ಸಂಸೆ ಗುಡ್ಡದ ಮೇಲೆ ಮಕ್ಕಳು ಹೇಳಿದ ಪಾಠ

ಪೈಪ್‌ ಹೊರಟ ದಾರಿಯಲ್ಲಿ ಪೈಪ್‌ ಎಲ್ಲಾದರೂ ಒಡೆದಿದೆಯೇ ಎಂದು ಪರೀಕ್ಷಿಸುತ್ತಾ ಬಂದೆವು. ಒಂದೆರಡು ಕಡೆ ಪೈಪ್‌ ಒಡೆದಿತ್ತು. ಇದು ಹೇಗಾಗಿರಬಹುದು ಎಂದು ಕೇಳಿದಾಗ ಮಕ್ಕಳೇ ಉತ್ತರ ಕೊಟ್ಟರು. ‘ಸಾರ್‌ ನೀರು ಪ್ರೆಷರ್‌ ನಲ್ಲಿ ಬಂದರೆ ಪೈಪ್‌ ಒಡೆಯುತ್ತದೆʼ ಎಂಬ ಸರಳವಾದ ಭೌತಶಾಸ್ತ್ರವನ್ನು ನನಗೆ ಕಲಿಸಿ ಕೊಟ್ಟಿದ್ದರು. ಅದೇ ವಿಷಯದ ಮೇಲೆ ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗದ ಮಕ್ಕಳು ನಿಜ ಜೀವನದಲ್ಲಿ ಅದನ್ನು ಬಳಸಿದ್ದರು.
ಕೆಲವು ಕಡೆ ಪೈಪ್‌ ಲೈನ್‌ ಜಜ್ಜಿ ಹುಡಿಯಾದಂತಿತ್ತು.  ಎಲ್ಲೋ ದನಾನೋ ಕಾಟೀನೋ ಓಡಿಕೊಂಡು ಹೋಗುವಾಗ ಪುಡಿಯಾಗಿರಬೇಕು ಸಾರ್‌  ಎಂದು…

Read More