ನನ್ನ ನಾನಿಯೂ… ಸಕ್ಕರೆ ಪುಟಾಣಿಯೂ….
ಮಸೀದಿಯಲ್ಲಿ ಶುಕ್ರವಾರಕ್ಕೊಮ್ಮೆ ಸಿಗುತ್ತಿದ್ದ ಪುಟಾಣಿ ಸಕ್ಕರೆಯ ರುಚಿ ನನ್ನ ಬೆಂಬಿಡದೆ ಕಾಡತೊಡಗಿ ದಿನವೂ ತಿನ್ನಬೇಕೆನಿಸುತ್ತಿತ್ತು. ಆದರೆ ನನಗೆ ತಿನ್ನಬೇಕೆನಿಸಿದಾಗ ಎಲ್ಲಿಂದ ಪಡೆಯುವುದು? ಶುಕ್ರವಾರ ಬರುವವರೆಗೂ ಕಾದು ಅವರು ಕೊಡುವ ಒಂದು ತುತ್ತಿನಷ್ಟು ಪುಟಾಣಿ ಸಕ್ಕರೆ ನನ್ನ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ. ತಿಂದರೆ ಹೊಟ್ಟೆ ತುಂಬುವಷ್ಟು ಅದನ್ನೇ ತಿನ್ನಬೇಕೆನ್ನುವ ಆಸೆ. ಅಪ್ಪನ ಹತ್ತಿರನೋ ಅವ್ವನ ಬಳಿಯೋ ರೊಕ್ಕ ಕೇಳಿದರೆ ಆಗ ಎಂಟಾಣೆಯೋ ಒಂದು ರೂಪಾಯಿಯೋ ಸಿಗುತ್ತಿತ್ತಷ್ಟೆ.
ಇಸ್ಮಾಯಿಲ್ ತಳಕಲ್ ಬರೆಯುವ “ತಳಕಲ್ ಡೈರಿ”ಯಲ್ಲಿ ಹೊಸ ಬರಹ