ಈ ಭೋಗದ ಜಗತ್ತೇ ಬೇರೆ ಆದಿಪುರಾಣ ಹೇಳ್ತಾಯಿರೊ ಭೋಗದ ಜಗತ್ತೇ ಬೇರೆ ಅಂತ ಯಾಕೆ ತಿಳಿಯಬೇಕು?
“ಇವತ್ತು ಯಾವುದನ್ನ ಕರ್ನಾಟಕದ ಶ್ರೇಷ್ಠವಾದ ಕಲೆ ಅಂತ ಕರೀತಿವಿ ಅವುಗಳೆಲ್ಲ ಪ್ರಭುತ್ವದ ಅಡಿಯಲ್ಲೆ ಸೃಷ್ಠಿಯಾದವು.ಪಂಪನಂತ ಒಬ್ಬ ಕವಿ ಅದು ರಾಜನ ಆಶ್ರಯದಲ್ಲಿ ಇದ್ದ ಮಾತ್ರಕ್ಕೆ ತನ್ನ ಇಡೀ ಪ್ರತಿಭೆಯನ್ನು ಆಧಿಪತ್ಯಗೊಳಿಸಿದಾನೆ ಅಂತ ಹೇಳಿದಾಗ ಪಂಪನನ್ನ ಮಿತಿಗೊಳಿಸಿ ಯೋಚನೆ ಮಾಡದಂತಾಗುತ್ತೆ ಅನ್ನೋದೆ ನನ್ನ ತಿಳುವಳಿಕೆ”
ಅಳಿಸಲಾಗದ ಒಂದು ಪ್ರತಿಮೆ ’ಚಲಂ ಬೆನ್ನೂರಕರ್’
ಚಲಂರ ಹಳೆಯ ಬೇರುಗಳು ತೀರಾ ಆಳಕ್ಕೆ ಇಳಿದ್ದಿದ್ದವು. ಅವರು ಎಚ್ಚರವಾಗುವಷ್ಟರಲ್ಲಿ ಕಾಲದ ತುದಿಗೆ ಬಂದು ನಿಂತಿದ್ದರು. “ಕುಟ್ಟಿ ಜಪಾನ್”ನಂತರ ಒಂದು ಒಳ್ಳೆಯ ಕೃತಿಯನ್ನು ನನ್ನಿಂದ ಮಾಡಲಾಗಲಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಲೇ ಇತ್ತು.
ಅಕಿರ ಕುರಸೋವನ ಬಾಲ್ಯಕಾಲದ ದಿನಗಳು
ಮಕ್ಕಳ ಸಹಜ ಸಾಮರ್ಥ್ಯಗಳನ್ನು ಸಹಜವಾಗಿ ಅರಳಲು ಬಿಡದ ನಮ್ಮ ಈ ಕಾಲದ ರೋಗಗಳು ಜಪಾನಿನಲ್ಲಿ ಆ ಕಾಲದಲ್ಲೂ ಇತ್ತು. ಕುರಸೋವಾ ತನ್ನ ಕಳೆದುಹೋದ ಆ ದಿನಗಳನ್ನು ಸಿನೆಮಾ ದೃಶ್ಯಗಳಂತೆ ಕಟ್ಟಿಕೊಡುತ್ತಾನೆ.
ಬಾಳೆಗದ್ದೆ ಜಿ.ಆರ್.ಭಟ್ಟರ ಗಾನ ವೃಕ್ಷದ ಬೇರುಗಳು
ವಿದ್ವಾನ್ ಜಿ.ಆರ್. ಭಟ್ಟರು ಮರದೆತ್ತರಕ್ಕೆ ಅಟ್ಟಣಿಗೆ ಹಾಕಿ ಅಲ್ಲಿ ತಮ್ಮ ಗಾನ ಮೊಳಗಿದವರಲ್ಲ. ಬದಲಾಗಿ ಗಾನವೃಕ್ಷದ ಬೇರುಗಳಿಗೆ ತಮ್ಮ ಗಾನಪಂಚಾಮೃತವನ್ನೆರೆದವರು.
ಕನ್ನಡದ ಪರಿಮಳ ಹರಡಿದ ಕೇರಳದ ಕಸ್ತೂರಿ:ಎರಡನೆಯ ಕಂತು
“ನಾ. ಕಸ್ತೂರಿ ಅವರ ಹದಿನೆಂಟರ ಹರೆಯದ ಮಗ ‘ವೆಂಕಟಾದ್ರಿ’ ವಿಷಮ ಶೀತ ಜ್ವರದಲ್ಲಿ ಕಾಲವಾದಾಗ ಜೀವನದಲ್ಲಿ ಜಿಗುಪ್ಸೆ ಆಗಿದ್ದ ಕಾಸ್ತೂರಿ ದಂಪತಿಗಳು ಮನಸ್ಸಿನ ಶಾಂತಿಗಾಗಿ ಸ್ನೇಹಿತರ ಸಲಹೆ ಮೇರೆಗೆ ಸಾಯಿಬಾಬಾ ಅವರನ್ನು ನೋಡಿದರು.”
ಕನ್ನಡದ ಪರಿಮಳ ಹರಡಿದ ಕೇರಳದ ಕಸ್ತೂರಿ
”ನಾರಾಯಣ ರಂಗನಾಥ ಶರ್ಮ ಹೆಸರು ಬಹಳ ಉದ್ದವಾಯಿತೆಂದು ಅದನ್ನು ಮೊಟಕಿಸಿ ನಾ. ಕಸ್ತೂರಿ ಎಂದು ಇಟ್ಟುಕೊಂಡರು. ಅವರು ಕನ್ನಡ ಕಲಿತ ಮೇಲೆ ಅವರನ್ನು ಕನ್ನಡದಲ್ಲಿ ಬರೆಯಿರಿ ಎಂದು ಬಿಡದೆ ಪ್ರೋತ್ಸಾಹಿಸಿ ಬೆನ್ನು ತಟ್ಟಿದವರು ರಾಷ್ಟ್ರಕವಿ ಕುವೆಂಪುರವರು.”
ಕೈತಾನ್ ಎಂಬ ಸಿದ್ಧಿಗಳ ಫ್ಯಾಂಟಮ್:ಹೃಷಿಕೇಶ ಬಹದ್ದೂರ ದೇಸಾಯಿ ಬರೆದ ವ್ಯಕ್ತಿಚಿತ್ರ
“ನಾವು ಕಪ್ಪಗೆ ಇದ್ದೇವೆ ನೋಡಿ. ಅದೂ ದೇವರ ಕೊಟ್ಟ ವರಾ.ಆ ಬಣ್ಣ ಹೋಗಬಾರದು ಅಂತಲೇ ದೇವರು ನಮಗೆ ಅಡವಿಯೊಳಗ ಇಟ್ಟಿದಾರೆ.ನಾವೂ ನಿಮ್ಮಂಗ ಪೇಟೆ ಒಳಗ ತಿರುಗಾಡಿದರ ನಮ್ಮ ಬಣ್ಣ ಕಳದು ಹೋಗತೈತಿ. ಆಮೇಲೆ ನಮಗೂ ಇತರರಿಗೂ ಏನು ವ್ಯತ್ಯಾಸ ಹೇಳ್ರಿ,” ಎಂದು ಕೈತಾನ್ ಅನ್ನುತ್ತಿದ್ದ.”
ನಾನು ಲಲಿತಾ ನಾಯಕ್, ಲಂಬಾಣಿ ತಾಂಡಾದಲ್ಲಿ ಅರಳಿದ ಹುಡುಗಿ
”ನಾನು ರಾಜಕಾರಣಕ್ಕೆ ಬಂದು ಬರವಣಿಗೆಯ ಕತ್ತು ಹಿಚುಕುತ್ತಿದ್ದೇವೇನೋ ಎಂದು ಆಗಾಗ ಅಳುಕಾಗುತ್ತಿತ್ತು. ಒಳಗಿನ ಅದಮ್ಯ ಹಂಬಲ ಮತ್ತೆ ಮತ್ತೆ ಕಣ್ತೆರೆದು ಬರೆಸಿತು. ಕವಿತೆ, ಕತೆ, ಕಾದಂಬರಿ, ಲೇಖನಗಳು ಬಂದವು. ಚಿಕ್ಕವಳಿದ್ದಾಗ ಅರಳಿದ ಈ ವ್ಯಾಮೋಹ ಇಂದಿನವರೆಗೂ ನನ್ನೊಳಗಿದೆ.”
ವೈಟ್ ಹೌಸಿನ ಔಟ್ ಹೌಸ್ ವಾಸಿಯಾಗಿದ್ದ ಕನ್ನಡದ ಕೈಲಾಸಂ
“ಒಂದು ಕಡೆ ಜನ ಅವರ ನಾಟಕಗಳನ್ನು ಮೆಚ್ಚಿ ಅವರ ಖ್ಯಾತಿ ಹೆಚ್ಚಿದಂತೆ ಇನ್ನೊಂದು ಕಡೆ ದುಡ್ಡಿನ ಆಭಾವದಿಂದ, ಒಂಟಿಯಾದ ನೀರಸ ಬಾಳಿನಿಂದ ಅವರ ಜೀವನ ಏರುಪೇರಾಯಿತು. ಅವರು ಎಷ್ಟು ಸ್ವಾಭಿಮಾನಿಗಳಾಗಿದ್ರು ಆಂದರೆ ಎಂತಹ ಕಷ್ಟ ಬಂದಾಗಲೂ ಅವರು ತಂದೆಯಿಂದ ಕಿಲುಬು ಕಾಸೂ ಕೇಳಿರಲಿಲ್ಲ.”









