ಸತ್ತ ಕುದುರೆಯ ಎದೆಗೆ ಮತ್ತೆಮತ್ತೆ ಬಡಿಯುತ: ʼಅಪರಾಧ ಮತ್ತು ಶಿಕ್ಷೆʼ ಐದನೆಯ ಅಧ್ಯಾಯ
“ರಾಸ್ಕೋಲ್ನಿಕೋವ್ ಭಯಂಕರವಾದ ಕನಸು ಕಂಡ. ಪುಟ್ಟ ಊರಿನಲ್ಲಿ ಮಗುವಾಗಿದ್ದಾಗಿನ ಕನಸು. ಈಗ ಅವನಿಗೆ ಏಳು ವರ್ಷ. ಯಾವುದೋ ಹಬ್ಬದ ದಿನ ಅಪ್ಪನ ಜೊತೆಯಲ್ಲಿ ಸಾಯಂಕಾಲದ ಹೊತ್ತು ಉರಾಚೆ ನಡೆದುಕೊಂಡು ಹೋಗುತ್ತಿದ್ದಾನೆ. ಧಗೆಯ ದಿನದ ಮಂಕು ಸಂಜೆ. ಹಳ್ಳಿ ಅವನ ನೆನಪಿನಲ್ಲಿ ಹೇಗೆ ಉಳಿದಿತ್ತೋ ಕನಸಿನಲ್ಲೂ ತದ್ವತ್ ಹಾಗೇ ಕಾಣುತ್ತಿತ್ತು. ನೆನಪಿನಲ್ಲಿ ಮಸುಕಾಗಿದ್ದ ಊರು ಕನಸಿನಲ್ಲಿ ಸ್ಪಷ್ಟವಾಗಿತ್ತು.”
Read More