Advertisement
ಟೊಟೊ ಪುರಸ್ಕಾರ 2026: ಕನ್ನಡ ಸೃಜನಶೀಲ ಸಾಹಿತ್ಯ ಬರಹಗಳಿಗೆ ಆಹ್ವಾನ

ಟೊಟೊ ಪುರಸ್ಕಾರ 2026: ಕನ್ನಡ ಸೃಜನಶೀಲ ಸಾಹಿತ್ಯ ಬರಹಗಳಿಗೆ ಆಹ್ವಾನ

ಕನ್ನಡ ಸೃಜನಶೀಲ ಸಾಹಿತ್ಯ ವಿಭಾಗ

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2026 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಆಸಕ್ತರಿಂದ ಕತೆ, ಕವಿತೆ, ನಾಟಕಗಳನ್ನು ಆಹ್ವಾನಿಸಿದೆ. ಇಪ್ಪತ್ತೊಂದನೆಯ ವರ್ಷಕ್ಕೆ ಕಾಲಿಡುತ್ತಿರುವ ಟೊಟೊ ಪುರಸ್ಕಾರದ ಪ್ರಶಸ್ತಿಯ ನಗದು ಬಹುಮಾನದ ಮೊತ್ತ ರೂ. 60,000.

ಪ್ರಸ್ತುತ ಪುರಸ್ಕಾರಕ್ಕಾಗಿ ಪ್ರವೇಶ ಪತ್ರ ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್‌ಇಂಡಿಯಾ –OCI –ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ) ಮತ್ತು 18 ರಿಂದ 29 ವರ್ಷದೊಳಗಿನವರಾಗಿರಬೇಕು. ಕತೆ, ಕವಿತೆ, ನಾಟಕ ಈ ಮೂರು ಸೃಜನಾತ್ಮಕ ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಪ್ರತಿವರ್ಷದಂತೆ ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡುತ್ತದೆ.

ನಿಮ್ಮ ಸೃಜನಾತ್ಮಕ ಬರಹಗಳನ್ನು ಪ್ರವೇಶ ಪತ್ರದೊಂದಿಗೆ ಲಗತ್ತಿಸಬೇಕು. ಪ್ರವೇಶ ಪತ್ರವನ್ನು https://totofundsthearts.org/ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಿ. ಗಮನಿಸಿ, ಪ್ರವೇಶ ಪತ್ರರಹಿತ ಇಮೇಲ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ನಿಯಮಗಳು:

ನೀವು 1996ರ ಜನವರಿ 1 ರಿಂದ 2008ರ ಜನವರಿ 1ರೊಳಗೆ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶ ಪತ್ರ ಕಳಿಸಲು ಅರ್ಹರು. ಕವಿತೆ/ಕಥೆ/ನಾಟಕವು MS WORD ನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್‌ನಲ್ಲಿ ಕಡ್ಡಾಯವಾಗಿರಬೇಕು. ಈಗಾಗಲೇ ಪ್ರಕಟಗೊಂಡ ಪುಸ್ತಕ ಅಥವಾ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಮ್ಮ ಹೆಸರು, ಜನ್ಮದಿನಾಂಕ ಮತ್ತು ವಿಳಾಸವನ್ನು ದಯವಿಟ್ಟು ಇಂಗ್ಲಿಷಿನಲ್ಲಿಯೂ ಬರೆಯಿರಿ.

ಪ್ರವೇಶ ಪತ್ರದಲ್ಲಿ ಮಾತ್ರ ನಿಮ್ಮ ಹೆಸರು, ಸ್ವವಿವರವನ್ನು ಬರೆಯಬೇಕು. ನಿಮ್ಮ ಕತೆ, ಕವಿತೆ, ನಾಟಕಗಳ ಫೈಲ್‌ನಲ್ಲಿ ನಿಮ್ಮ ಹೆಸರನ್ನು ಬರೆಯಕೂಡದು. ಕವಿತೆಗಳನ್ನು ಕಳುಹಿಸುವವರು ಕನಿಷ್ಟ 8 ರಿಂದ ಗರಿಷ್ಟ 12 ಕವಿತೆಗಳನ್ನು ಕಳಿಸಬಹುದು. ಕತೆಗಳನ್ನು ಕಳಿಸುವವರು ಕನಿಷ್ಟ ಮೂರು ಕತೆಗಳನ್ನು ಕಳಿಸಬಹುದು. ಒಟ್ಟು ಕತೆಗಳ ಶಬ್ದಮಿತಿ 7,500 ಶಬ್ದಗಳು. ನಾಟಕಗಳ ಶಬ್ದಮಿತಿ 10,000 ಶಬ್ದಗಳು.

ನೀವು ಮೂರೂ ಸೃಜನಶೀಲ ಪ್ರಕಾರಗಳಲ್ಲಿಯೂ ಭಾಗವಹಿಸಲು ಇಚ್ಛಿಸಿದಲ್ಲಿ, ಪ್ರತಿಯೊಂದನ್ನೂ ಪ್ರತ್ಯೇಕ ಪ್ರವೇಶ ಪತ್ರದೊಂದಿಗೆ ಪ್ರತ್ಯೇಕ ಇಮೇಲ್‌ ಕಳಿಸಬೇಕು.

ಬರಹಗಳನ್ನು ಮತ್ತು ಪ್ರವೇಶ ಪತ್ರವನ್ನು ಕಳಿಸಬೇಕಾದ ಇಮೇಲ್: totokannada@gmail.com

ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕತೆ, ಕವಿತೆ, ನಾಟಕಗಳನ್ನು ಕಳಿಸಬಹುದು. ಆದರೆ ಎಲ್ಲವೂ ಈಗಾಗಲೇ ಹೇಳಿದಂತೆ ಇಮೇಲ್ ಮೂಲಕ ಮಾತ್ರ ಕಳಿಸಬೇಕು.

ನೀವು ಈ ಹಿಂದೆ ಇದೇ ಪುರಸ್ಕಾರಕ್ಕೆ ಕಳಿಸಿದ ಕಥೆ, ಕವಿತೆ, ನಾಟಕಗಳನ್ನೇ ಮತ್ತೆ ಕಳಿಸುವಂತಿಲ್ಲ. ಬೇರೆಯದನ್ನು ಕಳಿಸಬೇಕು.

ಇಮೇಲ್ Subject ನಲ್ಲಿ ನಿಮ್ಮ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: “ಕನ್ನಡ ಸೃಜನಶೀಲ ಸಾಹಿತ್ಯ – ಕವಿತೆ”, “ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ” ಅಥವಾ “ಕನ್ನಡ ಸೃಜನಶೀಲ ಸಾಹಿತ್ಯ – ಕತೆ”.

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: 30.9.2025. ಈ ದಿನಾಂಕದ ನಂತರ ಬಂದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

ಷರತ್ತುಗಳು: ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವ ಸಂಸ್ಥೆಯ ಬ್ಲಾಗ್‌ನಲ್ಲಿ ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ. ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ. ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು.

ಸಂದೇಹಗಳಿದ್ದಲ್ಲಿ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಇಮೇಲ್: totokannada@gmail.com

*****

ಈ ಪುರಸ್ಕಾರಕ್ಕೆ ಭೂಮಿಜಾ ಟ್ರಸ್ಟ್ ನೆರವು ನೀಡುತ್ತಿದೆ. ಭೂಮಿಜಾ ಪ್ರದರ್ಶನ ಕಲೆಗಳ ಕಾರ್ಯಕ್ರಮಗಳನ್ನು ಬೆಂಗಳೂರು ಸೇರಿದಂತೆ ವಿಶ್ವಾದ್ಯಂತ ಹಮ್ಮಿಕೊಳ್ಳುತ್ತಿರುವ ಸಂಸ್ಥೆ.

*****

ಟಿ.ಎಫ್.ಎ. ಸಂಸ್ಥೆಯು ಆಂಗೀರಸ “ಟೋಟೋ” ವೆಲ್ಲಾನಿಯ ಸ್ಮರಣಾರ್ಥ 2004 ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ತರುಣ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳು ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ