”ಮಳೆ ಬಂತೆಂದರೆ ನನಗಂತೂ ಆ ಕೆರೆ ಅಪ್ಯಾಯಮಾನ. ನೀರು ತುಂಬಿ ನಿಂತ ಕೆರೆಯಲ್ಲಿ ನೋಡಲು ಏನುಂಟು ಏನಿಲ್ಲ! ತರ ತರದ ಮೀನುಗಳು, ವಿವಿಧ ಬಣ್ಣದ ಕಪ್ಪೆ, ಹಕ್ಕಿಗಳು ನಮ್ಮ ಕಣ್ಣಿಗೆ ಹಬ್ಬ. ಒಮ್ಮೆ ಒಬ್ಬನೇ ಆ ಕೆರೆಯ ದಾರಿಯ ಮೂಲಕ ದಾಟುವವನಿದ್ದೆ. ಥಟ್ಟನೆ ನನ್ನ ಕಣ್ಣಿಗೇನೋ ಹೊಳೆಯುವುದು ಕಂಡಿತು. ಗಕ್ಕನೆ ನಿಂತು ಬಿಟ್ಟೆ. ವಾಹ್… ಅದೆಂಥಹಾ ದೃಶ್ಯ! ಮಿಂಚುಳ್ಳಿಯೊಂದು ಕೆರೆಯ ಅಡ್ಡಲಾಗಿ ಮಲಗಿರುವ ಅರಳಿ ಮರದ ಕೊಂಬೆಯ ಮೇಲೆ ನಿಂತು ಮೀನಿಗಾಗಿ ಕಾಯುತ್ತಿದೆ. ಗಾಢ ನೀಲಿ ಬಣ್ಣ ಹೊದ್ದುಕೊಂಡ ಹಕ್ಕಿಗೆ, ಹೊಟ್ಟೆಯ ಭಾಗಕ್ಕೆ ನಸು ಕೆಂಪು ಬಣ್ಣ. ಕುತ್ತಿಗೆಯ ಪಕ್ಕ ಬಿಳಿ ಕಪ್ಪು ಚುಕ್ಕೆಯ ವರ್ಣ ಸೌಂದರ್ಯ. ಕೊಕ್ಕಿನಲ್ಲಿ ಬೇಟೆಯ ಮೀನು. ಎಳೆ ಬಿಸಿಲು ಆವರಿಸಿದ್ದ ಆ ಸಮಯಕ್ಕೆ, ಒದ್ದೆಯಾದ ರೆಕ್ಕೆಗಳು ಮಿರ ಮಿರನೆ ಮಿಂಚುತ್ತಿತ್ತು”
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳ ಎರಡನೆಯ ಕಂತು.

 

ನಮ್ಮ ಅಜ್ಜಿ ಮನೆಯ ಹತ್ತಿರದಲ್ಲೊಂದು ಕೆರೆ ಇದೆ. ಮಳೆ ಬಾರದ ದಿನಗಳಲ್ಲಿ ಕ್ಷೌರ ಮಾಡದ ಫಕೀರನಂತೆ ಕೆರೆಯೋ ಕಾಡೋ ಎಂದು ಗುರುತಿಸಲಾರದಷ್ಟು ದಟ್ಟವಾದ ಗಿಡಗಂಟಿಗಳು ತುಂಬಿರುತ್ತದೆ. ಹಂದಿ, ನರಿ, ಮೊಲಗಳಿಗೆ ಆವಾಸ ಸ್ಥಾನ ಅದು. ನಾನು ಐದನೇ ತರಗತಿಯಲ್ಲಿದ್ದಾಗ ಒಮ್ಮೆ ಮಳೆಗಾಲದಲ್ಲಿ ಆ ಕಡೆ ಹೋದ ನೆನಪಿದೆ. ಆಗ ಅಗಲವಾಗಿ ಕೆರೆ ಮೈತುಂಬಿ ಕೊಳ್ಳುತ್ತಿತ್ತು. ಸುಮಾರು ದಿನಗಳ ತರುವಾಯ ಜೆಸಿಬಿ ಕರೆಸಿ ಕೆರೆಯನ್ನು ಅಗಲಮಾಡುವ ಪ್ರಕ್ರಿಯೆಯೂ ನಡೆಯಿತು. ಆಗ ಜೆಸಿಬಿ ಕೊಕ್ಕಿನಡಿಗೆ ಸಿಕ್ಕು ಎರಡಾದ ಕೊಳಕು ಮಂಡಲ ಹಾವಿನ ಚಿತ್ರಣ ನೆನಪಾಗುತ್ತದೆ. ಎರಡು ತುಂಡಾಗಿ ನೆಲದ ಮೇಲೆ ಬಿದ್ದರೂ ಹಾವಿನ ಜೀವನ್ಮರಣದ ಹೊರಾಟ ಮೆಚ್ಚಲೇಬೇಕು. ಸ್ವಲ್ಪ ಹೊತ್ತಿಗೆ ಸಣ್ಣ ಸಣ್ಣ ಮರಿಗಳೂ ಜೆಸಿಬಿ ಕೊಕ್ಕಿಗೆ ಸಿಕ್ಕಿ ಅಸುನೀಗಿದವು. ಅದಾದ ಬಳಿಕ ಇಡೀ ಕೆರೆಯೇ ತುಂಬುತ್ತಿದ್ದ ನೀರು ಒಂದು ಭಾಗಕ್ಕೆ ಮಾತ್ರ ಮೀಸಲಾಯಿತು. ಪರಿಸರದ ಮೇಲಿನ ಮಾನವ ಹೇರಿಕೆಯ ಪ್ರತಿಫಲವನ್ನೊಮ್ಮೆ ಊಹಿಸಿ ನೋಡಿ.

ಮಾವ, ತಾಯಿಯ ತಮ್ಮ ತರಕಾರಿ ಕೃಷಿ ಮಾಡಿದ್ದರು. ನೀರು ಹೆಚ್ಚಾದರೆ ಹರಿದು ಹೋಗಲು ಸಣ್ಣ ಕವಾಟ ನಿರ್ಮಿಸಿ ಕರೆಯ ನೀರಿನಾಳಕ್ಕೆ ಸಣ್ಣ ಪೈಪನ್ನೂ ಅಳವಡಿಸಿದ್ದರು. ಜೋರು ಮಳೆ ಬೀಳುವ ದಿನ ತುಂಬಿ ನಿಂತ ಕೆರೆಗೆ ಮಾವ ಹಾರುತ್ತಿದ್ದುದು, ಆ ಬಳಿಕ ಸುಮಾರು ನಿಮಿಷಗಳ ಕಾಲ ನೀರಲ್ಲಿ ಮುಳುಗಿ ಕವಾಟ ತೆರೆಯುವುದು, ಇದನ್ನೆಲ್ಲ ಬಿಡುಗಣ್ಣಿನಿಂದ ನೋಡುತ್ತಿದ್ದೆವು. ಬೇಸಿಗೆ ರಜೆಯ ಕೊನೆಯಲ್ಲಿ ಮಳೆ ಬಂತೆಂದರೆ ನನಗಂತೂ ಆ ಕೆರೆ ಅಪ್ಯಾಯಮಾನ. ನೀರು ತುಂಬಿ ನಿಂತ ಕೆರೆಯಲ್ಲಿ ನೋಡಲು ಏನುಂಟು ಏನಿಲ್ಲ! ತರ ತರದ ಮೀನುಗಳು, ವಿವಿಧ ಬಣ್ಣದ ಕಪ್ಪೆ, ಹಕ್ಕಿಗಳು ನಮ್ಮ ಕಣ್ಣಿಗೆ ಹಬ್ಬ. ಒಮ್ಮೆ ಒಬ್ಬನೇ ಆ ಕೆರೆಯ ದಾರಿಯ ಮೂಲಕ ದಾಟುವವನಿದ್ದೆ. ಥಟ್ಟನೆ ನನ್ನ ಕಣ್ಣಿಗೇನೋ ಹೊಳೆಯುವುದು ಕಂಡಿತು. ಗಕ್ಕನೆ ನಿಂತು ಬಿಟ್ಟೆ. ವಾಹ್… ಅದೆಂಥಹಾ ದೃಶ್ಯ! ಮಿಂಚುಳ್ಳಿಯೊಂದು ಕೆರೆಯ ಅಡ್ಡಲಾಗಿ ಮಲಗಿರುವ ಅರಳಿ ಮರದ ಕೊಂಬೆಯ ಮೇಲೆ ನಿಂತು ಮೀನಿಗಾಗಿ ಕಾಯುತ್ತಿದೆ. “ಕಿಂಗ್ ಫಿಶರ್” ಒಮ್ಮೆ ಉದ್ಗರಿಸಿದೆ. ಸದ್ದು ಮಾಡದೆ ಇನ್ನೂ ಹತ್ತಿರ ಬಂದು ತದೇಕ ಚಿತ್ತದಿಂದ ನೋಡುತ್ತಲೇ ಇದ್ದೆ. ಗಾಢ ನೀಲಿ ಬಣ್ಣ ಹೊದ್ದುಕೊಂಡ ಹಕ್ಕಿಗೆ, ಹೊಟ್ಟೆಯ ಭಾಗಕ್ಕೆ ನಸು ಕೆಂಪು ಬಣ್ಣ. ಕುತ್ತಿಗೆಯ ಪಕ್ಕ ಬಿಳಿ ಕಪ್ಪು ಚುಕ್ಕೆಯ ವರ್ಣ ಸೌಂದರ್ಯ. ಕೊಕ್ಕಿನಲ್ಲಿ ಬೇಟೆಯ ಮೀನು. ಎಳೆ ಬಿಸಿಲು ಆವರಿಸಿದ್ದ ಆ ಸಮಯಕ್ಕೆ, ಒದ್ದೆಯಾದ ರೆಕ್ಕೆಗಳು ಮಿರ ಮಿರನೆ ಮಿಂಚುತ್ತಿತ್ತು.

ಶಾಲೆಯಲ್ಲಿ ಅಧ್ಯಾಪಕರು ಹೇಳಿದ್ದ ತಥಾಕಥಿತ ಪಕ್ಷಿ ಕಣ್ಣ ಮುಂದೆ ಕಾಣುವುದೆಂದರೆ? ಆನಂದ ತುಂದಿಲನಾದೆ. ಅಷ್ಟಕ್ಕೆ ಮಾವಿನ ಹಣ್ಣು ನೆನಪಾಗಿ ಕೆರೆಯ ಬದು ದಾಟಿ ಹೊರಡುವ ದಾರಿಗೆ ಬಂದೆ, ಈಗ ಕೆರೆಯ ಜೀವಸಂಕುಲಗಳೆಲ್ಲವೂ ದೃಗ್ಗೋಚರವಾಯ್ತು. ನೀರು ಕಾಗೆಗಳು ನೀರಲ್ಲಿ ಮುಳುಗೇಳುತ್ತಿವೆ, ವಿವಿಧ ಜಾತಿಯ ಕಪ್ಪೆಗಳು ದಡದಲ್ಲೆಲ್ಲಾ ಹೊರಳಾಡುತ್ತಿವೆ. ಒಂದು ಮೂಲೆಯಲ್ಲಿ ನೀರು ಹಾವು ಈಜುತ್ತಿದೆ. ತಟಕ್ಕನೆ ಹಿಂಬದಿಯಿಂದ ತರಗಲೆಗಳು ಅಲುಗಿದಂತಾಯ್ತು. ಬೆಚ್ಚಿ ಹಿಂದಕ್ಕೆ ತಿರುಗಿದೆ, ಅಷ್ಟೊತ್ತಿಗೆ ಮಾವ ಕೆರೆಯ ನೀರಿನ ಕವಾಟ ತೆರೆಯಲು ಬಂದಿದ್ದರು. ಕುಶಲೋಪರಿ ನಡೆಸುತ್ತಲೇ ಮಿಂಚುಳ್ಳಿ ಕಡೆಗೆ ಅರೆ ಕಣ್ಣು ನೆಟ್ಟಿದ್ದೆ. ಮಾವ ಸ್ಪಲ್ಪ ಶಬ್ದವೆತ್ತಿ ಮಾತನಾಡಿದರು ಅನಿಸುತ್ತೆ, ನೀರ್ಕಾಗೆಗಳು ಹಾರಿ ಹೋದವು. ಕೊಕ್ಕರೆಗಳು ಹೊರಟೇ ಹೋದವು. ಪುರ್ರನೇ ರೆಕ್ಕೆ ಬಡಿಯುತ್ತಾ ಮಿಂಚುಳ್ಳಿ ದೂರವಾಯಿತು, ಹಿಂದೆಯೇ ಜೋಡಿ ಮಿಂಚುಳ್ಳಿಯೂ ಹಾರಿತು. ಮಾವ ಕವಾಟ ತೆಗೆಯಲು ನೀರಿಗೆ ಹಾರಿದರು. ಕೆರೆಯ ಪ್ರಶಾಂತತೆಗೆ ಅಡ್ಡಿಯಾಯ್ತು ಅನಿಸುತ್ತದೆ. ಬಹುತೇಕ ಪ್ರಾಣಿ-ಪಕ್ಷಿಗಳು ಸದ್ದಿಲ್ಲದೆ ಕಾಲ್ಕಿತ್ತವು. ಮನುಷ್ಯ ಪ್ರಾಣಿಗಳ ಅವಿನಾಭಾವ ನಂಟಿನ ಕರಾಳ ಮುಖ ಪರಿಚಯವಾದಂತಾಯ್ತು. ಅಷ್ಟಕ್ಕೂ ಮನುಷ್ಯನೆಂಬ ಪ್ರಾಣಿಯನ್ನು ಕಂಡು ಹೆದರುವ ಇತರ ಪ್ರಾಣಿಗಳ ಮನೋ ಸ್ಥೈರ್ಯದ ಕೊರತೆಗೆ ಬೇಸರ ಹುಟ್ಟಿತು. ಅಷ್ಟೊತ್ತಿಗೆ ನೀರಿನಲ್ಲಿ ಒಂದು ಮುಳುಗು ಹಾಕಿ ಮಾವ ಮೇಲೆದ್ದಿದ್ದರು. ನಾನಿಂತ ಕೆರೆಯ ವಿರುದ್ಧ ದಿಕ್ಕಿಗೆ ಕಲಕು ನೀರು ವೇಗವಾಗಿ ಹರಿಯ ತೊಡಗಿತು. ಕವಾಟ ತೆರೆದಿರಬೇಕು ಎಂದು ಲೆಕ್ಕ ಹಾಕುತ್ತಾ ಮಾವಿನ ಹಣ್ಣು ಹುಡುಕಿ ಹೊರಟೆ.

ಜೋರು ಮಳೆ ಬೀಳುವ ದಿನ ತುಂಬಿ ನಿಂತ ಕೆರೆಗೆ ಮಾವ ಹಾರುತ್ತಿದ್ದುದು, ಆ ಬಳಿಕ ಸುಮಾರು ನಿಮಿಷಗಳ ಕಾಲ ನೀರಲ್ಲಿ ಮುಳುಗಿ ಕವಾಟ ತೆರೆಯುವುದು, ಇದನ್ನೆಲ್ಲ ಬಿಡುಗಣ್ಣಿನಿಂದ ನೋಡುತ್ತಿದ್ದೆವು. ಬೇಸಿಗೆ ರಜೆಯ ಕೊನೆಯಲ್ಲಿ ಮಳೆ ಬಂತೆಂದರೆ ನನಗಂತೂ ಆ ಕೆರೆ ಅಪ್ಯಾಯಮಾನ. ನೀರು ತುಂಬಿ ನಿಂತ ಕೆರೆಯಲ್ಲಿ ನೋಡಲು ಏನುಂಟು ಏನಿಲ್ಲ! ತರ ತರದ ಮೀನುಗಳು, ವಿವಿಧ ಬಣ್ಣದ ಕಪ್ಪೆ, ಹಕ್ಕಿಗಳು ನಮ್ಮ ಕಣ್ಣಿಗೆ ಹಬ್ಬ. ಒಮ್ಮೆ ಒಬ್ಬನೇ ಆ ಕೆರೆಯ ದಾರಿಯ ಮೂಲಕ ದಾಟುವವನಿದ್ದೆ. ಥಟ್ಟನೆ ನನ್ನ ಕಣ್ಣಿಗೇನೋ ಹೊಳೆಯುವುದು ಕಂಡಿತು. ಗಕ್ಕನೆ ನಿಂತು ಬಿಟ್ಟೆ. ವಾಹ್… ಅದೆಂಥಹಾ ದೃಶ್ಯ! ಮಿಂಚುಳ್ಳಿಯೊಂದು ಕೆರೆಯ ಅಡ್ಡಲಾಗಿ ಮಲಗಿರುವ ಅರಳಿ ಮರದ ಕೊಂಬೆಯ ಮೇಲೆ ನಿಂತು ಮೀನಿಗಾಗಿ ಕಾಯುತ್ತಿದೆ. “ಕಿಂಗ್ ಫಿಶರ್” ಒಮ್ಮೆ ಉದ್ಗರಿಸಿದೆ. ಸದ್ದು ಮಾಡದೆ ಇನ್ನೂ ಹತ್ತಿರ ಬಂದು ತದೇಕ ಚಿತ್ತದಿಂದ ನೋಡುತ್ತಲೇ ಇದ್ದೆ. ಗಾಢ ನೀಲಿ ಬಣ್ಣ ಹೊದ್ದುಕೊಂಡ ಹಕ್ಕಿಗೆ, ಹೊಟ್ಟೆಯ ಭಾಗಕ್ಕೆ ನಸು ಕೆಂಪು ಬಣ್ಣ. ಕುತ್ತಿಗೆಯ ಪಕ್ಕ ಬಿಳಿ ಕಪ್ಪು ಚುಕ್ಕೆಯ ವರ್ಣ ಸೌಂದರ್ಯ. ಕೊಕ್ಕಿನಲ್ಲಿ ಬೇಟೆಯ ಮೀನು. ಎಳೆ ಬಿಸಿಲು ಆವರಿಸಿದ್ದ ಆ ಸಮಯಕ್ಕೆ, ಒದ್ದೆಯಾದ ರೆಕ್ಕೆಗಳು ಮಿರ ಮಿರನೆ ಮಿಂಚುತ್ತಿತ್ತು.

ಅಲ್ಲಿನ ನೀರಿಗೆ ಪಂಪ್ ಹಾಕಲಾಗಿತ್ತು. ನೀರು ತೋಟಕ್ಕೆ ಹಾಕಲಾಗುತ್ತಿತ್ತು. ಪಂಪಿಗಾಗಿ ಸಣ್ಣ ಶೆಡ್ ನಿರ್ಮಿಸಿದ್ದರು. ಅದೊರಳಗೆ ಹೊಕ್ಕರೆ ಹವಾ ನಿಯಂತ್ರಕದಷ್ಟು ತಣ್ಣಗಿನ ಅನುಭವವಾಗುತ್ತಿತ್ತು. ಒಮ್ಮೆ ಮನೆಯಲ್ಲೇನೋ ಪೆಟ್ಟು ಜಾಸ್ತಿ ತಿಂದದ್ದಕ್ಕಾಗಿ ಎರಡು ವಾರ ಅಜ್ಜಿ ಮನೆಯಲ್ಲೇ ಠಿಕಾಣಿ ಹೂಡಿದ್ದೆ. ಆಗ ತಾಯಿಯ ಕೊನೆಯ ತಂಗಿಗೆ ಮದುವೆಯಾಗಿರಲಿಲ್ಲ. ಅವಳನ್ನು ಚೆನ್ನಾಗಿ ಗೋಳು ಹೊಯ್ದುಕೊಳ್ಳುತ್ತಿದ್ದುದರಿಂದಲೇ ಅವಳಿಗೆ ನಮ್ಮ ಮೇಲೆ ಸಿಟ್ಟು. ಗುಡಿಸಿಟ್ಟರೆ ಕಸ ಮಾಡುವುದು, ಒರೆಸಿಟ್ಟ ನೆಲದ ಮೇಲೆ ನಡೆಯುವುದು ಇದು ದೈನಂದಿನ ತಂಟೆಗಳು. ಅವಳಿಗಂತೂ ನಮ್ಮಿಂದ ರೋಸಿ ಹೋಗಿತ್ತು. ಇಡೀ ದಿನ ನಮ್ಮನ್ನು ಬೈಯ್ಯುತ್ತಾ ಸಾಲದ್ದಕ್ಕೆ ಮಾವನವರಲ್ಲಿ ದೂರು ಹೊರುತ್ತಿದ್ದಳು. ನಮಗಂತೂ ಆ ಸಮಯಕ್ಕೆ ಅವಳನ್ನು ಕಂಡರಾಗದು. ಈಗ ಕಾಲ ಬದಲಾಗಿದೆ, ಈಗ ಯಾವತ್ತು ಕಂಡರೂ ಒಮ್ಮೆ ಮನೆಗೆ ಬಂದು ಹೋಗಿ ಎಂದು ಒತ್ತಾಯಿಸುವವಳು. ನಾನು, ಮಾವನ ಮಗ ಸೇರಿ ಅವಳಿಗೆ ಮತ್ತಷ್ಟು ಕೀಟಲೆ ಕೊಡಲು ಉಪಾಯ ಹುಡುಕುತ್ತಿದ್ದೆವು. ಒಂದು ದಿನ ಶೆಡ್ ನಲ್ಲಿ ಎಲ್ಲಿಂದಲೋ ಕಾಡ ಹೆಜ್ಜೇನುಗಳು ಗೂಡು ಕಟ್ಟಿದ್ದವು. ಆ ಬಳಿಕ ನಮಗೆ ಶೆಡ್ಡಿನೊಳಗೆ ಹೋಗುವ ಅಧಿಕಾರ ನಷ್ಟ ಹೊಂದಿತು. ಮಕ್ಕಳಾಟಿಕೆ ಮಾಡಿ ಚುಚ್ಚಿಸಿಕೊಳ್ಳುತ್ತಾರೆಂಬ ಹೆದರಿಕೆ ದೊಡ್ಡವರಿಗಿದ್ದಿರಬೇಕು; ಆ ದಿನವಂತೂ ಚಿಕ್ಕಮ್ಮಳನ್ನು ತುಂಬಾನೇ ರೇಗಿಸಿದ್ದೆವು. ಕಾಕತಾಳೀಯವೆಂಬಂತೆ ಪಂಪಿಗೆ ಸ್ವಿಚ್ ಹಾಕಲು ಹೋದ ಚಿಕ್ಕಮ್ಮಳನ್ನು ಅಟ್ಟಾಡಿಸಿ ಹೆಜ್ಜೇನು ಕಚ್ಚಿ ಬಿಟ್ಟಿತು. ಅವಳ ಮುಖವೆಲ್ಲ ಊದಿಕೊಂಡುಬಿಟ್ಟಿತ್ತು. ಹೇಗೋ ಸಂಬಾಳಿಸಿಕೊಂಡು ಏಳುತ್ತ ಬೀಳುತ್ತ ಮನೆ ತಲುಪಿರಬೇಕು. ವಿಷಯ ತಿಳಿದ ಮೊದಲಲ್ಲಿ ತಕ್ಕ ಶಾಸ್ತಿಯಾಯಿತೆಂದು ನಾನು ಮತ್ತು ಮಾವನ ಮಗ ಇಬ್ಬರೂ ಮುಸಿ ಮುಸಿ ನಕ್ಕಿದ್ದೆವು. ಆದರೆ ಅದರ ಪರಿಣಾಮ ನೋಡಿದ ಕ್ಷಣ ನಮ್ಮ ಹೃದಯ ಕರಗಿ ನೀರಾಗಿತ್ತು. ಆಕೆಯ ಮುಖ ಪೂರಾ ಊದಿ ಹೋಗಿತ್ತು. ಸುಮಾರು ೨೦ ದಿನಗಳ ತರುವಾಯ ಮೆಲ್ಲಗೆ ಚೇತರಿಸಿಕೊಳ್ಳತೊಡಗಿದಳು. ಯಾರಿಗೂ ಕಚ್ಚದಿದ್ದ ಆ ಕೀಟ ಹಾಗೆ ಒಮ್ಮೆಲೆ ದಾಳಿ ಮಾಡಲು ಕಾರಣವೇನು? ಬಹುಶಃ ತಿಳಿಯದೆ ಅವಳೇನಾದರೂ ಗೂಡಿಗೆ ಕೈ ತಾಗಿಸಿದ್ದಳೇ? ಎಂಬಿತ್ಯಾದಿ ರಾಶಿ ಪ್ರಶ್ನೆಗಳಿದ್ದರೂ ಕೇಳಲಾಗದೆ ಹಾಗೆಯೇ ಉಳಿದಿದೆ. ಈಗ ಏನಾದರೂ ಕೇಳಲು ಹೋದರೆ, ಅವಳಿಗೆ ಮರೆತೇ ಹೋಗಿರುವಷ್ಟು ಪ್ರಕರಣ ಹಳತೆಂದು ನಕ್ಕು ಬಿಡಲೂ ಸಾಕು.

ಮಸೀದಿ ಬದಿಯ ಮುಖ್ಯ ರಸ್ತೆ ಡಾಂಬಾರು ಹಾಕಿದ ಕೂಡು ರಸ್ತೆ ಇದೆ. ಹಿಂದೆ ಅದು ಮಣ್ಣಿನ ರಸ್ತೆಯಾಗಿತ್ತು. ಅದರಲ್ಲಿ ಸೀದಾ ನಡೆದರೆ ಬನ್ನೆಂಗಳ ಎನ್ನುವ ಊರು ಸಿಗುತ್ತದೆ. ಬ್ಯಾರಿಯಲ್ಲಿ ” ಬನಿಯಾಳ” ಎನ್ನುವ ಹೆಸರಿದೆ. ಈ ಹೆಸರು ಯಾಕೆ ಬಂತು ಗೊತ್ತಿಲ್ಲ. ರಜೆ ಸಿಕ್ಕಾಗಲೆಲ್ಲ ದಾರಿ ಕಂಡರೆ ಎಲ್ಲಿಗೆ ಕೊನೆ ಅನ್ನುವ ಕುತೂಹಲ ಇದ್ದದ್ದರಿಂದಲೇ ಅಲ್ಲೆಲ್ಲಾ ಓಡಾಡಿ ಬರುತ್ತಿದ್ದ ಕಾಲವದು. ಅಂತೂ ಆ ದಿನ ಅಣ್ಣನ ಜತೆಗೂಡಿ ಆ ದಾರಿಯಲ್ಲೇ ಹೋದೆವು. ನಮ್ಮ ಬಾಲ್ಯದ ಗುರು “ಶರೀಫ್” ನನ್ನು ಹಿಂಬಾಲಿಸಿದೆವು. ಸುಮಾರು ದೂರ ಹೋಗುವಷ್ಟರಲ್ಲಿ ಕಾಡು ಸಿಕ್ಕಿತ್ತು. ಕಾಡೆಂದರೆ ಅಕ್ಷರಶಃ ಕಾಡು. ದಿನಕ್ಕೆರಡು ಬಾರಿ ಸುಬ್ರಹ್ಮಣ್ಯ ಸಾರ್ ಅವರ ಸ್ಕೂಟರ್ ಒಂದು ಬಿಟ್ಟು ಬೇರೆನೂ ಆ ದಾರಿಯಲ್ಲಿ ಹೋಗದು. ಬಹುಶಃ ಹಳೇ ಕಾಲದ ಆ ಸ್ಕೂಟರ್ ಅನ್ನು ಮಾತ್ರ ಆ ದಿನಗಳಲ್ಲಿ ಅಲ್ಲಿನ ಪರಿಸರವು ಪರಿಚಯವಿಟ್ಟುಕೊಂಡಿರಬೇಕು. ಉಳಿದವರಿಗೆಲ್ಲಾ ಕಾಲ್ನಡಿಗೆಯೇ ದಾರಿ. ಅಲ್ಲಿಂದ ಮುಖ್ಯ ರಸ್ತೆಯ ತನಕ ನಡೆದೇ ಬರಬೇಕಾಗಿತ್ತು. ಪೇಟೆಗೆ ಹೋಗುವ ಬಸ್ಸು ಉಂಟು; ಅಂದರೆ ಉಂಟು, ಇಲ್ಲವೆಂದರೆ ಇಲ್ಲ. ಅಷ್ಟು ಅಪರೂಪವಾಗಿ ಬಸ್ಸು ಬರುವುದು. ನಾವು ನಡೆದೇ ನಡೆದೆವು. ಒಂದು ಎತ್ತರ ದಿಣ್ಣೆ ಹತ್ತಿ ಇಳಿದೆವು. ಸ್ವಲ್ಪ ಇಳಿದೆವೆನ್ನುವಾಗ ನಮ್ಮೆಲ್ಲರ ಕಣ್ಣು ಒಂದು ಕಡೆ ನೆಟ್ಟಿತು; ನೋಡುತ್ತೇವೆ, ಭಯಂಕರ ದೊಡ್ಡ ಮಾವಿನ ಮರ! ಸುಮಾರು ನನ್ನಂತಹ ಹತ್ತು ಜನರು ಎರಡು ಕೈ ಅಗಲಿಸಿ ಆಲಂಗಿಸಿದರೂ ಇನ್ನೂ ಹೆಚ್ಚಿಗೆ ಬಾಕಿಯಾಗುವಷ್ಟು ದಪ್ಪದ ಕಾಂಡ. ಹಣ್ಣು ತುಂಬಿ ಮರ ಜೋತಾಡುತ್ತಿತ್ತು. ಆದರೆ ಯಾರೊಬ್ಬನೂ ಆ ಮರ ಹತ್ತುವ ಧೈರ್ಯವಾಗಲಿ, ಕಲ್ಲೆಸೆದು ಕೊಯ್ಯುವ ಹಿಂಸಾ ವಿಧಾನವಾಗಲಿ ಅನುಸರಿಸಿರಲಿಲ್ಲ. ಏಕೆಂದರೆ ಆ ಮರದ ತುಂಬಾ ಹತ್ತು ಹದಿಮೂರು ಹೆಜ್ಜೇನು ಗೂಡು ಕಟ್ಟಿದ್ದವು. ನಾನು ಮಾತ್ರ ಕಣ್ಣು ಬಿಟ್ಟ ದಿನದಿಂದ ಅಷ್ಟು ದೊಡ್ಡ ಹೆಜ್ಜೇನಿನ ಪರಿವಾರವನ್ನು ಕಂಡಿರಲಿಲ್ಲ. ಆ ಮರಕ್ಕೆ ಸ್ವತಃ ಪ್ರಕೃತಿಯೇ “ಝೆಡ್ ಪ್ರೊಟೆಕ್ಷನ್” ಕೊಡಮಾಡಿದಂತಿತ್ತು. ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಮಾವು ಬಿದ್ದು ಸಿಗಬಹುದು ಅಷ್ಟೇ. ಅಷ್ಟೂ ಜೇನ್ನೊಣಗಳಿಂದ ತುಂಬಿ ಹೋಗಿತ್ತು. ನಮ್ಮ ಗುರಿಯೇನೂ ಮಾವಿನ ಹಣ್ಣಾಗಿರಲಿಲ್ಲ. ನಾವು ಮತ್ತೂ ದಾಟಿ ಹೊರಟೆವು. ಅಲ್ಲೇ ಕಾಡ ದಾರಿಯಲ್ಲಿ ರಸ್ತೆ ಮಾಡಿಕೊಂಡು ಸಾಗಿದೆವು. ಸ್ವಲ್ಪ ದೂರದಲ್ಲಿ ಕಾರಂತರ ಬೆಟ್ಟದ ಜೀವದಂತಹ ಮನೆಯೊಂದು ಕಾಣಿಸಿತು. ಹಾಗೆ ಹೇಳುವುದಕ್ಕಿಂತ ಹೆಚ್ಚಾಗಿ ಆ ಮನೆಯ ನಾಯಿಯೇ ನಮ್ಮನ್ನು ಗಲಾಟೆ ಮಾಡಿ ಕರೆಯಿತೆನ್ನಬಹುದು. ನನಗೆ ದಾರಿಯ ಪರಿವೇ ಇರಲಿಲ್ಲ; ಅವರು ನಡೆದಲ್ಲೆಲ್ಲಾ ನಾನು ಹಿಂಬಾಲಕನಂತೆ ನಡೆಯುತ್ತಿದ್ದೆನಷ್ಟೇ. ನಾವು ಮನೆಗೆ ಹತ್ತಿರವಾದೆವು.

(ಫೋಟೋಗಳು:ಮುನವ್ವರ್)

ನಾನು, ಮಾವನ ಮಗ ಸೇರಿ ಅವಳಿಗೆ ಮತ್ತಷ್ಟು ಕೀಟಲೆ ಕೊಡಲು ಉಪಾಯ ಹುಡುಕುತ್ತಿದ್ದೆವು. ಒಂದು ದಿನ ಶೆಡ್ ನಲ್ಲಿ ಎಲ್ಲಿಂದಲೋ ಕಾಡ ಹೆಜ್ಜೇನುಗಳು ಗೂಡು ಕಟ್ಟಿದ್ದವು. ಆ ಬಳಿಕ ನಮಗೆ ಶೆಡ್ಡಿನೊಳಗೆ ಹೋಗುವ ಅಧಿಕಾರ ನಷ್ಟ ಹೊಂದಿತು. ಮಕ್ಕಳಾಟಿಕೆ ಮಾಡಿ ಚುಚ್ಚಿಸಿಕೊಳ್ಳುತ್ತಾರೆಂಬ ಹೆದರಿಕೆ ದೊಡ್ಡವರಿಗಿದ್ದಿರಬೇಕು; ಆ ದಿನವಂತೂ ಚಿಕ್ಕಮ್ಮಳನ್ನು ತುಂಬಾನೇ ರೇಗಿಸಿದ್ದೆವು. ಕಾಕತಾಳೀಯವೆಂಬಂತೆ ಪಂಪಿಗೆ ಸ್ವಿಚ್ ಹಾಕಲು ಹೋದ ಚಿಕ್ಕಮ್ಮಳನ್ನು ಅಟ್ಟಾಡಿಸಿ ಹೆಜ್ಜೇನು ಕಚ್ಚಿ ಬಿಟ್ಟಿತು. ಅವಳ ಮುಖವೆಲ್ಲ ಊದಿಕೊಂಡುಬಿಟ್ಟಿತ್ತು. ಹೇಗೋ ಸಂಬಾಳಿಸಿಕೊಂಡು ಏಳುತ್ತ ಬೀಳುತ್ತ ಮನೆ ತಲುಪಿರಬೇಕು. ವಿಷಯ ತಿಳಿದ ಮೊದಲಲ್ಲಿ ತಕ್ಕ ಶಾಸ್ತಿಯಾಯಿತೆಂದು ನಾನು ಮತ್ತು ಮಾವನ ಮಗ ಇಬ್ಬರೂ ಮುಸಿ ಮುಸಿ ನಕ್ಕಿದ್ದೆವು. ಆದರೆ ಅದರ ಪರಿಣಾಮ ನೋಡಿದ ಕ್ಷಣ ನಮ್ಮ ಹೃದಯ ಕರಗಿ ನೀರಾಗಿತ್ತು. ಆಕೆಯ ಮುಖ ಪೂರಾ ಊದಿ ಹೋಗಿತ್ತು. ಸುಮಾರು ೨೦ ದಿನಗಳ ತರುವಾಯ ಮೆಲ್ಲಗೆ ಚೇತರಿಸಿಕೊಳ್ಳತೊಡಗಿದಳು. ಯಾರಿಗೂ ಕಚ್ಚದಿದ್ದ ಆ ಕೀಟ ಹಾಗೆ ಒಮ್ಮೆಲೆ ದಾಳಿ ಮಾಡಲು ಕಾರಣವೇನು? ಬಹುಶಃ ತಿಳಿಯದೆ ಅವಳೇನಾದರೂ ಗೂಡಿಗೆ ಕೈ ತಾಗಿಸಿದ್ದಳೇ? ಎಂಬಿತ್ಯಾದಿ ರಾಶಿ ಪ್ರಶ್ನೆಗಳಿದ್ದರೂ ಕೇಳಲಾಗದೆ ಹಾಗೆಯೇ ಉಳಿದಿದೆ. ಈಗ ಏನಾದರೂ ಕೇಳಲು ಹೋದರೆ, ಅವಳಿಗೆ ಮರೆತೇ ಹೋಗಿರುವಷ್ಟು ಪ್ರಕರಣ ಹಳತೆಂದು ನಕ್ಕು ಬಿಡಲೂ ಸಾಕು.

ಶರೀಫ್ ಜೋರಾಗಿ “ಅಕ್ಕಾ, ಅಕ್ಕಾ” ಎಂದು ಕರೆದು ಸದ್ದು ಮಾಡಿದ. ಆ ಸಮಯಕ್ಕೆ ಓಗೊಡುತ್ತಾ ಮುಗುಳ್ನಗುತ್ತಾ ಗೃಹಿಣಿಯೊಬ್ಬರು ಹೊರ ಬಂದರು. ನಮ್ಮನ್ನು ನೋಡಿದವರೇ ನಾಯಿಗೆ ಜೋರು ಮಾಡಿದರು. ನನ್ನ ಎರಡು ಮಂಡಿಯೂ ನಾಯಿಯ ಭಯದಿಂದ ಒಂದಕ್ಕೊಂದು ಹೊಡೆದುಕೊಳ್ಳುತ್ತಿತ್ತು. ಎದೆಯಲ್ಲಿ ಪುಕು ಪುಕು ಶುರುವಾಗಿತ್ತು. ಅದು ನಮ್ಮೂರ ಬಡಗಿಯೋರ್ವರ ಮನೆ. ಅವರ ಒಂದು ಕಣ್ಣಿಗೆ ದೋಷವಿತ್ತು. ಹುಟ್ಟು ಕುರುಡೋ ಏನೋ. ಯಾರು ಬಲ್ಲವರು. ಆದರೆ ಊರವರು ಅವರು ಬಡಗಿ ಕೆಲಸ ಮಾಡುತ್ತಿದ್ದಾಗ ಕಣ್ಣಿಗೆ ಉಳಿ ತಾಗಿ ದೃಷ್ಟಿ ಹೋಗಿದ್ದು ಅನ್ನುತ್ತಿದ್ದ ನೆನಪು. ನಾವು “ಆಚಾರಿಯಣ್ಣ” ಅಂತ ಕರೆಯುತ್ತಿದ್ದ ನೆನಪು. ಅವರ ಹೆಸರು ಆಚಾರಿಯಾಗಿರಲಿಕ್ಕಿಲ್ಲ. ಬಡಗಿಗಳನ್ನೆಲ್ಲಾ ಆಚಾರಿಯೆಂದು ಕರೆಯುತ್ತಿದ್ದರಿಂದಲೇ ನಾವು ಕೂಡಾ “ಆಚಾರಿಯಣ್ಣ” ಅಂತ ಕರೆಯುತ್ತಿದ್ದೆವು ಅಷ್ಟೇ. ಹೇಗೂ ಅಣ್ಣನನ್ನು ಮುಂದಿಟ್ಟು ಸಾಗಿ ನಾಯಿಗೆ ಹೆದರಿ ಮನೆಯೊಳಗೆ ಬಂದೆ. ಬಹುಶಃ ಶರೀಫನ ಪರಿಚಯ ಮೊದಲೇ ಅವರಿಗೆ ಇದ್ದಂತೆ ಕಂಡಿತು. ನಮ್ಮನ್ನು ಅದ್ದೂರಿಯಾಗಿ ಸ್ವಾಗತಿಸಿ ಕುಡಿಯಲು ಶರಬತ್ತು ಮಾಡಿ ಕೊಟ್ಟರು. ಅವರಿಗೆ ಮಕ್ಕಳೆಂದರೆ ಪ್ರಾಣ, ಯಾಕೆಂದರೆ ಅವರಿಗೆ ಮಕ್ಕಳಿರಲಿಲ್ಲ. ಅಲ್ಲಿ ಅಲ್ಪ ಸ್ವಲ್ಪ ಮಾತನಾಡಿ ನಾವು ಮನೆ ಬಿಟ್ಟೆವು. ಮತ್ತೆ ಹೆಜ್ಜೇನಿರುವ ದಾರಿ ಬಳಸದೆ ಹತ್ತಿರದ ಇನ್ನೊಂದು ಗುಡ್ಡ ಹತ್ತಿ ಇಳಿದು ಮನೆಗೆ ಸೇರಿದೆವು.

ಇದಾಗಿ ಸುಮಾರು ೨ ತಿಂಗಳು ಕಳೆದಿರಬಹುದು. ಅದೇ ದಾರಿಯಾಗಿ ಅಣ್ಣ ಮತ್ತು ಶರೀಫ್ ಮಸೀದಿಗೆ ನಾಗಲೋಟದಿಂದ ಓಡಿ ಬರುತ್ತಿದ್ದರು. ಎದ್ದೆವೋ ಬಿದ್ದೆವೋ ಎಂದು ಓಡಿ ಬರುತ್ತಿದ್ದುದು ಕಂಡಾಗ ನನಗೆ ವಿಪರೀತ ಕುತೂಹಲ. ಯಾಕಿರಬಹುದು? ಏದುಸಿರು ಬಿಡುತ್ತಾ ಸುಮಾರು ಅರ್ಧ ಕಿಮೀ ಓಡಿ ಬಂದು ಮಸೀದಿ ಹಿಂದೆ ಬಂದು ಗಕ್ಕನೆ ನಿಂತು ಬಿಟ್ಟರು. ನಾನು ಕುತೂಹಲದಿಂದ ಅವರನ್ನೇ ನೋಡುತ್ತಾ ನಿಂತೆ, ಅಂಗಿಯ ಗುಂಡಿ ತೆಗೆದು ಕೊಡವಿಕೊಳ್ಳುತ್ತಾ ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಕೊಂಡು ಜೋರಾಗಿ ನಗತೊಡಗಿದರು. ನನಗಂತೂ ದಿಗಿಲಿಕ್ಕಿಸಿತು. ” ಯಾಕ್ರೋ ನಗುತ್ತಿದ್ದೀರಿ, ಏನಾಯ್ತು ಅಂತ ಕೇಳಿದೆ?”. “ಇವನು ಕಲ್ಲು ಹಾಕಿದ, ಅಟ್ಟಿಸಿಕೊಂಡು ಬಂತು” ಅಂತ ಅರ್ಧಂಬರ್ಧ ಹೇಳಿ ಮುಗಿಸಿದರು. ಅವರಿಬ್ಬರ ತಲೆಯ ಸುತ್ತ ಒಂದೆರಡು ಜೇನ್ನೊಣಗಳು ಹಾರಾಡುತ್ತಿದ್ದಂತೆ ನನ್ನ ಗುಮಾನಿ ಬಲವಾಯ್ತು. ತಥಾ ಕಥಿತ ಮರದ ಮೇಲಿದ್ದ ಜೇನು ಗೂಡಿಗೆ ಕಲ್ಲು ಹೊಡೆದು ಓಡಿ ಬಂದಿದ್ದರು ಅವರು. ಒಂದ್ಹತ್ತು ನಿಮಿಷ ಅಲ್ಲೆಲ್ಲಾ ನಾಲ್ಕಾರು ಜೇನ್ನೊಣಗಳು ಹಾರಾಡಿ, ಸ್ವಲ್ಪ ಹೊತ್ತು ಕಳೆದಂತೆ ಎತ್ತಲೋ ಹೊರಟು ಹೋದವು.

ಒಂದು ಎತ್ತರ ದಿಣ್ಣೆ ಹತ್ತಿ ಇಳಿದೆವು. ಸ್ವಲ್ಪ ಇಳಿದೆವೆನ್ನುವಾಗ ನಮ್ಮೆಲ್ಲರ ಕಣ್ಣು ಒಂದು ಕಡೆ ನೆಟ್ಟಿತು; ನೋಡುತ್ತೇವೆ, ಭಯಂಕರ ದೊಡ್ಡ ಮಾವಿನ ಮರ! ಸುಮಾರು ನನ್ನಂತಹ ಹತ್ತು ಜನರು ಎರಡು ಕೈ ಅಗಲಿಸಿ ಆಲಂಗಿಸಿದರೂ ಇನ್ನೂ ಹೆಚ್ಚಿಗೆ ಬಾಕಿಯಾಗುವಷ್ಟು ದಪ್ಪದ ಕಾಂಡ. ಹಣ್ಣು ತುಂಬಿ ಮರ ಜೋತಾಡುತ್ತಿತ್ತು. ಆದರೆ ಯಾರೊಬ್ಬನೂ ಆ ಮರ ಹತ್ತುವ ಧೈರ್ಯವಾಗಲಿ, ಕಲ್ಲೆಸೆದು ಕೊಯ್ಯುವ ಹಿಂಸಾ ವಿಧಾನವಾಗಲಿ ಅನುಸರಿಸಿರಲಿಲ್ಲ. ಏಕೆಂದರೆ ಆ ಮರದ ತುಂಬಾ ಹತ್ತು ಹದಿಮೂರು ಹೆಜ್ಜೇನು ಗೂಡು ಕಟ್ಟಿದ್ದವು. ನಾನು ಮಾತ್ರ ಕಣ್ಣು ಬಿಟ್ಟ ದಿನದಿಂದ ಅಷ್ಟು ದೊಡ್ಡ ಹೆಜ್ಜೇನಿನ ಪರಿವಾರವನ್ನು ಕಂಡಿರಲಿಲ್ಲ. ಆ ಮರಕ್ಕೆ ಸ್ವತಃ ಪ್ರಕೃತಿಯೇ “ಝೆಡ್ ಪ್ರೊಟೆಕ್ಷನ್” ಕೊಡಮಾಡಿದಂತಿತ್ತು. ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಮಾವು ಬಿದ್ದು ಸಿಗಬಹುದು ಅಷ್ಟೇ. ಅಷ್ಟೂ ಜೇನ್ನೊಣಗಳಿಂದ ತುಂಬಿ ಹೋಗಿತ್ತು. ನಮ್ಮ ಗುರಿಯೇನೂ ಮಾವಿನ ಹಣ್ಣಾಗಿರಲಿಲ್ಲ. ನಾವು ಮತ್ತೂ ದಾಟಿ ಹೊರಟೆವು. ಅಲ್ಲೇ ಕಾಡ ದಾರಿಯಲ್ಲಿ ರಸ್ತೆ ಮಾಡಿಕೊಂಡು ಸಾಗಿದೆವು. ಸ್ವಲ್ಪ ದೂರದಲ್ಲಿ ಕಾರಂತರ ಬೆಟ್ಟದ ಜೀವದಂತಹ ಮನೆಯೊಂದು ಕಾಣಿಸಿತು. ಹಾಗೆ ಹೇಳುವುದಕ್ಕಿಂತ ಹೆಚ್ಚಾಗಿ ಆ ಮನೆಯ ನಾಯಿಯೇ ನಮ್ಮನ್ನು ಗಲಾಟೆ ಮಾಡಿ ಕರೆಯಿತೆನ್ನಬಹುದು.

ಈಗ್ಗೆ ಕೆಲವು ದಿನಗಳ ಹಿಂದೆ ಮನೆಯ ಹಿತ್ತಲಲ್ಲಿ ಒಂದು ಟೊಳ್ಳು ಮರವಿತ್ತು. ಸತ್ತಿದೆಯೋ ಜೀವವಿದೆಯೋ ಗೊತ್ತಾಗುತ್ತಿರಲಿಲ್ಲ. ಹಸಿರೆಲೆಯಿತ್ತಾದರೂ ಮುಟ್ಟಿದರೆ ಹುಡಿ ಉದುರಿಸಿಕೊಳ್ಳುವ ಕಾಂಡ ಮಾತ್ರ ಟೊಳ್ಳಾಗಿ ಹೋಗಿತ್ತು. ಕಡೆಯ ದಿನಗಳಲ್ಲಿ ಬೊಕ್ಕ ತಲೆಯವರಂತೆ ಎಲೆ ಬೀಳಿಸಿಕೊಂಡು ಬೋಳಾಗಿ ನಿಂತಿತ್ತು. ಮನೆ ಕಟ್ಟಲು ಜಾಗ ಸಮತಟ್ಟು ಮಾಡಿಸುವಾಗ ಮರ ಕಡಿಯಲು ಬಂದವರಲ್ಲಿ ಆ ಮರ ಕಡಿಸಿದ್ದರು. ನಾನು ಬೆಂಗಳೂರಿನಿಂದ ಊರಿಗೆ ತಂಗಿ ಮದುವೆಗೆಂದು ನೀಳ ರಜೆಯಲ್ಲಿ ಹೋಗಿದ್ದೆ. ಬಾವ ಅಲ್ಲೇ ಏನೋ ಕೆಲಸ ಮಾಡುತ್ತಿದ್ದವರು ಉರುಳಿಸಿ ಹಾಕಿದ ಮರದ ಬಳಿ ಹೋಗಿರಬೇಕು. ಜೋರಾಗಿ ನಮ್ಮನ್ನೆಲ್ಲಾ ಕರೆದರು. ಎಲ್ಲರೂ ಜಮಾಯಿಸಿದೆವು.

ನೋಡುವಾಗ ಟೊಳ್ಳು ಬಿದ್ದ ಮರದ ರಂಧ್ರಗಳಿಂದ ಜೇನ್ನೊಣಗಳು ಹಾರಾಡುತ್ತಿದೆ. ತೊಡುವೆ ಜೇನು, ಹೆಚ್ಚು ಕಚ್ಚುವುದಿಲ್ಲ. ಕಚಗುಳಿಯಿಟ್ಟಂತೆ ಮೈ ಮೇಲೆಲ್ಲಾ ಹರಿಯುತ್ತದೆ ಹೊರತು ನಿರುಪದ್ರವಿ. ಗರಗಸ ತಂದು ಮರವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದೆವು. ಎಲ್ಲರೂ ಒಂದೊಂದು ಪಾತ್ರೆ ಹಿಡಿದು ತಂದರು. ಒಂದೊಂದು ತುಂಡಿನಲ್ಲಿ ಸುಮಾರು ೨ ಲೀಟರಿನಷ್ಟು ಜೇನು ಲಭಿಸಿತ್ತು. ನಾಲ್ಕಾರು ಹಾಳೆಗಳು ಈಗಷ್ಟೇ ಕಟ್ಟುತ್ತಿದ್ದುದನ್ನು ಒಂದು ಪ್ಲಾಸ್ಟಿಕ್ ಪೈಪಿನೊಳಗೆ ಬಿಗಿದು ಕಟ್ಟಿದೆವು. ಎರಡು ದಿನ ಅಲ್ಲೇ ಇತ್ತಾದರೂ, ಬಿಸಿಲು ಹೆಚ್ಚಾಗಿ ಬೀಳುವುದರಿಂದಲೋ ಅಥವಾ ಮಾನವನ ಹಸ್ತಕ್ಷೇಪವೋ, ಅಲ್ಲಿಂದ ಪರಿವಾರ ಸಮೇತ ಪರಾರಿ ಕಿತ್ತಿದ್ದವು. ಮಾನವ ಹಸ್ತಕ್ಷೇಪ ಯಾವ ಮಟ್ಟಿಗೆ ಪ್ರಾಣಿಗಳಲ್ಲಿ ಭಯ ಹುಟ್ಟಿಸಿಬಿಡುತ್ತದೆ ಎಂಬುವುದಕ್ಕೆ ಇವಿಷ್ಟು ಸಾಕ್ಷಿ. ಒಂದು ವೇಳೆ ಜೇನ್ನೊಣಗಳು ಪತ್ರಿಕಾ ಗೋಷ್ಠಿ ಕರೆಯುತ್ತಿದ್ದರೆ ನಾವು ಮಾನವರ ಮೇಲೆ ಅಪವಾದಗಳ ಪಟ್ಟಿಯನ್ನೇ ಸರಕಾರಕ್ಕೆ ಒಪ್ಪಿಸುತ್ತಿದ್ದವೋ ಏನೋ?

(ಮುಂದುವರಿಯುವುದು)