Advertisement

Category: ಅಂಕಣ

ಸರಿ ತಪ್ಪುಗಳ ನಡುವೆ ರೇಖೆ ಎಳೆಯುವ ಮೊದಲು

ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.

Read More

ಪಯಣಪ್ರಿಯರ ನಾಡಿನ ಕೆಲವು ಮಾತುಗಳು

ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛತ್ರಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ…”

Read More

ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?

ಅಸಹಾಯಕರು, ನಿರ್ಗತಿಕರು, ಬಡವರು ಹಾಗು ಅವಕಾಶ ವಂಚಿತರು ಪ್ರಪಂಚದ ಯಾವುದೇ ದೇಶದಲ್ಲಿದ್ದರೂ ಅವರು ಶಾಪಗ್ರಸ್ತರೆ. ಎಲ್ಲೋ ಕೆಲವರಿಗೆ ನೆರವು ಸಿಗುತ್ತದೆ, ಎಲ್ಲೋ ಕೆಲವು ನಿರ್ಗತಿಕರು ಸೆಟೆದು ನಿಲ್ಲುತ್ತಾರೆ, ಎಲ್ಲೋ ಕೆಲವು ಬಡವರು ತಿರುಗಿ ಬೀಳುತ್ತಾರೆ, ಕೆಲವರಿಗಷ್ಟೇ ಅವಕಾಶ ಸಿಗುತ್ತದೆ, ಆದರೆ ಉಳಿದವರಿಗೆ ದಾರಿ ಎಲ್ಲಿ. ಹಣವಂತರ ಜಗತ್ತಿನಲ್ಲಿ, ಮೋಸಗಾರರ ವಂಚನೆಯಲ್ಲಿ ಮುಗ್ಧರಿಗೆ ಮತ್ತು ನ್ಯಾಯವಂತರಿಗೆ ಸೋಲು ಕಟ್ಟಿಟ್ಟ ಬುತ್ತಿ. ಸಣ್ಣ ಹೋರಾಟ ನಡೆದರೆ ಅವರನ್ನು ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರುತ್ತದೆ ಈ ಜಗತ್ತು. ಪ್ರಶಾಂತ್‌ ಬೀಚಿ ಅಂಕಣ

Read More

ಅರ್ಥಲೋಕದ ಬೆರಗುಗಳ ಅನಾವರಣ

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

Read More

ತ್ರಿಮೂರ್ತಿಗಳನ್ನು ರಂಗದ ಬದುಕಿನ ಚಿತ್ರಗಳೊಂದಿಗೆ ಸಮೀಕರಿಸುತ್ತ…

‘ಕಾಯೌ ಶ್ರೀಗೌರಿ..’ ಎಂಬ ನಾಡಗೀತೆಯನ್ನು ಅಂದು ಬರೆದಿದ್ದ ಬಸವಪ್ಪ ಶಾಸ್ತ್ರಿಗಳು ನೆನಪಾಗುತ್ತಾರೆ. ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕವಿದೆ. ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯವೇಕೆ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ