ಕಳ್ಳಿ ಪೀರ: ಡಾ. ಎಸ್.ವಿ. ನರಸಿಂಹನ್ ಸರಣಿ
ಹಲವು ಕಳ್ಳಿಪೀರಗಳು ಸೇರಿ ಹರ್ಷದಿಂದ ಟ್ರೀ…ಟ್ರೀ.. ಎಂದು ಕೂಗುತ್ತವೆ. ಮಣ್ಣಿನ ಧೂಳಿನಲ್ಲಿ ಸ್ನಾನ ಮಾಡುವುದೆಂದರೆ ಇವುಗಳಿಗೆ ಬಹಳ ಆಸಕ್ತಿ. ಇದು ಅವುಗಳ ದೇಹದ ಹೆಚ್ಚುವರಿ ತೈಲಾಂಶವನ್ನು ತೆಗೆಯುವುದಲ್ಲದೆ, ರೋಗಕಾರಕ ಕೀಟಗಳನ್ನೂ ದೂರ ಮಾಡುವುದು. ಸಂಜೆಯಾದೊಡನೆ, ಗುಂಪಿನಲ್ಲಿ ಮರದ ಎಲೆಗಳ ನಡುವೆ ತಂಗುತ್ತವೆ. ಆದರೆ ಬೆಳಿಗ್ಗೆ ಏಳಲು ಸೋಮಾರಿ. ಮುಂಜಾನೆ ಸೂರ್ಯೋದಯವಾದರೆ ಸಾಲದು. ಬಿಸಿಲೇರಬೇಕು! ಏಕೆಂದರೆ, ಜೇನ್ನೊಣಗಳೂ ತಮ್ಮ ಕಾರ್ಯವನ್ನು ಶುರು ಮಾಡಬೇಕಲ್ಲ?
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಳ್ಳಿ ಪೀರ ಹಕ್ಕಿಯ ಕುರಿತ ಬರಹ ಇಲ್ಲಿದೆ
