ಗಾಂಧೀಜಿಗೆ ಅಹಿಂಸೆ ಕೇವಲ ಒಂದು ಪರಿಕಲ್ಪನೆಯಲ್ಲ. ಅದು ಯಾರಿಗೂ ಯಾವುದೇ ನೋವನ್ನುಂಟು ಮಾಡಬಾರದೆಂಬುದನ್ನು ಮನಗಾಣಿಸಬೇಕು; ಕಾರಣ ದುರಾಲೋಚನೆಯೂ ಹಿಂಸೆ, ಅಸಹನೆಯೂ ಹಿಂಸೆ. ಅನ್ಯರಿಗೆ ಕಡೆಗಣಿಸುವುದೂ ಹಿಂಸೆ. ಅಷ್ಟೇ ಏಕೆ ಲೋಕಕ್ಕೆ ಅವಶ್ಯಕವಾದುದನ್ನು ತಾನೊಬ್ಬನೇ ಇಟ್ಟುಕೊಳ್ಳುವದೂ ಹಿಂಸೆಯೆ. ಇದರಿಂದ ಅಹಿಂಸೆಯೆಂದರೆ ಒಂದು ರೀತಿಯ ನಕಾರಾತ್ಮಕ ಧೋರಣೆಯೆಂದು ತಿಳಿಯಬೇಕಿಲ್ಲ. ಹೇಡಿತನವ೦ತೂ ಖಂಡಿತ ಅಲ್ಲ. ಮನುಬಳಿಗಾರ್‌ ಅವರು ಮಹಾತ್ಮಾ ಗಾಂಧೀಜಿಯ ಕುರಿತು ಬರೆದ ಲೇಖನವೊಂದು ನಿಮಗಾಗಿ. 

 

 

ಜಗತ್ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಮಾತಿನಿಂದಲೇ ಇದನ್ನು ಪ್ರಾರಂಭಿಸಬೇಕು ಅನಿಸುತ್ತಿದೆ, ` ವಿಶ್ವಕ್ಕೆ ಶಾಂತಿಯನ್ನು ದೊರಕಿಸುವ ಸಮಸ್ಯೆ ಗಾಂಧೀ ಮಾರ್ಗದ ವ್ಯಾಪಕ ಬಳಕೆಯಿಂದ ಮಾತ್ರವೇ ಪರಿಹಾರವಾಗುವುದೆಂಬ ನನ್ನ ನನ್ನ ನಂಬಿಕೆ… ರಕ್ತ ಮಾಂಸಗಳಿಂದ ಕೂಡಿದ ಇಂತಹ ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ನಡೆದಾಡಿದ್ದ ಎಂಬುದನ್ನೇ ಮುಂದಿನ ಪೀಳಿಗೆಗಳು ಬಹುಶಃ ನಂಬದೆಯೆ ಹೋಗಬಹುದು. ಹೀಗೆ ಜಗದ್ವಂದ್ಯರಾದ ಮಹಾತ್ಮಾ ಗಾಂಧೀಜಿ ಜನಸಾಮಾನ್ಯರ ಮಧ್ಯದಿಂದ ಬೆಳೆದು ಬ೦ದು ಮಹಾತ್ಮರಾಗಿದ್ದು ಒಂದು ಪವಾಡ ಸದೃಶ ಜೀವನ ದರ್ಶನವೆ.

ಅವರ ಮಾತಿನಲ್ಲೇ ಹೇಳುವದಾದರೆ ಅದೊಂದು ಸತ್ಯಾನ್ವೇಷಣೆಯ ಮಾರ್ಗ, ಅದರಿಂದಾಗಿ ಅವರ ಆತ್ಮವೃ ತ್ತಾಂತವೊಂದು `ಸತ್ಯದ ಕಥೆ’. ಅಲ್ಲಿ ಸತ್ಯವಲ್ಲದೇ ಹಟ ಇಲ್ಲ. ಬಾಲ್ಯ! ದಲ್ಲಿ ಸತ್ಯ ಹರಿಶ್ಚಂದ್ರ ನ ನಾಟಕದಿಂದ ಪ್ರಭಾವಿತರಾಗಿ ಆ ಸತ್ಯನಿಷ್ಠನ ಗೋಳನ್ನು ನೋಡಿ ಅಳುತ್ತಿದ್ದ ಮೋಹನ್ ದಾಸ್ ಆಗಲೇ ನಿರ್ಧರಿಸಿ ಆಗಿತ್ತು ತಾನೂ ಹಾಗೆಯೇ ಆಗಬೇಕೆಂದು. ಆ ನಿರ್ಧಾರ ಎಷ್ಟೊಂದು ಅಚಲವಾಯಿತೆಂದರೆ ಮುಂದೆ ಅವರು ಮಾಡಿದ ಘೋಷಣೆ ನೋಡಿ: “ಸತ್ಯ ಮತ್ತು ಅಹಿ೦ಸೆಗಳು ಪರ್ವತಗಳಷ್ಟೇ ಪುರಾತನವಾಗಿವೆ. ಆದ್ದರಿಂದ ಜಗತ್ತಿಗೆ ನಾನೇನೂ ಹೊಸದಾಗಿ ಕಲಿಸಬೇಕಿಲ್ಲ’ ಹೀಗೆ ಸತ್ಯ- ಅಹಿಂಸೆಗಳ ಮಹತ್ವವನ್ನು ವಿಶ್ವಕ್ಕೆ ಸಾರಿದ ಅದರಂತೆ ನುಡಿದು ನಡೆದ ಮಹಾನ್ ಚೇತನ ಬಾಪೂಜಿಯವರು. ತಮ್ಮ ಅತ್ಮ ಚರಿತ್ರೆಯನ್ನು ಪ್ರಾರಂಭಿಸುತ್ತ ಮುನ್ನುಡಿಯಲ್ಲಿ ಅವರು ಹೇಳುವ ಮಾತು ಹೀಗಿದೆ: ` ಒಂದು ಯಥಾವತ್ತಾದ ಆತ್ಮಕತೆಯನ್ನು ಬರೆಯಲು ಪ್ರಯತ್ನಿಸುವದು ನನ್ನ ಉದ್ದೇಶವಲ್ಲ. ನಾನು ಹೇಳಬಯಸುವದು ಸತ್ಯ ಶೋಧನೆಯ ನನ್ನ ಅನೇಕ ಪ್ರಯೋಗಗಳ ಕಥೆಯನ್ನು ಮಾತ್ರ. ನನ್ನ ಜೀವನ ಪ್ರಯೋಗಗಳ ಹೊರತು ಮತ್ತೇನು ಅಲ್ಲ.’’

ಇದೇನು ವಿಚಿತ್ರ ಎನ್ನಿಸಬೇಕಿಲ್ಲ. ಕಾರಣ ಗಾಂಧೀಜಿಗೆ ಸತ್ಯ ಮತ್ತು ಜೀವನ ಎರಡೂ ಬೇರೆ ಬೇರೆ ಆಗಿರಲಿಲ್ಲ. ಸತ್ಯದ ಹೊರತಾಗಿ, ಅವರ ನುಡಿಬಿಟ್ಟು ನಡೆ ಇರಲಿಲ್ಲ. ಸತ್ಯವು ಅವರಿಗೆ ದೇವರು, ಧರ್ಮ, ಜೀವನ ಮಾರ್ಗ, ಪರಮ ತತ್ವ ಶ್ರೇಷ್ಠ ಮೌಲ್ಯ ಎಲ್ಲ ಆಗಿತ್ತು. ಅಂತೆಯೇ ಸತ್ಯಾನ್ವೇಷಣೆ ಅವರ ಸರ್ವೋತ್ಕಷ್ಟ ಪ್ರಯತ್ನ ಹಾಗೂ ಆತ್ಯಂತಿಕ ಧ್ಯೇಯವೂ ಆಗಿತ್ತು. ಹಿಂದೂ ವೈಷ್ಣವ ಪಂಥದ ಬನಿಯಾ (ವ್ಯಾಪಾರಿ ವರ್ಗ) ಜಾತಿಗೆ ಸೇರಿದ ಮಹಾತ್ಮರ ಕುಟುಂಬ ಜೈನಧರ್ಮದ ಪ್ರಭಾವಕ್ಕೂ ಒಳಗಾಗಿತ್ತು. ಹೀಗಾಗಿ ಅಹಿಂಸೆಯಲ್ಲಿ ಅವರಿಗೆ ಅಪಾರವಾದ ಶ್ರದ್ಧೆ ನಂಬುಗೆಗಳಿದ್ದವು. ಅಹಿ೦ಸಾ ಪರಮ ಧರ್ಮವೆಂಬುದು ಅವರ ಜೀವನ ಮಂತ್ರವಾಗಿತ್ತು. ಹಿಂಸೆ ಯಾವ ರೂಪದಲ್ಲೇ ಇದ್ದರೂ ಅದು ಖಂಡನಾರ್ಹವಾಗಿತ್ತು. ಬಾಲ್ಯದಲ್ಲಿ ಗೆಳೆಯನೊಬ್ಬ ಆಂಗ್ಲರು ಮಾಂಸಾಹಾರಗಳಾಗಿದ್ದರಿಂದ ಬಲಾಢ್ಯರಾಗಿದ್ದು ಭಾರತವನ್ನು ಆಳುತ್ತಿದ್ದಾರೆಂದೂ, ತಾವೂ ಅದನ್ನು ಸೇವಿಸಿದರೆ ಶಕ್ತಿವಂತರಾಗಿ ಬ್ರಿಟಿಷರನ್ನು ಓಡಿಸಬಹುದೆಂದೂ ಉಲ್ಲೇಖವಿರುವ ನರ್ಮದ ಕವಿಯ ಕವನದ ಸಾರಾಂಶವನ್ನುಲ್ಲೇಖಿಸಿ ಹೇಳಿದ್ದರಿಂದ ಪ್ರೇರಣೆಗೊಂಡು ಮಾಂಸಾಹಾರದ ರುಚಿ ನೋಡಿ, ಘೋರ ಪಾಪನ್ನೆಸಗಿದಂತೆ ಭಾಸವಾಗಿ ಜಿಗುಪ್ಸೆಗೊಂಡು ಅಂದಿನನಿ೦ದಲೇ ಸಸ್ಯಾಹಾರ ಹಾಗೂ ಅಹಿಂಸೆಗಳನ್ನು ಒಂದು ಧರ್ಮವಾಗಿ ಪಾಲಿಸತೊಡಗಿದರು.

ಗಾಂಧೀಜಿಗೆ ಅಹಿಂಸೆ ಕೇವಲ ಒಂದು ಪರಿಕಲ್ಪನೆಯಲ್ಲ. ಅದು ಯಾರಿಗೂ ಯಾವುದೇ ನೋವನ್ನುಂಟು ಮಾಡಬಾರದೆಂಬುದನ್ನು ಮನಗಾಣಿಸಬೇಕು; ಕಾರಣ ದುರಾಲೋಚನೆಯೂ ಹಿಂಸೆ, ಅಸಹನೆಯೂ ಹಿಂಸೆ. ಅನ್ಯರಿಗೆ ಕಡೆಗಣಿಸುವುದೂ ಹಿಂಸೆ. ಅಷ್ಟೇ ಏಕೆ ಲೋಕಕ್ಕೆ ಅವಶ್ಯಕವಾದುದನ್ನು ತಾನೊಬ್ಬನೇ ಇಟ್ಟುಕೊಳ್ಳುವದೂ ಹಿಂಸೆಯೆ. ಇದರಿಂದ ಅಹಿಂಸೆಯೆಂದರೆ ಒಂದು ರೀತಿಯ ನಕಾರಾತ್ಮಕ ಧೋರಣೆಯೆಂದು ತಿಳಿಯಬೇಕಿಲ್ಲ. ಹೇಡಿತನವ೦ತೂ ಖಂಡಿತ ಅಲ್ಲ. `ಹೇ ಡಿತನ ಹಾಗೂ ಹಿಂಸೆ ಇವುಗಳಲ್ಲಿ ನನ್ನ ಆಯ್ಕೆ ಹಿಂಸೆಯೇ; ಆದರೆ ಹಿಂಸೆ ಕೂಡ ಹೇಡಿತನದ  ದ್ಯೋತಕವೆ. ಕೊಲ್ಲುವದಕ್ಕಿಂತಲೂ ಸ್ವಯಂ ಸಾಯುವದಕ್ಕೆ ಹೆಚ್ಚು ಧೈರ್ಯ ಬೇಕಾಗುತ್ತದೆ.”

ಎ೦ದು ಸಾರಿ ಗಾಂಧೀಜಿ ಆಂಗ್ಲರ ದಬ್ಬಾಳಿಕೆಗೆ ಶರಣಾಗುವ ಹೇಡಿತನಕ್ಕಿಂತ ಭಾರತ  ಯುದ್ಧ ಮಾಡುವದೇ ಲೇಸೆಂದು ಪ್ರತಿಪಾದಿಸುತ್ತಿದ್ದ ರು. ಆದರೆ ಹಿಂಸಾಚಾರದ ಕಡುವೈರಿಗಳಾಗಿದ್ದರು. ದೇಶದಲ್ಲಿ ಹಿಂಸಾಪ್ರವೃತ್ತಿಯು ತಾಂಡವಾಡುವದಾದರೆ ಅವರು  ದೇಶ ತ್ಯಜಿಸಲೂ ಸಿದ್ಧ ಎಂದೆನ್ನುತ್ತಿದ್ದರು.
ತಾವು ವ್ರತದಂತೆ ಪಾಲಿಸಿಕೊಂಡು ಬಂದ ಸತ್ಯ ಹಾಗೂ ಅಹಿಂಸಾ ಮಾರ್ಗಗಳನ್ನು ಯಾರು ಬೇಕಾದರೂ ಅನುಸರಿಸಬಹುದಾಗಿದೆ. ಮನೋಬಲವಿದ್ದರೆ ಇದೆಲ್ಲ ಸುಲಭ  ಸಾಧ್ಯವನ್ನುತ್ತಿದ್ದರು ಬಾಪೂಜಿ. ತಾವು ಈ ತತ್ವಗಳೊಡನೆ ಮಾಡಿದ ಪ್ರಯೋಗಗಳು ಅಷ್ಟೇನೂ ಕಠಿಣತಮವಲ್ಲವೆಂದೂ ಚಿಕ್ಕ ಮಕ್ಕಳೂ ಕೂಡ ಇವುಗಳನ್ನು ಪಾಲಿಸಬಹುದು
ಎಂದೂ ತಿಳಿಸಿದ್ದರು.

ಗಾಂಧೀಜಿಗೆ ಸತ್ಯ ಮತ್ತು ಜೀವನ ಎರಡೂ ಬೇರೆ ಬೇರೆ ಆಗಿರಲಿಲ್ಲ. ಸತ್ಯದ ಹೊರತಾಗಿ, ಅವರ ನುಡಿಬಿಟ್ಟು ನಡೆ ಇರಲಿಲ್ಲ. ಸತ್ಯವು ಅವರಿಗೆ ದೇವರು, ಧರ್ಮ, ಜೀವನ ಮಾರ್ಗ, ಪರಮ ತತ್ವ ಶ್ರೇಷ್ಠ ಮೌಲ್ಯ ಎಲ್ಲ ಆಗಿತ್ತು.

ಗಾಂಧೀ ಎಂಬ ಎರಡಕ್ಷರಗಳಲ್ಲಿರುವ ಚುಂಬಕ ಶಕ್ತಿ ಅಗಮ್ಯವಾದದ್ದು. ಗಾಂಧೀ ತತ್ವ, ಜೀವನ ಚರಿತ್ರೆ, ವಿಚಾರಧಾರೆ, ಹಿಡಿದ ಮಾರ್ಗ ಇವೆಲ್ಲ ಜಗತ್ತನ್ನು ಪ್ರಭಾವಿಸಿದಷ್ಟು ಪ್ರಮಾಣದಲ್ಲಿ ಬೇರಾವ ಸಿದ್ಧಾಂತವಾಗಲಿ, ವ್ಯಕ್ತಿತ್ವವಾಗಲಿ ಆಕರ್ಷಿಸಿದ್ದು ಇಲ್ಲ. ಇದಕ್ಕೆ ಕಾರಣ ಒಂದು ವ್ಯಕ್ತಿಯಾಗಿ ಬಾಪು ಮಾಡಿದ ಸಾಧನೆಗಳೇ. ಹಾಕಿಕೊಂಡ ತತ್ವಾದರ್ಶಗಳೇ!
ಮನುಷ್ಯನೊಬ್ಬ ಹೇಗಿರಬೇಕೆಂಬ ಪ್ರಶ್ನೆಗೆ ಗಾಂಧೀ ಉತ್ತರವಾಗಿದ್ದರು. ವ್ಯಕ್ತಿಗತ ನೆಲೆಯಲ್ಲಿ ಸತ್ಯಸಂಧತೆ, ಪ್ರಾಮಾಣಿಕತೆ, ನಡೆನುಡಿಗಳ ಪಾವಿತ್ರತೆ. ಸರಳ ಜೀವನ ಇವುಗಳಿಗೆಲ್ಲ ಅನ್ವರ್ಥಕವಾಗಿದ್ದರು. ರಾಜನೀತಿಜ್ಞ ಶಿಕ್ಷಣ ತಜ್ಞ ಅರ್ಥಶಾಸ್ತ್ರಜ್ಞ, ಸಮಾಜ ವಿಜ್ಞಾನಿ, ಪತ್ರಕರ್ತ ಎಲ್ಲ ಆಗಿದ್ದರು. ಒಟ್ಟಿನಲ್ಲಿ ಗಾಂಧಿಯನ್ನು ವರ್ಣಿಸುವದೆಂದರೆ ಪುಟ್ಟ ಬಾಲಕನೊಬ್ಬನನ್ನು ಚಿಕ್ಕ ಕ್ಯಾಮರಾದೊಂದಿಗೆ ಹಿಮಾಲಯ ಪರ್ವತಶ್ರೇಣಿಯ ಸಮಗ್ರ ಚಿತ್ರಗಳನ್ನು ತೆಗೆದುಕೊಂಡು ಬಾ ಎಂದು ಅಟ್ಟಿದಂತೆಯೇ. ಭೀಕರ ಬ್ರಿಟೀಷರ ಸೈನ್ಯದ ಎರುದ್ಧ ಶಾಂತಿ ಮಂತ್ರ ಜಪಿಸಿ ಜಯಸಿದ್ದು, ಮಾರಕ ಶಸ್ತ್ರಾಸ್ತ್ರಗಳನ್ನು ನಿಃಶಸ್ತ್ರನಾಗಿಯೇ
ಬಗ್ಗು ಬಡಿದದ್ದು, ಕುಟಿಲತೆಯನ್ನು ಸತ್ಯಮಾರ್ಗದಿಂದ, ಹಿಂಸೆಯನ್ನು ಅಹಿಂಸೆಯಿಂದ,  ದುರುಳತನವನ್ನು ಸರಳತೆಯಿಂದ ಗೆದ್ದುಕೊಂಡದ್ದು ಈ ಜಗತ್ತು ಕಂಡ ಅಪೂರ್ವ  ವಿಸ್ಮಯವೆ.

ಗಾಂಧೀಜಿಗೆ ನೆಗಡಿಯಾದರೆ ಇಡೀ ಭಾರತ ಸೀನುತ್ತಿತ್ತು ಎಂದು ಹೇಳಲಾಗುತ್ತಿತ್ತು. ಏಕೆಂದರೆ ಅವರು ಅವರು ಕೂಡ್ರು ಎಂದರೆ ದೇಶ ಕುಳಿತುಕೊಳ್ಳುತ್ತಿತ್ತು. ಏಳು ಎಂದರೆ ಎದ್ದೇಳುತ್ತಿತ್ತು. ಹೀಗೆ ದೇಶದ (ಆಗಿನ): ಮೂವತ್ಮೂರು ಕೋಟಿ ಜನರ, ಹಾಗೆಯೇ ವಿಶ್ವದ ಮನಗೆದ್ದು ಮಹಾತ್ಮರೆನಿಸಿದ ಬಾಪೂಜಿ ಮೊದಲು ಗೆದ್ದದ್ದು ತನ್ನನ್ನು ತಾನು. ಸಿರಿವಂತಿಕೆಯಿದ್ದೂ ಬಡತನದ ಜೀವನಶೈಲಿ ಅಳವಡಿಸಿಕೊಂಡು ಅರ್ಧಂಬರ್ಧ ಬಟ್ಟೆ ಧರಿಸಿ ಜೀವನವಿಡೀ ಇದ್ದದ್ದು. ಮೃಷ್ಟಾನ್ನ ಭೋಜನ ತ್ಯಜಿಸಿ. ತೀರ ಸರಳ ಆಹಾರ ಪದ್ಧತಿ ಆಯ್ದುಕೊಂಡು, ಪ್ರತಿನಿತ್ಯ ನೂಲುವದು, ಚರಖಾ ತಿರುಗಿಸುವದು ಅದರಿಂದ ಉತತ್ತಿಯಾದ ಖಾದಿಯನ್ನು ಮಾತ್ರ ಥರಿಸುತ್ತಿದ್ದುದು, ಚಾಚೂ ತಪ್ಪದಂತೆ ಸಮಯ  ಪಾಲನೆ ಮಾಡಿದ್ದು, ಎಂಥ ಒತ್ತಡದ ಕ್ಷಣದಲ್ಲೂ ಚಿತ್ತ ಚಾಂಚಲ್ಯಕ್ಕೆ ಒಳಗಾಗದೇ  ಕೋಪ ಶಮನ ಮಾಡಿಕೊಂಡದ್ದು, ಸಂಸಾರಿಯಾಗಿದ್ದೂ ಜನಸಂಖ್ಯೆಯ ಮಿತಿಗೊಳಿಸಲು
ಸಂಯಮ ಜೀವನ ನಡೆಸಿದ್ದು, ತನ್ನೆಲ್ಲ ವೈಚಾರಿಕ ಪ್ರಯೋಗಗಳಿಗೆ ಎಲ್ಲಕ್ಕೂ ಮೊದಲು ತಾನೇ ಒಳಗಾಗುತ್ತಿದ್ದುದು. ಹೀಗೆ ಒಂದೇ ಎರಡೇ, ಅಸಂಖ್ಯ ಅನುಷ್ಠಾನಗಳಿಂದಾಗಿ ಗಾಂಧೀ ಒಂದು ಧೀಃಶಕ್ತಿ, ಮೇರು ವ್ಯಕ್ತಿ. ಪವಾಡ, ದೇವಮಾನವ ಇತ್ಯಾದಿ ಎಲ್ಲ ಆಗಿ
ಗೋಚರಿಸಿದ್ದು ಅಸಹಜವೇನಲ್ಲ.

ಈ ಜಗತ್ತಿಗೆ ಸತ್ಯ ಅಹಿಂಸೆಗಳ ಜೊತೆ ಜೊತೆಗೆ ಗಾಂಧೀಜಿ ನೀಡಿದ ಇನ್ನೊಂದು ಮೌಲಿಕ ಕಾಣಿಕೆಯೆಂದರೆ ಸತ್ಯಾಗ್ರಹ. 1906 ರಷ್ಟು ಹಿಂದೆಯೇ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ವರ್ಣಭೇದ ನೀತಿಗೆ ಸಿಡಿದೆದ್ದು ಹುಟ್ಟು ಹಾಕಿದ ಕ್ರಾಂತಿಕಾರಿ ಪ್ರತಿಭಟನೆಯೇ
ಇದು. ಹೋರಾಟ ಶಾಂತಿಯುತವಾಗಿ. ಅಹಿಂಸಾತ್ಮಕವಾಗಿ, ಇದ್ದಾಗಲೂ ಹಿಂಸೆ ರಕ್ತಪಾತಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಇರಬಲ್ಲದೆಂಬುದನ್ನು ಋಜುವಾತು ಪಡಿಸಿದ್ದೇ ಈ `ಸತ್ಯದ ಆಗ್ರಹ’ವೆಂಬ ನವನವೀನ ಅಸ್ತ್ರ ಇದಕ್ಕೆ ಪೂರಕವಾಗಿ ಬೆಳೆದು ಬಂದದ್ದೇ `ಉಪವಾಸ’ ಎಂಬ ಇನ್ನೊಂದು ಶೋಧ. “ಲಂಘನಂ ದಿವ್ಯೌಷಧ’ ಎಂಬ ಮಾತನ್ನು ತತ್ವಶಃ ಅಳವಡಿಸಿಕೊಂಡ ಗಾಂಧೀಜಿ ಉಪವಾಸದಿಂದ ದೇಹಶುದ್ಧಿಯಂತೆಯೇ ಆತ್ಮಶುದ್ಧಿಯೂ ಆಗುತ್ತದೆಂದು ಬಲವಾಗಿ ನಂಬಿದ್ದವರು. ಮೇಲಾಗಿ ಎದುರಾಳಿಯನ್ನು ಮಣಿಸಲು ಉಪವಾಸ ವ್ರತವನ್ನು ಒಂದು ಅಸ್ತ್ರವಾಗಿ. ಬಳಸಿಕೊಂಡದ್ದು ಈ ಜಗತ್ತು ಕಂಡು ಕೇಳರಿಯದ ಮಹೋನ್ನತ ಪ್ರಯೋಗವೇ ಸರಿ. ಗಾಂಧೀಜಿ ಸತ್ಯಾಗ್ರಹವೆಂದರೆ ಜೀವನ ದೃಷ್ಟಿ, ಜಗತ್ತಿನಲ್ಲಿ ಸತ್ಯದ, ಅಹಿಂಸೆಯ, ಪ್ರೇಮ ನ್ಯಾಯದ ರಾಜ್ಯವು ಸ್ಥಾಪನೆಯಾಗುವಂತೆ ಯತ್ನಿಸಲು ಅದು ಪ್ರೇರೇಪಿಸುವದು. ನೀತಿ ಮತ್ತು ವಿವೇಕಗಳು ಸತ್ಯಾಗ್ರಹಿಗೆ ಕೈ ದೀಪಗಳು. ಆತನಿಗೆ ಶತ್ರುಗಳಿಲ್ಲ. ದ್ವೇಷ ಅಸೂಯೆಗಳು ಆತನ ಸಮೀಪ ಸುಳಿಯಲಾರವು. ಪ್ರ ತಿಯೊಬ್ಬನೂ ಆತನ ಸಂಗಾತಿ ಅಥವಾ ಸ್ನೇಹಿತ. ಸಹನೆ, ಸಹಾನುಭೂತಿ, ಸ್ವಕಷ್ಟ ಅಥವಾ ಆತ್ಮಕ್ಲೇಷ ಇವುಗಳಿಂದ ಎದುರಾಳಿಯನ್ನು ಗೆದೆಯುವದು ಸತ್ಯಾಗ್ರಹಿಯ ಮೂಲೋದ್ದೇಶ. ಕೆಡುಕು ಅನೀತಿ ಅನ್ಯಾಯ ಪರಪೀಡೆ ಇವುಗಳು ಅವನಿಗೆ ವರ್ಜ್ಯ. `ದಿ ಡಾನ್ ಆಫ್ ಫ್ರೀಡಂ ‘ ಎಂಬ ಗ್ರಂಥ ಕರ್ತೃ, “… ಸತ್ಯಾಗಹ ಕೇವಲ ವ್ಯಕ್ತಿಗಳು ಉಪಯೋಗಿಸತಕ್ಕ ಅಸ್ತ್ರವಷ್ಟೇ ಅಲ್ಪ. ಸಮೂಹಗಳು, ರಾಷ್ಟಗಳು ಸಹ ತಮ್ಮ ವಿವಾದಗಳನ್ನು ತಿಕ್ಕಾಟಗಳನ್ನು ಬಗೆ ಹರಿಸಿಕೊಳ್ಳುವ ಉಪಾಯ” ಎಂದು ಅಭಿಪ್ರಾಯ ಪಡುತ್ತಾನೆ. ಕಾರಣ ಸತ್ಯಾಗಹಕ್ಕೆ ಕೇವಲ ವ್ಯಕ್ತಿಗತ ನಿಲುವಲ್ಲದೇ, ಸಾಮೂಹಿಕ ಹಾಗೂ ರಾಷ್ಟ್ರೀಯ ಆಯಾಮವೂ ಇದೆ ಎಂಬುದು ಸ್ಪಷ್ಟ. ಇದೇನೆಯಿದ್ದರೂ  ಸತ್ಯಾಗ್ರಹ ಕ್ಷೇತ್ರದಲ್ಲಿ ಆ ಬಲದ ಅಥವಾ ಕೇವಲ ಪ್ರೇಮದ ಸಾಮ್ರಾಜ್ಯವಿರುತ್ತದೆ. ಎಲ್ಲ
ಜೀವಿಗಳು ಸರಿ ಸಮಾನರು ಕಾರಣ ತ್ಕಾಗ ಹಾಗೂ ಸೇವೆಗಳ ಮುಖಾಂತರವೇ ಆತ  ಇತರರನ್ನು ಗೆಲ್ಲಬೇಕು. ಆದರೆ ಇಂದು ನಾವು ಸತ್ಯಾಗಹವನ್ನು ಉಪಯೋಗಿಸುತ್ತಿರುವ  ರೀತಿ ಇದಕ್ಕೆ. ತದ್ವಿರುದ್ಧವಾದದ್ದು, ಈ ಬಗ್ಗೆ ಗಹನವಾದ ಆತ್ಮವಿಮರ್ಶೆ ಅತ್ಯಗತ್ಯ.