ಇಲ್ಲಿ ಶಿಕ್ಷಣದ ಹಸಿವು ಎದ್ದು ಕಾಣುವಂತಹ ದೃಶ್ಯ, ಯಾವ ಗಂಡಸಿನ ಆಧಾರವಿಲ್ಲದೆ ತನ್ನ ಮಗನ ಭವಿಷ್ಯಕ್ಕಾಗಿ ಏನೂ ಅರಿಯದ ಹೆಂಗಸು ಕಚೇರಿ, ಶಾಲೆ ಇವುಗಳ ಹೋರಾಟದಲ್ಲಿ ಗೆಲ್ಲುವ ಸನ್ನಿವೇಶ ನಿಜಕ್ಕೂ ಅದ್ಭುತ “ಅವ್ವ ನಾನು ಓದಲೂ ಬೇಕು ನಂಗೆ ನೀನು ಬೇಕು” ಎನ್ನುವಂತಹ ಒಂದು ಬರಹ ಓದು ಮತ್ತು ಪ್ರೀತಿ ಎರಡು ಮನುಷ್ಯನ ಬಹುಮುಖ್ಯ ಅಂಗವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ ರಾಮಾಂಜಿಗೆ ಓದಿನಲ್ಲಿ ಅಪಾರ ಆಸಕ್ತಿ. ಹಾಗಾಗಿ ತನ್ನ ಮಗನನ್ನು ಓದಿಸುವ ಉದ್ದೇಶದಿಂದ ರಾಮಾಂಜಿಯ ತಾಯಿ ಶಿಕ್ಷಣವನ್ನು ಕೊಡಿಸುವಂತಹ ದೃಶ್ಯ, ಅಲೆಮಾರಿ ಜೀವನಕ್ಕೂ ಕೂಡ ಶಿಕ್ಷಣ ಅಗತ್ಯ ಎಂಬುದನ್ನು ಸಾಬೀತುಪಡಿಸುತ್ತದೆ.
ಎಸ್. ಗಂಗಾಧರಯ್ಯ ಕಥಾಸಂಕಲನ “ದೇವರ ಕುದುರೆ”ಯ ಕುರಿತು ಸಚಿನ್ ಎ ಜೆ ಬರಹ

“ದೇವರ ಕುದುರೆ” ಎಂಬ ಹೆಸರೇ ಹೇಳುವಂತೆ ಗಂಗಾಧರಯ್ಯ ರವರ ಕಥೆಗಳು ಒಂದು ಹಳ್ಳಿಯ ಅಂತರಂಗದ ಸೊಡಗನ್ನು ಸೂಚಿಸುವಂತದ್ದು. ಅದರಂತೆ ಈ ‘ದೇವರ ಕುದುರೆ’ ಎಂಬ ಶೀರ್ಷಿಕೆ ಅಡಿ ಬರುವ ಎಲ್ಲಾ ಕಥೆಗಳು ತನ್ನದೇ ಆದಂತಹ ಒಂದೊಂದು ಛಾಯೆಯನ್ನು ಹೊತ್ತುಕೊಂಡು ನಿಂತಿದೆ, ಕಥೆಯ ಇದ್ದಕ್ಕೂ ಹಳ್ಳಿಯ ಭಾಷಾ ಸೊಗಡು, ಆಚಾರ-ವಿಚಾರ ಮತ್ತು ಪ್ರಮುಖವಾಗಿ ಪರಿಸರ ಸರಪಳಿಯಲ್ಲಿ ಎಲ್ಲಾ ಕಥೆಗಳು ಮುನ್ನುಗ್ಗುತ್ತವೆ. ಎಲ್ಲ ಕಥೆಗಳನ್ನು ಓದುವಾಗ ಮತ್ತು ಅದನ್ನು ಅರ್ಥೈಸಿಕೊಳ್ಳುವಾಗ ಕುದುರೆ ನಡೆಯುವ ದಾರಿಯಂತೆ ಅನಿಸುತ್ತದೆ, ಹಳ್ಳಿಯ ಸೊಗಡು ಪದಗಳ ಬಳಕೆ ಇವೆಲ್ಲವೂ ಓದುಗರ ಭಾಷಾ ಭಂಡಾರಕ್ಕೆ ಒಂದು ಹೊಸ ಕಲಿಕೆಯಂತೆ ಕಾಣುತ್ತದೆ.

ಎಸ್ ಗಂಗಾಧರಯ್ಯ ರವರ “ದೇವರ ಕುದುರೆ”ಯಲ್ಲಿ ಒಟ್ಟು ಹನ್ನೆರಡು ಕಥೆಗಳನ್ನು ಕಾಣಬಹುದು. ಎಲ್ಲವೂ ಹಳ್ಳಿಯ ಪರಿಸರಕ್ಕೆ ಸಂಬಂಧಿಸಿದ ಕಥೆಗಳಾಗಿರುವುದರಿಂದ ಒಂದಕ್ಕೊಂದು ಹೊಂದಿಕೊಳ್ಳುವ ಕಥೆಯಾಗಿದೆ. ಕಥೆಗಳಲ್ಲಿ ಪರಿಸರ ಎಂಬುವುದು ಹಾಸು ಹೊಕ್ಕಿರುವಂತೆ ಕಾಣುತ್ತದೆ. ಪ್ರತಿ ಹಳ್ಳಿಯಲ್ಲಿ ನಡೆಯುವಂತಹ ಸಂಘರ್ಷ, ವೈಮನಸ್ಸು, ಮೋಸ ಇವೆಲ್ಲವೂ ಇವರ ಕತೆಗಳಲ್ಲಿ ಪ್ರತ್ಯಕ್ಷವಾಗಿ ಕಾಣುತ್ತದೆ.

ಎಸ್ ಗಂಗಾಧರಯ್ಯ “ದೇವರ ಕುದುರೆ” ಕಥೆಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುವಂತಹ ವಿಷಯ ಪರಿಸರ, ಪ್ರಾಣಿ-ಪಕ್ಷಿ, ಶಿಕ್ಷಣ, ಧರ್ಮ, ಪ್ರೀತಿ ಇದೆಲ್ಲದರ ಜೊತೆಗೆ ಮಾನವನ ಸಂಘರ್ಷ, ಇದು ಹೆಚ್ಚು ಕಂಡುಬರುವಂತಹ ದೃಶ್ಯ ಪ್ರತಿಯೊಂದು ಕಥೆಯು ತನ್ನದೇ ಆದಂತಹ ಆಶ್ರಯನಿಟ್ಟುಕೊಂಡು ಹೋಗಿದೆ. ಹೆಚ್ಚಾಗಿ ಪರಿಸರದೊಂದಿಗೆ, ಪ್ರಾಣಿಯೊಂದಿಗೆ ಮಾನವನ ಸಂಬಂಧವನ್ನು ತಿಳಿಸುತ್ತಾ ಹೋಗುವಂತಹ ಕಥೆಗಳು ಮತ್ತು ಅದರೊಂದಿಗೆ ‘ಶಿಕ್ಷಣ’ ಎಂಬುದು ಪ್ರಸ್ತುತವಾಗಿ ಎಷ್ಟು ಅಗತ್ಯ ಎಂಬುವುದನ್ನು ತಿಳಿಸುವಂತಹ ಕಾರ್ಯವನ್ನು ಕೂಡ ನಾವು ಕಾಣಬಹುದು. ನನ್ನೊಳಗೆ ಅಚ್ಚೊತ್ತಿರುವ ಕಥೆಗಳಲ್ಲಿ ‘ಪದುಮದೊಳಗೆ ಬಿಂದು ಸಿಲುಕಿ’ ಕಥೆಯು ಒಂದು ರಾಮಾಂಜಿ ಮತ್ತು ವೆಂಕಟಗಿರಿ ಎರಡು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಇಲ್ಲಿ ಬಂದು ಹೋಗುವ ತಾಯಿಯ ಪ್ರೀತಿ ಮತ್ತು ಕನಸು ಎರಡು ಓದುಗರ ಮನಕಲಕುವಂತೆ ಮಾಡುವಂತಹ ಸನ್ನಿವೇಶಗಳು. ಇಲ್ಲಿ ಶಿಕ್ಷಣದ ಹಸಿವು ಎದ್ದು ಕಾಣುವಂತಹ ದೃಶ್ಯ, ಯಾವ ಗಂಡಸಿನ ಆಧಾರವಿಲ್ಲದೆ ತನ್ನ ಮಗನ ಭವಿಷ್ಯಕ್ಕಾಗಿ ಏನೂ ಅರಿಯದ ಹೆಂಗಸು ಕಚೇರಿ, ಶಾಲೆ ಇವುಗಳ ಹೋರಾಟದಲ್ಲಿ ಗೆಲ್ಲುವ ಸನ್ನಿವೇಶ ನಿಜಕ್ಕೂ ಅದ್ಭುತ “ಅವ್ವ ನಾನು ಓದಲೂ ಬೇಕು ನಂಗೆ ನೀನು ಬೇಕು” ಎನ್ನುವಂತಹ ಒಂದು ಬರಹ ಓದು ಮತ್ತು ಪ್ರೀತಿ ಎರಡು ಮನುಷ್ಯನ ಬಹುಮುಖ್ಯ ಅಂಗವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ ರಾಮಾಂಜಿಗೆ ಓದಿನಲ್ಲಿ ಅಪಾರ ಆಸಕ್ತಿ. ಹಾಗಾಗಿ ತನ್ನ ಮಗನನ್ನು ಓದಿಸುವ ಉದ್ದೇಶದಿಂದ ರಾಮಾಂಜಿಯ ತಾಯಿ ಶಿಕ್ಷಣವನ್ನು ಕೊಡಿಸುವಂತಹ ದೃಶ್ಯ, ಅಲೆಮಾರಿ ಜೀವನಕ್ಕೂ ಕೂಡ ಶಿಕ್ಷಣ ಅಗತ್ಯ ಎಂಬುದನ್ನು ಸಾಬೀತುಪಡಿಸುತ್ತದೆ.

ಇಲ್ಲಿ ಬರುವಂತಹ ಅನೇಕ ವಿಷಯಗಳು ನಮ್ಮ ಸುತ್ತಮುತ್ತಲಿ ನಡೆಯುವಂತಹ ಸಾಮಾಜಿಕ ಸ್ಥಿತಿಯಾಗಿದ್ದು ಇಲ್ಲಿ ಬರುವಂತಹ ಪಾತ್ರಗಳು ಕೂಡ ಕೆಲವು ಕಡೆ ಮನುಷ್ಯನಲ್ಲಿ ಇರುವಂತಹ ಸಹಜ ಗುಣಗಳನ್ನು ಹೇಳುವ ಬಗೆ, ಮತ್ತು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಂಗ್ ಜನರೆಷನ್ ಪರಿಸರದ ಸಂರಕ್ಷಣೆಗೆ ತೊಡಗದೆ, ಹಿರಿಯ ವ್ಯಕ್ತಿಗಳಿಗೆ ಪರಿಸರದ ಸಂರಕ್ಷಣೆಗೆ ಒಳಗೊಳ್ಳುತ್ತಿದ್ದಾರೆ ಇದು ಸಮಾಜದ ಧಾರುಣತೆಯನ್ನು ತೋರಿಸುತ್ತದೆ. ಇಲ್ಲಿ ಪರಿಸರ ಪ್ರೀತಿಯೊಂದಿಗೆ ಪ್ರಾಣಿಗಳ ಒಡನಾಟ ಹೆಚ್ಚಾಗಿ ಕಂಡುಬರುತ್ತದೆ. ಜೆಸಿಬಿ ಗುಡ್ಡದ ಮೇಲೆ ಹತ್ತಿ ಅಗಿಯುತ್ತಿರುವ ದೃಶ್ಯ ಗುಡ್ಡದ ರುಂಡವನ್ನು ಕಡಿದು ರಕುತ ಸೋರುವ ಹಾಗೆ ಕಾಣುತ್ತದೆ. ಇದೊಂದು ವಾಕ್ಯ ಸಾಕು ಅಲ್ಲಿನ ಪರಿಸ್ಥಿತಿಯನ್ನು ಮನಗಾನಲು, ಇಲ್ಲಿ ಮತ್ತೊಂದು ಕಾಣಬೇಕಾದಂತ ವಿಷಯ ಶಿಕ್ಷಣ ಎನ್ನುವುದು ಪರಿಸರಕ್ಕೆ ಒಳ್ಳೆಯದೋ? ಕೆಟ್ಟದೋ.? ಎಂಬುವುದನ್ನು ನಮ್ಮೊಳಗೆ ಪ್ರಶ್ನೆ ಮಾಡಿ ನಾವೇ ಉತ್ತರವನ್ನು ಕಂಡುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ.