ಕಾಶ್ಮೀರ ಪ್ರವಾಸದ ನೆನಪುಗಳು…: ರಂಜಾನ್ ದರ್ಗಾ ಸರಣಿ
ಸೋನ್ ಮಾರ್ಗ ಪ್ರದೇಶದ ಕಡೆ ಹೋಗುವಾಗ ಭಾರಿ ಪ್ರಮಾಣದ ಹಿಮ ಬಿದ್ದ ಕಾರಣ ನಮ್ಮ ವಾಹನ ಮುಂದೆ ಸಾಗದ ಸ್ಥಿತಿಯುಂಟಾಯಿತು. ನಂತರ ಹಿಮದಲ್ಲಿ ಮುನ್ನುಗ್ಗುವ ಬೇರೆ ವಾಹನಗಳನ್ನು ಬಾಡಿಗೆ ಪಡೆಯಲಾಯಿತು. ಎತ್ತ ನೋಡಿದಡತ್ತ ಹಿಮ. ಸುತ್ತೆಲ್ಲ ಹಿಮ ಪರ್ವತಗಳು. ಆ ಪ್ರದೇಶದ ಕುರಿಗಾಯಿಗಳ ಪುಟ್ಟ ಪುಟ್ಟ ಮನೆಗಳೆಲ್ಲ ಹಿಮದ ರಾಶಿಯ ಹಾಗೆ ಕಾಣುತ್ತಿದ್ದವು. ಹಿಮ ಬೀಳುವ ಋತುವಿನಲ್ಲಿ ಆ ಕುರಿಗಾರರು ತಮ್ಮ ಕುರಿಗಳೊಂದಿಗೆ ಬೇರೆಡೆ ಹೋಗಿ ವಾಸಿಸುವರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ