Advertisement

ವಿನಾಯಕ ಅರಳಸುರಳಿ

ಆನೆಗಳ ಭಾವ ಪ್ರಪಂಚದ ಚಿತ್ರಗಳು

ಆನೆಗಳಿಗೆ ಕೈಗಳಿಲ್ಲದಿರಬಹುದು. ಆದರೆ, ಸೊಂಡಿಲು ಇದೆ. ನಾವು ಕೈಗಳಿಂದ ಮಾಡುವ ಎಷ್ಟೋ ಕಾರ್ಯಗಳನ್ನು ಆನೆಗಳು ತಮ್ಮ ಸೊಂಡಿಲ ಮೂಲಕ ಮಾಡುತ್ತವೆ. ಅವುಗಳಲ್ಲಿ ಚಿತ್ರರಚನೆಯೂ ಒಂದು. ಸರ್ಕಸ್‌ಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಆನೆಗಳು ಪೇಂಟ್ ಬ್ರಶ್ ಹಿಡಿದು ಚಿತ್ರ ಬರೆಯುವುದನ್ನು ನಾವು ನೋಡಬಹುದು. ಆದರೆ, ಇದನ್ನು, ಬಹು ಮಟ್ಟಿಗೆ ಕಲಾ ಸೃಷ್ಟಿ ಎನ್ನಲಾಗದು. ಅದರಲ್ಲಿರುವುದು, ನಿರಂತರ ತರಬೇತಿನಿಂದ ನಿರ್ಮಿತವಾಗಿರುವ ಯಾಂತ್ರೀಕತೆ ಮಾತ್ರ. ‘ಇಂತಹ ಗೆರೆಗಳನ್ನೆಳೆದರೆ ಬಾಳೆಯ ಗೊನೆ ಸಿಗುತ್ತದೆ; ಇಲ್ಲದಿದ್ದರೆ, ಅಂಕುಶದಿಂದ ತಿವಿತ ಸಿಗುತ್ತದೆ’ ಎಂಬ ಪ್ರೋತ್ಸಾಹ-ಶಿಕ್ಷೆಗಳ ಪರಿಣಾಮವಷ್ಟೇ ಅದು.

Read More

ಸಲಕರಣೆಗಳನ್ನು ಅನ್ವೇಷಿಸುವ ಮನುಷ್ಯರ ಮನೋಲೋಕದ ಕತೆಯಿದು

ನ್ಯೂಯಾರ್ಕ್ ಸರ್ಕಾರ ಎ.ಸಿ. ವಿದ್ಯುತ್ ನ ಅಪಾಯದ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ, ಎಂಜಿನಿಯರುಗಳು ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕಿತು. ವೆಸ್ಟಿಂಗ್‌ಹೌಸ್‌ನ ಪರವಿದ್ದ ಎಂಜಿನಿಯರುಗಳು ಅಪಾಯವನ್ನು ಅಲ್ಲಗೆಳೆದರೆ, ಎಡಿಸನ್ ಪರವಿದ್ದ ತಜ್ಞರು ಎ.ಸಿ. ವಿದ್ಯುತ್ ವ್ಯವಸ್ಥೆಯನ್ನು ಮಾನವರನ್ನು ಅರೆಗಳಿಗೆಯಲ್ಲೇ ಕೊಲ್ಲಬಲ್ಲ ರಕ್ಕಸ ಶಕ್ತಿಯೆಂಬಂತೆ ಬಿಂಬಿಸಿದರು. ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಈ ವ್ಯಾವಹಾರಿಕ ಕದನದಲ್ಲಿ, ತಾನು ನಿರ್ಲಿಪ್ತನೆಂದು ಘೋಷಿಸಿಕೊಂಡ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ವಿರುದ್ಧ..”

Read More

ಹಾಥಿ ಮತ್ತು ಚೂನಿ ಎಂಬ ಎರಡು ನತದೃಷ್ಟ ಆನೆಗಳ ಕಥೆ

ಒಂದೆಡೆ ಚೂನಿಯ ಸಾವಿನ ಬಗೆಗೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ, ಆನೆಯ ಮಾಂಸದ ರುಚಿಯ ಅನುಭವ ಹೇಗಿರಬಹುದೆಂಬ ಮಾತುಗಳೂ ಕೇಳಿ ಬಂದವು. ಆನೆ ಮಾಂಸದ ತಿನುಸುಗಳ ರೆಸಿಪಿಗಳೂ ಪ್ರಕಟವಾದವು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನ ಜರ್ಮನ್ ವಿಮಾನಗಳು ಲಂಡನ್ ಮೇಲೆ ಬಾಂಬ್ ದಾಳಿ ಮಾಡಿದಾಗ, ಚೂನಿಯ ಅಸ್ತಿ ಪಂಜರ ಚೂರು ಚೂರಾಗಿ ಲಂಡನ್ನಿನ ಮಣ್ಣಿನೊಳಗೆ ಬೆರೆಯಿತು.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿ.

Read More

ಸ್ನೇಹದ ದೋಣಿಯಲಿ ಆನೆಗಳ ನೆನಪಿನ ಪಯಣ

ಜೆನ್ನಿ ಮತ್ತು ಷರ್ಲಿ ಒಂದೇ ಲಾಯದಲ್ಲಿದ್ದರೂ, ಅಕ್ಕ-ಪಕ್ಕದ ಸ್ಟಾಲ್‌ಗಳಲ್ಲಿ ಇರಲಿಲ್ಲ. ಮಧ್ಯದಲ್ಲಿ ಕಬ್ಬಿಣದ ಗೇಟುಗಳು ಇದ್ದವು. ಜೆನ್ನಿಯ ಚಡಪಡಿಕೆಯನ್ನು ಕೇಳಿದ ಷರ್ಲಿ ತಾನೂ ಚಡಪಡಿಸತೊಡಗಿದಳು. ತಮ್ಮ ಸ್ಟಾಲ್‌ಗಳ ನಡುವೆ ಇದ್ದ ಗೇಟುಗಳ ಸಂದಿಗಳ ಮೂಲಕ ತಮ್ಮ ಸೊಂಡಿಲುಗಳನ್ನು ಚಾಚಿ ಹೇಗಾದರೂ ಮಾಡಿ ಒಂದನ್ನೊಂದು ಮುಟ್ಟಲು ಎರಡೂ ಆನೆಗಳು ಪ್ರಯತ್ನ ಪಡಲಾರಂಭಿಸಿದವು. ಗೇಟುಗಳ ತಳ್ಳುವಿಕೆ, ಜೋರಾದ ಘರ್ಜನೆ-ಘೀಳಿಡುವಿಕೆಗಳೂ ಪ್ರಾರಂಭವಾದವು.

Read More

‘ಆನೆಗೆ ಬಂದ ಮಾನ’ ಶೇಷಾದ್ರಿ ಗಂಜೂರು ಹೊಸ ಸರಣಿ ಆರಂಭ

ಕೇರಳದ ಕೊಚ್ಚಿಯಿಂದ ವ್ಯಾಟಿಕನ್ ಸಿಟಿಯವರೆಗೆ ಪ್ರಯಾಣ ಮಾಡಿದ ಆನೆ, ‘ಹ್ಯಾನೋ’ ಪಾಲಿಗೆ ರಾಜಕೀಯ ಮನ್ನಣೆ, ಪ್ರತಿಷ್ಠೆ-ಗೌರವಗಳ ಸುರಿಮಳೆಯೇ ಆಯಿತು. ಸ್ವತಃ ಪೋಪ್ ಅವನ ಕಾಳಜಿ ಮಾಡುತ್ತಿದ್ದರು. ಆದರೆ ಅವನು ಒಂಟಿಯಾಗಿ ಬಾಳಿ ತೀರಿಕೊಂಡ. ಆನೆಗಳ ಜೀವನ ವಿಧಾನ, ಅವುಗಳ ಯೋಚನೆ, ಆಕಾಂಕ್ಷೆಗಳು ಬಹಳ ಕುತೂಹಲಕಾರಿಯಾದವು.  ಈ ಕುರಿತು ಶೇಷಾದ್ರಿ ಗಂಜೂರು ‘ಆನೆಗೆ ಬಂದ ಮಾನ’  ಎಂಬ ಹೊಸ ಸರಣಿ ಬರೆಯಲಿದ್ದಾರೆ. ಅವರ ಮೊದಲ ಬರಹ ಇಲ್ಲಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ