ಕೆಲವು ಗಂಟೆಗಳ ಬಂಧವೊಂದು ಬದುಕಾದ ಬಗೆ
‘ಆತ’ನೊಂದಿಗೆ ಮದುವೆ ಮಂಟಪಕ್ಕೆ ಬರುವ ಅವಳು ಕೆಲವೇ ಕ್ಷಣಗಳಲ್ಲಿ ದಾಂಡೇಕರ್ ನೊಂದಿಗೆ ಮದುವೆ ಮನೆಯಿಂದ ಓಡಿ ಹೋಗುತ್ತಾಳೆ. ಅವರಿಬ್ಬರು ಮುಂಬೈ ಪೋಲೀಸ್ ಆಫೀಸ್ ತಲುಪಿ ಅಲ್ಲಿನ ಲೈಬ್ರರಿಯಲ್ಲಿ ಕೆಲವು ಗಂಟೆ ಕಳೆಯುತ್ತಾರೆ. ಆ ಕೆಲವು ಗಂಟೆಗಳ ಸಾಂಗತ್ಯದಲ್ಲಿ ಇಬ್ಬರ ಮಧ್ಯೆ ಪ್ರವಹಿಸುವ ಭಾವಗಳು ಸಾಗರವಾಗಿ ಹೊಮ್ಮುವ ರೀತಿ ಒಂದು ಚೈತನ್ಯ ಭಾವವಾಗಿ ಬಹುಕಾಲ ತಾಕುವಂತದ್ದು.
ಪ್ರೀತಿ ಮತ್ತು ಸಾವನ್ನು ದಟ್ಟ ಭಾವನೆಗಳ ಬಂಧದಲ್ಲಿ ಕಟ್ಟಿಕೊಡುವ ಹಾಡಿನ ಬಗ್ಗೆ ಮಂಜುಳ ಡಿ ಬರೆದ ಪುಟ್ಟ ಬರಹ ಇಲ್ಲಿದೆ.