ಮರ್ಫಿ: ಸಮಯವೆಂಬ ಭ್ರಮೆಯ ಬರ್ಫಿ: ರಾಮ್ ಪ್ರಕಾಶ್ ರೈ ಕೆ ಸರಣಿ
ಅವಳ ಕಡಲಿನ ಪೂರಾ ಅವನದೇ ನಾವೆಗಳು. ಕಡುಗತ್ತಲಲ್ಲಿ ಬೀಳುವ ಕನಸುಗಳಿಗೆ ಆತನೇ ಕಂದೀಲು. ಇಂತಹ ಪ್ರೇಮದ ಪರಿಯ ವಿವರಣೆ ಆಕೆ ನೀಡುವುದು ಸ್ವತಃ ಆತನ ಮಗನಿಗೆ. ಆದರೆ ಡೇವಿಡ್‌ಗೆ ಎರಡು ಕಹಿ ಗುಳಿಗೆಗಳು ನೆನಪಿದೆ. ಒಂದು ತನ್ನ ಹೆತ್ತವ್ವ ಜನನಿಯಲ್ಲ ಎಂದು. ಮತ್ತು ತನ್ನ ತಂದೆ ಅನಿರೀಕ್ಷಿತ ಅಪಘಾತವೊಂದರಲ್ಲಿ ನಿಧನ ಹೊಂದಿದ್ದಾರೆಂದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮರ್ಫಿ’ ಸಿನಿಮಾದ ವಿಶ್ಲೇಷಣೆ
