ಕಾರವಾರದ ಆ ದಿನಗಳು: ರಂಜಾನ್ ದರ್ಗಾ ಸರಣಿ
‘ನಮ್ಮ ಕಷ್ಟ ಸುಖದಲ್ಲಿ ಇವರು. ಇವರ ಕಷ್ಟ ಸುಖದಲ್ಲಿ ನಾವು. ನಮ್ಮ ನಡುವೆ ಧರ್ಮಗಳು ಅಡ್ಡ ಬರುವುದಿಲ್ಲ. ಧರ್ಮಗಳ ಗೋಜಿಗೆ ನಾವು ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ಕೆಲಸ ಮಾಡುವವರಿಗೆ ಎಲ್ಲ ಧರ್ಮಗಳು ಒಂದೇ. ಕೆಲಸವಿಲ್ಲದವರಿಗೆ ಮತ್ತು ಕೆಲಸವಿಲ್ಲದೆ ಬದುಕಬೇಕೆನ್ನುವವರಿಗೆ ಧರ್ಮಗಳು ಬೇರೆ ಬೇರೆಯಾಗಿ ಕಾಣುತ್ತವೆ. ಆ ಅವರು ಉಗ್ರರೂಪ ತಾಳಿ ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ ಇಲ್ಲವೆ ಅವರಿಂದ ಕೊಲೆಗೀಡಾಗುತ್ತಾರೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 100ನೇ ಕಂತು ನಿಮ್ಮ ಓದಿಗೆ