ಮಥುರಾ ನಗರಿಯಲ್ಲೊಂದು ಭಾವಯಾನ
ವ್ರಜ ಪರಿಕ್ರಮದಲ್ಲಿ ದೀರ್ಘ ಮತ್ತು ಚುಟುಕಾದ ಎರಡು ರೀತಿಯ ಪರಿಕ್ರಮಗಳಿವೆ. ಚಿಕ್ಕಮಟ್ಟದ ಪರಿಕ್ರಮದಲ್ಲಿ ಮಥುರೆಯ ಮುಖ್ಯ ದೇಗುಲ ಮತ್ತು ಪುಣ್ಯಸ್ಥಾನಗಳಿಗೆ ಭೇಟಿ ನೀಡುವುದಷ್ಟೇ ಸೇರಿದೆ. ದೀರ್ಘ ಪರಿಕ್ರಮದಲ್ಲಿ ನಂದಗಾವ್ ಮತ್ತು ಬರ್ಸಾನಾಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವುದು ಸೇರಿದೆ. ನಾವೆಲ್ಲ ಕೆಲವೇ ದಿನಗಳ ರಜೆಯಲ್ಲಿ ಮಥುರೆಯನ್ನು ಕ್ಷಿಪ್ರವಾಗಿ ನೋಡಿ ಬರುವವರ ಸಾಲಿಗೆ ಸೇರಿದವರು. ಮಥುರಾ ಯಾತ್ರೆಯ ಕುರಿತ ತಮ್ಮ ಅನುಭವಗಳನ್ನು ಪ್ರಿಯಾ ಭಟ್ ಕಲ್ಲಬ್ಬೆ ಅವರು ಇಲ್ಲಿ ದಾಖಲಿಸಿದ್ದಾರೆ.
ಅಚಲ ಸೇತು ಬರೆದ ‘ಕೀವೀ ನಾಡಿನ ಪ್ರವಾಸ ಕಥನ’
ಮುಗಿಲು ಮುಟ್ಟುವ ಬಂಡೆಗಳಿಂದ ಧುಮ್ಮಿಕ್ಕುವ ಬಿಳಿಯ ಜಲರಾಶಿಯನ್ನು ನೋಡುತ್ತಾ ಟಾಸ್ಮನ್ ಸಮುದ್ರದವರೆಗೆ ನೌಕಾ ವಿಹಾರ ಮಾಡುತ್ತ ಸಾಗಬಹುದು. ಅಚ್ಚರಿಯ ಸಂಗತಿಯೆಂದರೆ ಖಾರಿಯ ಉಪ್ಪು ನೀರಿನ ಕೆಳ ಪದರದ ಮೇಲೆ ಸುಮಾರು ಹತ್ತು ಅಡಿಗಳಷ್ಟು ಸಿಹಿ ನೀರಿನ ಪದರ ಸದಾ ಕಾಲ ಶೇಖರಣೆಯಾಗಿರುತ್ತದೆ. ಮೇಲಿನ ಮಳೆ ಕಾಡುಗಳಿಂದ ರೆಂಬೆ ಕೊಂಬೆಗಳ ಸಾರವನ್ನು ಹೊತ್ತು ತರುವ ಕಲಗಚ್ಚಿನಂತಹ ಈ…”
ಹಸಿರು ಕಡಲ ಹೆಣ್ಣಾಮೆಯ ಪ್ರಸವ ಪ್ರಸಂಗ
“ಆ ದೊಡ್ಡ ಹೆಣ್ಣಾಮೆ ಬಹಳಷ್ಟು ಲೆಕ್ಕಾಚಾರ ಹಾಕಿ ಸಾವಿರಾರು ಮೈಲು ದೂರದಿಂದ ಈಜಿ ಬಂದಿರಬಹುದು. ಭೂಮಿಯ ಅಯಸ್ಕಾಂತೀಯ ಗುಣಗಳು ಈ ಹೆಣ್ಣಿಗೆ ತವರಿನ ದಾರಿಯನ್ನು ತೋರಿಸಿರಬಹುದು. ಕಡಲಿನ ಒಳ ಅಲೆಗಳ ಹರಿವು, ಆಕಾಶದ ತಾರೆಗಳ ಲೆಕ್ಕಾಚಾರ, ಕಡಲ ಭರತ ಇಳಿತಗಳ ಪಂಚಾಂಗ, ಹೊಟ್ಟೆಯೊಳಗಿನ ಮೊಟ್ಟೆಗಳ ಜಾತಕದ ಗೋಚಾರಫಲ ಎಲ್ಲವೂ ಇದ್ದಿರಬಹುದು. ಆದರೆ ಎಲ್ಲೋ ಲೆಕ್ಕ ತಪ್ಪಿದಂತೆ ಇಳಿ ಹಗಲ ಹೊತ್ತೇ ಸೂರ್ಯ ಮುಳುಗುವ ಮೊದಲೇ ಈ ಆಮೆ ಪ್ರಸವ ಮುಗಿಸಿ…”
ಮಾಯದಂತಹ ಒಂದು ಮಧ್ಯಾಹ್ನದ ಮಳೆ
“ಧರ್ಮ ಗ್ರಂಥಗಳಲ್ಲಿರುವ ಸ್ವರ್ಗದ ವಿವರಗಳಲ್ಲಿರುವ ಎಲ್ಲ ಸೌಂದರ್ಯವನ್ನೂ ನಾನೂ ಇಲ್ಲಿ ಸ್ವತಃ ಕಂಡಿದ್ದೆ. ಆದರೆ ಯಾಕೋ ಅಪ್ಸರೆಯರು ಕಾಣಿಸುತ್ತಿಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ. ಒಂದು ಮಧ್ಯಾಹ್ನ ಬಿಸಿಲಲ್ಲಿ ತಿರುಗಿ ಬಸವಳಿದು ಒಂದು ನಿಂಬೂ ಪಾನಿಯ ಅಂಗಡಿಗೆ ಹೋಗಿದ್ದೆ. ಅದು ನಿಜವಾಗಿ ಒಂದು ದಿನಸಿ ಅಂಗಡಿ. ಆ ಅಂಗಡಿಯೊಳಗೇ ಒಂದು ಮೂಲೆಯಲ್ಲಿ ನಿಂಬೂ ಪಾನಿಯ ಅಂಗಡಿ. ಅದನ್ನು ನಡೆಸುತ್ತಿರುವವರು ದಿನಸಿ ಅಂಗಡಿಯ ಮಾಲಿಕರ ಮಡದಿಯೂ ಇರಬಹುದು. ಅಥವಾ ಮಗಳೂ ಆಗಿರಬಹುದು.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಕಥಾನಕದ ಒಂಬತ್ತನೇ ಕಂತು.
ಉಕ್ಕಿನ ಮಹಿಳೆ ಹವ್ವಾ ತಾತ
ಹವ್ವಾ ಅವರಿಗೆ ಈಗ ಎಪ್ಪತ್ತೆರಡು ವರ್ಷ. ಕಳೆದ ನಲವತ್ತು ವರ್ಷಗಳಿಂದ ಅಂಗನವಾಡಿಯೊಂದರ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವರು ಇದೀಗ ತಾನೇ ನಿವೃತ್ತರಾಗಿದ್ದಾರೆ. ಅವರ ಬಳಿ ಇರುವ ಸೈಕಲ್ಲಿಗೂ ಐವತ್ತು ವರ್ಷಗಳಾಗಿವೆ. ಈ ದ್ವೀಪದಲ್ಲಿ ಸೈಕಲ್ಲು ಓಡಿಸಿದ ಮೊದಲ ಮಹಿಳೆ ಈಕೆ. ‘ನೀವು ಬಂದಾಗ ನಾನು ಸೈಕಲ್ಲು ಓಡಿಸುವ ಫೋಟೋ ತೆಗೆಯಬೇಕು’ ಎಂದಿದ್ದರು ಆಕೆ.
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಕಥಾನಕದ ಎಂಟನೇ ಕಂತು.
ಸೈಕಲ್ಲಿನ ಜೊತೆಗಿದ್ದ ಲೇಡೀಸು ಸೈಕಲ್ಲು!
“ಅಲೆಯುವ ಮನಕ್ಕೆ ಲೋಕದ ಯಾವ ಸದ್ದುಗಳೂ ಕೇಳಿಸುವುದಿಲ್ಲವಂತೆ. ಅಲೆಮಾರಿಗಳು ಲೋಕದ ಗೊಡವೆಗಿಂತ ತಮ್ಮ ತಮ್ಮ ಸ್ವವ್ಯಸನಗಳಲ್ಲೇ ಹೆಚ್ಚು ಮುಳುಗಿರುತ್ತಾರಂತೆ. ಹಾಗಾಗಿ ಅವರು ಆಯಾಸಗೊಳ್ಳದೆ ಚಲಿಸುತ್ತಲೇ ಇರುತ್ತಾರಂತೆ. ಇದು ಹಿಂದೆ ಬದುಕಿದ್ದ ಮಿತ್ರರೂ ಆಗಿದ್ದ ಹಿರಿಯರೊಬ್ಬರು ಹೇಳಿದ್ದ ಮಾತು. ಅವರ ಪ್ರಕಾರ ಅಲೆಮಾರಿಗಳಷ್ಟು ಸ್ವರತಿ ಪ್ರಿಯರು ಬೇರೆ ಯಾರೂ ಇಲ್ಲ. ಹಾಗೆಯೇ ನನ್ನ ಕಥೆಯೂ ಎಂದು ಅನಿಸುತ್ತಿತ್ತು.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಏಳನೆಯ ಕಂತು
ಕಾಕ ಸಾಮ್ರಾಜ್ಯದಲ್ಲಿ ಹೂಹಕ್ಕಿಗಳು ಇರಬಲ್ಲುವೇ?
“ನಾವು ಶಾಲೆಯಲ್ಲಿ ಕಲಿತ ಹಾಗೆ ಇಲ್ಲಿ ತೇಲಿ ಬರುವ ಮೋಡಗಳು ಪರ್ವತಶ್ರೇಣಿಗಳಿಗೆ ಡಿಕ್ಕಿ ಹೊಡೆದು ಮಳೆಯಾಗಿ ಸುರಿಯುವುದಿಲ್ಲ, ಬದಲಾಗಿ ತಮ್ಮ ಭಾರಕ್ಕೆ ತಾವೇ ನಲುಗಿ ದೊಪ್ಪನೆ ತಪ್ಪಲೆಯೊಳಗಿನ ನೀರಂತೆ ಸುರಿದು ತಾವು ಇದುವರೆಗೆ ಇರಲೇ ಇಲ್ಲವೇನೋ ಎಂಬ ಹಾಗೆ ಮಾಯವಾಗಿರುತ್ತದೆ. ದ್ವೀಪದ ಒಳಗೂ ಹಾಗೇ. ಬಿಸಿಲಲ್ಲಿ ಬೆಳಗುತ್ತಿದ್ದ ಆಕಾಶವೇನಾದರೂ ಮಂಕಾಗಿದ್ದರೆ ಮನೆಯಿಂದ ಹೊರಬಂದು ಆಕಾಶಕ್ಕೆ ತಲೆ ಎತ್ತಿದರೆ ಕಪ್ಪಗಿನ ಮೇಘವೊಂದು ಕರಿಯ ಬೆಕ್ಕಿನ ಹಾಗೆ ಮೇಲಿನ ಮೂಲೆಯೊಂದರಿಂದ ನಿಮ್ಮನ್ನು ನೋಡುತ್ತಿರುತ್ತದೆ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಆರನೆಯ ಕಂತು
ಇಬ್ನ್ ಬತೂತನ ಸ್ತ್ರೀರಾಜ್ಯ
“ಸದಾ ಪ್ರವಾಸಿಗನಾಗಿ ಲೋಕ ಸುತ್ತುತ್ತಿದ್ದ ಇಬ್ನ್ ಬತೂತನಿಗೆ ಮಡದಿಯರ ಅವಶ್ಯಕತೆ ಇತ್ತು. ಆದರೆ ಅವರನ್ನು ಕಟ್ಟಿಕೊಂಡು ಓಡಾಡುವ ತಾಪತ್ರಯಗಳು ಬೇಕಾಗಿರಲಿಲ್ಲ. ಹಾಗಾಗಿ ಆತ ಈ ದ್ವೀಪದ ಇಬ್ಬರು ಸ್ತ್ರೀಯರನ್ನು ವರಿಸುತ್ತಾನೆ. ಇಬ್ಬರೂ ದ್ವೀಪದ ಎರಡು ಪತಿಷ್ಠಿತ ಕುಟುಂಬಗಳಿಗೆ ಸೇರಿದ ಸ್ತ್ರೀಯರು. ಹಾಗಾಗಿ ಆತನಿಗೆ ಈ ದ್ವೀಪದ ಎರಡೂ ಪತಿಷ್ಠಿತ ಕುಟುಂಬಗಳ ಬೆಂಬಲ ದೊರೆತು ಆ ದ್ವೀಪವನ್ನು ಆಳುತ್ತಿದ್ದ ದೊರೆಗಿಂತ ಬಲಶಾಲಿಯಾಗುತ್ತಾನೆ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಐದನೆಯ ಕಂತು
ವೃಂಗಿಲಿಯ ಹಿನ್ನೆಲೆಯಲ್ಲಿ ಛೆ..ಛೆ.. ಸೂರ್ಯಾಸ್ತ
“ಅವರ ಹತಾಶೆಯ ಮಾತುಗಳು ಅಲ್ಲೇ ಕುಳಿತಿರುವ ನನಗೆ ಅರಿವಾಗುವುದಿಲ್ಲ ಎಂಬುದು ಅವರ ನಂಬಿಕೆ. ಅವರ ನಂಬಿಕೆಗೆ ಇಂಬು ಕೊಡುವ ಹಾಗೆ ನಾನು ಅವರ ಜೊತೆ ಕನ್ನಡದ ಛಾಯೆ ಇರುವ ಇಂಗ್ಲಿಷಿನಲ್ಲೇ ಮಾತುಕತೆ ಮುಗಿಸಿ ಈಗ ಏನೂ ಮಾತಾಡದೆ ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನನಾಗಿರುವಂತೆ ನಟಿಸುತ್ತಿದ್ದೇನೆ. ಆದರೆ ನನ್ನ ಕಿವಿ ಅವರ ಮಾತುಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುತ್ತಿದೆ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ನಾಲ್ಕನೆಯ ಕಂತು









