ತಮಗೆ ಯಾವುದೇ ತೊಂದರೆ ಇಲ್ಲದವರೆಗೆ ಇಲ್ಲಿನ ಪೋಲಿಸಿನವರು ಸೌಮ್ಯವಾಗಿ, ಗೌರವಿತವಾಗಿ ಮಾತನಾಡಿಸುತ್ತಾರೆ. ಸಾರ್ವಜನಕರಿಗೆ ತೊಂದರೆ ಕೊಡುವುದಿಲ್ಲ. ಸಾಧ್ಯವಾದಷ್ಟೂ ಸಹಾಯ ಮಾಡುತ್ತಾರೆ. ಆದರೆ ಅನುಮಾನ ಬಂದಲ್ಲಿ ಕೈಗೆ ಕೋಳ ಹಾಕಿ ಎಳೆದೊಯ್ಯುತ್ತಾರೆ. “ನಾನ್ಯಾರು ಗೊತ್ತಾ” ಎಂದು ಹೇಳುವವರು ಅಲ್ಲಿ ಇಲ್ಲಿ ಕಾಣಸಿಕ್ಕರೂ, ಅಂತವರಿಗೆ ಕ್ಯಾರೇ ಅನ್ನದೆ, ಕಾನೂನಿನಂತೆ ಕೆಲಸ ಮಾಡುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

ಅನಿವಾಸಿ ಭಾರತೀಯರ ನಡುವೆ ಒಂದು ಜೋಕ್ ಚಾಲ್ತಿಯಲ್ಲಿದೆ. ಒಮ್ಮೆ ಪೊಲೀಸ್ ಒಬ್ಬರು, ಅತೀ ವೇಗವಾಗಿ ಕಾರನ್ನು ಓಡಿಸುತ್ತಿದ್ದ ಒಬ್ಬ ಭಾರತೀಯರನ್ನು ಹಿಡಿದಾಗ, ಅವರು ನಿಧಾನವಾಗಿ ಕಿಸೆಯಿಂದ ಇಪ್ಪತ್ತು ಡಾಲರ್ ನೋಟನ್ನು ತೆಗೆದು ಪೋಲೀಸಿನವರಿಗೆ ಲಂಚದ ರೂಪದಲ್ಲಿ ಕೊಡಲು ಯತ್ನಿಸಿದ್ದು, ಅವರು ಅದರಿಂದ ಕಷ್ಟಕ್ಕೆ ಒಳಗಾಗಿದ್ದು. ಇದು ಕೆಲವು ಭಾರತದ ಚಲನಚಿತ್ರಗಳಲ್ಲೂ ಹಾಸ್ಯ ಸನ್ನಿವೇಶದಂತೆ ಬಳಕೆಯಾಗಿದೆ. ಇಂತಹ ಅನೇಕ ಹಾಸ್ಯಭರಿತ ಸಂಗತಿಗಳು ಅಮೇರಿಕಾದ ಪೊಲೀಸ್ ಹಾಗು ಭಾರತೀಯರ ನಡುವೆ ನಡೆದಿವೆ. ಭಾರತದಲ್ಲಿ ಪೊಲೀಸ್ ಹಿಡಿದಾಗ ಹೀಗೆ ಹಣ ಕೊಟ್ಟು ಬಿಡುಗಡೆಗೂಂಡ ನೆನಪು ಅಮೇರಿಕಾದಲ್ಲೂ ಹಾಗೆ ಮಾಡಲು ಪ್ರೇರೇಪಿಸುವ ಸಾಧ್ಯತೆ ಉಂಟುಮಾಡುತ್ತದೆ.

ಸಾಮಾನ್ಯವಾಗಿ ಅಮೇರಿಕಾದ ಪೋಲೀಸಿನವರಾಗಲಿ, ಸರ್ಕಾರಿ ಅಧಿಕಾರಿಗಳಾಗಲಿ ಕೆಲಸಮಾಡಿಕೊಡಲು ಜನ ಸಾಮಾನ್ಯರಿಂದ ಲಂಚ ತೆಗೆದುಕೊಳ್ಳುವ ಅಭ್ಯಾಸವಿಲ್ಲ. ಅಮೇರಿಕಾದಲ್ಲಿ ಲಂಚದ ಹಾವಳಿ ಇದ್ದರೂ ಅದರ ಬಿಸಿ ಜನಸಾಮಾನ್ಯರಿಗೆ ತಟ್ಟುವುದಿಲ್ಲ. ಅದು ಸರ್ಕಾರದ ಉನ್ನತಮಟ್ಟದಲ್ಲಿ ಲಾಬಿಯ ಹೆಸರಿನಲ್ಲಿ ನಡೆಯುತ್ತದೆ.

ಎರಡು ಸಾವಿರದ ಇಪ್ಪತ್ತಮೂರನೇ ವರುಷದ ಲೆಕ್ಕದಂತೆ ಅಮೇರಿಕಾದಲ್ಲಿ ಸುಮಾರು ಒಂಬತ್ತು ಲಕ್ಷ ಪೋಲಿಸಿನವರು ಇದ್ದಾರೆ. ಅದರಲ್ಲಿ ಶೇಕಡಾ ೧೪ ರಷ್ಟು ಮಹಿಳಾ ಅಧಿಕಾರಿಗಳು, ಶೇಕಡ ೮೬ರಷ್ಟು ಪುರುಷ ಅಧಿಕಾರಿಗಳೂ ಇದ್ದಾರೆ. ಅವರ ಸರಾಸರಿ ವಯಸ್ಸು ಸುಮಾರು ೪೦ ವರುಷಗಳು ಹಾಗು ಅವರ ಸರಾಸರಿ ವೇತನ ವರ್ಷಕ್ಕೆ ಎಂಬತ್ತು ಸಾವಿರ ಡಾಲರುಗಳು. ಅಂದರೆ ನಮ್ಮ ರೂಪಾಯಿಗಳಲ್ಲಿ ಸುಮಾರು ಅರವತ್ತು ನಾಲ್ಕು ಲಕ್ಷಗಳು. ಬೇರೆ ಕೆಲಸಗಳ ವೇತನಗಳಿಗಿಂತ ಇದು ಸ್ವಲ್ಪ ಕಡಿಮೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಪಿಂಚಣಿಯಂತ ಲಾಭಗಳು ಇವೆ.

ಅಮೇರಿಕಾದಲ್ಲಿ ಯಾವುದೇ ತೊಂದರೆ ಬಂದಾಗ ಪೋಲೀಸಿನವರಿಗೆ ಕರೆ ಮಾಡಬೇಕಾದ ಸಂಖ್ಯೆ ೯೧೧. ಇದು ಹೆಲ್ಪ್ ಲೈನ್. ಇದಕ್ಕೆ ಕರೆಮಾಡಿದಾಗ ಹತ್ತಿರದ ಪೊಲೀಸ್ ಠಾಣೆಗೆ ಹೋಗುತ್ತದೆ, ಕರೆಮಾಡಿದವರ ಹತ್ತಿರವಿರುವ ಪೋಲೀಸ್ ತಕ್ಷಣಕ್ಕೆ ಕರೆಬಂದ ಸ್ಥಳಕ್ಕೆ ಧಾವಿಸಿ ಬರುತ್ತಾರೆ. ಇದು ಸಾಮಾನ್ಯವಾಗಿ ಹತ್ತು ನಿಮಿಷಗಳ ಒಳಗಡೆ ಇರುತ್ತದೆ. ಹೀಗೆ ಬರುವ ಕರೆಗಳಲ್ಲಿ ಅನೇಕ ತಮಾಷೆ ಕರೆಗಳೂ ಇರುತ್ತವೆ.

ಒಮ್ಮೆ ಒಬ್ಬ ಮಹಿಳೆ ತನ್ನ ಮನೆಯ ಹಿಂದಿನ ಮರದ ಮೇಲೆ ಕುಳಿತ ಗೂಬೆಯೊಂದು ಹಾರದೆ ಕುಳಿತಿದೆ ಎಂದು ಪೋಲೀಸಿಗೆ ಫೋನ್ ಮಾಡಿದ್ದೂ ಇದೆ. ಅದು ಸಂಜೆಯಾದ್ದರಿಂದ ಗೂಬೆ ಕತ್ತಲಾಗುವವರೆಗೂ ಬೇಟೆಗೆ ಕುಳಿತಿತ್ತು ಅಷ್ಟೇ.

ಮನೆಯ ಹಿಂದೆ ಜಿಂಕೆ ಬಂದಿದೆ, ಜಿಂಕೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲೋಗಿ ಅದು ಓಡಿಸಿಕೊಂಡು ಬಂದಾಗ, ಮನೆಯಲ್ಲಿ ದೆವ್ವ ಇದೆ ಎಂದು, ಗಂಡ ಫ್ಯಾನ್ ಗಾಳಿ ಕಡಿಮೆ ಮಾಡಿಲ್ಲವೆಂದು, ಮನೆಯ ಮುಂದೆ ಯಾರೋ ಇದ್ದಾರೆ ಎಂದೋ ಹೀಗೆ ಎಲ್ಲ ವಿಷಯಕ್ಕೂ ಪೋಲೀಸಿಗೆ ಫೋನ್ ಮಾಡುವವರಿದ್ದಾರೆ, ಯಾವುದೇ ಕರೆ ಬಂದಾಗಲೂ ಪೋಲೀಸಿನವರು ಬಂದು ನೋಡಿಕೊಂಡು ಹೋಗುತ್ತಾರೆ.

ಭಾರತೀಯರಿಗೆ ಇನ್ನೊಂದು ಬಗೆಯ ತೊಂದರೆ ಉಂಟು. ಭಾರತದ ಫೋನ್ ಕೋಡ್ ೦೧೧ ಆಗಿರುವುದರಿಂದ, ಮನೆಯ ಫೋನಿನಲ್ಲಿ ಮೊದಲು ೯ ಒತ್ತ ಬೇಕಾಗಿರುವುದರಿಂದ, ಅನೇಕ ಸಲ ಅದು ೯೧೧ ಆಗಿ ಪೋಲಿಸಿಗೆ ಹೋಗಿರುವುದುಂಟು. ಏನೇ ಇದ್ದರು ಒಂದು ಸಲ ಬಂದು ನೋಡಿಕೊಂಡು ಹೋಗುವ ಕರ್ತವ್ಯ ಮಾಡಿಯೇ ಮಾಡುತ್ತಾರೆ.

ಪೋಲೀಸಿನವರ ಕಾರಿನ ಮೇಲೆ ಬಣ್ಣ ಬಣ್ಣದಲ್ಲಿ ಬೆಳಗುವ ದೀಪಗಳಿರುತ್ತವೆ. ಯಾವುದೇ ಕಾರನ್ನು ಅಟ್ಟಿಸಿಕೊಂಡು ಹೋಗುವಾಗ ಇಂತಹ ದೀಪಗಳನ್ನು ಬೆಳಗಿಸಿಕೊಂಡು ಹೋಗುತ್ತಾರೆ. ಇದರಿಂದ ಜನ ಪೊಲೀಸ್ ಕಾರಿಗೆ ಜಾಗ ಬಿಡಲು ಅನುಕೂಲವಾಗುತ್ತದೆ. ಯಾವುದೇ ಕಾರು ವೇಗವಾಗಿ ಹೋಗುತ್ತಿದ್ದರೆ, ಅಂತಹ ಕಾರಿನ ಹಿಂಭಾಗ ಹೋಗಿ ಈ ಬಣ್ಣ ಬಣ್ಣದ ದೀಪಗಳನ್ನು ಬೆಳಗಿಸುತ್ತಾರೆ, ತನ್ನನ್ನೇ ಹಿಡಿಯುತ್ತಿರುವುದು ಎಂದು ಅರಿವಾಗಿ ಚಾಲಕರು ಪಕ್ಕದಲ್ಲಿ ಕಾರು ನಿಲ್ಲಿಸುತ್ತಾರೆ.

ತಮಗೆ ಯಾವುದೇ ತೊಂದರೆ ಇಲ್ಲದವರೆಗೆ ಇಲ್ಲಿನ ಪೋಲಿಸಿನವರು ಸೌಮ್ಯವಾಗಿ, ಗೌರವಿತವಾಗಿ ಮಾತನಾಡಿಸುತ್ತಾರೆ. ಸಾರ್ವಜನಕರಿಗೆ ತೊಂದರೆ ಕೊಡುವುದಿಲ್ಲ. ಸಾಧ್ಯವಾದಷ್ಟೂ ಸಹಾಯ ಮಾಡುತ್ತಾರೆ. ಆದರೆ ಅನುಮಾನ ಬಂದಲ್ಲಿ ಕೈಗೆ ಕೋಳ ಹಾಕಿ ಎಳೆದೊಯ್ಯುತ್ತಾರೆ. “ನಾನ್ಯಾರು ಗೊತ್ತಾ” ಎಂದು ಹೇಳುವವರು ಅಲ್ಲಿ ಇಲ್ಲಿ ಕಾಣಸಿಕ್ಕರೂ, ಅಂತವರಿಗೆ ಕ್ಯಾರೇ ಅನ್ನದೆ, ಕಾನೂನಿನಂತೆ ಕೆಲಸ ಮಾಡುತ್ತಾರೆ.

ಎಲ್ಲ ದೇಶಗಳಂತೆ ಇಲ್ಲಿಯೂ ಕೆಲ ಕೆಟ್ಟ ಪೋಲಿಸಿನವರು ಇರುತ್ತಾರೆ. ಸರಿಯಾಗಿ ವಿಚಾರಿಸದೆ ಗುಂಡು ಹಾರಿಸಿ ಕೆಲವರ ಸಾವಿಗೆ ಕಾರಣರಾಗಿದ್ದಾರೆ. ಪೋಲಿಸಿನವರು ಕಪ್ಪುಜನಾಂಗದ ಇಬ್ಬರನ್ನು ಹತ್ಯೆಮಾಡಿದಾಗ “ನಾನು ಉಸಿರಾಡಲು ಸಾಧ್ಯವಿಲ್ಲ” ಎಂಬುದು ಪ್ರಧಾನವಾಗಿ ಅಮೇರಿಕನ್ ರಾಜಕೀಯ ಚಳುವಳಿ. ಬ್ಲ್ಯಾಕ್ ಲೈವ್ಸ್ ಮ್ಯಾಟರ್‌ಗೆ ಸಂಬಂಧಿಸಿದ ಒಂದು ಘೋಷಣೆಯಾಗಿ ಇಡೀ ಅಮೇರಿಕಾದಲ್ಲಿ ದೊಡ್ಡ ಚಳಿವಳಿಯಾಗಿ ರೂಪುಗೊಂಡು ಪೋಲೀಸ್ ದೌರ್ಜನ್ಯ ಮತ್ತು ಜನಾಂಗೀಯ ಅಸಮಾನತೆಯ ವಿರುದ್ಧ ದೊಡ್ಡಮಟ್ಟದ ಹೋರಾಟ ನಡೆಯಿತು.

ಇದಲ್ಲದೆ ಸ್ವತಃ ಅನೇಕ ಪೋಲೀಸಿನವರ ಹತ್ಯೆಗಳಾಗಿವೆ. 1786 ರಲ್ಲಿ ದಾಖಲಾದ ಮೊದಲ ಪೋಲೀಸ್ ಸಾವಿನ ನಂತರ, 24,000 ಕ್ಕೂ ಹೆಚ್ಚು ಕಾನೂನು ಜಾರಿ ಅಧಿಕಾರಿಗಳು ಕರ್ತವ್ಯದ ಸಾಲಿನಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಪ್ರಸ್ತುತ, ರಾಷ್ಟ್ರೀಯ ಕಾನೂನು ಜಾರಿ ಅಧಿಕಾರಿಗಳ ಸ್ಮಾರಕದ ಗೋಡೆಗಳ ಮೇಲೆ 24,067 ಹೆಸರುಗಳನ್ನು ಕೆತ್ತಲಾಗಿದೆ.

ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆಯು ಇತರ ಯಾವುದೇ ಇಲಾಖೆಗಳಿಗಿಂತ ಹೆಚ್ಚಿನ ಅಧಿಕಾರಿಗಳನ್ನು ಕರ್ತವ್ಯದ ಸಾಲಿನಲ್ಲಿ ಕಳೆದುಕೊಂಡಿದೆ, 1,090 ಸಾವುಗಳು ಸಂಭವಿಸಿವೆ. ಟೆಕ್ಸಾಸ್ 2,041 ಅಧಿಕಾರಿಗಳನ್ನು ಕಳೆದುಕೊಂಡಿದೆ, ಇದು ಯಾವುದೇ ರಾಜ್ಯಕ್ಕಿಂತ ಹೆಚ್ಚು. ಕಡಿಮೆ ಸಾವುಗಳನ್ನು ಹೊಂದಿರುವ ರಾಜ್ಯವೆಂದರೆ ವರ್ಮೊಂಟ್, 26.

ಕಳೆದ 10 ವರ್ಷಗಳಲ್ಲಿ ಒಟ್ಟು 2,652 ಕಾನೂನು ಜಾರಿ ಅಧಿಕಾರಿಗಳು ಕರ್ತವ್ಯದ ಸಾಲಿನಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಹೆಸರನ್ನು ಪ್ರಸ್ತುತ ರಾಷ್ಟ್ರೀಯ ಸ್ಮಾರಕದಲ್ಲಿ ಕೆತ್ತಲಾಗಿದೆ. 2023 ರಲ್ಲಿ ಕರ್ತವ್ಯದ ಸಾಲಿನಲ್ಲಿ 118 ಕಾನೂನು ಜಾರಿ ಅಧಿಕಾರಿಗಳು ಕೊಲ್ಲಲ್ಪಟ್ಟಿದ್ದಾರೆ.

ಕಾನೂನು ಜಾರಿ ಇತಿಹಾಸದಲ್ಲಿ ಅತ್ಯಂತ ಮಾರಣಾಂತಿಕ ದಿನವೆಂದರೆ ಸೆಪ್ಟೆಂಬರ್ 11, 2001, ಅಮೆರಿಕದ ಮೇಲಿನ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸುವಾಗ 72 ಅಧಿಕಾರಿಗಳು ಕೊಲ್ಲಲ್ಪಟ್ಟರು.

2020 ರಲ್ಲಿ ಜಗತ್ತನ್ನು ಕಾಡಿದ ಕೋವಿಡ್ -19 ಸಾಂಕ್ರಾಮಿಕದ ಪರಿಣಾಮವಾಗಿ, 2020 ರಲ್ಲಿ 417 ಅಧಿಕಾರಿಗಳು ಸಾವನ್ನಪ್ಪಿದರು (258 ಕೋವಿಡ್ -19-ಸಂಬಂಧಿತ) ಮತ್ತು 623 ಅಧಿಕಾರಿಗಳು 2021 ರಲ್ಲಿ ಕೊಲ್ಲಲ್ಪಟ್ಟರು (436 ಕೋವಿಡ್ -19-ಸಂಬಂಧಿತ).

ಪೋಲೀಸಿನವರ ತ್ಯಾಗ

ಒಬ್ಬ ಮಹಿಳೆ ಅಥವಾ ಪುರುಷ ಕಾನೂನು ಜಾರಿ ಅಧಿಕಾರಿಯಾಗಲು ಮತ್ತು ಅದನ್ನು ತಮ್ಮ ವೃತ್ತಿಯನ್ನಾಗಿ ಮಾಡಲು ನಿರ್ಧರಿಸಿದಾಗ, ಅವರು ಬಹಳಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ.

ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಮತ್ತು ಕೆಲವು ಸಂದರ್ಭಗಳಲ್ಲಿ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲು ತ್ಯಾಗಕ್ಕೆ ಸಿದ್ಧರಾಗಬೇಕಾಗುತ್ತದೆ. ಅಧಿಕಾರಿಗಳು ವಿವಿಧ ಪಾಳಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ, ಇದರಿಂದ ಅವರ ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ಬಹಳಷ್ಟು ತ್ಯಾಗಗಳನ್ನು ಮಾಡುತ್ತದೆ. ಅವರು ರಜಾದಿನಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಅನೇಕ ಬಾರಿ ಸಾಮಾನ್ಯ ಕೆಲಸದ ದಿನಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.

ಕಾನೂನನ್ನು ಸರಿಯಾಗಿ ಜಾರಿಗೊಳಿಸಲು ಕಾನೂನನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು. ಅಧಿಕಾರಿಗಳು ತಾವು ಭಾಗಿಯಾಗಿರುವ ಪ್ರಕರಣಗಳ ಬಗ್ಗೆ ಸಾಕ್ಷ್ಯ ನೀಡಲು ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ.

ಅಧಿಕಾರಿಗಳು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಆ ನಿರ್ಧಾರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಏಕೆಂದರೆ ಆ ನಿರ್ಧಾರಗಳನ್ನು ಅವರ ಉನ್ನತ ಅಧಿಕಾರಿಗಳು, ವಕೀಲರು ಮತ್ತು ಪ್ರಾಯಶಃ ನ್ಯಾಯಾಧೀಶರು ಪರಿಶೀಲಿಸಬಹುದು. ಅಧಿಕಾರಿಗಳು ತಮ್ಮ ಕೆಲವು ನಿರ್ಧಾರಗಳನ್ನು ಸೆಕೆಂಡುಗಳಲ್ಲಿ ಮಾಡಬೇಕಾಗಿದ್ದರೂ, ಉನ್ನತ ಅಧಿಕಾರಿಗಳು, ವಕೀಲರು ಮತ್ತು ನ್ಯಾಯಾಧೀಶರು ಒಂದೇ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ.

ಅಧಿಕಾರಿಗಳು ತಮ್ಮ ವೃತ್ತಿಜೀವನದಲ್ಲಿ ಇನ್ನೂ ಅನೇಕ ತ್ಯಾಗಗಳನ್ನು ಮಾಡುತ್ತಾರೆ, ಅಧಿಕಾರಿಯು ಸಮಾಜವನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಬೇಕಾಗುತ್ತದೆ, ಅದನ್ನು ಅಧಿಕಾರಿಗಳು ಹೆಮ್ಮೆಯಿಂದ ಮಾಡುತ್ತಾರೆ.

ಯಾರು ಏನೇ ಹೇಳಿದರೂ. ಸಮಾಜದ ರಕ್ಷಣೆಗೆ ಎಲ್ಲಾ ದೇಶಗಳ ಪೋಲಿಸಿನವರು ಟೊಂಕ ಕಟ್ಟಿ ನಿಲ್ಲುತ್ತಾರೆ. ಅಂಥವರಿಗೆ ಸಮಾಜ ಮಾಡುವ ಸಹಾಯ ಎಂದರೆ ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡದಿರುವುದು.