ಜೀವನ ರೂಪಿಸಿಕೊಳ್ಳುವ ನಿರೀಕ್ಷೆಯಲ್ಲಿ ಕೆಲವು ಮಾತುಗಳು
ಗಂಟಿಚೋರ ಸಮುದಾಯ ಬಹುಶಃ ಹೊಟ್ಟೆಪಾಡಿನ ಕೆಲಸವಾಗಿ ಈ ಭಾಗದಲ್ಲಿ ಸ್ಥಳೀಯವಾಗಿ ಬಾವಿ ತೋಡುವ ಕೆಲಸಕ್ಕೆ ಹೊಂದಿಕೊಂಡಿರಬಹುದು ಅನ್ನಿಸುತ್ತದೆ. ಹಾಗಾಗಿ ಪರ್ಯಾಯ ವೃತ್ತಿಗಳನ್ನು ಕೈಗೊಳ್ಳಲು ಸರಕಾರ ತನ್ನ ಯೋಜನೆಗಳಲ್ಲಿ ಸಹಾಯ ಮಾಡಿದರೆ, ಈ ಸಮುದಾಯ ಈ ಅಪಾಯಕಾರಿ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಅಂತೆಯೇ ಇದೇ ವೃತ್ತಿಯನ್ನು ಸುರಕ್ಷಿತವಾಗಿ ಮುಂದುವರೆಯಲು ಸರಕಾರ ಆಧುನಿಕ ತಾಂತ್ರಿಕ ಸೌಲಭ್ಯವನ್ನು ಪಡೆಯಲು ಸಹಕರಿಸಬಹುದಾಗಿದೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಕೊನೆಯ ಕಂತು