Advertisement

Tag: ಅಕಿರ ಕುರಸೋವ

ಚಲನಚಿತ್ರ ನಿರ್ದೇಶನ ಕಲಿಕೆಯ ಪಾಠಗಳು: ಕುರಸೋವ ಆತ್ಮಕತೆಯ ಪುಟ

“ನಾವೆಲ್ಲ ನದಿಗೆ ಬಿಟ್ಟ ಮೀನುಗಳಂತೆ ನಮ್ಮೆಲ್ಲ ಶಕ್ತಿಯೊಂದಿಗೆ ಈಜಲು ತೊಡಗಿದ್ದೆವು. P.C.L.ನ ಆಡಳಿತದಲ್ಲಿ ಸಹಾಯಕ ನಿರ್ದೇಶಕರನ್ನು ಮುಂದೆ ಮ್ಯಾನೇಜರ್ ಗಳು ಹಾಗೂ ನಿರ್ದೇಶಕರಾಗುವ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತಿತ್ತು. ಆದ್ದರಿಂದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಕ್ಷೇತ್ರಗಳಲ್ಲೂ ಅವರು ಪರಿಣತಿ ಪಡೆಯಬೇಕಿತ್ತು.”

Read More

ಶಿಖರದ ತುದಿಯಲ್ಲಿ ಕಿವಿಯಲ್ಲುಸುರುವ ತಂಗಾಳಿ

“ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ಸಂಗೀತ ಮತ್ತಿತರ ಕಲೆಗಳಲ್ಲಿ ಉತ್ಸಾಹದಿಂದ ಮುಳುಗಿ ಎದ್ದಿದ್ದೆ. ನನ್ನೊಳಗೆ ತುಂಬಿಕೊಂಡ ಈ ಎಲ್ಲ ಕಲೆಗಳ ತಿಳಿವಳಿಕೆ ಒಟ್ಟಾಗಿ ಸಿನಿಮಾ ರೂಪದಲ್ಲಿ ಬಂದಿತ್ತು. ನಾನು ಕಲಿತೆಲ್ಲ ಕಲೆಗಳನ್ನು ಸಿನಿಮಾದಲ್ಲಿ ಬಳಸಬಹುದೆಂದು ಎಂದೂ ಯೋಚಿಸಿರಲಿಲ್ಲ. ನಾನು ಬದುಕಿನಲ್ಲಿ ತುಳಿಯಲಿರುವ ಹಾದಿಗೆ ವಿಧಿ ನನಗೆ ಇಷ್ಟು ಚೆನ್ನಾಗಿ ತರಬೇತಿ ನೀಡಿ….”

Read More

ನೆಗಟೀವ್ ಮತ್ತು ಪಾಸಿಟೀವ್ : ಕುರಸೋವ ಆತ್ಮಕತೆಯ ಪುಟ

“ನನ್ನ ಕುರಿತಾದ ಈ ಆವಿಷ್ಕಾರದಿಂದ ನನಗೇನು ಅಚ್ಚರಿಯಾಗಲಿಲ್ಲ. ಸ್ವಂತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಹರೆಯದ ಯುವಕನಾಗಿದ್ದಾಗ ಈ ಅಸಾಮಾರ್ಥ್ಯ ನನ್ನೊಳಗೊಂದು ಅಸಹನೆ, ಅತೃಪ್ತಿಯನ್ನು ಹುಟ್ಟುಹಾಕಿತ್ತು. ನನ್ನದೇ ರೀತಿಯಲ್ಲಿ ಎಲ್ಲವನ್ನೂ ನೋಡಬೇಕು ಎನ್ನುವ ಹಠ ನನ್ನಲ್ಲಿ ಅಸಹನೆಯನ್ನು ಬೆಳೆಸಿತ್ತು. ಪ್ರತಿಯೊಂದು ಚಿತ್ರಪ್ರದರ್ಶನಕ್ಕೆ ಹೋದಾಗಲೂ ಜಪಾನಿನ ಪ್ರತಿ ಚಿತ್ರಕಲಾವಿದನು ತನ್ನದೇ ಆದ ಶೈಲಿ ಹಾಗೂ ಸ್ವಂತ ದೃಷ್ಟಿಕೋನವನ್ನು ಹೊಂದಿದ್ದಾನೆ ಅನ್ನಿಸುತ್ತಿತ್ತು.”

Read More

ಹೇಳಲು ಕಷ್ಟ ಎನಿಸುವ ಕತೆ: ಕುರಸೋವ ಆತ್ಮಕತೆಯ ಮತ್ತೊಂದು ಪುಟ

“ನಾವಿಬ್ಬರೂ ಆಡಿದ ಕಡೆಯ ಮಾತುಗಳು ನೆನಪಿದ್ದರೂ ಯಾವುದನ್ನು ಮೊದಲು ಮಾತಾಡಿದೆವು ಯಾವುದನ್ನು ಆಮೇಲೆ ಅನ್ನುವುದು ನೆನಪಿಲ್ಲ. ಶಿನ್ ಒಕುಬೊ ನಿಲ್ದಾಣದ ಹತ್ತಿರ ಪರಸ್ಪರ ವಿದಾಯ ಹೇಳಿದೆವು. ಟ್ಯಾಕ್ಸಿಯಲ್ಲಿ ಆ ನಿಲ್ದಾಣಕ್ಕೆ ಬಂದೆವು. ನನ್ನಣ್ಣ ಟ್ಯಾಕ್ಸಿ ಇಳಿದು ರೈಲು ನಿಲ್ದಾಣದ ಮೆಟ್ಟಿಲುಗಳನ್ನು ಹತ್ತುತ್ತಾ ಮನೆಯವರೆಗೂ ಟ್ಯಾಕ್ಸಿಯಲ್ಲೇ ಹೋಗು ಅಂತ ಹೇಳಿದ. ಕಾರು ಚಲಿಸುತ್ತಿದ್ದಂತೆ ಮತ್ತೆ ಮೆಟ್ಟಿಲಿಳಿದು ಬಂದು ಚಾಲಕನಿಗೆ ಕಾರು ನಿಲ್ಲಿಸುವಂತೆ ಕೈಯಾಡಿಸಿದ. ಟ್ಯಾಕ್ಸಿಯಿಂದಿಳಿದು ಅವನ ಹತ್ತಿರ ಹೋಗಿ “ಏನು?” ಅಂದೆ.”

Read More

ಮಿಲಿಟರಿ ಸರ್ವೀಸ್ ಗೆ ಸೇರುವ ಹಾದಿಯಲ್ಲಿ: ಕುರಸೋವಾನ ಆತ್ಮಕತೆಯ ಪುಟ

“ಬಹುಶಃ ಸುಮಾರು ಹೊತ್ತಿನಿಂದ ಒಂದೇ ಕಡೆ ಕೂತಿದ್ದರಿಂದ ಕೈಕಾಲು ಜೋಮು ಹಿಡಿದಂತೆನಿಸಿ ಆ ಅಧಿಕಾರಿಗೂ ಸ್ವಲ್ಪ ವಿರಾಮ ಬೇಕೆನ್ನಿಸಿರಬಹುದು. ನನ್ನ ದೈಹಿಕ ಪರೀಕ್ಷೆಯ ಕಡೆಯ ಹಂತದಲ್ಲಿ ವಾರೆಂಟ್ ಆಫೀಸರ್ ಮುಂದೆ ನಿಂತೆ. ಆತನ ಮುಂದಿದ್ದ ಮೇಜಿನಲ್ಲಿ ಪೇರಿಸಿಟ್ಟ ಅರ್ಜಿಗಳಿದ್ದವು. ಆತ ನನ್ನನ್ನು ತೀಕ್ಷ್ಣವಾಗಿ ನೋಡಿ “ನಿನ್ನಿಂದ ಮಿಲಿಟರಿ ಸೇವೆಗೆ ಏನೂ ಆಗಬೇಕಾದ್ದಿಲ್ಲ” ಎಂದರು. ಅದು ನಿಜ ಕೂಡ ಆಗಿತ್ತು. “

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ