ಈ ದಿನದ ಚಿತ್ರ ತೆಗೆದವರು ಆರ್ ಕೆ ಜ್ಞಾನೇಶ್ವರ.  ಹಂಪಿ ಪಕ್ಕದ ರಾಮಸಾಗರ ಎನ್ನುವ ಗುಡ್ಡಗಳ ಮಧ್ಯದ ಚಿಕ್ಕ ಗ್ರಾಮದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ. ವನ್ಯ, ಪ್ರಾಣಿ ಹಾಗೂ ಪ್ರಕೃತಿ ಚಿತ್ರಗಳನ್ನು ತನ್ನ ಕೆಮೆರಾದಲ್ಲಿ ಸೆರೆಹಿಡಿಯುವುದು ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು.

ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com