ಈ ದಿನದ ಚಿತ್ರ ತೆಗೆದವರು ಆದರ್ಶ ಬಿ ಎಸ್. ಬೆಂಗಳೂರು ವಾಸಿಯಾದ ಆದರ್ಶ ಮೂಲತಃ ಶಿವಮೊಗ್ಗೆಯ ಹತ್ತಿರದ ಮೂಗುಡ್ತಿಯವರು. ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ, ನಿಸರ್ಗ ಮತ್ತು ಕಲೆಯನ್ನು ಬಿಂಬಿಸುವ ಚಿತ್ರಗಳನ್ನು ಸೆರೆಹಿಡಿಯುವುದರಲ್ಲಿ ಹೆಚ್ಚಿನ ಒಲವು. ಸದ್ಯ  ಪ್ರಜಾವಾಣಿಗೆ ಪ್ರವಾಸ ಕಥನದ ಸರಣಿ ಬರೆಯುತ್ತಿದ್ದು, ಕವಿತೆಗಳನ್ನೂ ಬರೆಯುವ ಹವ್ಯಾಸವಿದೆ. ಪ್ರವಾಸ, ಚದುರಂಗ ಆಡುವುದು, ಹೊಸ ವಿಚಾರಗಳ ವಿಶ್ಲೇಷಣೆ, ಇತಿಹಾಸ ಮತ್ತು ಸಂಶೋಧನೆಯಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com