Advertisement
ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

ಏಕಸೂತ್ರದಲ್ಲಿ ಬಂಧಿಯಾದ ಭಿನ್ನ ನೆಲೆಗಳು

ವಿಶ್ವನಾಥರ ಅದೃಷ್ಟವೆಂದರೆ, ಪಲ್ಲಟಗಳು, ಪರಿವರ್ತನೆ ಜರುಗುತ್ತಿದ್ದ ಕಾಲದಲ್ಲಿ ಎಲ್ಲವನ್ನೂ ಬಿಡುಗಣ್ಣಿನಿಂದ ನೋಡುವಂತ ವಯಸ್ಸಿನಲ್ಲಿ ಅವರಿದ್ದುದು. ಮುಂಬೈನಲ್ಲಿ ಸಂಶೋಧಕನ ವೃತ್ತಿ, ನಂತರ ಅಮೆರಿಕಾದಲ್ಲಿ ವೃತ್ತಿ, ಸಂಶೋಧನೆಗಳಿಂದಾಗಿ ಮೂಡಿದ ವಿಶಾಲ ಜೀವನ ದೃಷ್ಟಿ, ಇವುಗಳ ಹಿನ್ನೆಲೆಯಲ್ಲಿ ಸುಮಾರು ೫೦-೬೦ ವರ್ಷಗಳ ನಂತರ ಒಂದು ರೀತಿಯ ‘ಮಾನಸಿಕ ದೂರ’ದಿಂದ ಈ ಕತೆ ಬರೆದಿದ್ದು, ತಂದೆ-ತಾಯಿ-ಪತ್ರಿಕೆಗಳ ಬಗ್ಗೆ ಮಾತ್ರವಲ್ಲ, ಸೋದರ ಬ್ರಹ್ಮಾನಂದ, ಕುಟುಂಬಕ್ಕೆ ಆಪ್ತರಾಗಿದ್ದವರ…

Read More

ಪಿ.ಆರ್.ರಾಮಯ್ಯನವರ ರಾಜಕೀಯ ನಡವಳಿಕೆಗಳು

ಆ 74 ಜನರಲ್ಲಿ ಒಬ್ಬರಾದ ನಮ್ಮ ತಂದೆ ವಿಧಾನಸಭೆಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವ ಕುತೂಹಲ ನನಗೆ ಮೊದಲಿಂದಲೂ ಇತ್ತು. ಮನೆಯಲ್ಲಿ ಹೆಚ್ಚು ಮಾತನಾಡದವರು ಅಲ್ಲಿ ಮಾತಾಡುತ್ತಿದ್ದರೇ? ಏನು ಮಾತನಾಡುತ್ತಿದ್ದರು? ಅಥವಾ ‘ಸೈಲೆಂಟ್ ಮೆಂಬರ್ʼ ಆಗಿದ್ದರೋ? ಕಳೆದ ಹತ್ತು ವರ್ಷಗಳಲ್ಲಿ ಈ ಕುತೂಹಲ ಇನ್ನೂ ಹೆಚ್ಚಾಯಿತು. ವಿಧಾನಸೌಧದ ಗ್ರಂಥಾಲಯದಲ್ಲಿ ನನ್ನ ಹಳೆಯ ಎಂ ಎಸ್ ಸಿ ಸಹಪಾಠಿ…

Read More

ಕಾಳಪ್ಪಬ್ಲಾಕಿನಲ್ಲಿ ಟೆಸ್ಟ್ ಕ್ರಿಕೆಟಿಗರು!

ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್‌ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಫಿ.

Read More

ನಮ್ಮ ತಾತ ಪಾಲಹಳ್ಳಿ ರಾಮಸ್ವಾಮಯ್ಯ

ರಾಮಸ್ವಾಮಯ್ಯನವರು ಪಾಲಹಳ್ಳಿಯಲ್ಲಿ ಹುಟ್ಟಿದ್ದಿರಬಹುದು. ಆದರೆ ಅವರಿಗೆ ಅಲ್ಲಿ ಏನಾದರೂ ಜಮೀನು ಇತ್ತೋ ಇಲ್ಲವೋ ತಿಳಿಯದು. ಅಂತೂ ಅವರು ಮೈಸೂರಿನ ಮರದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರ೦ತೆ. ರಾಮಯ್ಯನವರು ಹಲವಾರು ಬಾರಿ ಅವರ ಬಡತನದ ಬಗ್ಗೆ ಹೇಳುತ್ತಾರೆ; ಆದ್ದರಿಂದ ರಾಮಸ್ವಾಮಯ್ಯನವರು ಸ್ಥಿತಿವಂತರಾಗಿದ್ದ ಹಾಗೆ ಕಾಣಿಸುವುದಿಲ್ಲ. ಅವರ ಫೋಟೋ ಎಲ್ಲೂ ಇಲ್ಲ.

Read More

ನಮ್ಮ ಪೂರ್ವಿಕರು ಮತ್ತು ಹೆಸರುಗಳ ಸೊಬಗು

ಚಿಕ್ಕಂದಿನಲ್ಲಿ ನಮ್ಮ ಅಮ್ಮ ಹೆಚ್ಚು ತಮಿಳು ಮಾತನಾಡುತ್ತಿದ್ದಿರಬಹುದು. ಅದರೆ ಹಾಸನದಲ್ಲಿ ಹುಟ್ಟಿ ಬೆಳೆದಿದ್ದರಿಂದ ಕನ್ನಡವೂ ಚೆನ್ನಾಗಿ ಬರುತ್ತಿತ್ತು. ಅವರ ಅಣ್ಣ ರಾಮಕೃಷ್ಣರ ಜೊತೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅವರ ತಂದೆಯ ಕಡೆ ಸಂಬಂಧಿಗಳು ದೊಡ್ಡ ಕೆಲಸಗಳಲ್ಲಿದ್ದರೆಂದು ಕೇಳಿದ್ದೆ. ಆಗಾಗ್ಗೆ ಅವರಿವರು ಮನೆಗೆ ಬರುತ್ತಿದ್ದರು;

Read More
  • 1
  • 2

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ