ಕಷ್ಟಸುಖಗಳಿಗೆ ಹೆಗಲಾಗಿದ್ದ ಶೆಟ್ಟರಂಗಡಿ

ಮುದ್ರಾಡಿ ಕೃಷ್ಣ ಶೆಟ್ಟರೆಂದರೆ ಸದಾ ಸುದ್ದಿಯಲ್ಲಿದ್ದ ಗಣ್ಯವ್ಯಕ್ತಿಯೇನಲ್ಲ. ಆದರೆ ಬಹರೈನ್ ಕನ್ನಡಿಗರಿಗೆ ಸದಾ ಬೇಕಾಗಿದ್ದ ಪ್ರೀತಿ ಪಾತ್ರರಾಗಿದ್ದ ಸರಳ ವ್ಯಕ್ತಿ. ಪುಟ್ಟದೊಂದು ಟೈಲರ್ ಅಂಗಡಿ ಇಟ್ಟುಕೊಂಡು ಅವರು ಕಳೆದ 21 ವರ್ಷಗಳಿಂದ ಬಹರೈನ್ ನಲ್ಲಿ ಜೀವನ ಸಾಗಿಸುತ್ತಿದ್ದರು. ತಮ್ಮೂರನ್ನುಬಿಟ್ಟು ಬಂದು ಸದಾ ದುಡಿಮೆಯಲ್ಲಿಯೇ ತೊಡಗಿಕೊಂಡು ಬಾಳುವ ಕರ್ನಾಟಕದ ಕರಾವಳಿಯ ಬೃಹ ತ್ ಸಮುದಾಯದ ಪ್ರತಿನಿಧಿಯಂತೆ ಗೋಚರಿಸುತ್ತಿದ್ದರು. ಅವರು ಇತ್ತೀಚೆಗೆ ಅಗಲಿದಾಗ, ಕಾಡಿದ ನೋವನ್ನೇ ಬರಹವಾಗಿಸಿದ್ದಾರೆ ಬಹರೈನ್ ನಿವಾಸಿ, ಕನ್ನಡಿಗ ವಿನೋದ್.

Read More