Advertisement

ಜಯಲಕ್ಷ್ಮಿ ಪಾಟೀಲ್

ಬಹುಮಾನವಾಗಿ ಸಿಕ್ಕ ಆನೆಮರಿಯೊಂದರ ಜೀವನಗಾಥೆ

ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್‌ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಆನೆಮರಿಯ ಬದುಕಿನ ಕತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ

Read More

ಇನ್ಸುಲಿನ್ ಎಂಬ ‘ಜೀವಕಾರಕ’ದ ವಿಕಾಸ

ಎರಡು ವರ್ಷ ಮೆಡಿಕಲ್ ಓದಿದ. ಆ ಶಿಕ್ಷಣ ಮುಗಿಸುವ ಮುನ್ನವೇ ಮಿಲಿಟರಿ ಸೇರಲು ಅರ್ಜಿ ಹಾಕಿದ. ಅವರು ಸೇರಿಸಿಕೊಳ್ಳಲಿಲ್ಲ. ಕೆಲವು ತಿಂಗಳು ಬಿಟ್ಟು ಮತ್ತೆ ಪ್ರಯತ್ನಿಸಿದ. ಮತ್ತೆ ನಕಾರ. ಒಂದು ವರ್ಷದ ನಂತರ ಮಗದೊಮ್ಮೆ ಪ್ರಯತ್ನಿಸಿದ. ಅಷ್ಟರಲ್ಲಾಗಲೇ, ಮೊದಲ ಮಹಾಯುದ್ಧ ಪೂರ್ಣ ಭರಾಟೆಯಲ್ಲಿ ಸಾಗಿತ್ತು. “ಸೇನೆಗೆ ಸೇರ್ತೀನಿ” ಅನ್ನುವವರನ್ನು “ಬೇಡ” ಅನ್ನುವ ಪರಿಸ್ಥಿತಿಯಲ್ಲಿ ಅಂತೂ ಕೆನಡಾ ಇರಲಿಲ್ಲ. ಅದರಲ್ಲೂ, ರಣರಂಗದಲ್ಲಿ ವೈದ್ಯರ ಕೊರತೆ ಕಾಡುತ್ತಿತ್ತು. ಈ ಬಾರಿ ಅವನ ಅರ್ಜಿ ಫಲಿಸಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ

Read More

ನಮ್ಮ ಭೂಮಿಯ ವಯಸ್ಸೆಷ್ಟು?

ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞರಿಂದ ಹಿಡಿದು, ಧಾರ್ಮಿಕ ಗುರುಗಳೂ, ಮೇಧಾವಿಗಳೂ ಈ ಪ್ರಶ್ನೆಗೆ ತಮ್ಮದೇ ವಿಧಾನಗಳಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.  ಉದಾಹರಣೆಗೆ, ಬೈಬಲ್ ಆಧಾರದ ಮೇಲೆ, “ಆದಿ ಮಾನವ” ಆಡಂ ನ ವರೆಗಿನ ತಲೆಮಾರುಗಳ ಲೆಕ್ಕದಲ್ಲಿ, ನಮ್ಮ ಭೂಮಿಗೆ, ಕೇವಲ ಆರರಿಂದ ಹತ್ತು ಸಾವಿರ ವರ್ಷದ ಹರೆಯ. ಆದರೆ, ಹತ್ತೊಂಬತ್ತನೆಯ ಶತಮಾನದ ಖ್ಯಾತ ಭೌತಶಾಸ್ತ್ರಜ್ಞ ಲಾರ್ಡ್ ಕೆಲ್ವಿನ್ನನ ಲೆಕ್ಕಾಚಾರದ ಪ್ರಕಾರ, ಭೂಮಿಗೆ ಸುಮಾರು ಹತ್ತು ಕೋಟಿ ವರ್ಷ ವಯಸ್ಸು. ಕೆಲ್ವಿನ್ನನ ಲೆಕ್ಕಾಚಾರ, ಅವನ ಸಮಕಾಲೀನನಾಗಿದ್ದ…

Read More

ನನ್ನನ್ನು ಹುಡುಕಿಕೊಳ್ಳುವ ದಾರಿಯಲ್ಲಿ ಸಿಕ್ಕ ಹೊಳಹುಗಳು

ಕನಕ ದಾಸರು “ನಾನು ಹೋದರೆ ಹೋದೇನು” ಎಂದಾಗ, ಅವರೆಂದದ್ದು ಸತ್ತ ನಂತರ ಸ್ವರ್ಗ ಸೇರುವ ಮಾತಲ್ಲ – ಮಕ್ಕಳಿಗಾಗಿ ಆ ಕತೆಯನ್ನು ನಾವು ಹೇಳಿದರೂ. ಅವರೆಂದದ್ದು ಪೂರ್ಣ ಧ್ಯಾನದಲ್ಲಿ ತೊಡಗಿಕೊಂಡಾಗ ಈ “ನಾನು” ಎಂಬ ಭಾವ “ಹೋಗುವ” ವಿಷಯ. ಆಸಕ್ತಿಕರ ವಿಷಯವೆಂದರೆ, ಆಧುನಿಕ ನ್ಯೂರೋಸೈನ್ಸ್ ಸಹ ಅದನ್ನೇ ಹೇಳುತ್ತಿದೆ. ಧ್ಯಾನದಲ್ಲಿ ತೊಡಗಿಕೊಂಡವರ ಮಿದುಳನ್ನು ಪರಿಶೀಲಿಸಿದಾಗ, ಮಿದುಳಿನ “ನಾನು ಕೇಂದ್ರ”ಗಳು ಸ್ಥಬ್ಢವಾಗುವುದನ್ನು ಗಮನಿಸಿದ್ದಾರೆ.  ಶೇಷಾದ್ರಿ ಗಂಜೂರು ಬರೆದ ಲೇಖನ..

Read More

ಹಲವು ಬಣ್ಣಗಳ ಜನ್ಮ ಪುರಾಣ….

ಹಿಂದಿನ ಶತಮಾನಗಳ ಕಲಾವಿದರು, ತಮ್ಮ ಪೇಂಟಿಂಗ್‌ಗಳಿಗೆ ಬೇಕಿರುವ ಬಣ್ಣದ ಕಣಗಳನ್ನು ನಿರ್ಮಿಸಲು ಪಡಬಾರದ ಪಾಡು ಪಟ್ಟಿದ್ದಾರೆ. ಕೆಂಪು ಮಣ್ಣು, ಕಲ್ಲು, ಬೂದಿ, ನಾನಾ ಗಿಡಗಳು, ಹೂವು-ಕಾಯಿ-ಹಣ್ಣುಗಳು, ಪಶು-ಪ್ರಾಣಿಗಳ ಅಂಗಗಳು, ಕಡೆಗೆ ಕ್ರಿಮಿ-ಕೀಟಗಳನ್ನೂ ಅರೆದು ತಮಗೆ ಬೇಕಾದ ಬಣ್ಣದ ಛಾಯೆಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಉದಾಹರಣೆಗೆ, ಕಾಕಿನೀಲ್ ಎಂಬ ಸಣ್ಣ ಕೀಟ. ಇದು, ಬಹು ಮಟ್ಟಿಗೆ, ಪಾಪಾಸು ಕಳ್ಳಿಗಳನ್ನು ಕಾಡುವಂತಹ ಕೀಟ. ಈ ಕೀಟವನ್ನು ಸಂಗ್ರಹಿಸಿ, ಒಣಗಿಸಿ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ