ಅರ್ಧ ಶತಮಾನದ ರಾಜಕೀಯ ಅರಿವು: ರಂಜಾನ್ ದರ್ಗಾ ಸರಣಿ
ಚುನಾವಣೆಯ ದಿನ ವಿಜಾಪುರದ ಒಂದು ಹಳ್ಳಿಯಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತಿದೆ. ಆಗ ಹತ್ತಿ ಬಿಡಿಸುವ ಕಾಲವಾಗಿತ್ತು. ಜಮೀನುದಾರರು ಚುನಾವಣೆಯ ಹಿಂದಿನ ದಿನ ಆ ಹಳ್ಳಿಯಲ್ಲಿ ಘೋಷಣೆ ಮಾಡಿದ್ದು ಬಹಳ ಹೊಸದಾಗಿತ್ತು. ಚುನಾವಣೆ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಮ್ಮ ಹೊಲಗಳಲ್ಲಿ ಬೇಕಾದಷ್ಟು ಹತ್ತಿ ಬಿಡಿಸಿಕೊಂಡು ಹೋಗಬಹುದೆಂದು ಘೋಷಿಸಿದರು. ಆದರೆ ಹಳ್ಳಿಗರು ಹತ್ತಿಯ ಆಸೆಗಾಗಿ ಮತ ಚಲಾಯಿಸುವುದನ್ನು ಬಿಡಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 66ನೇ ಕಂತು ನಿಮ್ಮ ಓದಿಗೆ