Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಫ್ರೂಟ್ ಕಟರ್ ಕರುಣಿಸಿದ ದಾನಿ ಪಟ್ಟ!: ಪೂರ್ಣೇಶ್‌ ಮತ್ತಾವರ ಸರಣಿ

ಕೆಲವರು ಕಬ್ಬಿಣದ ರಾಡ್‌ನ ಒಂದು‌ ತುದಿಗೆ ವೈರ್ ಕಟ್ಟಿ ಮತ್ತೊಂದು ತುದಿಯನ್ನು ನೀರಲ್ಲಿ ಬಿಟ್ಟು ಪರ್ಯಾಯ ವಾಟರ್ ಹೀಟರ್ ಮಾಡಿಕೊಂಡರೆ ಮತ್ತೆ ಕೆಲವರು ಪೆನ್ಸಿಲ್‌ನ ತುದಿಗೆ ಸೂಪರ್ ಮ್ಯಾಕ್ಸ್ ಬ್ಲೇಡ್ ಸಿಕ್ಕಿಸಿ ಪರ್ಯಾಯ ರೆಡಿ ಶೇವರ್ ಮಾಡಿಕೊಂಡು ಬಿಡುತ್ತಿದ್ದರು. ಮುಂದುವರೆದು, ಐರನ್ ಬಾಕ್ಸನ್ನು ಕಾಯಿಸಿ ಅದರ ಮೇಲೆ ಮೊಟ್ಟೆ ಹೊಯ್ದು ಅದನ್ನು ಪರ್ಯಾಯ ಆಮ್ಲೆಟ್ ಪ್ಯಾನ್ ಮಾಡ ಹೊರಟ ಮಹನೀಯರೂ ಇದ್ದರು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಏಳನೆಯ ಬರಹ

Read More

ವಿಷ್ಣು ಚಕ್ರ ಮಹಿಮೆ!: ಪೂರ್ಣೇಶ್‌ ಮತ್ತಾವರ ಸರಣಿ

ಪಾಪ, ನಮ್ಮ ಪ್ರೀತಿಯ ತಮ್ಮಂದಿರು ತಟ್ಟೆ ತಿರುಗಿಸುವ ಪ್ರಯತ್ನದಿಂದಿರಲಿ ಅಪ್ಪಿತಪ್ಪಿ ಕೈ ಜಾರಿ ತಟ್ಟೆ ಕೆಳಗೆ ಬೀಳಿಸಿಕೊಂಡರೂ ‘ಕಂಡಲ್ಲಿ ಗುಂಡು’ ಎಂಬಂತೆ ಒಡನೆಯೇ ಒಂದಿನಿತು ಯೋಚಿಸದೇ ಮನಸೋ ಇಚ್ಛೆ ಅವರಿಗೆ ಥಳಿಸಿ ನಮ್ಮ ಮೇಲಿನ ಕೋಪವನ್ನೆಲ್ಲಾ ತಣ್ಣಗಾಗಿಸಿಕೊಳ್ಳುತ್ತಿದ್ದರು. ಆದರೂ ಅವರ ಈ ಕೋಪ ಸಂಪೂರ್ಣವಾಗಿ ತಣ್ಣಗಾದಂತೆ ಕಾಣಲಿಲ್ಲ.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಆರನೆಯ ಬರಹ

Read More

ಡಾಗ್ ಡೆಂಟಿಸ್ಟ್ಸ್!…: ಪೂರ್ಣೇಶ್‌ ಮತ್ತಾವರ ಸರಣಿ

ಏಕೆಂದರೆ, ನಾವು ಆರಂಭದಲ್ಲಿ ಅದರ ಕಣ್ಣು, ಕಿಡ್ನಿ, ಹೃದಯ,ಶ್ವಾಸಕೋಶ ಹೀಗೆ ದೇಹದ ಎಲ್ಲಾ ಭಾಗಗಳನ್ನು ಪಾರ್ಟ್ ಬೈ ಪಾರ್ಟ್ ಡಿಸೆಕ್ಷನ್ ಮಾಡಿ, ಅವುಗಳನ್ನು ಫಾರ್ಮಲಿನ್ ದ್ರಾವಣ ಹಾಕಿ ಗಾಜಿನ ಜಾರಿನಲ್ಲಿ ಪ್ಯಾಕ್ ಮಾಡಿ, ಮಣಿಪಾಲದಲ್ಲಿ ಮನುಷ್ಯರ ದೇಹದ ಭಾಗಗಳನ್ನು ಪ್ರದರ್ಶನಕ್ಕಿಟ್ಟಂತೆ ಲ್ಯಾಬ್‌ನಲ್ಲಿ ಪ್ರದರ್ಶನಕ್ಕಿಡಬೇಕೆಂದು ಆಸೆಪಟ್ಟಿದ್ದೆವು. ನೋಡಿದರೆ, ನಮ್ಮ ಪುಣ್ಯಕ್ಕೋ ಅಥವಾ ನಾಯಿಯ ಪುಣ್ಯಕ್ಕೋ ಅದರ ಬೋಟಿ ಖಲೀಜಾಗಳೊಂದೂ ಇರದೆ ಅದರ ಮುಖದ ಸ್ವಲ್ಪ ಭಾಗ ಬಿಟ್ಟರೆ ಉಳಿದ ಭಾಗವೆಲ್ಲಾ ಉಪ್ಪು ಮೀನು ಒಣಗಿದಂತೆ ಒಣಗಿದ ಸ್ಥಿತಿಯಲ್ಲಿತ್ತು!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ

Read More

‘ಹಿಮಾಲಯ’ದೆದುರಿನ ಜ್ಞಾನೋದಯ!: ಪೂರ್ಣೇಶ್‌ ಮತ್ತಾವರ ಸರಣಿ

ಈ ನಮ್ಮ ಶೋಕತಪ್ತತೆಯು ಸಹಜವಾಗಿಯೇ ಕಡಿಮೆಯಾಗುತ್ತಿತ್ತೇನೋ. ಆದರೆ, ಹಾಗಾಗಲು ಬಿಡದಂತ ತೀರ್ಮಾನವನ್ನು ನಮ್ಮ ಪ್ರಾಂಶುಪಾಲರೇ ತೆಗೆದುಕೊಂಡಿದ್ದರು. ನಮಗೆ ಅನುಮತಿಯನ್ನು ನಿರಾಕರಿಸಿದವರು ಹನ್ನೊಂದು ಹನ್ನೆರಡನೇ ತರಗತಿಯ ಹುಡುಗರಿಗಾದರೋ ತಮ್ಮ ನಿರಾಕರಣೆಯನ್ನು ಪ್ರದರ್ಶಿಸಿರಲಿಲ್ಲ. ಅದರ ಫಲವಾಗಿ ಅವರು ರಾತ್ರಿ ಊಟದ ನಂತರ ಗುರು ವೃಂದದವರೊಡನೆ ಮತ್ತದೇ ಗ್ರೀನ್ ರೂಮ್ ಸೇರಿ, ಕಿಟಕಿ ಬಾಗಿಲುಗಳನ್ನೆಲ್ಲಾ ಹಾಕಿ, ಸಂದುಗೊಂದುಗಳಿಗೆಲ್ಲಾ ಮುಚ್ಚಿಕೆ ಹಾಕಿಕೊಂಡು ವಿಶ್ವ ಸುಂದರಿಯರ ದರ್ಶನ ಪಡೆಯತೊಡಗಿದ್ದರು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ

Read More

ದ ಗ್ರೇಟ್ ನೋಟ್ ಬುಕ್ ರಾಬರಿ!: ಪೂರ್ಣೇಶ್‌ ಮತ್ತಾವರ ಸರಣಿ

ಜೋಗಿ ಕಿಂದರಿ ಬಾರಿಸತೊಡಗಿದೊಡನೆ ಜಗತ್ತನ್ನೇ ಮೋಹಿಸುವ ಅದರ ನಾದಕ್ಕೆ ಇಲಿಗಳು ಅನ್ನದ ಮಡಕೆಯನ್ನು ಆಗಲಿ, ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬು, ಕಾಲು ಚೀಲಗಳನ್ನೆಲ್ಲಾ ಬಿಟ್ಟು ಹಾರುತ್ತಾ, ಓಡುತ್ತಾ, ನೆಗೆದು ಬಂದು ಅವನನ್ನೇ ಹಿಂಬಾಲಿಸಿ ಹೋಗುವಂತೆ ಹೌಸ್ ಮಾಸ್ಟರ್‌ರ ಹುಣಸೆ ಬರಲಿನ ಬಾರಿಸುವಿಕೆಗೆ ನಮ್ಮ ಗೆಳೆಯರು ಟ್ರಂಕ್ ಕಪಾಟುಗಳ ಒಳಗಿನಿಂದ, ಹಾಸಿಗೆ ದಿಂಬುಗಳ ಕೆಳಗಿನಿಂದ, ವೆಂಟಿಲೇಟರ್ ಸಂದಿಯಿಂದ, ಫ್ಯಾನ್ ರೆಕ್ಕೆಯ ಮೇಲಿನಿಂದ, ಟಾಯ್ಲೆಟ್ ರೂಮಿನ ಹೆಂಚಿನ ತಳದಿಂದ, ಮರ ಗಿಡಗಳ ಮರೆಯಿಂದ ನೋಟ್ ಬುಕ್‌ಗಳನ್ನು ಎತ್ತಿ ತರಲಾರಂಭಿಸಿದ್ದರು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ