Advertisement

Tag: ಸಿನಿಮಾ

ಕಣ್ರೆಪ್ಪೆ ಬಡಿದೇ ಹೇಳಿದ ಕತೆಯಿದು, ಅಲ್ಲಲ್ಲ.. ಜೀವನಚರಿತ್ರೆಯ ದೃಶ್ಯಗಳಿವು

ತಮ್ಮ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬ ಪುಸ್ತಕವನ್ನು ಬರೆಯಬೇಕೆಂದ ಅಪೇಕ್ಷೆಯನ್ನು ಕೇಳಿ ಉಳಿದವರಿಗೆ ಆಶ್ಚರ್ಯವಾಗುತ್ತದೆ. ಡೊಮಿನಿಕ್ ಗೆ ಇದು ಅಸಾಧ್ಯವೆನಿಸುವುದಿಲ್ಲ. ಸ್ಪೀಚ್ ಥೆರಪಿಸ್ಟ್ ಹೇಳಿಕೊಟ್ಟ ಪ್ರಕಾರ ಸೂಚನೆಗಳನ್ನು ಅನುಸರಿಸಿ ಅಕ್ಷರಗಳನ್ನು ಹೆಣೆದು ಪದಗಳನ್ನು ಹೊಂದಿಸಿ ಬರೆಯುವವರು ಬೇಕೆಂದು ಬಯಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಜೀನ್ ಡೊಮಿನಿಕ್ ಬಾಬಿ ಜೀವನಚರಿತ್ರೆಯನ್ನಾಧರಿಸಿದ ಫ್ರಾನ್ಸ್‌ನ ʻದ ಡೈವಿಂಗ್‌ ಬೆಲ್‌ ಅಂಡ್‌ ದ ಬಟರ್‌ಫ್ಲೈ ʼ ಸಿನಿಮಾ ಕುರಿತ ವಿಶ್ಲೇಷಣೆ

Read More

ಪ್ರತಿರೋಧ ಮಾರ್ಗಗಳ ಕತೆ ಹೇಳುವ ಸಿನಿಮಾ ʻಕೈರೋ 678’

ಫೈಜಾ಼ಳ ಗಂಡನಿಗೆ ಸರಿಯಾದ ಕೆಲಸವಿಲ್ಲ. ವರಮಾನದ ಅಭಾವವಿರುವ ಗಂಡ ಮತ್ತು ಸ್ಕೂಲಿಗೆ ಹೋಗುವ  ಇಬ್ಬರು ಮಕ್ಕಳನ್ನು ಆಕೆ ನಿಭಾಯಿಸಬೇಕು. ಆದಾಯದ ಕೊರತೆ. ಅದಕ್ಕಾಗಿ ಸಂಬಳ ವಿತರಿಸುವವನೊಂದಿಗೆ ಮಾಡುವ ಚರ್ಚೆ ವ್ಯರ್ಥ. ಜೊತೆಗೆ ಪ್ರತಿದಿನದ ಲೈಂಗಿಕ ಹಿಂಸೆಯಿಂದ ರಾತ್ರಿ ಕಾಡಿ, ಬೇಡಿ ಬರುವ ಗಂಡನನ್ನು ಹತ್ತಿರ ಬಿಟ್ಟುಕೊಳ್ಳಲು ಮನಸ್ಸಿರುವುದಿಲ್ಲ. ಗಂಡಸು ಎಂದರೆ ಸಾಕು ಉರಿದುಕ್ಕುವ ಹಿಂಸೆ ಆವರಿಸಿ ಗಂಡನನ್ನು ದೂರವಿಡಲು ಪ್ರತಿ ರಾತ್ರಿಯೂ ಈರುಳ್ಳಿ ತಿನ್ನುತ್ತಾಳೆ. ಗಂಡನಿಗೋ ಉಕ್ಕೇರಿ ಬರುವ ಅಭಿಲಾಷೆಯನ್ನು ಹತ್ತಿಕ್ಕುವ ಒದ್ದಾಟ.

Read More

ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಫ್ರಾನ್ಸ್‌ ನ ʻಕ್ಯಾಶ್ʼ ಸಿನಿಮಾ

ಈ ಚಿತ್ರದ ಕಥಾಹಂದರ ನವೀನ ಮತ್ತು ಸಂಕೀರ್ಣ ಸ್ವರೂಪದ್ದು. ಪ್ಯಾರಿಸ್‌ನಲ್ಲಿ ಟಿವಿ ಕಂಪೆನಿಯಲ್ಲಿ ಸಾಹಿತ್ಯ ವಲಯದಲ್ಲಿನ ಪುಸ್ತಕಗಳನ್ನು ಕುರಿತಂತೆ ಕೆಲಸ ಮಾಡುವ ಜಾರ್ಜ್, ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಂಡತಿ ಆನ್‌ ಮತ್ತು ಮಗ ಫಿರಟ್ ಜತೆಗೂಡಿ ಮಧ್ಯಮ ದರ್ಜೆಯ ಮೇಲ್ವರ್ಗದ ಜೀವನ ನಡೆಸುತ್ತಿರುತ್ತಾನೆ. ಅವನಿಗೆ ಯಾರೋ ಗುಪ್ತವಾಗಿರಿಸಿದ ಕ್ಯಾಮೆರಾದಿಂದ ಅವನ ಮನೆ ಇತ್ಯಾದಿಯ ವಿಡಿಯೋ ಟೇಪುಗಳನ್ನು ಕಳಿಸುತ್ತಿರುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಫ್ರಾನ್ಸ್‌ ನ ʻಕ್ಯಾಶ್ʼ(ಹಿಡನ್‌) ಸಿನಿಮಾದ ವಿಶ್ಲೇಷಣೆ

Read More

ಸಿನಿಮಾ ನೋಡುವುದೋ,ಓದುವುದೋ?: ಎ. ಎನ್. ಪ್ರಸನ್ನ ಬರಹ

ಸಿನಿಮಾ ಕಲ್ಪನೆಗೇನೂ ಉಳಿಸುವುದಿಲ್ಲ. ಎಲ್ಲ ನೇರ ಮತ್ತು ಸ್ಪಷ್ಟ ಎಂಬ ತಪ್ಪು ಅಭಿಪ್ರಾಯವಿದೆ. ಈ ಅಭಿಪ್ರಾಯ ಮೂಡುವುದಕ್ಕೆ ಅದರ ಶಕ್ತಿಯನ್ನು ಅರಿಯದ, ಅರಿತರೂ ಬಳಸಿಕೊಳ್ಳದ, ಎಲ್ಲವನ್ನೂ ಸರಳ ಹಾಗೂ ಅತಿ ರಂಜಿತ ಮತ್ತು ಭ್ರಾಮಕ ವಾತಾವರಣ ಸೃಷ್ಟಿಯಲ್ಲಿ ನಿರತವಾದ ಬಹು ಸಂಖ್ಯೆಯ ಸಿನಿಮಾಗಳು ಕಾರಣ.

Read More

……ಆಗ ನಿಮ್ಮ ಮನಸ್ಸಿನಲ್ಲಿ ಯಾರ ಚಿತ್ರವಿರುತ್ತದೆ?

“ಈ ಚಿತ್ರದಲ್ಲಿ ಸ್ಪರ್ಶ ಹಾಗು ಪರಿಮಳ ಅತ್ಯಂತ ಆಪ್ತವಾಗಿ ಬಳಕೆಯಾಗಿದೆ. ಅವನು ಒಂದು ಹಳೆಯ ಟ್ರಂಕ್ ತೆಗೆದು ತಾನು ಕೂಡಿಟ್ಟುಕೊಂಡಿದ್ದ ಅವಳ ನೆನಪುಗಳನ್ನೆಲ್ಲಾ ತೋರಿಸುತ್ತಾನೆ. ಅಷ್ಟರಲ್ಲಿ ಕರೆಂಟ್ ಹೋಗುತ್ತದೆ. ದೀಪ ತರಲೆಂದು ಅವನು ಹೋಗುತ್ತಾನೆ. ಅವಳು ಹಾಡುತ್ತಾಳೆ, ಅದೇ ಹಾಡು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ