Advertisement
ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

ಕಣ್ಣ ಹನಿ ಜಿನುಗಿಸುವ ಫೋಟೋ…

ಸಿನಿಮಾದ ಆರಂಭ ಮುಂಜಾನೆಯಿಂದ ಕ್ಯಾಮೆರಾ ಮೇಲಿಂದ ಕೆಳಗೆ ಪ್ಯಾನ್ ಆದರೆ ಸಿನಿಮಾದ ಅಂತ್ಯದಲ್ಲಿ ಮುಸ್ಸಂಜೆ ಮುಗಿದು ಕತ್ತಲು ಹರಿದು ದೀಪವೊಂದು ಆರಿ ಕತ್ತಲಾಗುತ್ತದೆ. ಕ್ಯಾಮೆರಾ ನಿಧಾನಕ್ಕೆ ಮೇಲಕ್ಕೆ ಪ್ಯಾನ್ ಆಗಿ ನಿಲ್ಲುತ್ತದೆ. ಕತೆ ಎಲ್ಲಿ ಶುರುವಾಯ್ತೊ ಅಲ್ಲೇ ಕೊನೆಯಾಗಿದೆ. ಫೋಟೋ ತೆಗೆಸಲು ಹೊರಟ ದುರ್ಗ್ಯಾ ನಮ್ಮೆಲ್ಲರಲ್ಲೂ ಕೂತುಬಿಡುತ್ತಾನೆ. ಇದು ನಿರ್ದೇಶಕರ ಮೊದಲ ಸಿನಿಮಾ ಅಂದಾಗ ಎಲ್ಲರಿಂದ ಓಹ್! ಎಂಬ ಉದ್ಘಾರ…
ಉತ್ಸವ್‌ ಗೋನವಾರ ನಿರ್ದೇಶನದ “ಫೋಟೋ” ಸಿನಿಮಾದ ಕುರಿತು ಜಯರಾಮಾಚಾರಿ ಬರಹ

Read More

ಕಪ್ಪು ಬಿಳುಪಿನಾಚೆಯ…. ಇರಟ್ಟ

ಕೊನೆಗೂ ವಿನೋದ್ ಸತ್ತಿದ್ದು ಹೇಗೆ?! ಊರ ತುಂಬ ಶತ್ರುಗಳನ್ನು ಸಂಪಾದಿಸಿದ ಅವನನ್ನು ಅವನು ಕೆಲಸ ಮಾಡುವ ಸ್ಟೇಷನ್ನಿನಲ್ಲಿಯೇ ಸಾಯಿಸಿದವರು ಯಾರು?! ಎನ್ನುವುದು ಚಿತ್ರದ ಕಥಾ ಹಂದರ. ಚಿತ್ರವನ್ನು ಮತ್ತೆ ಮತ್ತೆ ನೋಡುತ್ತಾ, ಅದು ಹೇಳುತ್ತಿರುವ ವಿಷಯವನ್ನು ಬಗೆಯುತ್ತಾ ಹೋದರೆ ಪ್ರತಿ ಸಲವೂ ಹೊಸ ಹೊಸ ಆಯಾಮಗಳು ಹೊಳೆಯುತ್ತವೆ, ಮನುಷ್ಯನ ಎರಡು ವೈರುಧ್ಯಗಳನ್ನ ಯಾವ ಅವಸರವಿಲ್ಲದೆ ಬೆನ್ನಲ್ಲೊಂದು ಛಳುಕು ಹುಟ್ಟಿಸುತ್ತ ಸಾಗುತ್ತದೆ.
ಮಲಯಾಳಂನ “ಇರಟ್ಟ” ಸಿನೆಮಾದ ಕುರಿತು ಜಯರಾಮಚಾರಿ ಬರಹ ನಿಮ್ಮ ಓದಿಗೆ

Read More

ಸದ್ದು… ಇಲ್ಲಿ ಯುದ್ಧ ಕತೆ ಹೇಳುತ್ತಿದೆ…

ಮೇಲ್ನೋಟಕ್ಕೆ ಇದು ಪೌಲ್ ಮತ್ತು ಆತನ ಸ್ನೇಹಿತರ ಜೀವನದ ಕತೆ ಆದರೂ, ಅದರ ಜೊತೆಯಲ್ಲಿ ಯುದ್ಧವನ್ನು ಒಳಗಿನಿಂದ ಹೊರಗಿನಿಂದ ತೋರಿರುವ ರೀತಿ ಅನನ್ಯ. ಯುದ್ಧವೆಂದರೆ ಹಸಿವು. ನೆಲದ ಹಸಿವು. ಇದರ ಜೊತೆಯಲ್ಲಿ ದೇಹದ ಹಸಿವು ಹೆಣ್ಣಿನ ಹಸಿವು ಹೆಚ್ಚಾಗಿ ಯುದ್ಧದಲ್ಲೇ ಇದ್ದು ಬದುಕಿನ ಹಸಿವನ್ನು ಅದ್ಭುತವಾಗಿ ತೋರಿಸಿದ್ದಾರೆ, ಪ್ರತಿ ಸೈನಿಕನು ಕೊನೆ ಗಳಿಗೆಯಲ್ಲಿ ಬದುಕಲು ಒದ್ದಾಡುವ ಕ್ಷಣಗಳಿವೆ.
‘ಆಲ್ ಕ್ವೈಯೆಟ್ ಆನ್ ದ ವೆಸ್ಟರ್ನ್‌ ಫ್ರಂಟ್’ ಸಿನಿಮಾದ ಕುರಿತು ಜಯರಾಮಾಚಾರಿ ಬರಹ

Read More

ಅವ್ವ ಮತ್ತು ಅವಳ ಕಾಪಿಟ್ಟ ಟ್ರಂಕು

ಅವಳು ಸತ್ತು, ಅವಳ ತಿಥಿ ಮಾಡಿದ ಮೇಲೆ ನಾನು ಮಾಡಿದ ಮೊದಲ ಕೆಲಸ ಅವಳ ಟ್ರಂಕನ್ನು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ವೃದ್ಧಾಶ್ರಮಕ್ಕೆ ಕೊಟ್ಟು ಟ್ರಂಕಲ್ಲಿ ಸಿಕ್ಕ ಐನೂರು ರುಪಾಯಿಯ ಮಾಸಲು ನೋಟನ್ನು ಆಶ್ರಮಕ್ಕೆ ಕೊಟ್ಟಿದ್ದು, ಆಮೇಲೆ ತಡೆಯಲಾರದೆ ಅವಳ ಇಷ್ಟದ ಕೆಂಪು ಕಾಟನ್ ಸೀರೆ, ಅವಳ ಆರೆಂಜ್ ಕಲರಿನ ಜಾಕೆಟ್, ಅವಳು ಬಳಸುತ್ತಿದ್ದ ಉಮಾ ಗೋಲ್ಡ್ ಬಳೆ ತೆಗೆದುಕೊಂಡೆ, ಅವು ಇನ್ನೂ ನನ್ನ ಬೀರುವಿನಲ್ಲಿದೆ, ಆ ಜಾಕೆಟ್ ಸೀರೆ ಈಗಲೂ ಮುಟ್ಟಿದರೆ ಅವಳ ಕೊನೆಯೇ ಕಾಣದ ಮಮತೆಯಿಂದ ಮೈ ತಡುವಿಕೆ ನೆನಪಾಗುತ್ತದೆ, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
ಜಯರಾಮಚಾರಿ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ