ಊರಿನಿಂದ ಬೆಳಿಗ್ಗೆ ಪ್ರಯಾಣಮಾಡಿ ಕಾಲೇಜಿನಲ್ಲಿ ಓಡಾಟ, ಹಾಸ್ಟೆಲ್ಲಿನ ಜಂಜಾಟ, ಎಲ್ಲಾ ಸೇರಿ ಅಂದು ರಾತ್ರಿ ನನಗೆ ಬಂದದ್ದು ತಡೆಯಲಾರದ ತಲೆನೋವು. ಪರಿಚಯ ಇಲ್ಲದ ಜನ, ಗೊತ್ತಿಲ್ಲದ ಮನೆ.. ಇತ್ತ ತಲೆನೋವು ಜೋರಾಗಿ ವಾಂತಿ ಬರುತ್ತಿದೆ. ಯಾರಲ್ಲಿ ಹೇಳಿಕೊಳ್ಳುವುದು ನನ್ನ ಪರಿಸ್ಥಿತಿ. ಬಾತ್ರೂಮಿನಲ್ಲಿ ಹೋಗಿ ವಾಂತಿ ಮಾಡುತ್ತಿದ್ದ ನನ್ನನ್ನು ಕಂಡ ದೊಡ್ಡಗೌಡ್ರು ಕೂಡಲೇ ಬಂದು ನನ್ನ ತಲೆಯನ್ನು ಹಿಡಿದುಕೊಂಡರು. ಸ್ವಲ್ಪ ಹೊತ್ತಿಗೆ ವಾಂತಿ ಆಗಿ ತಲೆನೋವು ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಒಳ್ಳೆಯ ಜನ ಅವರು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’
ನನ್ನ ಅಪ್ಪ ಅಮ್ಮ ಇಬ್ಬರು ಅಧ್ಯಾಪಕರು. ಆಗೆಲ್ಲಾ ಅವರು ಹಳ್ಳೀ ಮೇಷ್ಟ್ರು. ನಾನು ಬೆಳೆದದ್ದು ಸಣ್ಣ ಹಳ್ಳಿಗಳಲ್ಲಿ. ಅಧ್ಯಾಪಕರು ಒಂದು ಕಡೆಯಿಂದ ಒಂದು ಕಡೆಗೆ ವರ್ಗವಾಗಿ ಹೋಗುತ್ತಿದ್ದುದರಿಂದ, ಕೊಡಗಿನ ವಿವಿಧೆಡೆ , ಹಲವು ಊರುಗಳಲ್ಲಿ ಬೆಳೆದಿದ್ದೇನೆ. ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ದಾಟಿ, ಮಡಿಕೇರಿಯ ಹೈಸ್ಕೂಲ್ ಗೆ ಬಂದಾಗ ನನಗೆ ಕೇಳದೆಯೇ ಒಂದು ಗೌರವ ಸಿಕ್ಕಿ ಬಿಟ್ಟಿತ್ತು. ಆಗಿನ ಪ್ರಾಥಮಿಕ ಶಾಲೆಯಲ್ಲಿ ಇದ್ದ ಎಂಟನೇ ಕ್ಲಾಸಿನಲ್ಲಿ, ಅಂದರೆ ಅಂದಿನ ಥರ್ಡ್ ಫಾರ್ಮ್ ನಲ್ಲಿ ನಾನು ಕೊಡಗಿಗೆ ಎರಡನೇ ಸ್ಥಾನ ಬಂದು ಕೊಡಗಿಗೆ ಇದ್ದ ಏಕೈಕ ಪೇಪರ್ “ಶಕ್ತಿ”ಯಲ್ಲಿ ನನ್ನ ಹೆಸರು ದೊಡ್ಡದಾಗಿ ಅಚ್ಚಾಗಿತ್ತು. ಅದನ್ನ ಮಡಿಕೇರಿಯ ಹೈಸ್ಕೂಲಿನ ಅಧ್ಯಾಪಕರು ನೋಡಿ ನನ್ನನ್ನು ಸ್ವಲ್ಪ ಜಾಸ್ತಿ ಗೌರವದಿಂದ ಕಾಣುತ್ತಿದ್ದರು. ಅಲ್ಲಿಯವರೆಗೆ ಕೊಡಗಿನಲ್ಲಿ ಪ್ರೌಢಶಾಲೆಯಲ್ಲಿ ಇದ್ದದ್ದು ಕನ್ನಡ ಮಾಧ್ಯಮ ಮಾತ್ರ. ಮೊತ್ತ ಮೊದಲಿಗೆ ಇಂಗ್ಲೀಷ್ ಮಾಧ್ಯಮ ಶುರು ಮಾಡಿದ ಕೀರ್ತಿ ಮಡಿಕೇರಿಯ ಸರ್ಕಾರಿ ಪ್ರೌಢಶಾಲೆಗೆ. ಹಾಗೆಯೇ ಒಳ್ಳೇ ಅಂಕ ಗಳಿಸಿದ್ದ ನಮ್ಮಲ್ಲಿ ಕೆಲವರನ್ನು, ನಮ್ಮನ್ನು ಕೇಳದೇ ಇಂಗ್ಲೀಷ್ ಮಾಧ್ಯಮ ತರಗತಿಗೆ ಸೇರಿಸಿ ಬಿಟ್ಟಿದ್ದರು.
ಪ್ರೌಢಶಾಲೆಯಲ್ಲಿ ಓದಿ, ಮಡಿಕೇರಿಯ ಹಿರಿಯ ಕಾಲೇಜಿನಲ್ಲಿ ಪಿ. ಯು. ಸಿ ಮುಗಿಸಿದ ನನಗೆ ಸ್ವಲ್ಪ ಮಟ್ಟಿನ ಉತ್ತಮ ಅಂಕ ಬಂದಿತ್ತು. ಹಾಗೆಯೇ ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಸೀಟಿಗಾಗಿ ಒಂದು ಸಂದರ್ಶನ ಅಥವಾ ಇಂಟರ್ವ್ಯೂ ನಡೆದು, ಕೆಲವು ದಿನಗಳ ಬಳಿಕ ಅಲ್ಲಿಂದ ಬಂದ ಪತ್ರದಲ್ಲಿ ನನಗೆ ಕಾಲೇಜಿನಲ್ಲಿ ಒಂದು ಸೀಟ್ ಕೂಡಾ ಸಿಕ್ಕಿತು. ಇದ್ದದ್ದೂ ಹಳ್ಳಿಯಲ್ಲಿ. ಪತ್ರ ಮನೆಗೆ ಬರಲು ಅದೇನೋ ತೊಂದರೆ ಆಗಿ, ಕೆಲವು ದಿನ ತಡವಾಗಿ ಬಿಟ್ಟಿತ್ತು.
ಕ್ಲಾಸಿಗೆ ಕೂಡಲೇ ಹೋಗಿ ಸೇರಿಕೊಳ್ಳಬೇಕು ಎಂಬ ಪತ್ರ ನೋಡಿ ಗಡಿಬಿಡಿಯಲ್ಲಿ ಹೊರಟೆ. ಅಣ್ಣ ಮೈಸೂರಿನ ಹತ್ತಿರದ ಊರಿನಲ್ಲಿ ವಿದ್ಯುತ್ ನಿಗಮದಲ್ಲಿ ಇಂಜಿನಿಯರ್. ನಾನು ಮನೆಯಿಂದ ಮೈಸೂರಿಗೆ ಹೋಗಿ, ಅವರು ಚೆನ್ನಪಟ್ಟಣದಿಂದ ಅಲ್ಲಿಗೆ ಬರುವುದು ಎಂಬ ವ್ಯವಸ್ಥೆ ಮೊದಲೇ ಮಾಡಿಕೊಂಡಿದ್ದೆವು. ಇಲ್ಲಿಯವರೆಗೂ ಎಲ್ಲಾ ಸುಗಮವಾಗಿತ್ತು.
ಅಂದು, ನನ್ನ ಅಪ್ಪನ ತಲೆಗೆ ಅದೇನು ಭೂತ ಹೊಕ್ಕಿತೋ ತಿಳಿದಿಲ್ಲ. ಪ್ರಗತಿಪರರಾಗಿದ್ದ ಅವರು, ಅಂದು ಮಾತ್ರ ಒಂದು ವಿಚಿತ್ರ ಆಜ್ಞೆ ಮಾಡಿದರು. ನಾಳೆ ನಾಡಿದ್ದು ಭರಣಿ ಮತ್ತು ಕೃತಿಕಾ ನಕ್ಷತ್ರ. ಆದುದರಿಂದ ಕಾಲೇಜಿಗೆ ಸೇರುವಂತಹ ಒಳ್ಳೆ ಕಾರ್ಯಕ್ಕೆ ಆ ಎರಡು ದಿನಗಳಲ್ಲಿ ಮಗ ಹೊರಡಬಾರದು ಎಂದುಬಿಟ್ಟರು.
ಅಲ್ಲಿಯ ತನಕ ಈ ನಕ್ಷತ್ರ, ರಾಹುಕಾಲ, ಗುಳಿಗ ಕಾಲ, ಎಲ್ಲಾ ನಮ್ಮ ಮನೆಯಲ್ಲಿ ಕೇಳುತ್ತಿದ್ದದ್ದೆ ಅಪರೂಪ. ಈಗ ಇದು ಅವರ ಒಂದು ಹೊಸ ವರಸೆ. ಅತ್ತೂ ಕರೆದು, ಜಗಳ ಮಾಡಿದರೂ ಯಾವುದಕ್ಕೂ ಜಗ್ಗದ ನನ್ನ ಅಪ್ಪನ ಮಾತಿಗೆ ಕಟ್ಟುಬಿದ್ದು ನಾನು ಮೂರನೇ ದಿನ ಮೈಸೂರಿಗೆ ಪ್ರಯಾಣ ಬೆಳೆಸಿದೆ.
ಊರಿನಿಂದ ಮೈಸೂರಿಗೆ ಹೋಗಿ ಕಾಲೇಜಿನಲ್ಲಿ ಅಲ್ಲಿನ ದಾಖಲಾತಿಯ ಎಲ್ಲಾ ಕೆಲಸಗಳು ಮುಗಿಯುವಷ್ಟರಲ್ಲಿ ಮಧ್ಯಾಹ್ನ ಆಗಿಹೋಗಿತ್ತು. ಅಲ್ಲಿಂದ ಹಾಸ್ಟೆಲ್ ಸೀಟಿಗಾಗಿ ಹಾಸ್ಟೆಲ್ ಕಡೆ ಪ್ರಯಾಣ ಬೆಳೆಸಿದೆವು. ಅಲ್ಲಿ ಶುರುವಾಗಿತ್ತು ನನ್ನ ದುರದೃಷ್ಟದ ದಿನಗಳು..
ಹಾಸ್ಟೆಲ್ ನಲ್ಲಿ ಖಾಲಿ ಇದ್ದ ಕೊನೆಯ ರೂಮನ್ನು, ನಾವು ಹೋಗುವ ಸ್ಪಲ್ಪ ಸಮಯದ ಹಿಂದೆ, ಕೊಟ್ಟು ಆಗಿ ಬಿಟ್ಟಿತ್ತು. ಹಾಗಾಗಿ ಹಾಸ್ಟೆಲಿನಲ್ಲಿ “ನೋ ವೇಕೆನ್ಸಿ”. ಮೈಸೂರು ನನಗೆ ಕಾಣದ ಊರು. ಮೈಸೂರಿನಲ್ಲಿ ನನ್ನ ಪರಿಚಯಸ್ಥರು ಯಾರೂ ಇರಲಿಲ್ಲ. ಕಾಲೇಜಿಗೆ ಸೇರಿಯಾಗಿದೆ, ಮರುದಿನ ತರಗತಿಗಳು ಶುರುವಾಗುತ್ತದೆ. ಹೋಟೆಲಿನಲ್ಲಿ ಉಳಿದುಕೊಳ್ಳುವಷ್ಟು ಒಳ್ಳೆಯ ಸ್ಥಿತಿವಂತ ಮನೆಯಿಂದ ಬಂದವನು ನಾನು ಅಲ್ಲಾ. ಇನ್ನೇನು ಮಾಡುವುದು ಎಂದು ಯೋಚಿಸುವಾಗ ಅಣ್ಣನಿಗೆ ಬಂದ ಯೋಚನೆ ಇದು.
ಅಣ್ಣ ಮೈಸೂರಿನ ಹತ್ತಿರದ ಊರಿನಲ್ಲಿ ವಿದ್ಯುತ್ ನಿಗಮದಲ್ಲಿ ಇಂಜಿನಿಯರ್. ನಾನು ಮನೆಯಿಂದ ಮೈಸೂರಿಗೆ ಹೋಗಿ, ಅವರು ಚೆನ್ನಪಟ್ಟಣದಿಂದ ಅಲ್ಲಿಗೆ ಬರುವುದು ಎಂಬ ವ್ಯವಸ್ಥೆ ಮೊದಲೇ ಮಾಡಿಕೊಂಡಿದ್ದೆವು. ಇಲ್ಲಿಯವರೆಗೂ ಎಲ್ಲಾ ಸುಗಮವಾಗಿತ್ತು.
ಅಣ್ಣ ಕೆಲಸ ಮಾಡುತ್ತಿದ್ದ ಊರಿನ ದೊಡ್ಡಗೌಡ್ರು ಮೈಸೂರಿನಲ್ಲಿ ಯಾವುದೋ ಒಂದು ಬೀದಿಯಲ್ಲಿ ಮನೆ ಮಾಡಿಕೊಂಡಿದ್ದರು. ಅದು ನೆನಪಿಗೆ ಬಂದು, ಸೀದಾ ಬಟ್ಟೆ ಬ್ಯಾಗುಗಳನ್ನು ಎತ್ತಿಕೊಂಡು ಅವರ ಮನೆ ಕಡೆ ಪ್ರಯಾಣ ಬೆಳೆಸಿದೆವು. ಅಲ್ಲಿ ಅವರ ಮನೆಗೆ ಹೋಗಿ ನೋಡಿದರೆ ಅವರ ಮನೆಯ ಸಾಮಾನುಗಳನ್ನು ಎಲ್ಲಾ ಪ್ಯಾಕ್ ಮಾಡಿ ಆಗಿತ್ತು. ಅವರಿಗೆ ಬೇರೆ ಊರಿಗೆ ವರ್ಗ ಆಗಿರುವುದರಿಂದ, ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದಾರೆ. ಅಂದು ಅವರು ಆ ಮನೆಯಲ್ಲಿ ಇರುವ ಕೊನೆಯ ದಿನ. ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎಂಬಂತೆ ಸದ್ಯಕ್ಕೆ ಅಂದಿನ ದಿನ ಅವರ ಮನೆಯಲ್ಲಿ ಕಳೆಯುವುದು ಎಂದು ನಿಶ್ಚಯಿಸಿದೆ. ಅಣ್ಣ ಅವರ ಕೆಲಸದ ಊರಿಗೆ ಹೋದರು.
ಊರಿನಿಂದ ಬೆಳಿಗ್ಗೆ ಪ್ರಯಾಣಮಾಡಿ ಕಾಲೇಜಿನಲ್ಲಿ ಓಡಾಟ, ಹಾಸ್ಟೆಲ್ಲಿನ ಜಂಜಾಟ, ಎಲ್ಲಾ ಆಗುವಾಗ ಅಂದು ರಾತ್ರಿ ನನಗೆ ಬಂದದ್ದು ತಡೆಯಲಾರದ ತಲೆನೋವು. ಪರಿಚಯ ಇಲ್ಲದ ಜನ, ಗೊತ್ತಿಲ್ಲದ ಮನೆ. ಇತ್ತ ತಲೆನೋವು ಜೋರಾಗಿ ವಾಂತಿ ಬರುತ್ತಿದೆ. ಯಾರಲ್ಲಿ ಹೇಳಿಕೊಳ್ಳುವುದು ನನ್ನ ಪರಿಸ್ಥಿತಿ. ಬಾತ್ರೂಮಿನಲ್ಲಿ ಹೋಗಿ ವಾಂತಿ ಮಾಡುತ್ತಿದ್ದ ನನ್ನನ್ನು ಕಂಡ ದೊಡ್ಡಗೌಡ್ರು ಕೂಡಲೇ ಬಂದು ನನ್ನ ತಲೆಯನ್ನು ಹಿಡಿದುಕೊಂಡರು. ಸ್ವಲ್ಪ ಹೊತ್ತಿಗೆ ವಾಂತಿ ಆಗಿ ತಲೆನೋವು ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಪಾಪದ ಜನ ಅವರು. ನನ್ನ ಕಷ್ಟ ನೋಡಲಾರದೆ ಮನೆಯಲ್ಲಿ ಯಾವುದೋ ಒಂದು ಮೆಣಸಿನ ಸಾರು ಮಾಡಿ ನನಗೆ ಕುಡಿಸಿದರು. ಸ್ಪಲ್ಪ ಹೊತ್ತಿನಲ್ಲಿ ತಲೆನೋವು ಕಡಿಮೆ ಆಗಿ ನಿದ್ರೆ ಚೆನ್ನಾಗಿ ಬಂತು.
ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗುವ ಸಮಯ. ಅವರೇನೋ ತಿನ್ನಲು ಕೊಟ್ಟದನ್ನು ತಿಂದು ಕಾಲೇಜಿಗೆ ಓಡಿದೆ. ಮಧ್ಯಾಹ್ನ ನಾನು ಬರುವಾಗ ಅವರು ಮನೆಗೆ ಬೀಗ ಹಾಕಿ, ನನ್ನನ್ನು ಕಾಯುತ್ತಿದ್ದಾರೆ. ಇಲ್ಲೂ ಮತ್ತೊಂದು ಏಟು. ಅಣ್ಣನ ಪರಿಚಯವಿದ್ದ ಏಕೈಕ ವ್ಯಕ್ತಿ ಊರು ಬಿಡುತ್ತಿದ್ದಾರೆ. ಆದರೂ ಅವರು ನನ್ನ ಕೈ ಬಿಡಲಿಲ್ಲ. ಅವರ ಮನೆಯಿಂದ ನಾಲ್ಕನೇ ಮನೆಯಲ್ಲಿ ಅವರ ಮಿತ್ರರೊಬ್ಬರ ಮನೆ ಇತ್ತು. ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಿ ‘ಇಂದು ರಾತ್ರಿ ಏನಾದರೂ ಮಾಡಿ ಈ ಹುಡುಗನನ್ನು ಇಲ್ಲಿ ಇರಿಸಿಕೊಳ್ಳಿ’ ಎಂದು ಅವರನ್ನು ಕೇಳಿಕೊಂಡರು. ನನಗೆ ಏನೂ ಪರಿಚಯವಿಲ್ಲದ ಒಂದು ಮನೆಯಲ್ಲಿ ರಾತ್ರಿ ಕಳೆಯ ಬೇಕಾಯ್ತು.
ರಾತ್ರಿಯೆಲ್ಲಾ ಏನೇನೋ ಕನಸು. ನಾನು ಯಾವುದೋ ರೈಲಿನಲ್ಲಿ ಎಲ್ಲಿಯೋ ಹೋಗುವ ಹಾಗೆ. ಹೋಗುವ ರೈಲು ಒಂದು ನದಿಯ ಒಳಗಡೆಯಿಂದ ಹೋಗಿ, ಬೋಗಿಯೆಲ್ಲ ನೀರು ತುಂಬಿ ನನ್ನ ಉಸಿರು ಕಟ್ಟಿದಂತೆ.. ಹಾಗೆ ಇನ್ನೆನೆನೋ ಕೆಟ್ಟ ಕನಸುಗಳು ಬಿದ್ದು ರಾತ್ರಿ ಇಡೀ ನಿದ್ರೆಯಿಲ್ಲದೇ ಕಳೆದೆ.
ಬೆಳಿಗ್ಗೆ ಎದ್ದವನೇ ಆ ಮನೆಯವರಿಗೆ ಧನ್ಯವಾದಗಳನ್ನು ಹೇಳಿ ನನ್ನ ಬ್ಯಾಗನ್ನು ತೆಗೆದುಕೊಂಡು ಕಾಲೇಜಿಗೆ ಹೋದೆ. ಕಾಲೇಜಿನಲ್ಲಿ ಯಾವುದೋ ಒಂದು ಮೂಲೆಯಲ್ಲಿ ಬ್ಯಾಗನ್ನು ಇಟ್ಟು ಮಧ್ಯಾಹ್ನದವರೆಗೆ ಕ್ಲಾಸಿನಲ್ಲಿ ಕುಳಿತು ಪಾಠ ಕೇಳಿದೆ. ಆಗ ಕ್ಲಾಸಿನಲ್ಲಿ ಪರಿಚಯವಾದದ್ದು ಅನಂತಕೃಷ್ಣ. ಒಂದೇ ಬೆಂಚಿನಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ. ಪರಿಚಯವಾದ ನಂತರ ಅದೂ ಇದೂ ಮಾತಿನಲ್ಲಿ ಅವನ ವಿವರ ಸ್ವಲ್ಪ ಗೊತ್ತಾಯ್ತು. ಅವನೂ ಹಾಸ್ಟೆಲಿನಲ್ಲಿ ಜಾಗ ಸಿಕ್ಕದೇ ಮೊಡರ್ನ್ ಹಿಂದೂ ಹೋಟೆಲಿನಲ್ಲಿ ಒಂದು ರೂಮು ಮಾಡಿಕೊಂಡ ವಿಷಯ ಹೇಳಿದ. ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆ ಎಂಬಂತೆ ಇಲ್ಲಿ ನನಗೆ ಏನೋ ಒಂದು ಆಶಾಕಿರಣ ಕಂಡುಬಂತು. ಲಜ್ಜೆ ಬಿಟ್ಟು ಅವನನ್ನ ಕೇಳಿದೆ, ಒಂದು ಎರಡು ದಿನಕ್ಕಾದರೂ ನಿನ್ನ ಜೊತೆ ಇರಲು ನನಗೆ ಸಹಾಯ ಮಾಡುವಿಯಾ ಎಂದು. ಅದಕ್ಕೆ ಒಪ್ಪಿದ ಅವನು ಎರಡು ದಿನ ಅವನ ರೂಮಿನಲ್ಲಿ ನನ್ನನ್ನು ಇರಲು ಸಹಾಯ ಮಾಡಿದ.
ಈ ಮಧ್ಯೆ ದಿನವೂ ಬೆಳಿಗ್ಗೆ, ಸಂಜೆ ಹಾಸ್ಟೆಲಿಗೆ ನನ್ನ ಸವಾರಿ ಹೋಗಿ ಅಲ್ಲಿದ್ದ ಮ್ಯಾನೇಜರ್ ಬಳಿ ನನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದೇನೆ. ಒಂದು ದಿನ ಹೋದಾಗ ‘ನಿನ್ನ ಕಷ್ಟ ನೋಡಲಾಗುತ್ತಿಲ್ಲ, ಒಂದು ರೂಮಿನಲ್ಲಿ ಬೆಡ್ ಖಾಲಿಯಾಗಿದೆ. ಅದನ್ನು ನಿನಗೆ ಕೊಡುತ್ತೇನೆ. ಆದರೆ ಆ ರೂಮ್ ಮುಖ್ಯ ದ್ವಾರದ ಪಕ್ಕದಲ್ಲಿ ಇದ್ದು, ಎಲ್ಲಾ ವಿದ್ಯಾರ್ಥಿಗಳು ಅಲ್ಲಿಯೇ ಓಡಾಡುತ್ತಿರುತ್ತಾರೆ. ತುಂಬಾ ಶಬ್ದ’ ಎಂದರು. ನೀರಿನಲ್ಲಿ ಮುಳುಗಿದವನಿಗೆ ಚಳಿ ಏನು, ಬಿಸಿ ಏನೂ.. ಎಂದು ಅದಕ್ಕೆ ಕೂಡಲೇ ಒಪ್ಪಿ, ಹೋಗಿ ಬ್ಯಾಗ್ ಹಿಡಿದು ಬಂದೇಬಿಟ್ಟೆ. ರೂಂಮೇಟ್ ಕಾಮತ್ ತುಂಬಾ ಸಾಧು ವ್ಯಕ್ತಿ. ನನಗೆ ಬೇಕಾದ ಎಲ್ಲಾ ಸಹಾಯ ಮಾಡಿದರು.
ಎಲ್ಲಾ ಸರಿಯಾದಮೇಲೆ ಶನಿವಾರ ಒಮ್ಮೆ ಊರಿಗೆ ಹೋಗಿ ಬರುವ ಎಂಬ ಮನಸಾಯ್ತು. ಮನೆಯವರಿಗೆ ನಾನು ಬರುವುದು ಗೊತ್ತಿಲ್ಲ, ನನ್ನ ಕಷ್ಟದ ಬಗ್ಗೆ ಕಿಂಚಿತ್ತೂ ಅರಿವಿರಲಿಲ್ಲ. ಮನೆಯ ಮುಂದಿನ ವರಾಂಡದಲ್ಲಿ ಕುಳಿತಿದ್ದ ನನ್ನ ಅಪ್ಪ, ನನ್ನನ್ನು ನೋಡಿ, ಅಚ್ಚರಿಯಿಂದ ‘ಏನೋ ಯಾವಾಗ ಬಂದೆ, ಹೇಗಿದ್ದೀಯಾ’ ಎಂದರು.
ವಾರದಿಂದ ತಡೆ ಹಿಡಿದಿದ್ದ ಎಲ್ಲಾ ಸಿಟ್ಟು ಒಮ್ಮೆಲೇ ಹೊರ ಬಂತು. ಮನೆಯಲ್ಲಿ ಇದ್ದವರು ಎಲ್ಲರೂ ಓಡಿ ಬರುವಷ್ಟು ಜೋರಾಗಿ ಕಿರುಚಿದೆ.
ನೀವು- ನಿಮ್ಮ ಭರಣಿಯನ್ನು ನಂಬಿ, ನಾನು, ಒಣಗಿ ಆಗಿ ಹೋಗಿದ್ದೇನೆ ಬೆರಣಿ.! -ಎನ್ನುತ್ತಾ ಅಳುತ್ತಿದ್ದೆ.
ಅಲ್ಲಿಗೆ ನನ್ನ ಕಾಲೇಜ್ ಸೇರುವಿಕೆಯ ಮೊದಲ ಅಧ್ಯಾಯ ಮುಗಿಯಿತು!
ಡಾ.ಕೆ.ಬಿ. ಸೂರ್ಯಕುಮಾರ್ ಅವರು ಹಿರಿಯ ವಿಧಿವಿಜ್ಞಾನ ತಜ್ಞರು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷ ವಿಧಿವಿಜ್ಞಾನ ಪರಿಣತರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆಯಲ್ಲಿಯೂ ವಿಧಿವಿಜ್ಞಾನ ತಜ್ಞರಾಗಿ ತಮ್ಮ ತಜ್ಞ ಸಲಹೆ ನೀಡಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಭಾಗದ ಪ್ರೊಫೆಸರ್. ‘ವೈದ್ಯ ಕಂಡ ವಿಸ್ಮಯ’ ಅವರು ಬರೆದ ಕೃತಿ.
Good narrative.
ಭರಣಿ ಕ್ರತಿಕದ ವನ್ನು ತಪ್ಪಿಸಿದ ಪರಿಣಾಮ ಒಬ್ಬರಲ್ಲ ಒಬ್ಬರು ನಿಮಗೆ ಸಿಕ್ಕಿದರು.ಒಂದು ವೇಳೆ ಆದಿವಸ ಹೋದದ್ದೆ ಆದರೆ ಇನ್ನೇನೋ ಸಂಕಷ್ಟ ಇರುತ್ತಿತ್ತೋ ಏನೋ.ಒಟ್ಟಿನಲ್ಲಿ ಅಪ್ಪನ ಮಾತು ನಿಮಗೆ ಖುಷಿ ಆಗದೇ ಇದ್ದರೂ ಅಪ್ಪನಿಗೆ ಅಂತು ಖುಷಿ ಆಗಿದೆ. ನಿಮ್ಮ ಲೇಖನದಲ್ಲಿ ಇದ್ದಂತೆ ಅಲ್ಲಲ್ಲಿ ಹುಲ್ಲು ಕಡ್ಡಿಯ ಸಹಾಯ ಸಿಕ್ಕಿದೆ.ಇರಲಿ ಸರ್ ಜೀವನವೇ ಹಾಗೆ. ಒಳ್ಳೆಯ ಲೇಖನ. ಧನ್ಯವಾದಗಳು ಸರ್.
Shaping up well curiosity holds well in the flow of narration making me to wait for the next episode good wishes
ಆತ್ಮ ಕಥನ ಬರೆಯಲು ಶುರು ಮಾಡಿಧ್ದೀರ. Narration ಚೆನ್ನಾಗಿದೆ. ನಿಮ್ಮ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದು ಓದುಗರಿಗೆ ಅನುಭವಕ್ಕೆ ಬರುವಂತೆ ವರ್ಣಿಸುವ ರೀತಿ ಚೆನ್ನಾಗಿದೆ. Congrats Surya!
ಸೂಪರ್ ಸರ್,ಪಾಪ ನಿಮ್ಮ ಪಾಡು.ಪರ ಊರು ಪರಮ ಕಷ್ಟ ಅಂತಾರಲ್ಲ ಅದರ ಸತ್ಯ ದರ್ಶನ ಆಯ್ತು ಅಲಾ..
Indina piligege kasta gotadrene olleyadu…….
In depth analysis of your past…. Shows your talent to write the feelings on paper in a heart touching way.. congrats sir
ಬರಹ ತುಂಬಾ ಚೆನ್ನಾಗಿದೆ.ಕಷ್ಟ ಪಟ್ಟಿದ್ದು ಓದಿ ದುಖಃ ಆಯಿತು .
I re member the dayI travelled to Mysore to join MMC was Bharani.We were many from Mangaluru travelling with the same purpose in the bus.
Super Doctor Mama !! Enjoyed reading it..??❤️
ತುಂಬಾ ಚನ್ನಾಗಿದೆ ಸರ್
Nice thoughts big college days
ನೀವು ಬರೆದ ನೆನಪುಗಳ ಮೆರವಣಿಗೆಯ ಈ ಭರಣಿ ಕ್ರತಿಕೆಯ
ವಿಸ್ಮಯ ತುಂಬಾ ಕುತೊಹಲಕಾರಿಯಾಗಿ.
ಅಭಿನಂದನೆಗಳು
When you become famous, being famous becomes your profession.and now THIS IS YOUR PROFESSION..
Interesting, original and nostalgic.
Very interesting narration Docto
ನಿಮ್ಮ ನಿರೂಪಣಾ ಶೈಲಿ ಅತ್ಯದ್ಭುತವಾಗಿದೆ. ಓದುಗರಿಗೆ ಬೇಸರವಾಗುವ ಮಾತೇ ಇಲ್ಲ, ಅದಕ್ಕೆ ವಿರುದ್ಧವಾಗಿ ಓದುಗರನ್ನೂ ನಿಮ್ಮ ನೆನಪಿನ ಆಳದೊಳಕ್ಕೆ ಕರೆದೊಯ್ಯುತ್ತೀರಿ. ನಿಮ್ಮ ನೆನಪಿನ ಭಂಡಾರ ತುಂಬಿದೆ , ನೀವು ಹಂಚುವ ಅಮೂಲ್ಯ ರತ್ನ ಗಳಿಗಾಗಿ ನಾವು ಸದಾ ಕಾಯುತ್ತಿರುತ್ತೇವೆ .
Interesting reading. May be because you avoided bharani and kritika you got connected to people got shelter and finally seat in the hostel.
We too had the same experience. Before going to abudhabi because of bharani and kritika we had to leave the home two days early stay in the hotel and then fly.
ಆತ್ಮ ಕಥನದಲ್ಲಿ ಭರಣಿ ಕೃತಿಕದ ಪ್ರಭಾವದಿಂದ ದೊಡ್ಡಗೌಡ್ರ ಆಸರೆಯ ಅನುಭವ ಕುಶಿ ಏನಿಸಿತು,ಅವರು ಅಲ್ಲೇ ಇದ್ದಿದ್ದರೆ ಆಸ್ಟು ಕಷ್ಟ ಅನಿಸುತ್ತಿರಲ್ಲಿಲ್ಲ, ಅವರನ್ನು ಸ್ಮರಿಸಿದ್ದು ಕುಶಿ ಏನಿಸಿತು
ನಿಮ್ಮ ಅನುಭವಗಳನ್ನು ವರ್ಣಿಸಿರುವ ಶೈಲಿ ಹಾಗೂ ನೆನಪುಗಳ ಮೆರವಣಿಗೆ ಬಹಳ ಚೆನ್ನಾಗಿದೆ ಭಾವೋ ಜಿ, ಭರಣಿ ಕೃತಿಕಾ ಬಗ್ಗೆ ಅಮ್ಮನಿಂದ ನಮಗೂ ಅನುಭವವಿದೆ. ಅಮ್ಮ ಹಾಗೂ ಅಮ್ಮನ ತವರು ಮನೆ ನೆನಪು ನಿಮ್ಮಿಂದಾಗಿ ಮರುಕಳಿಸಿತು, ಧನ್ಯವಾದಗಳು.
ಪ್ರತಿ ಸಾಧಕರ ಬದುಕಿನ ಹಿಂದೆ ಬಹಳಷ್ಟು ಕಷ್ಟಗಳಿರುತ್ತವೆ ಎಂಬುದು ನಿಮ್ಮ ಬರಹದಲ್ಲೂ ಅರಿವಾಯ್ತು. ಈಗ ಹಾಸ್ಟೆಲ್ ರೂಮಲ್ಲಿ ಎಸಿ ಇದೆಯಾ, ಇಂಟರ್ನೆಟ್ ಇದೆಯಾ ಅನ್ನೋ ಕಾಲಕ್ಕೆ ಬಂದಿದ್ದೇವೆ.
ಅಬ್ಬಾ ನಿಮ್ಮ ಕಷ್ಟದ ಸರಮಾಲೆಯನ್ನು ಓದುತ್ತಾ ಸಮಯ ಹೋದದ್ದೆ ಗೊತಾಗಲಿಲ್ಲ . ನನ್ನದು ಕೃತಿಕಾ ನಕ್ಷತ್ರ ಅದ್ರಿಂದ ಕುತೂಹಲ ಜಾಸ್ತಿ ಇತ್ತು .Because of delay in going to college, you got new friends and unique experience. Interesting article
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಅಭಿನಂದನೆಗಳು…
ಅತ್ಯುತ್ತಮ ಬರವಣಿಗೆ ಸೂರ್ಯ ಕುಮಾರ್, ನಿಮ್ಮ ನಿರೂಪಣೆಯ ಸಾಮರ್ಥ್ಯ ಶ್ಲಾಘನೀಯ??
Beautiful illustrations too??
I also had received the admit card very late and had this dilemma about Bharani/Kritika ?. Since there was a risk of loosing the medical seat, my brother and I decided to join (भगवान का नाम लेकर) on Bharani day.
Great Story. For most of us now, it’s difficult to understand what it’s like for parents to be unsure of their children’s whereabouts for more than a week.
Great story. For most of us today, it’s difficult to imagine what it’s like for parents to be unsure of their children’s whereabouts for more than a week.
Very nice. Good going. All the very best uncle
Very good narration
Well written doctor. I have put myself in your position and understanding the situations you have faced.
Many challenges you have faced made you strong person you are today.
Keep Rocking ?
Very well written. It took me back to my student days and made me remember many incidents in my life which were similar in nature. The article really stirred my emotions.
ಮೂಢ ನಂಬಿಕೆ ಆಚರಣೆ ಮಾಡುವವರಿಗೆ ಒಂದು ಉತ್ತಮ ಉದಾಹರಣೆ.
ಲೇಖನ ಅತ್ಯುತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು.
ಕಾಲೇಜು ಜೀವನದ ಆರಂಭದ ದಿನಗಳ ಬಗ್ಗೆ ನೆನಪುಗಳು ಸುಂದರವಾಗಿದೆ.ಓದುತ್ತಿರುವಂತೆ ಕಾಲೇಜ್ ಹಾಗೂ ಹಾಸ್ಟೆಲ್ ಜೀವನದ ನೆನಪುಗಳು ಮರುಕಳಿಸಿದವು.
I had written the appreciation comment but I did not press the post button ..I was the first one to write.It is alright but one thing is certain you have written very well. The very first experience of joining MMC. ಭರಣಿ ಕೃತ್ತಿಕಾ ದಿಂದ mbbs md ಮು.ಗಿಸಿ ಈಗಾ ವಿಧಿವಿಜ್ಞಾನ ಪರಿಣಿತಿ ಮತ್ತು ನಿಸ್ವಾರ್ಥ ಸೇವೆಯಿಂದ ಜನಗಳ ಮನಸ್ಸು ಗೆದ್ದು ಸಂತೋಷವಾಗಿ ಜೀವನ ನಡೆಸುತ್ತಿರುವುದು ಬಹಳ ಸಂತೋಷ ಕನ್ನಡ ಸಾಹಿತ್ಯ ದಲ್ಲಿ ಮುಂದು ವರೆ ಯುತ್ತಿರುವುದು ಹೆಮ್ಮೆಯ ವಿಷಯ JAI SURYA
Very well narrated Dr.mama??? enjoyed reading ?
Fantastic articulation of such a profound memory.
Well narrated Dr.mama??? It was interesting to read?
Well narrated Dr.mama???it was interesting to read??
ನಿಮ್ಮ ನೆನಪಿನ ಶಕ್ತಿ ಅಗಾಧ. ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ. ಆಗಿನ ಆತಂಕ ಇಂದು ನಿಮ್ಮ ಸಾಹಿತ್ಯದಲ್ಲಿ ಹಾಸ್ಯಚಟಾಕಿ ರೂಪದಲ್ಲಿ ಹೊರಬಂದಿದೆ. ನಿಮ್ಮ ಬರಹಗಳು ಮುಂದುವರೆಯಲಿ ಎಂದು ಆಶಿಸುತ್ತೇನೆ. ನೆನಪುಗಳ ಮಾತು ಮಧುರವಾದ ಅನುಭವ ನೀಡಲಿ ಎಂದು ಆಶಿಸುತ್ತೇನೆ. ನಿಮ್ಮ ಸಾಹಿತ್ಯ ಯಾತ್ರೆ ಮುಂದುವರೆಯಲಿ. ಧನ್ಯವಾದಗಳು.
Very diificult to imagine these kind of situations and helping nature of people in the modern era. Nicely written sir?
Nice Mava, enjoyed reading it.
Very beautiful narration. Hope your father was happy later, somebody must have advised him the astrology aspect, and being protective, he prevented….
Keep writing, all the best
Nice story… interesting., waiting for next episode doctor ?
ವಾಸ್ತವ ಸಂಗತಿ ಮನ ಮುಟ್ಟುವಂತೆ ಇದೆ.
ವಾಸ್ತವ ಸಂಗತಿ ಮನ ಮುಟ್ಟುವಂತೆ ಇದೆ.
Enjoyed reading it Dr.mama??well narrated story??
ನಿಮ್ಮ ಅನುಭವಗಳನ್ನು ಬರೆಯುವ ರೀತಿ ನನಗೆ ತುಂಬಾ ಇಷ್ಟವಾಯಿತು. ನೀವು ಪಟ್ಟ ಕಷ್ಟಗಳು ಅಬ್ಬ ಭಯ ಆಗುತ್ತೆ. ಚಂದದ ಬರವಣಿಗೆ Uncle.
ಹಾಸ್ಟೆಲ್ ದಿನಗಳನ್ನು ಮೆಲುಕು ಹಾಕುವುದು ಎಷ್ಟೊಂದು ಖುಷಿಯ ಸಂಗತಿ.ಲೇಖನ ತುಂಬ ಆಪ್ತವಾಗಿ ಓದಿಸಿಕೊಂಡು ಹೋಗುತ್ತದೆ. ಇನ್ನಷ್ಟು ಬರಲಿ ಸರ್.
ತುಂಬಾ ಧನ್ಯವಾದಗಳು
Excellent narration of events! Can’t wait to read the future postings!
Nostalgic interesting past difficulties your dedication to come forward gives more interest in reading
ಭರಣಿ, ಕೃತಿಕ ಕೆಲವು ಹಿರಿಯರ ನಂಬಿಕೆಗಳು ಏನೂ ಮಾಡುವಂತಿಲ್ಲ! ಇಂದೂ ಅಂತಹ ನಂಬಿಕೆಗಳು ಹಲವರಲ್ಲಿ ಇದೆ, ಡಾಕ್ಟರರ ಬಾಲ್ಯದ ಬವಣೆಗಳು ಅದನ್ಮು ಎದುರಿಸಿದ ಪರಿ ಎಲ್ಲವನ್ನು ಓದುಗರ ಮನಂಬುಗುವಂತೆ ವರ್ಣಿಸಿರುವಿರಿ, ನಿಮ್ಮ ಮುಂದಿನ ಮೆರವಣಿಗೆಯನ್ನು ಕುತೂಹಲದಿಂದ ನಿರೀಕ್ಷಿಸುವಂತೆ ಬರವಣಿಗೆ ಇದೆ. ಕಾಯುತ್ತಿದ್ದೇನೆ!
ಅತ್ಯಂತ ಸರಳವಾದ ನಿರೂಪಣೆ.ಮನಸ್ಸಿಗೆ ಆಪ್ತವಾಗುವಂತಿದೆ. ಉತ್ತಮ ಬರಹ ಸರ್, ಮುಂದುವರೆಯಲಿ ತಮ್ಮ ಅನುಭವಗಳ ಕಥಾನಕ. ಶುಭಹಾರೈಕೆಗಳು.
The challenges you faced during your college days, your determination in overcoming them and your perseverance to achieve the goals will be an inspiration to all.
Your way of putting across your life experiences is appealing.
During your college days the Challenging situations you underwent, your determination to achieve your goal and your perseverance is exemplary.
You have really unfurled the harsh truths of student Life in a jovial way. Amazing to see that your experiences of past has been depicted beautifully and it kept me on tenter hooks till the end. Many of us will go to oblivion after retirement…but you are active as always and proved that one must have been retired but not tired….Keep writing
This type of experience makes one mentally strong,really good article, thanks for sending this to me
ನನಗೆ ಭರಣಿ ಕೃತ್ತಿಕೆ ಬಗ್ಗೆ ಗೊತ್ತಿರಲಿಲ್ಲ. ನಾನು ಮಂಗಳಗಂಗೋತ್ರಿಗೆ ಹೋದಾಗ ಹಿರಿಯ ಸಹೋದ್ಯೋಗಿ ಗುಂಡ್ಮಿ ಚಂದ್ರಸೇಖರ ಐತಾಳರಿಂದ ದರ ಬಗ್ಗೆ ಮೊದಲ ಬಾರಿ ಕೇಳಿದೆ. ಮಂಗಳಗಂಗೋತ್ರಿಯ ಕಷ್ಟಗಳಿಗೆಲ್ಲ ಅದನ್ನು ಆರಂಭಿಸಿದ ದಿನದಂದು ಭರಣಿ ಕೇತ್ತಿಕೆ ನಕ್ಷತ್ರಗಳಿದ್ದುದೇ ಕಾರಣ ಎಂದು ಅವರು ದೂರುತ್ತಿದ್ದರು. ಮೈಸೂರಿನ ಕಡೆ ಆ ನಕ್ಷತ್ರಗಳಿಗೆಅಷ್ಟು ಪ್ರಾಶಸ್ತ್ಯ ಕೇಳಿರಲಿಲ್ಲ. ಕೆ.ಎಲ್. ಶ್ರೀಮಾಲಿ ಅವರು ಉಪಕುಲಪತಿಗಳಾಗಿದ್ದ ಕಾಲದಲ್ಲಿ ಮಂಗಳಗಂಗೋತ್ರಿಯ ಸ್ಥಾಪನೆಯಾಯಿತು. ಆಗ ಆ ದಿನ ಬೇಡ. ಅಂದು ನಕ್ಷತ್ರ ಸರಿ ಇಲ್ಲ ದುರದೃಷ್ಟದ ಜೋಡು ನಕ್ಷತ್ರಗಳ ದಿನ ಅಂದು ಎಂದು ಐತಾಳರು ಹೇಳುತ್ತಿದ್ದರಂತೆ. ಅವರ ಮಾತನ್ನು ಯಾರೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ ಎಂದು ಅವರು ಕೊನೆಯವರೆಗೂ ದೂರುತ್ತಿದ್ದರು.
ಐತಾಳರಿಂದಾಗಿ ನನಗೆ ಆ ಎರಡು ನಕ್ಷತ್ರಗಳು ಮರೆಯಲಾರದವಾಗಿವೆ. ಅನಂತರವೂ ಯಾರು ಆ ನಕ್ಷತ್ರಗಳನ್ನು ದೂರಿದ್ದನ್ನು ಕಂಡ ನೆನಫಿಲ್ಲ.
ನನ್ನ ಪ್ರತಿಕ್ರಿಯೆಯೇ ಕಣ್ನರೆಯಾಗಿದೆ. ಅವುಗಳ ಮೈವಾಡ ಇರಬಹುದೇ? ಇವತ್ತು ಹಸ್ತಾ ನಕ್ಷತ್ರ!
ಚೆನ್ನಾಗಿದೆ