ಅವನಿಗೆ ಬೇಕೆಂದಿದ್ದ ಒಂದು ಮೊಳೆ, ತಂತಿ ಅಥವಾ ಮುಂದೆ ಉಪಯೋಗಿಸಲು ಇರಿಸಿದ್ದ ಸರಿಗೆ ಪ್ರಾಮುಖ್ಯವಾದ ಚಿಲಕ ಅಥವಾ ಇನ್ನೇನಾದರೂ ಸದಾ ಸಿಗದಿರುವುದು ಮತ್ತು ಇದು ಅವನಿಗೆ ಸಿಟ್ಟು ಬರಿಸುತ್ತದೆ. ಅವನಿಗೆ ಹಲವಾರು ಜನ ಮಕ್ಕಳಿದ್ದಾರೆ ಮತ್ತು ನಾಶಗಳು ಅವರ ಅನುಪಾತಕ್ಕೆ (ಪ್ರಮಾಣಕ್ಕೆ) ಸರಿಯಾಗಿ ಇವೆ. ಇದು ಈ ಸಿಟ್ಟುಗೊಳ್ಳುವ ಮನುಷ್ಯನಿಗೆ ಸುಲಭದಲ್ಲಿ ನಿಭಾಯಿಸಲು ಕಷ್ಟವಾಗುತ್ತದೆ. ಮಕ್ಕಳು ಅವರಾಗಿಯೇ ಬೇರೆ ಬೇರೆ ವಸ್ತುಗಳನ್ನು ವಾರ ಇಡೀ ತೆಗೆದುಕೊಳ್ಳುತ್ತಾರೆ.
“ಭಾನುವಾರ”ದ ಕುರಿತು ಆರ್ ಕೆ ನಾರಾಯಣ್ ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ
ಆದಿತ್ಯ ವಾರವು ಪ್ರತಿಯೊಬ್ಬನೂ ಹೆಚ್ಚು ಇದಿರುನೋಡುವ ದಿನವಾಗಿದೆ. ಈ ದಿನವು ಒಬ್ಬನಿಗೆ ತಾನು ಎಲ್ಲಿ ಇರುವೆನು ಎಂಬುದರ ಅರಿವಿಲ್ಲದೇ ಆವಿಯಾಗಿ ಹೋಗುವುದು. ಪ್ರತಿಯೊಬ್ಬನಿಗೂ ಶನಿವಾರದ ಸಾಯಂಕಾಲದ ಅರಿವು, ಎಲ್ಲಾ ಸುಖಾನುಭವದ ನಿರೀಕ್ಷೆಯಿಂದ, ಮತ್ತು ಆದಿತ್ಯವಾರದ ಸಾಯಂಕಾಲದ ಅನುಭವವು ಸೋಮವಾರದ ನೆನಪಿನಿಂದ ಈ ಮೊದಲೇ ಕಳಂಕವಾಗಿದೆ. ದಿವಸಕ್ಕೆ ಏನಾಗುವುದು? ಇದು ಒಂದು ದಿನ ಯಾವಾಗ ಹಲವಾರು ವಿಷಯಗಳನ್ನು ತುರುಕಿಸಲಾಗಿದೆ – ಮಕ್ಕಳಿಗೆ ಹೊರಗೆ ಕರೆದುಕೊಂಡು ಹೋಗುವುದು, ಸಣ್ಣ ಶಾಪಿಂಗ್‌ಗೆ, ಯಾರನ್ನೋ ಭೇಟಿಯಾಗುವುದು ಮತ್ತು ಇತರ ಭರವಸೆಗಳು. ೨೪ ಗಂಟೆಗಳ ಕೆಲಸವನ್ನು ೪೮ ಗಂಟೆಗಳಿಗೆ ಎಳೆಯಬೇಕು, ಇದಲ್ಲದೇ ಬೇರೆ ದಾರಿ ಇಲ್ಲ. ಇದನ್ನು ಒಬ್ಬನು ತಿಳಿಯುವುದರ ಮೊದಲು ಪೂರ್ವಾನ್ಹ ಕಳೆದಿರುತ್ತದೆ.
ಬೆಳಗಿನ ಹೊತ್ತು ಒಬ್ಬನು ಹಾಸಿಗೆಯಲ್ಲಿ ತುಸು ಹೆಚ್ಚಿನ ಸಮಯ ಇರಲು ನಿಶ್ಚಯಿಸುತ್ತಾನೆ ಹಾಗು ಸಪ್ಪಳ ಶಬ್ದಗಳ ಚಿಂತೆಯಿಂದ ಯಾವಾಗಿಂತ ಮೊದಲೇ, ಏಳುತ್ತಾನೆ. ಯಾಕೆಂದರೆ ಅದು ಭಾನುವಾರ ಆಗಿತ್ತು. ಪಕ್ಕದ ಮನೆಯ ರೇಡಿಯೋ ಉತ್ಸಾಹಿ ಒಂದು ಗಂಟೆ ಮುಂಚಿತವಾಗಿ ಟ್ಯೂನ್ ಮಾಡಲು ಈ ದಿನಕ್ಕೆ ಕಾಯುತ್ತಾನೆ, ಒಂದು ಮೋಟಾರ್ ಕಾರ್ ಜೋರಾಗಿ ಶಬ್ದ ಮಾಡುವುದು, ಮಕ್ಕಳು ಈ ದಿನ ರಜೆಯಾದುದರಿಂದ ಸಂತೋಷದಲ್ಲಿ ಗದ್ದಲ ಮಾಡುತ್ತಿದ್ದಾರೆ. ಇವೆಲ್ಲಾ ಆದಿತ್ಯವಾರ ಭಕ್ತನು ಒಂದು ಗಂಟೆ ಜಾಸ್ತಿ ಹಾಸಿಗೆಯಲ್ಲಿ ಕಳೆಯುವುದಕ್ಕೆ ಯೋಜನೆ ಮಾಡುತ್ತಿರುವಾಗ ನಡೆಯುವುದು.
ಆ ಮನುಷ್ಯನು ಆಶಾಭಂಗದ ಮನಸ್ಥಿತಿಯೊಂದಿಗೆ ಹಾಸಿಗೆಯಿಂದ ಏಳುತ್ತಾನೆ; ಈ ರೀತಿ ಒಂದು ದಿನವನ್ನು ಪ್ರಾರಂಭಿಸುವುದು ಸರಿಯಲ್ಲ. ಯಾವಾಗ ಒಬ್ಬನ ಮನಸ್ಥಿತಿ ಸರಿ ಇಲ್ಲದಾಗ ಇಡೀ ದಿವಸ ಉಲ್ಲಾಸ ರಹಿತವಾಗಿ ಇರುತ್ತಾನೆ ಹಾಗು ಆದಿತ್ಯವಾರ ಕಳೆದುಹೋದಂತೆ. ನಂತರ ಅವನು ವಿಷಯ, ವಸ್ತುಗಳನ್ನು ನೋಡಲು ಶುರುಮಾಡುತ್ತಾನೆ. ಅನ್ಯ ದಿನಗಳಲ್ಲಿ ಬೇರೆ ವಿಷಯಗಳನ್ನು ಪರಿಶೀಲಿಸಲು ಸಮಯ ಇಲ್ಲದಾಗುತ್ತದೆ.
ನನಗೆ ಒಬ್ಬ ಎಲ್ಲ ಕೆಲಸದ ದಿನಗಳಲ್ಲೂ ಮೃದು ದಯಾಪರನಾಗಿರುವ ಮನುಷ್ಯನ ಪರಿಚಯ ಇದೆ. ಆದರೆ ಆದಿತ್ಯವಾರದಂದು ತಲೆ ಕೆಳಗೆ ಕಾಲು ಮೇಲೆ ಮಾಡಿ ಮತ್ತೆ ಕಾಲುಗಳನ್ನು ಕೆಳಗೆ ಮಾಡಿ ಪಲ್ಟಿ ಲಾಗ (ಸೊಮರ್ಸಾಲ್ಟ್) ಮಾಡುತ್ತಾನೆ. ಅವನು ಬಹಳ ಕೋಪಿಷ್ಠನಾಗುತ್ತಾನೆ ಮತ್ತು ಸಮಾಧಾನ ಮಾಡುವುದು ಕಷ್ಟವಾಗುವುದು. ಅವನು ಮನೆಯಲ್ಲಿ ಯಾವುದೂ ಸರಿಯಾಗಿ ಸಾಗುತ್ತಿಲ್ಲ ಎಂಬ ಭಾವನೆ ತಳೆಯುತ್ತಾನೆ.
ಅವನು ಒಬ್ಬ ಹವ್ಯಾಸಿ; ತನ್ನ ಕೈಗಳಿಂದ ಸ್ವತಃ ಸರಿಪಡಿಸುವುದು ಅವನಿಗೆ ಇಷ್ಟ. ಅವನು ಆದಿತ್ಯವಾರಗಳಿಗೆ ತುಂಬಾ ಕೆಲಸಗಳನ್ನು ಇಟ್ಟುಕೊಳ್ಳುತ್ತಾನೆ. ಒಂದು ಚಿತ್ರವನ್ನು ತೂಗಾಡಿಸುವುದು, ಬರುವ ಕರ್ಕಶ ಉಸಿರು ಕಟ್ಟಿಸುವ ಶಬ್ದವನ್ನು ನಿಲ್ಲಿಸುವುದು, ಇಲ್ಲವೇ ವಾಚ್ ಅಥವಾ ಸೈಕಲ್‌ಗೆ ಎಣ್ಣೆ ಕೊಡುವುದು, ಇವೆಲ್ಲಾ ಆದಿತ್ಯವಾರದ ಕೆಲಸಗಳಾಗಿರುತ್ತವೆ. ವಾರ ಪೂರ್ತಿ ಆದಿತ್ಯವಾರದ ದಿನಕ್ಕೆ ಯಾವ ಕೆಲಸಗಳನ್ನು ಮಾಡುವುದು ಎಂಬುದಾಗಿ ಮನಸ್ಸಿನಲ್ಲಿ ಆಲೋಚಿಸುತ್ತಾ ಇರುತ್ತಾನೆ.
ಎಣಿಸಿದಂತೆ ಮಾಡುವುದು ಸಾಧ್ಯವಾದಲ್ಲಿ ಅವನು ಮಧ್ಯರಾತ್ರಿಯ ತನಕ ಮತ್ತು ಸೋಮವಾರದ ಮುಂಜಾವಿನವರೆಗೆ ಮುಂದುವರಿಸಬೇಕಾಗಬಹುದು. ಆದರೆ ಅವನು ಈ ಕಷ್ಟಕರವಾದ ಕೆಲಸವನ್ನು ಮುಗಿಸುವುದಿಲ್ಲ. ಅವನು ಸಂಶಯವಿಲ್ಲದೆ ರೇಡಿಯೋ ಅಥವಾ ವಾಚ್ ಅನ್ನು ದಿನದ ಮೊದಲಲ್ಲೇ ಬಿಚ್ಚುತ್ತಾನೆ ಮತ್ತು ಕಾರ್ಯಾಗಾರದಲ್ಲಿ ಪದ್ಮಾಸನ ಹಾಕಿ ದೇವರಂತೆ ನೆಲದಲ್ಲಿ ಕೂರುತ್ತಾನೆ. ಫ್ರಾನ್ಸಿಸ್ ಥಾಮ್ಪ್ಸೊ ನನು ಶೆಲ್ಲಿ ಎಂಬ ಆಂಗ್ಲ ಕವಿಯ ಕುರಿತು ಹೇಳಿದ್ದಾನೆ; ‘ವಿಶ್ವವು ಅವನ ಸಂತೋಷಗಳ ಡಬ್ಬವಾಗಿದೆ’ ಎಂದು. ನಮಗೆ ಈ ಚಿತ್ರದ ಸ್ಮರಣೆಯಾಗುತ್ತದೆ.
ನಮಗೆ ಈ ಮನುಷ್ಯನು ಅವನ ಆಟದ ಸಾಮಾನುಗಳನ್ನು ಹರಡಿಕೊಂಡು ಅವುಗಳ ಮಧ್ಯೆ ಕುಳಿತಿರುವುದನ್ನು ನೋಡುವಾಗ ಶೆಲ್ಲಿಯ ಚಿತ್ರದ ನೆನಪಾಗುತ್ತದೆ. ಇಲ್ಲಿ ಸನ್ನಿವೇಶ ಮಾತ್ರ ತೀರಾ ಬೇರೆಯಾಗಿದೆ. ಶೆಲ್ಲಿ ಹೊಸತನ್ನು ಮಾಡುವಾಗ, ಆದರೆ ಈ ಮನುಷ್ಯನಿಗೆ ಯಾವುದನ್ನು ಸರಿಪಡಿಸುವುದೂ ವಸ್ತುಗಳ ಕೊರತೆಯಿಂದ ಆಗುತ್ತಿರಲಿಲ್ಲ.
ಅವನಿಗೆ ಬೇಕೆಂದಿದ್ದ ಒಂದು ಮೊಳೆ, ತಂತಿ ಅಥವಾ ಮುಂದೆ ಉಪಯೋಗಿಸಲು ಇರಿಸಿದ್ದ ಸರಿಗೆ ಪ್ರಾಮುಖ್ಯವಾದ ಚಿಲಕ ಅಥವಾ ಇನ್ನೇನಾದರೂ ಸದಾ ಸಿಗದಿರುವುದು ಮತ್ತು ಇದು ಅವನಿಗೆ ಸಿಟ್ಟು ಬರಿಸುತ್ತದೆ. ಅವನಿಗೆ ಹಲವಾರು ಜನ ಮಕ್ಕಳಿದ್ದಾರೆ ಮತ್ತು ನಾಶಗಳು ಅವರ ಅನುಪಾತಕ್ಕೆ (ಪ್ರಮಾಣಕ್ಕೆ) ಸರಿಯಾಗಿ ಇವೆ. ಇದು ಈ ಸಿಟ್ಟುಗೊಳ್ಳುವ ಮನುಷ್ಯನಿಗೆ ಸುಲಭದಲ್ಲಿ ನಿಭಾಯಿಸಲು ಕಷ್ಟವಾಗುತ್ತದೆ. ಮಕ್ಕಳು ಅವರಾಗಿಯೇ ಬೇರೆ ಬೇರೆ ವಸ್ತುಗಳನ್ನು ವಾರ ಇಡೀ ತೆಗೆದುಕೊಳ್ಳುತ್ತಾರೆ. ಪೆನ್ಸಿಲಿನ ಮೊನೆ ಮಾಡಲು ಬ್ಲೇಡ್, ಏನನ್ನೋ ಕಟ್ಟುವುದಕ್ಕೆ ಹಗ್ಗ, ಇನ್ನೇನಕ್ಕೋ ಇನ್ನೊಂದು, ಮತ್ತು ನಟ್ ಮತ್ತು ಬೋಲ್ಟ್ ಯಾಕೆಂದರೆ ಅವು ನೋಡುವುದಕ್ಕೆ ಅಂದವಾಗಿ ಇವೆ.
ಈ ಮನುಷ್ಯನ ಸಿಟ್ಟಿಗೆ ಮಿತಿಯಿಲ್ಲ. ಅವನು ಮಕ್ಕಳನ್ನು ಕರೆದು ಸಾಲಾಗಿ ನಿಲ್ಲಿಸುತ್ತಾನೆ ಮತ್ತು ತನಿಖೆ ನಡೆಸುತ್ತಾನೆ; ತನಿಖೆ ಅಗತ್ಯವಾದ ವಿಷಯಗಳನ್ನು ತಿಳಿಸಬಹುದು ಅಥವಾ ಏನೂ ಇಲ್ಲದಿರಬಹುದು. ಇದು ದೇವರ ಮಡಿಲಲ್ಲಿ ಇದೆ. ಒಬ್ಬ ಮಗನಿಗೆ ತನ್ನ ತಂದೆಯು ಮಾಡಿದ ವಿಚಾರಣೆಯು ಸರಿ ಎಂದು ಅನಿಸುತ್ತದೆ. ಹಾಗು ಅವನು ಮಾಡಿದ ಸುಲಿಗೆಯನ್ನು ಹಿಂದಿರುಗಿಸುವ ಯೋಚನೆ ಮಾಡುತ್ತಾನೆ. ಇನ್ನೊಬ್ಬನು ಒಳ್ಳೆಯ ನಡತೆಯ ಸರ್ಟಿಫಿಕೇಟ್‌ನ ಆಶೆಯಿಂದ ಹಿಂತಿರುಗಿಸಬಹುದು; ಅಥವಾ ಇತರರು ಏನನ್ನೂ ಮಾಡದಿರಬಹುದು ಮತ್ತು ತಮ್ಮ ಐಶ್ವರ್ಯದಿಂದ ಏನನ್ನೂ ಕೊಡದಿರಬಹುದು. ಆಟದ ಸಾಮಾನುಗಳನ್ನು ಪೆಟ್ಟಿಗೆಯಲ್ಲಿ ಇರಿಸಿಕೊಂಡು ಕುಳಿತ ಅಪ್ಪನಿಗೆ ತುಂಬಾ ನಿರಾಸೆಯಾಗುತ್ತದೆ.
ಅವನ ಅನುಮಾನವು ಹೆಚ್ಚಾಗಿ, ಅವನು ತನಗೆ ಆದ ಎಲ್ಲಾ ನಷ್ಟಗಳ ಲೆಕ್ಕ ಹಾಕಲು ನಿಶ್ಚಯಿಸುತ್ತಾನೆ; ಅವಸರದಲ್ಲಿ ಎದ್ದು ಅವನ ಕಪಾಟುಗಳನ್ನು ತೆರೆಯುತ್ತಾನೆ. ಅವನು ಮನೆಯವರಲ್ಲಿ ಸಿಡುಕುತನದಿಂದ ಇದು ಎಲ್ಲಿದೆ? ಇಲ್ಲವೇ ಅದಕೆ ಏನಾಯಿತು? ಎಂಬುದಾಗಿ ಪ್ರಶ್ನೆ ಮಾಡುತ್ತಾನೆ. ಆದರೆ ‘ಜೆಸ್ಟಿಂಗ್ ಪೈಲಟ್ʼ ನ ಪ್ರಶ್ನೆಗಳಂತೆ ಅವನ ಪ್ರಶ್ನೆಗಳು ಉತ್ತರವಿಲ್ಲದೆ ಹೋಗುತ್ತವೆ. ಜನರು ಸಾಧ್ಯವಿದ್ದರೆ ಮಾತ್ರ ಉತ್ತರ ಕೊಡುತ್ತಾರೆ. ಉಳಿದವರು ಸುತ್ತಿಗೆ ಎಲ್ಲಿ ಹೋಗಿದೆ ಎಂಬುದಾಗಿ ಅರಿಯರು, ಅದನ್ನು ಅವನಿಗಿಂತ ಹೆಚ್ಚಾಗಿ ಯಾರೂ ನೋಡಿಲ್ಲ. ಅವನು ತಾನು ಅಸಹಾಯಕ ಸ್ಥಿತಿಯಲ್ಲಿ ಜೀವಿಸುತ್ತೇನೆ ಎಂಬುದನ್ನು ಅರಿಯುತ್ತಾನೆ. ಅವನು ತನ್ನ ಪ್ರಶ್ನೆಗಳನ್ನು ಹಾಗೆ ಗಾಳಿಯಲ್ಲಿ ಬಿಡುತ್ತಾನೆ ಆದರೆ ವಾಸ್ತವವಾಗಿ ಅದು ಮನೆಯ ಒಳಗಡೆ ಕೆಲಸದಲ್ಲಿ ಮಗ್ನವಾಗಿರುವ ತನ್ನ ಪತ್ನಿಗೆ ಅನ್ವಯಿಸುವಂತೆ ಮತ್ತು ಖುಷಿಯಿಂದ ತಮ್ಮ ತಂದೆಯವರ ಕೋಪೋದ್ರೇಕಗಳನ್ನು ನೋಡುತ್ತಿರುವ ಹಾಗು ಸಮಯ ಸಿಕ್ಕಿದಾಗ ಓಡಿಹೋಗಲು ಕಾಯುತ್ತಿರುವ ಮಕ್ಕಳಿಗೆ.
೭ ವಯಸ್ಸಿನ ಪಲಾಯನವಾದಿಯಾದ ಒಂದು ಮಗುವು, ಸಹಜವಾಗಿ ಕಾಣುವ ಮುಗ್ಧತೆಯಿಂದ ತಿಳಿಸುತ್ತಾನೆ. ಏನೆಂದರೆ ಬಹುಶಃ ಒಂದೊಂದು ವಸ್ತುವು ಒಂದೊಂದು ಕಡೆ ಇರಬೇಕು. ಅಡ್ಡಿ ಇಲ್ಲವಾದರೆ ತಾನು ಹೋಗಿ ಅವುಗಳನ್ನು ಹುಡುಕುವುದಾಗಿ ಹೇಳಿದನು. ಆ ಸಿಡುಕಿನ ಮನುಷ್ಯನು ಈ ಕುತಂತ್ರಕ್ಕೆ ಸಿಕ್ಕಿಬೀಳುತ್ತಾನೆ. ಅವನಿಗೆ ಏನಾಗಿದೆ ಎಂದು ತಿಳಿಯುವ ಮೊದಲೇ ಆ ಎಳೆಯ ಹುಡುಗನು ಓಡಿ ಹೋಗಿರುತ್ತಾನೆ. ಒಂದು ಬಾರಿ ಸಾಲು ತಪ್ಪಿದರೆ ಸದಾ ತಪ್ಪಿದಂತೆ.
ಆ ಮನುಷ್ಯನು ಇನ್ನಾವುದರಲ್ಲೋ ತಲ್ಲೀನನಾಗಿ, ಬಹುಷಃ ಮೇಜಿನ ಮೇಲೆ ಇರುವ ಯಾವುದೊ ಪುಸ್ತಕ ಯಾ ವಾರ್ಷಿಕ ಪತ್ರಿಕೆ ಓದುವುದರಲ್ಲಿ ಮಗ್ನನಾಗಿರುತ್ತಾನೆ ಹಾಗು ಇತರ ವಿಷಯಗಳನ್ನು ತಾತ್ಕಾಲಿಕವಾಗಿ ಮರೆತಿರುತ್ತಾನೆ, ಮತ್ತೆ ಅದೇ ಮಕ್ಕಳು ಕಾಳಜಿಯಿಲ್ಲದೆ ನಿಶ್ಚಿಂತರಾಗಿ ನೆರೆಮನೆಯಲ್ಲಿ ಆಡುತ್ತಿದ್ದರು. ಅವರನ್ನು ಮನೆಗೆ ಹಿಂತಿರುಗುವಂತೆ ಕಿಟಿಕಿಯ ಮೂಲಕ ಕರೆದು ಹೇಳುತ್ತಾನೆ.
ಅವರೆಲ್ಲಾ ಗುಂಪು ಆಗಿ ಹಿಂತಿರುಗುತ್ತಾರೆ ಮತ್ತು ಆ ಮನುಷ್ಯನು ಅವರನ್ನು ಕೆರಳಿಸುವ ರೀತಿಯಲ್ಲಿ ಅವರ ಪುಸ್ತಕಗಳ ಮತ್ತು ಶಾಲಾ ಕೆಲಸಗಳ ಬಗ್ಗೆ ವಿಚಾರಿಸುತ್ತಾನೆ. ಇದು ಅವರ ವಿದ್ಯಾಭ್ಯಾಸದ ಬೆಳವಣಿಗೆ ಮತ್ತು ಒಲವುಗಳ ಪರೀಕ್ಷೆಯ ಅವಶ್ಯವನ್ನು ಸೂಚಿಸುತ್ತದೆ. ತನ್ನ ಮಕ್ಕಳು ಸರಿಯಾದ ಹಾದಿಯಲ್ಲಿ ಬೆಳೆಯುತ್ತಿಲ್ಲ ಎಂಬುದನ್ನು ತಿಳಿಯುತ್ತಾನೆ; ಅವನು ಇಲ್ಲಿಯ ತನಕ ಮಕ್ಕಳು ಎಷ್ಟು ಕೆಟ್ಟ ರೀತಿಯಲ್ಲಿ ಬೆಳೆಯುತ್ತಿದ್ದಾರೆ ಎಂಬುದಾಗಿ ತಿಳಿದಿರಲಿಲ್ಲ. ಒಂದು ರೀತಿಯ ಓರೆಯಾದ ಸಂಬಂಧ ಮನೆಯವರಿಂದ ಕೂಡಾ. ಅವನು ಮಕ್ಕಳನ್ನು ಸ್ವಲ್ಪ ಸಮಯ ಬೆದರಿಸಿದೊಡನೆ ದಣಿದು ಹೋಗುತ್ತಾನೆ. ಈಗ ಅವನು ತಿಳಿಯುತ್ತಾನೆ ಏನೆಂದರೆ ಆದಿತ್ಯವಾರದ ಅರ್ಧ ದಿನವು ಬದಲಾಯಿಸಲು ಆಗದೆ ಕಳೆದು ಹೋಗಿದೆ.
ಸೂರ್ಯನ ಬೆಳಕಿನ ಕೆಲವೇ ಗಂಟೆಗಳು ಉಳಿದಿವೆ. ಅವನು ಈಗ ತಾನು ಈ ದಿನಕ್ಕೆ ಮಾಡಿದ ಭರವಸೆ ಮಧ್ಯಾಹ್ನದ ಊಟವಾದ ನಂತರ ಜ್ಞಾಪಕವಾಗಿ ಸಂತೋಷಕರ ಮನಸ್ಥಿತಿಯಲ್ಲಿ ಇದ್ದನು. ಅವನು ತನ್ನ ಭರವಸೆಗಳನ್ನು ತುಸು ವಿರಾಮದ ನಂತರ ನೆರವೇರಿಸುವುದಾಗಿ ತಿಳಿಸುತ್ತಾನೆ. ತನ್ನ ವಿರಾಮದಿಂದ ಎಚ್ಚರಗೊಂಡಾಗ ಅವನಿಗೆ ಅನಿಸಿತು; ಸಂಸಾರದೊಂದಿಗೆ ಈ ದಿನ ಹೊರಗೆ ಹೋಗುವುದು ಅಸಾಧ್ಯ ಎಂದು. ಇಷ್ಟು ಬಳಲಿರುವ ಆದಿತ್ಯವಾರ ಬಸ್ ನಿಲ್ದಾಣಗಳಲ್ಲಿ ಅವನು ಹಾಗೆಯೇ ಸುಮ್ಮನೆ ವ್ಯಯ ಮಾಡುವ ಹಾಗೆ ಇಲ್ಲ. ಅವನು ನೆನಪಿಸಿಕೊಳ್ಳುತ್ತಾನೆ, ಕೆಲವು ಸಮಯಗಳ ಹಿಂದೆ ೨ ಗಂಟೆಗಳಷ್ಟು ಕಾಲ ಹಸಿದು ಬೊಬ್ಬಿಡುತ್ತಿದ್ದ ಮಕ್ಕಳೊಂದಿಗೆ ಬಸ್ ನಿಲ್ದಾಣದಲ್ಲಿ ಇದ್ದು, ಅವರೆಲ್ಲಾ ತಡ ರಾತ್ರಿಯಲ್ಲಿ ಕಾಲ್ನಡಿಗೆಯಲ್ಲಿ ಮನೆಗೆ ಹಿಂತಿರುಗಬೇಕಾಯಿತು.
ಇದನ್ನು ನೆನೆಸಿಕೊಂಡು ಅವನು ಭಯದಿಂದ ಕಂಪಿಸಿಕೊಂಡನು ಮತ್ತು ಒಮ್ಮೆಲೇ ಅಳುತ್ತಾನೆ, ‘ದಯವಿಟ್ಟು, ನಾವು ಮನೆಯಲ್ಲಿ ಉಳಿಯುವ. ನಿಮ್ಮೆಲ್ಲರನ್ನೂ ಬರುವ ಆದಿತ್ಯವಾರ ಹೊರಗೆ ಕರೆದೊಯ್ಯುತ್ತೇನೆ.’
From THE WRITERLY LIFE, SELECTED NON-FICTION
R K NARAYAN
EDITED BY S. KRISHNAN
First published in Viking by Penguin Books India 2001
ಡಾ. ಖಂಡಿಗೆ ಮಹಾಲಿಂಗಭಟ್ ಮೂಲತಃ ಕಾಸರಗೋಡಿನ ನೀರ್ಚಲ್ ನವರು. “ದಂತಾರೋಗ್ಯದ ರಹಸ್ಯ” ಇವರ ಪ್ರಕಟಿತ ಕೃತಿ. ಸಧ್ಯ ಮಣಿಪಾಲದಲ್ಲಿ ನೆಲೆಸಿದ್ದಾರೆ.