ಬಹಳ ಒಳ್ಳೆಯ ಛಾಯಾಗ್ರಾಹಕರಾಗಿದ್ದ ಕೇಶವ ವಿಟ್ಲ ಮುಂಗಾರು, ಕನ್ನಡ ಪ್ರಭ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ಅವರ ಫೋಟೋಗಳನ್ನು ಒಳಗೊಂಡ “ಫ್ಯಾಸಿಟ್ಸ್ ಆಫ್ ಕರ್ನಾಟಕ” ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಬೆಂಗಳೂರಿನ ಪ್ರೆಸ್ ಕ್ಲಬ್ ವತಿಯಿಂದ ಜೀವಮಾನದ ಸಾಧನೆಗಾಗಿ ಪ್ರಶಸ್ತಿಯೂ ಇವರಿಗೆ ಲಭ್ಯವಾಗಿತ್ತು. ಇಂದು ಮುಂಜಾನೆ ಕೇಶವ ವಿಟ್ಲ ನಿಧನ ಹೊಂದಿದ್ದಾರೆ.