ಕೊನೆಯ ಬುಲೆಟ್ಟು ಹಾರುವ ಮುನ್ನ….
ದುನ್ಯಾ ಅವನ ಹತ್ತಿರವೇ ನಿಂತಿದ್ದಳು. ಸೇತುವೆಯ ಮೇಲೆ ಕಾಲಿಡುತ್ತಿದ್ದ ಹಾಗೇ ರಾಸ್ಕೋಲ್ನಿಕೋವ್ ಅವಳನ್ನ ನೋಡಿದ್ದ, ಗಮನಿಸದೆ ಮುಂದೆ ಹೋಗಿದ್ದ. ದುನ್ಯಾ ಹೀಗೆ ಯಾವತ್ತೂ ಅವನನ್ನ ರಸ್ತೆಯ ಮೇಲೆ ನೋಡಿರಲಿಲ್ಲ. ಈಗ ಹೀಗೆ ಅವನನ್ನು ನೋಡಿ ಭಯವಾಯಿತು. ನಿಂತಳು. ಹೇಮಾರ್ಕೆಟ್ಟಿನ ಕಡೆಯಿಂದ ಸ್ವಿದ್ರಿಗೈಲೋವ್ ಬರುತ್ತಿರುವುದನ್ನು ದುನ್ಯಾ ತಟ್ಟನೆ ಗಮನಿಸಿದ್ದಳು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.