ಒಬ್ಬರೊಳಗೊಬ್ಬರು ಮಾಯವಾಗುವ ಬಗೆ
‘ದಿ ವೈಟ್ ಕ್ಯಾಸಲ್’ ಕಾದಂಬರಿ ಟರ್ಕಿಯ ಆಟಮನ್ ಸಾಮ್ರಾಜ್ಯದಲ್ಲಿ ಗುಲಾಮನಾಗಿರುವ ಇಟಲಿ ದೇಶದ ವಿದ್ಯಾರ್ಥಿಯೊಬ್ಬನ ಪ್ರವರ. ಇದು ಹದಿನೇಳನೆಯ ಶತಮಾನದ ಕತೆ. ಇಟಲಿಯ ವೆನಿಸ್ ನಗರದಿಂದ ನೇಪಲ್ಸ್ ನಗರಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ಟರ್ಕರ ಸೈನ್ಯಕ್ಕೆ ಸೆರೆ ಸಿಕ್ಕವನು. ಜೀವ ಹೋದರೂ ತಾನು ಹುಟ್ಟಿದ ಕ್ರಿಶ್ಚಿಯನ್ ಧರ್ಮವನ್ನು ಬಿಡಲಾರೆ ಎಂಬ ಪಣ ತೊಟ್ಟವನು. ತೊಟ್ಟ ಪಣವನ್ನು ಕಾಯ್ದುಕೊಳ್ಳುವುದು ಸುಲಭವೇ ? ಧರ್ಮದ ಈ ನಂಟು ಅವನನ್ನು ಎತ್ತ ಕೊಂಡೊಯ್ಯುವುದು?”
Read More