ಗಾಂಧೀ ಎಂಬ ಶಾಶ್ವತ ಸತ್ಯ
ಗಾಂಧೀಜಿಗೆ ಅಹಿಂಸೆ ಕೇವಲ ಒಂದು ಪರಿಕಲ್ಪನೆಯಲ್ಲ. ಅದು ಯಾರಿಗೂ ಯಾವುದೇ ನೋವನ್ನುಂಟು ಮಾಡಬಾರದೆಂಬುದನ್ನು ಮನಗಾಣಿಸಬೇಕು; ಕಾರಣ ದುರಾಲೋಚನೆಯೂ ಹಿಂಸೆ, ಅಸಹನೆಯೂ ಹಿಂಸೆ. ಅನ್ಯರಿಗೆ ಕಡೆಗಣಿಸುವುದೂ ಹಿಂಸೆ. ಅಷ್ಟೇ ಏಕೆ ಲೋಕಕ್ಕೆ ಅವಶ್ಯಕವಾದುದನ್ನು ತಾನೊಬ್ಬನೇ ಇಟ್ಟುಕೊಳ್ಳುವದೂ ಹಿಂಸೆಯೆ. ಇದರಿಂದ ಅಹಿಂಸೆಯೆಂದರೆ ಒಂದು ರೀತಿಯ ನಕಾರಾತ್ಮಕ ಧೋರಣೆಯೆಂದು ತಿಳಿಯಬೇಕಿಲ್ಲ. ಹೇಡಿತನವಂತೂ ಖಂಡಿತ ಅಲ್ಲ. ಮನುಬಳಿಗಾರ್ ಅವರು ಮಹಾತ್ಮಾ ಗಾಂಧೀಜಿಯ ಕುರಿತು ಬರೆದ ಲೇಖನವೊಂದು ನಿಮಗಾಗಿ
Read More