ಹೋಳಿಗೆ ಕೊಡಿಸಿದ ಯುಗಾದಿ ಚಂದಿರ..: ಪೂರ್ಣೇಶ್ ಮತ್ತಾವರ ಸರಣಿ
ಹಬ್ಬದ ಹಿಂದಿನ ಸಂಜೆ “ನಾಳೆ ರಜಾ, ಕೋಳಿ ಮಜಾ..” ಎನ್ನುತ್ತಾ ರಜೆಯ ಸಡಗರವನ್ನು ಅನುಭವಿಸಿ, ಹಗಲಿಡೀ ಆಟವಾಡಿ, ಮಧ್ಯಾಹ್ನ ಸಿಹಿ ತಿಂದು ಖುಷಿಪಟ್ಟವರು ಸಂಜೆಯಾಗುತ್ತಲೇ ನಮಗೆ ತಿಳಿಯದಲೇ ಬೇಸರಿಸಿಕೊಂಡು ಬಿಡುತ್ತಿದ್ದೆವು. “ಹೋಂ ಸಿಕ್ ನೆಸ್” ಎಂಬುದು ನಮಗರಿವಿಲ್ಲದಲೇ ಹಬ್ಬದ ದಿನಗಳಲ್ಲೇ ಹೆಚ್ಚಾಗಿ ನಮ್ಮನ್ನು ಆವರಿಸಿಕೊಂಡು ಬಿಡುತ್ತಿತ್ತು. ಕೊಟ್ಟ ಹೋಂ ವರ್ಕ್ “ನಾಳೆ ಮಾಡಿದರಾಯ್ತು” ಎಂದು ಮುಂದೂಡಿ ಈಗ ಮಾಡಬೇಕಿರುವುದೂ ನಮ್ಮ ದುಃಖವನ್ನು ಮತ್ತಷ್ಟು ಹೆಚ್ಚಿಸಿ ಬಿಡುತ್ತಿತ್ತು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹನ್ನೆರಡನೆಯ ಬರಹ