ಏನೆಂದು ಬರೆಯಲಿ

ಬದುಕು ಇರುವವರೆಗೂ,
ನೀನು ಇರುವುದು ಬೇಡ.
ನೀನು ಇರುವವರೆಗಿನ,
ಬದುಕೆ ಎನಗೆ ಸಾಕು.

*****

ನೀ ಇಲ್ಲದೆ, ಬದುಕುವುದು
ಎಷ್ಟೊಂದು ಕಷ್ಟ.
ನಿನ್ನನ್ನು, ನನ್ನವಳಾಗಿಸಿ
ಕೊಳ್ಳುವುದು ಇನ್ನಷ್ಟು ಕಷ್ಟ.

*****

ಬದುಕಲ್ಲಿ, ಬಂದು
ಹೋಗಿರಬಹುದು, ನೀನು.
ಆದರೆ, ನೆನಪಿರಲಿ,
ಪ್ರಾಣ ಬಿಟ್ಟೇನು, ನಿನ್ನನ್ನಲ್ಲ.

*****

ಪರೀಕ್ಷೆ ಮಾಡದಿರು,
ಪ್ರೀತಿಯನ್ನು ಇಷ್ಟೊಂದು.
ಉಸಿರು ನಿಲ್ಲಬಹುದು,
ಆದರೆ, ಪ್ರೀತಿ ಅಲ್ಲ.

*****

ನಡಿ, ನಡಿ ಹೋಗೋಣ,
ನಾವಿಬ್ಬರೂ ಅಲ್ಲಿಗೆ.
ನನ್ನ, ನಿನ್ನ, ಹೊರತು,
ಯಾರೂ ಇಲ್ಲದೂರಿಗೆ.

*****

ತುಟಿಯ ಮೇಲೆ ನಿನ್ನ ಹೆಸರು,
ಹೃದಯದಲ್ಲಿ ಕಾಡುವ ನೆನಪು.
ಇಲ್ಲಿಂದ ಏನು ಕೇಳಿ ಪಡೆಯಲಿ,
ನಿನ್ನಲ್ಲೆ, ನನ್ನ ಜೀವವಿರುವಾಗ.

*****

ಏನೆಂದು ಬರೆಯಲಿ,
ಯಾರಿಗೆ ಹೇಳಲಿ.
ಇದ್ದೊಂದು ಜೀವ, ನಿನ್ನ
ಹೃದಯದ ಪಾಲಾಗಿರುವಾಗ?!

ಜ್ಯೋತಿ ಕುಮಾರ್ ಎಂ. ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.
ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು. ಸದ್ಯ ಸಂತೆಬೆನ್ನೂರಿನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರು ಹವ್ಯಾಸಿ ಬರಹಗಾರರಾಗಿದ್ದು, ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.