Advertisement

ದೇವಿಕಾ ನಾಗೇಶ್

“ಶಿಲ್ಪಕ್ಕೆ ತುಟಿಯುಂಟು, ಇಲ್ಲ ಮಾತು”: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಪ್ರೀತಿ ಅಭಿಮಾನ ಗೌರವದಿಂದ ಸೀತೆಯನ್ನು ಬರಮಾಡಿಕೊಳ್ಳಬೇಕಾಗಿದ್ದ ಕ್ಷಣ ಅದು. ಎಲ್ಲರೂ ಅಂತಹದೊಂದು ಕ್ಷಣಕ್ಕೆ ಸಾಕ್ಷಿಯಾಗಲು ಅಲ್ಲಿ ನಿಂತವರು. ಆದರೆ ತುಂಬು ನಿರೀಕ್ಷೆಯಿಂದ ರಾಮನ ಎದುರು ಬಂದು ನಿಲ್ಲುವ ಸೀತೆಗೆ ಸಿಕ್ಕಿದ ಸ್ವಾಗತವಾದರೂ ಎಂಥದ್ದು? ಪ್ರೀತಿ ಮತ್ತು ಸಂಭ್ರಮದಲ್ಲಿ ಅರಳಬೇಕಾಗಿದ್ದ ರಾಮನ ಮುಖ ಸಿಟ್ಟಿನಿಂದ ಉಗ್ರವಾಗುತ್ತದೆ. ಲಕ್ಷ್ಮಣ, ವಿಭೀಷಣ, ಆಂಜನೇಯರಿಗೆ ಇದು ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಮುಂದೆ ರಾಮ ಆಡುವ ಮಾತುಗಳನ್ನು ಕೇಳಿಸಿಕೊಂಡ ಸೀತೆಗೆ ಅಗ್ನಿ ಪ್ರವೇಶ ಮಾಡುವುದು ಬಿಟ್ಟು ಬೇರೆ ವಿಕಲ್ಪವೇನೂ ಉಳಿಯುವುದಿಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”

Read More

ಬದುಕಿನ ಬಣ್ಣಗಳು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಆದರೆ ಈ ಸಮುದ್ರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಅರಿವು ನನಗೆ ಯಾವತ್ತೋ ಆಗಬೇಕಿತ್ತು. ಸುಮ್ಮನೆ ದಡದಲ್ಲಿ ಕಾಯುತ್ತಾ ಕುಳಿತೆ. ಅವಳಿಗೆ ಕನಸಿತ್ತು ಸ್ಪಷ್ಟವಾದ ಗುರಿಯಿತ್ತು. ತನ್ನ ಸುತ್ತ ಇರುವ ಮಿತಿಗಳನ್ನು ಮೀರುವ ತುಡಿತವಿತ್ತು. ಅವಳ ಪಾತ್ರ ವಿಶಾಲವಿತ್ತು. ನಾನು ಒಡ್ಡಿದ ಬೊಗಸೆಗೆ ಹೆಚ್ಚು ಹೊತ್ತು ನಿಲ್ಲಲಾರಲು ಅನ್ನುವುದು ಗೊತ್ತಾಗಬೇಕಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎಂಟನೆಯ ಬರಹ

Read More

ಕೆಂಪು ಕಾರು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಹೊಸ ಕಾರ್ ಬುಕ್ ಮಾಡಿ ಈ ಕಾರನ್ನು ಎಕ್ಸ್ಚೇಂಜ್‌ನಲ್ಲಿ ಕೊಡುವ ಮಾತುಕತೆ ಆದ ನಂತರ ಮೊದಲಿನ ಲವಲವಿಕೆಯನ್ನು ಈ ಕಾರು ಕಳೆದುಕೊಂಡು ಬಿಟ್ಟಿತು ಅಂತ ಯಾಕೋ ನನ್ನ ಮನಸ್ಸಿಗೆ ತೀವ್ರವಾಗಿ ಅನ್ನಿಸಿತು. ಮರುದಿನ ಕಾರ್ ಸ್ಟಾರ್ಟ್ ಮಾಡುವಾಗ ಇಂಜಿನ್ ಶಬ್ಧ ಬೇರೆಯೇ ತರಹ ಕೇಳಿಸಿದ ಹಾಗಾಯ್ತು. ಏನೋ ಸಮಸ್ಯೆ ಆಗಿದೆ ತೋರಿಸಿಕೊಂಡು ಬನ್ನಿ ಅಂದ ಹೆಂಡತಿ ಮಾತಿಗೆ ಇಲ್ಲ ಅನ್ನಲಾಗದೆ ಸುರತ್ಕಲ್ ಪೇಟೆಗೆ ಒಂದು ಸುತ್ತು ಹಾಕಿ ಬಂದು ಏನಾಗಿಲ್ಲ ಅಂತೆ, ಅಂತ ಸುಳ್ಳು ಹೇಳಿದ್ದರ ಹಿಂದೆ ಕಾರ್ ಮೇಲೆ ನನಗಿದ್ದ ನಂಬಿಕೆಯೇ ಕಾರಣವಾಗಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಏಳನೆಯ ಬರಹ

Read More

ಪಾತ್ರ ಪುರಾಣ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಅಕ್ಷರಶಃ ದೀಪವಾರಿದ ಮೇಲಿ ನಿಂಕ ದೀಪದ ಮಲ್ಲಿಯಾದಳು ಶಕುಂತಲೆ. ಅಷ್ಟು ದುರ್ಬಲವೇ ನಮ್ಮ ಪ್ರೇಮ? ಯಾವುದೋ ವಸ್ತುವಿನ ಅವಶ್ಯಕತೆ ಅನಿವಾರ್ಯ ಆಗುವಷ್ಚು? ದಿಕ್ಕುತಪ್ಪಿದಳು, ಏಕಾಂಗಿಯಾದಳು.ಶಕುಂತಲೆಗೆ ದುಷ್ಯಂತನ ಪರಿಚಯವಿತ್ತು.ಸಂಧಿಸಿದ ಕೂಡಲೇ ತನ್ನ ಗುರುತು ಹಿಡಿಯುವನೆಂಬ ಅಪಾರ ಆತ್ಮವಿಶ್ವಾಸವೂ ಇತ್ತು. ಅದಕ್ಕಾಗಿಯೇ, ಅವಳಿಗೆ ದುಷ್ಯಂತ ಗುರುತಿಗಾಗಿಯೇ ಕೊಟ್ಟಿದ್ದ ಉಂಗುರವನ್ನು ಅವಳು ಅಷ್ಟೊಂದು ಮಹತ್ವದ್ದಾಗಿ ಪರಿಗಣಿಸಲೇ ಇಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಆರನೆಯ ಬರಹ

Read More

‘ಕಾಲ ನದಿಯಲಿ ನಮ್ಮ ಬಾಳ ದೋಣಿ’: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಈ ಮೇಲು ಕೀಳುಗಳ ಕೀಲುಗೊಂಬೆ ಆಟದಲಿ ಜೊತೆಗಿದ್ದು ಬದುಕನ್ನು ಸಹ್ಯ ಮಾಡಿದ್ದಕ್ಕೆ ದಾರಿಯ ಪ್ರಯಾಣದ ಸಂಭ್ರಮವನ್ನು ಹೆಚ್ಚಿಸಿದ್ದಕ್ಕೆ ಯಾರಿಗೋ ಧನ್ಯವಾದ ಹೇಳಬೇಕು. ನನ್ನ ಅಹಂಗಳಲ್ಲಿ ಕುಳಿತು ಯಾರಿಗೋ ಚುಚ್ಚಿ ಮಾತಾಡಿದ್ದ ನೆನಪಾಗಿ ಸಾರಿ ಕೇಳಬೇಕು. ಸುಮ್ಮನೆ ಇಲ್ಲದ ಅವಸರವನ್ನು ಆರೋಪಿಸಿಕೊಂಡು ಬೇರುಗಳನ್ನು ಮರೆತಿದ್ದೇನೆ. ಹತ್ತಿರ ಕೂತು ಆ ಜೀವದ ಹೃದಯದ ಮಾತುಗಳನ್ನು ಕೇಳಿಸಿಕೊಳ್ಳುವುದಿತ್ತು. ಸಂಜೆಗಣ್ಣಿನ ನಿರೀಕ್ಷೆಯ ನೋಟದ ಅಪ್ಪ ಅಮ್ಮ ಇನ್ನೂ ಊರಿನ ಮನೆಯಲ್ಲಿದ್ದಾರೆ. ಹೇಗಾದರೂ ಮಾಡಿ ಈ ಸಲವಾದರೂ ಜೊತೆಗೆ ಕರೆದುಕೊಂಡು ಬರಬೇಕಿತ್ತು…
ಹೊಸ ವರ್ಷದ ಆಚರಣೆಯ ಈ ಹೊತ್ತಿಗೆ ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ