ್ತುಗಳನ್ನು ಬ್ಯಾಂಕಿನಲ್ಲಿಡುವ ವ್ಯವಸ್ಥೆ ಆಗ ಇರಲಿಲ್ಲ. ಮನೆಯಲ್ಲೇ ಅವುಗಳನ್ನು ಇಡುತ್ತಿದ್ದರು. ದರೋಡೆಕೋರರ ಭೀತಿ ಮಾತ್ರ ಖಾಯಂ ಇರುತ್ತಿತ್ತು.  ದರೋಡೆಕೋರರು ಬಂದೂಕು ಕೊಡ್ಲಿ ತೆಗೆದುಕೊಂಡು ಬರುತ್ತಿದ್ದರು. ಇಡೀ ಮನೆಯಲ್ಲಿ ಲೂಟಿ ಮಾಡಿ ಹೋಗುತ್ತಿದ್ದರು. ನಡುವೆ ಯಾರಾದರೂ ಅವರನ್ನು ತಡೆಯಲು ಬಂದರೆ ಕೊಡ್ಲಿಯಿಂದ ಕೊಲೆ ಮಾಡುತ್ತಿದ್ದರು. ಆದರೆ ನಮ್ಮಜ್ಜಿಯ ಮನೆಯೆದುರು ಕಿಲ್ಲೆ ಇದ್ದ ಹಾಗೆ ಕಲ್ಲಿನ ಮಜಬೂತ ಮನೆ ಇದ್ದುದರಿಂದ ದರೋಡೆಕೋರರ ಹೆದರಿಕೆ ಇರಲಿಲ್ಲ. ಆರಾರು  ತಿಂಗಳ ಗಚ್ಚಿನ ಗಾಣ ಚಲಾಯಿಸಿ ಗಚ್ಚು ಕಲ್ಲಿನಿಂದ ಕಟ್ಟಿದ ನಮ್ಮಜ್ಜಿ ಮನೆಗೆ ಇದಲ್ಲದೆ ಪಹರೆಯವರಿದ್ದರು.

ನಮ್ಮ ಮನೆಯಲ್ಲಿ ಸಂದೂಕಿನಲ್ಲಿ ಒಡವೆ, ಹಣ ಇಡುತ್ತಿದ್ದರು. ನಮ್ಮ ಮನೆ ಗಟ್ಟಿಯಾದುದರಿಂದ ಬಹಳ ಜನ ತಮ್ಮ ಬೆಲೆಯುಳ್ಳ ವಸ್ತುಗಳನ್ನು ನಮ್ಮ ಮನೆಯಲ್ಲಿ ಇಡಲು ಕೊಡುತ್ತಿದ್ದರು. ಆಗ ಸಣ್ಣ ಸಣ್ಣ ಗ್ರಾಮದಲ್ಲಿ ಒಬ್ಬರಿಗೊಬ್ಬರಲ್ಲಿ ವಿಶ್ವಾಸವಿರುತ್ತಿತ್ತು. ಒಡವೆಗಳ ಡಬ್ಬಿಗಳು, ಹಣದ ಚೀಲಗಳನ್ನು  ಕೇವಲ ವಿಶ್ವಾಸದ ಮೇಲೆ ನಮ್ಮಲ್ಲಿಡುತ್ತಿದ್ದರು. ಅವುಗಳ  ರಕ್ಷಣೆಯನ್ನು ನಮ್ಮಜ್ಜಿ ಹಾಗೂ ಕುಟುಂಬದವರು  ಮಾಡುತ್ತಿದ್ದರು.   ಬೆಳ್ಳಿ ಬಂಗಾರದ ಒಡವೆ ಮೈಮೇಲೆ  ಹಾಕಿಕೊಂಡು ಶ್ರೀಮಂತಿಕೆಯ ಪ್ರದರ್ಶನ ಮಾಡದೆ ಅವುಗಳನ್ನು ಜೋಕೆಯಿಂದ ಇಟ್ಟು ಸಾದಾ ರೀತಿಯಲ್ಲಿ ಜೀವನ ಸಾಗಿಸುವುದನ್ನು  ಮೆಚ್ಚುತ್ತಿದ್ದರು. ಒಡವೆ, ಸೀರೆ, ಭಾಂಡಿ, ಮಣೆ, ಜಮಖಾನೆಗಳನ್ನು ಒಬ್ಬರಿಗೊಬ್ಬರು ಕೊಟ್ಟು ಸಹಕಾರದ ಜೀವನ ಸಾಗಿಸುತ್ತಿದ್ದರು. ಅವುಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿ ಪ್ರಾಮಾಣಿಕ ರೀತಿಯಿಂದ  ಮರಳಿ  ಕೊಡುತ್ತಿದ್ದರು. ಅಜ್ಜಿಯ ಮನೆಯಲ್ಲಿ ಈ ತರಹದ ವಸ್ತುಗಳು ಒಂದ ಸವನೆ ಹೋಗಿ ಬಂದು ಮಾಡುತ್ತಿದ್ದವು.

ಮನೆಯ ಹೊರಗಿನ ವಾತಾವರಣ ಚೆನ್ನಾಗಿರಲಿಲ್ಲ. ಕಳ್ಳರು, ದರೋಡೆಕೋರರು, ಕಳವು ಮಾಡಿ ವಸ್ತುಗಳನ್ನು ಮಾರವಾಡಿಗಳಿಗೆ ಮಾರುತ್ತಿದ್ದರು. ಆಗ ಊರಿನ ಜನರ ಕ್ರೋಧವನ್ನು ಮಾರವಾಡಿಗಳು ಸಹಿಸಬೇಕಾಗುತ್ತಿತ್ತು.  ಇದು ಒಂದೇ ಸವನೆ ನಡೆಯುತ್ತಿತ್ತು. ಹತ್ತಿ ಮಾರಾಟಕ್ಕೆ ಹೊರಟ ಎತ್ತಿನ ಬಂಡಿ ಹಗಲು ಪ್ರವಾಸ ಮಾಡಿ ರಾತ್ರಿ ಊರಿನಲ್ಲಿ ಮುಕ್ಕಾಮು ಮಾಡುವುದು. ಯಾಕೆಂದರೆ ರಾತ್ರಿ ದರೊಡೆಕೋರರ ಭೀತಿ ಹೆಚ್ಚು. ವ್ಯಾಪಾರ ಮಾಡಿಬಂದ ಹಣ, ಇಲ್ಲವೇ ಜಾತ್ರೆಗಾಗಿ ಒಯ್ಯುವ ಹಣವನ್ನು ಟೊಂಕದ ಸುತ್ತಲೂ ಕಟ್ಟುವುದು. ಆಗ ನೋಟಿನ ಬದಲಾವಣೆ ಕಡಿಮೆ. ಬೆಳ್ಳಿಯ ರೂಪಾಯಿಗಳನ್ನು ಉದ್ದನೆಯ ಚಿಕ್ಕ ಚೀಲದಲ್ಲಿ ಹಾಕಿ ಟೊಂಕದ ಸುತ್ತಲೂ ಕಟ್ಟಿ ಮೇಲೆ ಧೋತರ ಉಟ್ಟು ಬಂಡಿ ಹಾಕಿಕೊಳ್ಳುವುದರಿಂದ ಹಣವು ಸುರಕ್ಷಿತವಾಗಿರುತ್ತಿತ್ತು.

ಆಗಿನ ಕಾಲದಲ್ಲಿ ಬೆಳ್ಳಿ ಬಂಗಾರದ ಒಡವೆ ಹಾಗೂ ಭಾಂಡಿಗಳನ್ನು ಆಸ್ತಿ ಎಂದು ತಿಳಿದು  ಜೋಕೆಯಿಂದ ಇಡುತ್ತಿದ್ದರು. ಒಬ್ಬಳನ್ನು ನೋಡಿ ಮತ್ತೊಬ್ಬಳಿಗೆ ಒಡವೆ ಮಾಡಿಸುತ್ತಿದ್ದರು. ಕಾಲಲ್ಲಿ ನೋವಾದರೂ ಆ ಭಾಗದಲ್ಲಿ ಅರಿವೆ ಕಟ್ಟಿ ಅದರ ಮೇಲೆ ಬೆಳ್ಳಿ ತೋಡೆ ಹಾಕುತ್ತಿದ್ದರು. ಬರಿಗಾಲಿನಿಂದ ಇರಲು ಬಿಡುತ್ತಿರಲಿಲ್ಲ. ಅಜ್ಜಿಯ ಮನೆಯಲ್ಲಿ ಬೆಳ್ಳಿ ಭಾಂಡಿಗಳನ್ನು ಊಟಕ್ಕಾಗಿ ದಿನಾಲೂ ಉಪಯೋಗಿದಸುತ್ತಿದ್ದರು. ಬೆಳ್ಳಿಯ ತಾಟುಗಳು, ಬೆಳ್ಳಿಯ ದೊನ್ನಿಗಳು, ಹಾಲು ಬೆಣ್ಣೆ ವಿಪುಲವಾದುದರಿಂದ ತುಪ್ಪವನ್ನು ಬೆಳ್ಳಿಯ ದೊನ್ನೆಯಲ್ಲೇ ಬಡಿಸುತ್ತಿದ್ದರು. ಎಲ್ಲ ತಿನ್ನುವ ಪದಾರ್ಥಗಳನ್ನು ಮನೆಯ ತುಪ್ಪದಿಂದಲೇ ತಯಾರಿಸುತ್ತಿದ್ದರು. ಈಗಿನಂತೆ ಒಡವೆ ಭಾಂಡಿ ಕಿಮ್ಮತ್ತಿನ ವಸ್ತುಗಳನ್ನು ಬ್ಯಾಂಕಿನಲ್ಲಿಡುವ ವ್ಯವಸ್ಥೆ ಆಗ ಇರಲಿಲ್ಲ. ಮನೆಯಲ್ಲೇ ಅವುಗಳನ್ನು ಇಡುತ್ತಿದ್ದರು. ದರೋಡೆಕೋರರ ಭೀತಿ ಮಾತ್ರ ಖಾಯಂ ಇರುತ್ತಿತ್ತು. 

ಈ ತರಹದ ಶ್ರೀಮಂತಿಕೆಯ ಕಾಲದಲ್ಲಿ ನಮ್ಮ ಮನೆಯಲ್ಲಿ ಪುನಃ ಪಾಲು ಮಾಡಲಾಯಿತು. ನಾವಿರ್ವರೂ ಅಕ್ಕ ತಂಗಿಯರು ಚಂದ್ರಕ್ಕನೆಡೆ ಇರಲು ಹೋದೆವು. ಆದರೆ  ತಾಯಿ ಚಂದ್ರಕ್ಕನ ಜಿಪುಣತನದ ಅರಿವು ನಮಗೆ ಆಗಹತ್ತಿತ್ತು. ಅಜ್ಜಿಯ ಮನೆಯಲ್ಲಿ  ಊಟವಾದ ಮೇಲೆ  ಬಿಸಿನೀರಿನಿಂದ ಕೈ ತೊಳೆದರೆ ಮಾತ್ರ ತುಪ್ಪದ ವಾಸನೆ ಹೋಗುತ್ತಿತ್ತು. ಥಾಲಿಪಟ್ಟಿಗೆ ನಿಂಬೆಹಣ್ಣಿನ ಗಾತ್ರದಷ್ಟು ಬೆಣ್ಣೆ ಬಡಿಸುತ್ತಿದಳು ನಮ್ಮಜ್ಜಿ. ಅದರೆ ಚಂದ್ರಕ್ಕನ ಜಿಪುಣತನದಿಂದ ನಮಗೆ ಹಸಿವಾದರೂ ಕೂಡಲೇ ನಮಗೆ ತಿನ್ನಲು ಕೊಡುತ್ತಿರಲಿಲ್ಲ.  ಅಜ್ಜಿಯು ಮನೆಯಲ್ಲಿಯೇ ಇರುತ್ತಿದ್ದಳು. ಆದರೆ ತಾಯಿಗೆ ಹೆದರಿ ನಾವು ಅವಳಿಗೆ ಚಾಡಿ ಹೇಳುತ್ತಿರಲಿಲ್ಲ. ತಾಯಿ ಸಮೀಪವಿಲ್ಲದಾಗ ಅಜ್ಜಿಯು ನಮ್ಮನ್ನು ಕೂಡಿಸಿಕೊಂಡು ಮುದ್ದಿಟ್ಟು ತಿನ್ನುಣ್ಣಲು ಕೊಡುತ್ತಿದ್ದಳು. ಆದರೆ ತಾಯಿಗೆ ತಿಳಿದೊಡನೆ ಅವಳು ಸಿಟ್ಟಿಗೇಳುತ್ತಿದ್ದಳು.

ನಮ್ಮ ತಂದೆಗೆ ನಮ್ಮ ತಾಯಿಯ ಈ ನಡವಳಿಕೆ ಸೇರುತ್ತಿರಲಿಲ್ಲ. ಅವನು ನಮ್ಮನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದನು. ಆಗ ದುರ್ಗದ ಬೈಲಿನಲ್ಲಿ ವಿ. ಶಾಂತಾರಾಮನ  ತಾಯಿ ಕಮಲಬಾಯಿಯು ಒಂದು ಹೋಟೆಲ್ ನಡೆಸುತ್ತಿದ್ದಳು. ಅಲ್ಲಿ ಒಗ್ಗರಣೆ ಅವಲಕ್ಕಿ, ಭಜಿ, ಶಿರಾ, ತಾಲಿಪಟ್ಟುಗಳಂತಹ ಮಹಾರಾಷ್ಷ್ರೀಯ ಪದ್ಧತಿಯ ತಿನಿಸುಗಳನ್ನು  ರುಚಿಕರವಾಗಿ ತಯಾರು ಮಾಡುತ್ತಿದ್ದರು. ಶಾಂತಾರಾಮನು ಗಿರಾಕಿಗಳಿಗೆ ತಿನಿಸು ಕೊಡುವುದು, ಚಹಾಕೊಡುವುದು, ಕಪ್ಪುಬಸಿ ಟೇಬಲ್ ತೊಳೆಯುವುದು ಇತ್ಯಾದಿ  ಮಾಡುತ್ತಿದ್ದನು. ಅವರ ತಂದೆ ಗಲ್ಲೆದ ಮೇಲೆ ಕೂಡುತ್ತಿದ್ದರು. ಆಗ ಎಲ್ಲ ತಿನಸುಗಳು  ಕಡಿಮೆ ಬೆಲೆಗೆ ಸಿಗುತ್ತಿದ್ದವು. ಎರಡು ದುಡ್ಡಿಗೊಂದು ತೆಂಗಿನ ಕಾಯಿ, ಸಕ್ಕರೆ, ಬೆಲ್ಲ, ತುಪ್ಪ ಎಲ್ಲವೂ ಅಗ್ಗ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿದ್ದವು. ಹೋಟೆಲ್ಲಿನಲ್ಲಿ  ತಿನಿಸು ರುಚಿಕರ ಇದ್ದುದರಿಂದ ಸಾಕಷ್ಟು ತಿಂದು ಮನೆಯಲ್ಲಿ ಏನೂ ಹೇಳದೆ ಬರುತ್ತಿದ್ದೆವು.

ನಮ್ಮ ತಾಯಿಗೆ ನಮ್ಮ ತಿನ್ನುಣ್ಣುವ ಹಾಗೂ ಅರಿವೆ ಅಂಚಡಿಗಳ ಬಗ್ಗೆ ಜಿಪುಣತನವಿದ್ದರೂ ನಮ್ಮ ಬಗ್ಗೆ ಅವಳಿಗೆ ಕಾಳಜಿ ಸಾಕಷ್ಟು ಇತ್ತು. ಹೆಣ್ಣುಮಕ್ಕಳು ಶಾಲೆ  ಕಲಿಯುಬೇಕೆಂದು ಅವಳ ಆಗ್ರಹವಿತ್ತು. ಮನಸೀಪಾಲಿಟಿಯ ಶಾಲಾ ನಂಬರ ಒಂದರಲ್ಲಿ ನನ್ನನ್ನು ಸೇರಿಸಿದಳು. ಅಲ್ಲಿ ನನಗೆ ಇಬ್ಬರು ಮೂವರು ಒಳ್ಳೆ ಗೆಳತಿಯರು ಸಿಕ್ಕರು. ಬಾನು ಮತ್ತು ಅಂಬೂ ಇವರು ನನ್ನ ಜೀವದ ಗೆಳತಿಯರಾದರು. ಬಾನು ಮುಸಲ್ಮಾನಳಿದ್ದರೂ ಆ ಬಗ್ಗೆ ನನಗೇನೂ ವಿಶೇಷವೆನಿಸುತ್ತಿರಲಿಲ್ಲ. ಅವಳು ತನ್ನ ಡಬ್ಬಿಯಲ್ಲಿಯ ರೊಟ್ಟಿ, ಪಲ್ಲೇ ಕೊಡುವುದು, ನಾನು ನನ್ನ ಡಬ್ಬಿಯಲ್ಲಿಯದು ಅವಳಿಗೆ  ಕೊಡುವುದು ಹೀಗೆ ನಡೆದೇ ಇತ್ತು. ಮನೆಯಲ್ಲಿ ತಿಳಿದೊಡನೆ ಹೊಡೆತ ಬೀಳುತ್ತಿತ್ತು. ಆದರೆ ಯಾಕೆ ಹೊಡೆಯುತ್ತಾರೆಂಬುದು ಮಾತ್ರ  ನನಗೆ ತಿಳಿಯುತ್ತಿರಲಿಲ್ಲ.

ನಮ್ಮ ತಂದೆಗೆ ನಮ್ಮ ತಾಯಿಯ ಈ ನಡವಳಿಕೆ ಸೇರುತ್ತಿರಲಿಲ್ಲ. ಅವನು ನಮ್ಮನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದನು. ಆಗ ದುರ್ಗದ ಬೈಲಿನಲ್ಲಿ ವಿ. ಶಾಂತಾರಾಮನ  ತಾಯಿ ಕಮಲಬಾಯಿಯು ಒಂದು ಹೋಟೆಲ್ ನಡೆಸುತ್ತಿದ್ದಳು. ಅಲ್ಲಿ ಒಗ್ಗರಣೆ ಅವಲಕ್ಕಿ, ಭಜಿ, ಶಿರಾ, ತಾಲಿಪಟ್ಟುಗಳಂತಹ ಮಹಾರಾಷ್ಷ್ರೀಯ ಪದ್ಧತಿಯ ತಿನಿಸುಗಳನ್ನು  ರುಚಿಕರವಾಗಿ ತಯಾರು ಮಾಡುತ್ತಿದ್ದರು. ಶಾಂತಾರಾಮನು ಗಿರಾಕಿಗಳಿಗೆ ತಿನಿಸು ಕೊಡುವುದು, ಚಹಾಕೊಡುವುದು, ಕಪ್ಪುಬಸಿ ಟೇಬಲ್ ತೊಳೆಯುವುದು ಇತ್ಯಾದಿ  ಮಾಡುತ್ತಿದ್ದನು. ಅವರ ತಂದೆ ಗಲ್ಲೆದ ಮೇಲೆ ಕೂಡುತ್ತಿದ್ದರು. ಆಗ ಎಲ್ಲ ತಿನಸುಗಳು  ಕಡಿಮೆ ಬೆಲೆಗೆ ಸಿಗುತ್ತಿದ್ದವು. ಎರಡು ದುಡ್ಡಿಗೊಂದು ತೆಂಗಿನ ಕಾಯಿ, ಸಕ್ಕರೆ, ಬೆಲ್ಲ, ತುಪ್ಪ ಎಲ್ಲವೂ ಅಗ್ಗ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿದ್ದವು.

ಅಂಬೂಳ ನಿಜವಾದ ಹೆಸರು ಅಂಬಿಕಾ, ಅವಳು ಶ್ರೀಮಂತರ ಒಬ್ಬಳೇ ಮಗಳು. ಕೆಂಪಗೆ ಸುಂದರವಾದ ಹುಡುಗಿ ಇದ್ದು ತಾಯಿಯ ಕಡೆಯಿಂದ ಬಂದ ಆಸ್ತಿಗೆ ಅವಳೊಬ್ಬಳೇ ವಾರಸುದಾರಳಾಗಿದ್ದಳು. ಅಂಬು ಚಿಕ್ಕವಳಿದ್ದಾಗ ಮೆಟ್ಟಿಲ ಮೇಲಿಂದ ಬಿದ್ದು ಅವಳ ಕಾಲಿನ ಎಲುಬು ಮುರಿದಿತ್ತು. ಎಷ್ಟು ಉಪಚಾರ ಮಾಡಿದರೂ ಅವಳ ಒಂದು ಕಾಲು ತುಸು ಸೊಟ್ಟೇ ಉಳಿಯಿತು. ಅವಳು ತನ್ನ ಬಲಗಾಲನ್ನು ತಿರುವು ಹಾಕಿ ನಡೆಯುತ್ತಿದ್ದಳು. ಅವಳ ಮನೆ ಶಾಲೆಯಿಂದ ದೂರ. ನಡೆಯುತ್ತಲೆ ಬರುತ್ತಿದ್ದ ಅವಳನ್ನು ಹುಡುಗಿಯರು ‘ಕುಂಟಿ’ ಎಂದು ಕೆಣಕುತ್ತಿದ್ದರು. ಅವಳ ಪುಸ್ತಕ ಹೊಲಸು ಮಾಡುವುದು, ಪಾಟಿಯ ಮೇಲೆ ಬರೆದದ್ದನ್ನು ಅಳಿಸುವುದು ಇತ್ಯಾದಿ ಮಾಡಿ ಅವಳಿಗೆ ತೊಂದರೆ ಕೊಡುತ್ತಿದ್ದರು. ನಾನು ಒಂದೆರಡು ಸಲ ಅವರಿಗೆ ಬುದ್ಧಿ ಹೇಳಿದೆ, ಅವರು ಕೇಳಲಿಲ್ಲ. ಒಮ್ಮೆ  ನಾವು 3-4  ಗೆಳತಿಯರು ಈ ಕಿಡಿಗೇಡಿ ಹುಡುಗಿಯರನ್ನು ಹಿಡಿದು, ಮುಖ್ಯಾಧ್ಯಾಪಿಕೆಯ ಕಡೆ ಕೊಟ್ಟವು. ಅಂಬೂಳ ಸಲುವಾಗಿ ಈ ತರಹದ ಸಾಹಸ ಮಾಡಿದ ನಾನು ಅತ್ಯಂತ ಶಾಂತ ಸ್ವಭಾವದವಳು. ಒಬ್ಬರು ಉಸಾಬರಿಗೆ ಹೋಗುವುದು, ಚಾಡಿ ಹೇಳುವುದು, ಜಗಳ ಮಾಡುವುದು ನನ್ನ  ಸ್ವಭಾವವಲ್ಲ.

ನಾನು ಬಾಯಿ ಸತ್ತವಳು.  ಆದುದರಿಂದಲೇ ಶಾಂತ ಸ್ವಭಾವದವಳಾಗಿದ್ದೆ. ಆ ಬಗ್ಗೆ ವಿಚಾರ ಮಾಡಲು ನನಗೆ ಹೊಳೆಯಿತು. ನಮ್ಮ ತಂದೆಯ ಊರು ಹುಬ್ಬಳ್ಳಿಯ ಹತ್ತಿರವೇ ಇತ್ತು.  ಆ ಊರಿಗೆ ಜಾತ್ರೆಯ ಸಮಯಕ್ಕೆ ಅವರು ನನ್ನನ್ನು ಕರೆದುಕೊಂಡು  ಹೋಗುತ್ತಿದ್ದರು. ಅಲ್ಲಿ ನಮ್ಮ ತಂದೆಯ ಕಕ್ಕನ ಮಕ್ಕಳು ಇರುತ್ತಿದ್ದರು. ಅವರಲ್ಲಿ ಒಬ್ಬನ ಹೆಂಡತಿಯೊಡನೆ ಒಂದೇ ಸವನೆ ಜಗಳವಾಗುತ್ತಿತ್ತು. ಅವಳು ಅತ್ಯಂತ ಸುಂದರಳಿದ್ದು ಅವಳ ಪತಿ ಅಂದರೆ ನಮ್ಮ ಕಕ್ಕ ಕುರೂಪಿಯಾಗಿದ್ದರು. ಆದ್ದರಿಂದ ಮೇಲಿಂದ ಮೇಲೆ  ಜಗಳವಾಗುತ್ತಿತ್ತು. ನಮ್ಮ ತಂದೆ ಆತನಿಗೆ ಬೈಯುತ್ತಿದ್ದರು. ಅವರ ಹೆಂಡತಿ ನಮ್ಮ ಅಪ್ಪನಿಗೆ ಒಳ್ಳೆ ಆದರಾತಿಥ್ಯ ಮಾಡುತ್ತಿದ್ದಳು. ನನಗೆ ತಿಳಿದಮಟ್ಟಿಗೆ ಅವಳಿಗೂ ನಮ್ಮ ತಂದೆಗೂ ಏನೋ ಸಂಬಂಧವಿದ್ದಿರಬಹುದೆಂದು ತೋರುತ್ತದೆ.

ಒಮ್ಮೆ ನಾವು ಅಲ್ಲಿ ಹೋದಾಗ ನಮ್ಮ ಆ ಕಕ್ಕಿ ದನದ ಕೊಟ್ಟಿಗೆಯಲ್ಲಿದ್ದಳು. ನಮ್ಮ ಆ ಕಕ್ಕನು ಅಲ್ಲಿಗೆ ಹೋದನು. ಅವರವರ ಜಗಳವಾಯಿತು. ನಮ್ಮ ಕಕ್ಕನು ಜೋರಿನಿಂದ ಏನೋ ಅವಳ ತಲೆಯ ಮೇಲೆ ಹೊಡೆದನು. ಅವಳು ಕೆಳಗೆ ಬಿದ್ದಳು. ಪುನಃ ಏಳಲಿಲ್ಲ. ನಾನು ಅಲ್ಲೇ ಇದ್ದೆ. ನನ್ನನ್ನು ನೋಡಿದ ನಮ್ಮ ಕಕ್ಕನು “ನೀನು ಯಾರಿಗಾದರೂ ಹೇಳಿದ್ರ  ನೋಡ ನಿನ್ನ ತೋಗೋತೇನು” ಎಂದು ಜೋರಾಗಿ ಜಬರಿಸಿದರು. ಆಗ ಸುಮ್ಮನೇ ಬಾಯಿ  ಮುಚ್ಚಿಕೊಂಡ ನಾನು ಬಾಯಿ  ಮುಚ್ಚಿಕೊಂಡವಳೆ ಅದೆ. ನನಗೆ ಮಾತು ಕಡಿಮೆ. ಎಲ್ಲ ಕಡೆಗೂ ಗೊಂದಲವೆದ್ದಿತು. ಕಕ್ಕನ ಮೇಲೆ ಸಂಶಯ ತೆಗೆದುಕೊಂಡರು. ಆದರೆ ಪುರಾವೆ ಎಲ್ಲಿದೆ? ನಮ್ಮ ಕಕ್ಕನು ಕತೆ ಕಟ್ಟಿ  ಹೇಳಿದನು. ‘ನನ್ನ ಹೆಣ್ತಿ ಬಸುರಿ ಇದ್ಲು. ತಲೆಗೆ ಚಕ್ರಬಂದು ಬಿದ್ದು, ತಲೆಗೆ ಪೆಟ್ಟಹತ್ತಿ ಸತ್ಲು’ ಎಲ್ಲರೂ ಇದನ್ನು ನಂಬಿದರು. ಇದನ್ನು ನಾನು ನನ್ನ ತಂದೆಗೆ ಹೇಳಿದ್ದರೆ ಆತನು ನಮ್ಮ ಕಕ್ಕನಿಗೆ ‘ಫಾಸಿ’ ಹಾಕುತ್ತಿದ್ದನು.  ಅವಳಂತೂ ಸತ್ತು ಹೋದ್ಲು. ಇವನು ಫಾಶಿಗೆ ಹೋದರೇನು ಗತಿ ಎಂದು ನಾನು ಸುಮ್ಮನಿದ್ದೆ. ಆಗಿನಿಂದ ಬಾಯಿ ಸತ್ತ ನಾನು ನಿಜವಾಗಿಯೂ ಬಾಯಿಸತ್ತವಳೇ ಆದೆ.

 

ನಾಳೀನ ಚಿಂತ್ಯಾಕ
ಕಲಾವಿದೆ ಶಾಂತಾ ಹುಬಳೀಕರ ಅವರ ಆತ್ಮ ಚರಿತ್ರೆ
ಅನುವಾದ: ಕೆ.ಎಸ್.ಕುಲಕರ್ಣಿ
ಪ್ರಕಾಶಕರು:
ಅಹರ್ನಿಶಿ ಪ್ರಕಾಶನ
ಜ್ಞಾನವಿಹಾರ ಬಡಾವಣೆ
ಕಂಟ್ರಿ ಕ್ಲಬ್ ಎದುರು
ವಿದ್ಯಾನಗರ
ಶಿವಮೊಗ್ಗ : ೫೭೭ ೨೦೩
ಬೆಲೆ: ೧೨೫ ರೂಪಾಯಿಗಳು
ಸಂಪರ್ಕಿಸಲು ಮೊಬೈಲ್: ೯೪೪೯೧೭೪೬೬೨.