Advertisement
ಎಂ.ವಿ. ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ. ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು  ಗಾಡ್, ಲೈಫ್, ಅಂಡ್ ಡೆತ್  (ಕವನ ಸಂಕಲನ), "ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು. "ಲಾಸ್ಟ್ ಲೈಫ್" ಕಥನ ಕವನ ಮತ್ತು "ದ್ವಂದ್ವ" ಕವನ ಸಂಕಲನ ಅಚ್ಚಿನಲ್ಲಿವೆ

ಬಿಡಿ ನನ್ನ..!: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಮೂರನೆಯ ಅಧ್ಯಾಯ

“ಬಾಗಿಲು ಮುಚ್ಚಿಕೊಂಡದ್ದೇ ತಡ, ಆ ರೋಗಿ ತಟಕ್ಕನೆ ಹೊದಿಕೆಯನ್ನು ದೂರ ತಳ್ಳಿ, ಹಾಸಿಗೆಯಿಂದ ಚಿಮ್ಮಿ, ಅರೆ ಹುಚ್ಚನ ಹಾಗೆ ಕೋಣೆಯ ಮಧ್ಯದಲ್ಲಿ ನಿಂತ. ಅವರೆಲ್ಲ ಹೋಗಲೆಂದು ಇಲ್ಲಿಯವರೆಗೂ ತಳಮಳಿಸುತ್ತ ಕಾಯುತ್ತಿದ್ದ. ಅವರಿಲ್ಲದಿದ್ದರೆ ಮಾಡಬೇಕಾದ ಕೆಲಸ ಸಟ್ಟನೆ ಮಾಡಬಹುದು ಅನ್ನಿಸುತ್ತಿತ್ತು. ಏನು ಕೆಲಸ? ಅದೇ ಮರೆತುಹೋಗಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..”

Read More

ಎಲ್ಲಿ ನೋಡಿದರೂ…!: ‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ಎರಡನೇ ಭಾಗದ ಎರಡನೆಯ ಅಧ್ಯಾಯ

“ಕೊನ್ನೊಗ್ವಾಡೆಯೆಸ್ಕಿ ಬುಲೆವಾಕ್ಕೆ, ಎರಡು ದಿನದ ಹಿಂದೆ ಹುಡುಗಿ ಸಿಕ್ಕಿದ್ದಳಲ್ಲ, ಅದೇ ಬೀದಿಗೆ ತಿರುಗುವಾಗ, ಅವನ ನಗು ಹೊರಟು ಹೋಯಿತು. ಬೇರೆಯ ಯೋಚನೆಗಳು ತಲೆ ಎತ್ತುವುದಕ್ಕೆ ಶುರುಮಾಡಿದವು. ಆ ದಿನ ಆ ಹುಡುಗಿ ಹೋದ ಮೇಲೆ ಬಹಳ ಹೊತ್ತು ಕೂತು ಯೋಚನೆ ಮಾಡಿದ್ದೆನಲ್ಲಾ ಆ ಬೆಂಚಿನ ಹತ್ತಿರ ಹೋಗುವುದು ಬೇಡ ಅನ್ನಿಸಿತು. ಅವನು ಇಪ್ಪತ್ತು ಕೊಪೆಕ್ ಕೊಟ್ಟಿದ್ದ ಮೀಸೆ ಪೋಲೀಸಿನವನು ಮತ್ತೆ ಕಣ್ಣಿಗೆ ಬಿದ್ದರೆ ಕಷ್ಟವಾಗತ್ತೆ ಅನ್ನಿಸಿತು.”

Read More

ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೇ ಭಾಗದ ಮೊದಲ ಅಧ್ಯಾಯ

“ನಾಲ್ಕನೆಯ ಮಹಡಿಗೆ ಹತ್ತುತ್ತಿರುವಾಗ, ‘ಹೋಗುತಿದ್ದ ಹಾಗೆ ಮೊಳಕಾಲೂರಿ ಕೂತು ಅವರಿಗೆ ಎಲ್ಲಾ ಹೇಳಿಬಿಡತೇನೆ,’ ಅಂದುಕೊಂಡ. ಮೆಟ್ಟಿಲು ಇಕ್ಕಟ್ಟಾಗಿದ್ದವು, ಕಡಿದಾಗಿದ್ದವು, ನೀರು ಚೆಲ್ಲಿ ವದ್ದೆಯಾಗಿದ್ದವು. ಎಲ್ಲ ಅಪಾರ್ಟ್ಮೆಂಟುಗಳ ಅಡುಗೆಮನೆಗಳೂ ಮೆಟ್ಟಿಲಿಗೆ ಮುಖ ಮಾಡಿಕೊಂಡು ಸುಮಾರಾಗಿ ಇಡೀ ದಿನ ಬಾಗಿಲು ತೆರೆದೇ ಇರುತಿದ್ದವು. ಹಾಗಾಗಿ ಯಾವಾಗಲೂ ಬಿಸಿ ಹಬೆಗೆ, ವಾಸನೆಗೆ ಉಸಿರು ಕಟ್ಟುತಿತ್ತು.”

Read More

ಒಂದಲ್ಲ… ಎರಡು…! : ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಏಳನೆಯ ಅಧ್ಯಾಯ

“ಹೆಜ್ಜೆ ಶಬ್ದ ದೂರದಿಂದ, ನೆಲ ಅಂತಸ್ತಿನ ಮೆಟ್ಟಿಲಿಂದ ಬರುತಿತ್ತು. ಅದು ಕಿವಿಗೆ ಬಿದ್ದ ತಕ್ಷಣವೇ ಯಾರೋ ಇಲ್ಲಿಗೇ, ನಾಲ್ಕನೆಯ ಮಹಡಿಗೇ, ಮುದುಕಿಯ ಮನೆಗೇ ಬರುತಿದ್ದಾರೆ ಅನ್ನುವ ಅನುಮಾನ ಹುಟ್ಟಿತು ಅನ್ನುವುದು ಆಮೇಲೂ ಕೂಡ ಅವನಿಗೆ ಸ್ಪಷ್ಟವಾಗಿ ನೆನಪಿತ್ತು. ಹೆಜ್ಜೆ ಸದ್ದು ಯಾಕೆ ಅಪಶಕುನದ ಹಾಗಿತ್ತೋ? ಭಾರವಾದ, ಆತುರವಿಲ್ಲದ ಹೆಜ್ಜೆಗಳು. ಮೊದಲ ಮಹಡಿ ದಾಟಿದ್ದವು. ಮೇಲೇರುತಿದ್ದವು. ಬರುತಿದ್ದವನ ಹೆಜ್ಜೆ ಶಬ್ದ ಜೋರಾಗುತಿತ್ತು.”

Read More

ಇಂಚಿಂಚು ಸಂಚು ರೂಪಿಸುತ್ತಾ…: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಆರನೆಯ ಅಧ್ಯಾಯ

“ರಾಸ್ಕೋಲ್ನಿಕೋವ್‌ ನ ಮನಸ್ಸು ಕದಡಿತ್ತು. ಅದು ಎಲ್ಲ ಯುವಕರೂ ಸಾಮಾನ್ಯವಾಗಿ ಆಡುವಂಥ ಮಾತು, ಮಾಡುವಂಥ ಯೋಚನೆ. ಅವನೇ ಅಂಥ ಮಾತನ್ನ ಎಷ್ಟೋ ಸಾರಿ, ಎಷ್ಟೋ ಸಂದರ್ಭದಲ್ಲಿ, ಎಷ್ಟೋ ವಿಷಯಗಳ ಬಗ್ಗೆ ಕೇಳಿಸಿಕೊಂಡಿದ್ದ. ಆದರೆ, ಸರಿಯಾಗಿ ಇಂಥವೇ ಮಾತು, ಸರಿಯಾಗಿ ಇಂಥದೇ ಹೊತ್ತಲ್ಲಿ, ಅವನ ತಲೆಯಲ್ಲೂ ಸುಮಾರಾಗಿ ಅಂಥದೇ ವಿಚಾರ ಇರುವಾಗ ಯಾಕೆ ಕಿವಿಗೆ ಬೀಳಬೇಕಾಗಿತ್ತು?”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ