ಹಿರಿಯ ಪತ್ರಕರ್ತ ಹಾಗೂ ಕವಿ ರಾಮು ಇನ್ನಿಲ್ಲ
ಹಿರಿಯ ಪತ್ರಕರ್ತ ಹಾಗೂ ಕವಿ ರಾಮು(69) ಮಂಗಳವಾರ ಮುಂಜಾನೆ ತೀರಿಕೊಂಡರು. ವಿಭಿನ್ನ ನೆಲೆಗಟ್ಟಿನ ಅವರ ಕವಿತೆಗಳ ಕಾರಣಕ್ಕೆ ಮತ್ತು ಅವರ ಆಪ್ತತೆಯ ಕಾರಣಕ್ಕೆ ಮೈಸೂರಿನ ಹಾಗೂ ಮೈಸೂರಿಗೆ ಆಗಮಿಸುತ್ತಿದ್ದ ಸಾಹಿತ್ಯದ ಬಂಧುಗಳೆಲ್ಲ ಅವರನ್ನು ಆಗಾಗ ಭೇಟಿಯಾಗುತ್ತಲೆ ಇರುತ್ತಿದ್ದರು.
ಅಗ್ನಿಸೂಕ್ತ, ರಾಮು ಕವಿತೆಗಳು, ವಿಷ್ಣುಕ್ರಾಂತಿ ಮತ್ತು ಇತರೆ ಕವಿತೆಗಳು ಇವರ ಪ್ರಕಟಿತ ಕವನ ಸಂಕಲನಗಳು.
ರಾಮು ಅವರನ್ನು, ಅವರ ವ್ಯಕ್ತಿತ್ವದ ಕುರಿತು ಕವಯತ್ರಿ ರೂಪಾ ಹಾಸನ ಬರೆದ ಕವಿತೆಯೊಂದು ನಿಮ್ಮ ಓದಿಗೆ